Home » Latest Stories » ಕೃಷಿ » ರೋಹು ಮೀನು ಸಾಕಣಿಕೆ ಮಾಡಿ ಲಕ್ಷಾಧಿಪತಿಯಾಗಿ ಹೊರಹೊಮ್ಮಿ..

ರೋಹು ಮೀನು ಸಾಕಣಿಕೆ ಮಾಡಿ ಲಕ್ಷಾಧಿಪತಿಯಾಗಿ ಹೊರಹೊಮ್ಮಿ..

by Bharadwaj Rameshwar
570 views

ರೋಹು ಮೀನು ಇದು ಒಂದು ಸಿಹಿನೀರಿನಲ್ಲಿ ಸಾಕಣೆ ಮಾಡುವ ಮೀನುಗಳಲ್ಲಿ ಒಂದಾಗಿದೆ. ಈ ಮೀನು ಭಾರತ ಮತ್ತು ಪ್ರಪಂಚದ ಇತರ ದೇಶಗಳಲ್ಲೂ ವಿಶೇಷವಾಗಿ ಆಗ್ನೇಯ ಏಷ್ಯಾದಲ್ಲಿ ಈ Rohu fish farming ಬಹಳ ಜನಪ್ರಿಯವಾಗಿದೆ. ಈ ಮೀನನ್ನು ರುಯಿ, ಅಥವಾ ತಪ್ರಾ ಎಂದೂ ಕರೆಯುತ್ತಾರೆ. ರೋಹು ಮೀನು ಅದರ ಸುವಾಸನೆ ಮತ್ತು ಮಾರುಕಟ್ಟೆ ಬೇಡಿಕೆಯಿಂದಾಗಿ ಅತ್ಯಂತ ಜನಪ್ರಿಯ ಕಾರ್ಪ್‌ ಮೀನುಗಳಲ್ಲಿ ಒಂದಾಗಿದೆ. ಈ ಮೀನುಗನ್ನು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಮೀನು ಸಾರು, ಮೀನು ಪ್ರೈ ಮಾಡಲು ಬಳಸುತ್ತಾರೆ. ಈ ಮೀನಿನ ಬಗ್ಗೆ ಇನ್ನಷ್ಟು ವಿವರವಾದ ಮಾಹಿತಿಯನ್ನು ಇಲ್ಲಿ ತಿಳಿಯೊಣ. 

ರೋಹು ಮೀನು ಸಾಕಣೆಯಲ್ಲಿ ಲಾಭ

  • 1kg ರೋಹು ಮೀನಿನ ಮಾರುಕಟ್ಟೆ ಬೆಲೆ- 200 ರೂ.
  • ಒಂದು ಚಕ್ರದಲ್ಲಿ ಪ್ರತಿ ಎಕರೆಗೆ ರೋಹು ಮೀನಿನ ಒಟ್ಟು ತೂಕ- 4,000 ಕೆಜಿ (4 ಟನ್). 
  • ರೋಹು ಮೀನಿನ ಇಳುವರಿಯ ಒಟ್ಟು ಮಾರುಕಟ್ಟೆ ಮೌಲ್ಯ- 8,00,000 
  • ಮೊದಲ ಚಕ್ರದ ಕೊನೆಯಲ್ಲಿ ರೋಹು ಮೀನಿನ ಲಾಭದ ಅಂಚು- 6 ರೂ
  •  ಮೊದಲ ಸೈಕಲ್‌ಗೆ ಪ್ರತಿ ಎಕರೆಗೆ ರೋಹು ಮೀನಿನ ಲಾಭ – 30,000 ರೂ
  • ರೋಹು ಮೀನಿನ ಲಾಭದ ಅಂಚು ಎರಡನೇ ಚಕ್ರಕ್ಕೆ ಪ್ರತಿ ಎಕರೆಗೆ- 6,90,000 ರೂನಿಂದ 7,10,000 ರೂಗಳು.
  • ಮೂರನೇ ಚಕ್ರಕ್ಕೆ ಪ್ರತಿ ಎಕರೆಗೆ ರೋಹು ಮೀನಿನ ಲಾಭದ ಅಂಚು- 7,00,000 ರೂನಿಂದ 7,20,000 ರೂಗಳು.

ರೋಹು ಮೀನಿನ ಬ್ರೀಡಿಂಗ್‌ : ರೋಹು ಮೀನುಗಳು ಮೂರು ವರ್ಷಗಳಲ್ಲಿ ಪ್ರಬುದ್ಧತೆಯನ್ನು ಹೊಂದಿರುತ್ತದೆ. ಹೆಣ್ಣು ರೋಹು ಮೀನು ಸುಮಾರು 3 ಲಕ್ಷ ಮೊಟ್ಟೆಗಳನ್ನು ಇಡುತ್ತವೆ. ಈ ಮೀನುಗಳು ನಿಂತ ನೀರಿನಲಿ ಮೊಟ್ಟೆ Rohu fish breeding ಇಡುವುದಿಲ್ಲ. ಇವುಗಳು ತೆರೆದ ನೀರಿನಲ್ಲಿ ಮಾತ್ರ ಮೊಟ್ಟೆಗಳನ್ನು ಇಡುತ್ತವೆ. ಇನ್ನು ಇವುಗಳು ಮೊಟ್ಟೆ ಇಡುವ ಸೂಕ್ತ ಸಮಯವೆಂದರೆ ಎಪ್ರಿಲ್‌ ನಿಂದ ಜುಲೈವರೆಗೆ. ಈ ಮೀನುಗಳು ಸಿಹಿನೀರಿನ ನದಿಗಳು, ಸರೋವರಗಳು, ಜಲಾಶಗಳು, ಕಾಲುವೆ ಮತ್ತು ತೆರೆದ ನೀರಿನ ಇತರ ಪ್ರದೇಶಗಳಲ್ಲಿ ಕಾಣಬಹುದು. 

ರೋಹು ಮೀನಿನ ಸಾಕಣೆ ಹೇಗೆ? 

ರೋಹು ಮೀನಿನ ಬೆಳವಣಿಗೆ  25 ° C ನಿಂದ 36 ° C ವರೆಗಿನ ನೀರಿನ ತಾಪಮಾನವು ಸೂಕ್ತವಾಗಿದೆ. ಈ Rohu fish farming ಸಾಕಣೆಗೆ ಕೊಳದ ನಿರ್ಮಾಣವು ಬಹಳ ಮುಖ್ಯವಾಗಿದೆ. ರೋಹು ಮೀನುಗಳನ್ನು ನೈಸರ್ಗಿಕ ಕೆರೆಗಳಲ್ಲೂ ಸಾಕಣೆ ಮಾಡಬಹುದು. ಇವುಗಳನ್ನು ಸಿಮೆಂಟ್‌ ನೀರಿನ ತೊಟ್ಟಿಗಳಲ್ಲಿ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಕೂಡ ಹೊಂದಿದೆ. ಹೆಚ್ಚಾಗಿ ಈ ಮೀನು ಸಾಕಣೆಗಾಗಿ  10×12 ಚದರ ಮೀಟರ್ ಗಾತ್ರದ ಕೊಳವನ್ನು ನಿರ್ಮಿಸಲಾಗುತ್ತದೆ. ಒಂದು ಎಕರೆಯಲ್ಲಿ ಜಾಗದಲ್ಲಿ ನೀವು ರೋಹು ಮೀನು ಸಾಕಣೆಗಾಗಿ 28 ರಿಂದ 32 ಇದೇ ರೀತಿಯ ಕೊಳಗಳನ್ನು ಮಾಡಬಹುದು. ಪ್ರತಿ ಕೊಳದ ಆಳವು 2 ರಿಂದ 2.5 ಮೀಟರ್ ಆಳವಾಗಿರಬೇಕು. ಪ್ರತಿ ಟ್ಯಾಂಕ್‌ಗೆ ನೀವು ಕನಿಷ್ಟ 1hp ಯ ಆಮ್ಲಜನಕದ ವ್ಯವಸ್ಥೆಯನ್ನು ಹೊಂದಿರಬೇಕು. ಪ್ರತಿ ಮೀನುಗಳಿಗೆ ಉಸಿರಾಡಲು ಆಮ್ಲಜನಕವನ್ನು ಒದಗಿಸಲು ಪ್ರತಿ ಕೊಳಕ್ಕೆ ಆಮ್ಲಜನಕ ಪೂರೈಕೆ ವ್ಯವಸ್ಥೆಯನ್ನು ಸೇರಿಸುವುದು ಅವಶ್ಯಕ. ಒಂದರ್ಥದಲ್ಲಿ, ಆಮ್ಲಜನಕ ವ್ಯವಸ್ಥೆಯು ನೀರನ್ನು ಸ್ವಚ್ಛಗೊಳಿಸುತ್ತದೆ ಮತ್ತು ಮೀನುಗಳಿಗೆ ಹೊಂದಿಕೊಳ್ಳಲು ವಾತಾವರಣವನ್ನು ಒದಗಿಸಲು ಸಹಾಯ ಮಾಡುತ್ತದೆ.

ರೋಹು ಮೀನಿನ ಆಹಾರ ಪದ್ಧತಿ: ರೋಹು ಮೀನುಗಳು Rohu farming ಸಸ್ಯ ಮತ್ತು ಕೊಳೆತ ಸಾವಯವ ವಸ್ತುಗಳನ್ನು ತಿನ್ನುತ್ತವೆ ಮತ್ತು ಅವುಗಳು ತಮ್ಮ ಆಹಾರವನ್ನು ನೀರಿನ ಮಧ್ಯದ ಮಟ್ಟದಿಂದ ಪಡೆಯುತ್ತವೆ. ಮೀನಿನ ತೂಕವನ್ನು ತ್ವರಿತವಾಗಿ ಬೆಳೆಯಲು ಸಹಾಯ ಮಾಡಲು ವಾಣಿಜ್ಯ ಜಲಕೃಷಿಯ ಭಾಗವಾಗಿ ಅಕ್ಕಿ ತೌಡು, ಗೋಧಿ ಮುಂತಾದವುಗಳನ್ನು ನೀಡಬಹುದು. 

ರೋಹು ಮೀನಿನ ಕಟಾವು: ರೋಹು ಮೀನುಗಳು 500 ಗ್ರಾಂ ತೂಕವನ್ನು ತಲುಪಿದ ನಂತರ ಬಲೆಗಳನ್ನು ಬಳಸಿ ಕೊಳದಲ್ಲಿ ಹಿಡಿಯಬಹುದು. ರೋಹು Rohu fish farming in India ಮೀನುಗಳು 1 ರಿಂದ 2 ಕೆಜಿ ತೂಕವನ್ನು ಹೊಂದಿದಾಗ ಅವುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿದೆ. ಮೀನಿನ ಗಾತ್ರ ಮತ್ತು ಪ್ರದೇಶದ ಮಾರುಕಟ್ಟೆಗೆ ಬೇಡಿಕೆಯನ್ನು ಆಧರಿಸಿ ಕೊಯ್ಲು ಮಾಡಬಹುದು.  

ರೋಹು ಮೀನಿನ ಮಾರುಕಟ್ಟೆ ಬೇಡಿಕೆ: ರೋಹು ಮೀನು ಭಾರತದಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಹೊಂದಿದೆ. ಈ ಮೀನುಗಳನ್ನು ಹೆಚ್ಚಾಗಿ ಫಿಶ್‌ ಕರಿ, ಫಿಶ್‌ ಫ್ರೈ ತಯಾರಿಸಲು ಬಳಸಲಾಗುತ್ತದೆ. ಇದಲ್ಲದೆ ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಗಳಲ್ಲಿ ಲಭ್ಯವಿದೆ. ಈ ಮೀನುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕಿ.ಗ್ರಾಂ ಗೆ ಸುಮಾರು 120 ರಿಂದ 160 ರೂಪಾಯಿಗಳಿಗೆ ಮಾರಾಟವಾಗುತ್ತದೆ. ರೈತರು ರೋಹು ಮೀನುಗಳನ್ನು ಅವುಗಳ ಗಾತ್ರಕ್ಕೆ ಅನುಗುಣವಾಗಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಬಹುದಾಗಿದೆ. 
ಪ್ರೀಡಂ ಆಯಪ್‌ ನಲ್ಲಿ ರೋಹು ಫಾರ್ಮಿಂಗ್‌ ಕೋರ್ಸ್:‌ ಪ್ರೀಡಂ ಆಯಪ್‌ ನಲ್ಲಿ ಈ  ffreedom app ನಲ್ಲಿ ನೀವು ಈ ರೋಹು ಮೀನು ಸಾಕಣೆ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುವಿರಿ. ಇಲ್ಲಿ ನೀವು  Rohu Fish Farming Course ಬಗ್ಗೆ ಮಾರ್ಗದರ್ಶಕರಿಂದ ಸಂಪೂರ್ಣ ಮಾಹಿತಿಯನ್ನು ಪಡೆಯುವಿರಿ.

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.