ಬೆಳಗಾವಿಯ ಮೂಡಲಗಿ ತಾಲೂಕಿನ ಲಕ್ಷ್ಮೀಶ್ವರ ಗ್ರಾಮದ ಸಂತೋಷ್ ಅವರು ತಮ್ಮ ಬಿಎ ಕಾನೂನು ಪದವಿಯನ್ನು ಮುಗಿಸಿ SKDRD ಎಂಬ NGOದಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರು ತಿಂಗಳಿಗೆ 25 ಸಾವಿರ ರೂಪಾಯಿಯ ಸಂಬಳವನ್ನು ಪಡೆಯುತ್ತಿದ್ದರು. ಮೂಲತಃ ಕೃಷಿ ಕುಟುಂಬದ ಹಿನ್ನಲೆಯಿಂದ ಬಂದಿದ್ದ ಇವರಿಗೆ ಕೃಷಿಯ ಬಗ್ಗೆ ವಿಶೇಷ ಒಲವಿತ್ತು. 7 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದ ಇವರು ಉತ್ತಮ ಜ್ಞಾನ ಮತ್ತು ಮಾರ್ಗದರ್ಶನ ಸಿಕ್ಕರೆ ಕೃಷಿಯಲ್ಲಿ ಏನಾದರು ದೊಡ್ಡದಾಗಿ ಸಾಧನೆ ಮಾಡಬೇಕು ಎಂಬ ಆಕಾಂಕ್ಷೆಯನ್ನು ಸಹ ಹೊಂದಿದ್ದರು.
ಭರವಸೆ ಮೂಡಿಸಿದ ffreedom App ಸಂಸ್ಥಾಪಕರ ಮಾತು
ಒಮ್ಮೆ YouTube ವೀಕ್ಷಣೆ ಮಾಡುತ್ತಿದ್ದಾಗ ಜಾಹೀರಾತಿನ ಮೂಲಕ ffreedom Appನ ಬಗ್ಗೆ ಇವರು ತಿಳಿದುಕೊಂಡರು. ನಂತರದಲ್ಲಿ ಅಪ್ಲಿಕೇಶನ್ ಅನ್ನು ಡೌನಲೋಡ್ ಮಾಡಿಕೊಂಡು ಸಮಗ್ರ ಕೃಷಿ, ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ರೇಷ್ಮೆ ಕೋರ್ಸ್ ಗಳನ್ನು ವೀಕ್ಷಿಸುವ ಮೂಲಕ ಅದರ ಕುರಿತಂತೆ ಉತ್ತಮ ಜ್ಞಾನವನ್ನು ಪಡೆದುಕೊಂಡರು. ಇದರ ಜೊತೆಗೆ ffreedom App ಸಂಸ್ಥಾಪಕರು ಮತ್ತು ಸಿಇಓ ಆಗಿರುವ ಸಿ.ಎಸ್ ಸುಧೀರ್ ಅವರ ಯೂಟ್ಯೂಬ್ ಲೈವ್ ಮೂಲಕ ಕೃಷಿಯನ್ನು ಹೇಗೆ ಪ್ರಾರಂಭಿಸಬೇಕು ಎಂಬುದರ ಬಗ್ಗೆ ಸಲಹೆಯನ್ನು ಪಡೆದರು. ಕೃಷಿಯಲ್ಲಿ ಸಾಧನೆ ಮಾಡಬೇಕು ಎಂಬ ಕನಸು ಕಂಡಿದ್ದ ಸಂತೋಷ್ ಅವರಿಗೆ ಇದು ಮತ್ತಷ್ಟು ಧೈರ್ಯ ಮತ್ತು ಭರವಸೆಯನ್ನು ತಂದಿತು.
ಸಿರಿತನಕ್ಕೆ ದಾರಿ ಸೆರಿಕಲ್ಚರ್
ರೇಷ್ಮೆ ಬೆಳೆಯುವುದರಲ್ಲಿ ನಿರತರಾಗಿದ್ದ ಪರಿಚಯಸ್ಥರಿಂದ ಸ್ಫೂರ್ತಿ ಪಡೆದ ಸಂತೋಷ್ ಅವರು ಈ ಕೃಷಿಯಿಂದ ಒಳ್ಳೆಯ ಆದಾಯ ಗಳಿಸಬಹುದು ಎಂಬುದನ್ನು ತಿಳಿದುಕೊಂಡರು.
ತಮ್ಮ ಬಳಿ ಇದ್ದ ಏಳು ಎಕರೆ ಕೃಷಿ ಭೂಮಿಯ ಒಂದು ಎಕರೆಯಲ್ಲಿ ರೇಷ್ಮೆ ಬೆಳೆಯಲು ಮುಂದಾಗಿದ್ದಾರೆ. ಇದರ ಜೊತೆಗೆ ತರಕಾರಿಗಳನ್ನು ಸಹ ಬೆಳೆಯುವ ಮೂಲಕ ಮೂರು ತಿಂಗಳಲ್ಲಿ 70 ಸಾವಿರದ ವರೆಗೆ ಆದಾಯವನ್ನು ಗಳಿಸಿದ್ದಾರೆ. ಕಬ್ಬನ್ನು ಬೆಳೆಯುವ ಮೂಲಕವೂ ಸಹ ಇವರು ವರ್ಷಕ್ಕೆ ಐದು ಲಕ್ಷ ಸಂಪಾದಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರೇಷ್ಮೆ ಕೃಷಿಯ ಮೂಲಕವೂ ಸಹ ಲಕ್ಷಗಳಲ್ಲಿ ಆದಾಯವನ್ನು ಗಳಿಸುವ ಬಗ್ಗೆ ವಿಶ್ವಾಸವನ್ನು ಹೊಂದಿದ್ದಾರೆ.
ಮುಂದಿನ ಗುರಿ ಕೃಷಿ ಉದ್ಯಮಿ ಆಗುವುದು
ಹಿಂದೊಮ್ಮೆ ಕೃಷಿಯನ್ನು ಹೇಗೆ ಆರಂಭಿಸುವುದು ಎಂಬ ಪ್ರಶ್ನೆಯನ್ನು ಹೊಂದಿದ್ದ ಯುವಕ ಇಂದು ಖಾಸಗಿ ಕೆಲಸಕ್ಕೆ ಗುಡ್ ಬೈ ಹೇಳಿ ಕೃಷಿಯ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇಂದು ಅವರಲ್ಲಿ ಅಂದುಕೊಂಡಿದ್ದನ್ನು ಸಾಧಿಸುತ್ತಿರುವ ತೃಪ್ತಿ ಇದೆ. ಬದುಕಲ್ಲಿ ನೆಮ್ಮದಿ ಮತ್ತು ಹಣ ಎರಡನ್ನು ಸಹ ಕೃಷಿ ತಂದುಕೊಡುತ್ತಿದೆ. ಇಷ್ಟಕ್ಕೇ ನಿಲ್ಲದ ಸಂತೋಷ್ ಅವರು ಮುಂದಿನ ದಿನಗಳಲ್ಲಿ ರೇಷ್ಮೆ ಕೃಷಿಯ ಮೂಲಕ ಅಧಿಕ ಆದಾಯವನ್ನು ಗಳಿಸಿ ಅದರ ಮೂಲಕ ಕೃಷಿ ಉದ್ಯಮಿ ಆಗುವ ಕನಸನ್ನು ಸಹ ಹೊಂದಿದ್ದಾರೆ. ಕೃಷಿಯಿಂದ ತಿಂಗಳಿಗೆ ಒಂದು ಲಕ್ಷ ಆದಾಯವನ್ನು ಗಳಿಸಬೇಕು ಎಂಬ ಗುರಿಯನ್ನು ಹೊಂದಿರುವ ಇವರು ಅದಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕೃಷಿಯ ಮೂಲಕ ಲಕ್ಷಾಧಿಪತಿ ಆಗಬೇಕು ಎನ್ನುವ ಇವರ ಕನಸು ಬಹಳಷ್ಟು ಯುವಕರಿಗೆ ಪ್ರೇರಣೆ ಆಗಿದೆ. ಇವರ ಈ ಎಲ್ಲ ಸಾಧನೆಗೆ ffreedom App ಪ್ರಮುಖ ಪಾತ್ರವನ್ನು ವಹಿಸಿದೆ ಎಂಬುದನ್ನು ಸಹ ಇವರು ಸ್ಮರಿಸುತ್ತಾರೆ.