Home » Latest Stories » ಯಶಸ್ಸಿನ ಕಥೆಗಳು » “ಪುಷ್ಪ ಕೃಷಿಯಲ್ಲಿ ಗುರುರಾಜ್ ಕುಲಕರ್ಣಿಯವರ ಯಶೋಗಾಥೆ”

“ಪುಷ್ಪ ಕೃಷಿಯಲ್ಲಿ ಗುರುರಾಜ್ ಕುಲಕರ್ಣಿಯವರ ಯಶೋಗಾಥೆ”

by Punith B
171 views

ಗುರುರಾಜ್ ಕುಲಕರ್ಣಿಯವರು ಕರ್ನಾಟಕದ ವಿಜಯಪುರದ ತಾಳಿಕೋಟೆಯವರು. ಇವರು ಮೂಲತಃ ಕೃಷಿ ಹಿನ್ನೆಲೆಯ ಕುಟುಂಬದಿಂದ ಬಂದವರು. ಆರಂಭದಲ್ಲಿ ತಮ್ಮ ಬಳಿ ಇದ್ದ 3 ಎಕರೆ ಕೃಷಿ ಭೂಮಿಯಲ್ಲಿ ಬಂಡವಾಳ ಹೂಡಿ ಬೋರ್‌ವೆಲ್‌ ಕೊರೆದು ಪುಷ್ಪ ಕೃಷಿಯನ್ನು ಪ್ರಾರಂಭಿಸಿದ್ದರು. ಕೆಲವು ಸಮಯದ ವರೆಗೆ ಅದು ಉತ್ತಮ ಆದಾಯವನ್ನು ಅವರಿಗೆ ಗಳಿಸಿಕೊಟ್ಟಿತ್ತು. ಆದರೆ ವ್ಯವಹಾರದಲ್ಲಿ ಹಿಡಿತವಿಲ್ಲದ ಕಾರಣ ಹೂವಿನ ಕೃಷಿಯಲ್ಲಿ ಅವರು ನಷ್ಟ ಅನುಭವಿಸುವಂತೆ ಆಯಿತು. ತಡ ನಂತರದಲ್ಲಿ ಅವರು ಹೈನುಗಾರಿಕೆಯನ್ನು ಸಹ ಆರಂಭಿಸಿದರು ಆದರೆ ಅಲ್ಲಿಯೂ ಸಹ ವ್ಯಾವಹಾರಿಕ ಅನುಭವದ ಕೊರತೆಯಿಂದಾಗಿ ನಷ್ಟ ಅನುಭವಿಸುವಂತೆ ಆಯಿತು. ಇದರಿಂದಾಗಿ ಗುರುರಾಜ್ ಅವರು ಸಾಲದ ಸುಳಿಗೆ ಸಿಲುಕುವಂತಾಯಿತು. ಸಾಲವನ್ನು ತೀರಿಸಲು ಮತ್ತು ಜೀವನ ನಿರ್ವಹಣೆ ಮಾಡಲು ಟ್ರಾವೆಲ್ಸ್ ಒಂದರಲ್ಲಿ ಡ್ರೈವರ್ ಆಗಿ ಕೆಲಸಕ್ಕೆ ಸೇರಿಕೊಂಡರು. ಆದಾಗ್ಯೂ, ಅವರು ತಮ್ಮ ಕೃಷಿ ಬೇರುಗಳನ್ನು ಎಂದಿಗೂ ಸಹ ಕಳೆದುಕೊಳ್ಳಲು ಇಷ್ಟಪಟ್ಟಿರಲಿಲ್ಲ. ತಮ್ಮ ಜೀವನದಲ್ಲಿ ಮತ್ತೆ ಕೃಷಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಮಾರ್ಗಗಳನ್ನು ಹುಡುಕುತ್ತಿದ್ದರು. 

Ffreedom Appನೊಂದಿಗೆ ಹೊಸ ಆರಂಭ

ಲಾಕ್‌ಡೌನ್ ಸಮಯದಲ್ಲಿ, ಗುರುರಾಜ್ ಅವರು ತನ್ನ ಡ್ರೈವಿಂಗ್ ಕೆಲಸವನ್ನು ಕಳೆದುಕೊಂಡರು ಮತ್ತು ಕಷ್ಟಕರ ಸಂದರ್ಭಗಳನ್ನು ಎದುರಿಸಿದರು. ಈ ಕಠಿಣ ಸಮಯದಲ್ಲಿ ಅವರು ಸಾಮಾಜಿಕ ಜಾಲತಾಣದ ಮೂಲಕ Ffreedom App ಬಗ್ಗೆ ತಿಳಿದುಕೊಂಡರು. ಅಪ್ಲಿಕೇಶನ್ ಅನ್ನು ಡೌನಲೋಡ್ ಮಾಡಿಕೊಳ್ಳುವ ಮೂಲಕ ಹಣ ನಿರ್ವಹಣೆ ಹೇಗೆ ಮಾಡಬೇಕು ಎಂಬ ಕೋರ್ಸ್ ನ ಜೊತೆಗೆ ಒಳ್ಳೆಯ ಮತ್ತು ಕೆಟ್ಟ ಸಾಲದಂತಹ ವಿಷಯಗಳ ಕುರಿತ ಕೋರ್ಸ್‌ಗಳನ್ನು ವೀಕ್ಷಿಸಿದರು. ಈ ಮೂಲಕ ಕಷ್ಟ ಪಟ್ಟು ದುಡಿವ ಹಣವನ್ನು ಹೇಗೆ ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ಉಪಯುಕ್ತ ಮಾಹಿತಿಯನ್ನು ವಿವರವಾಗಿ ತಿಳಿದುಕೊಂಡರು. Ffreedom ಅಪ್ಲಿಕೇಶನ್ ನಲ್ಲಿ ಫ್ಲೋರಿಕಲ್ಚರ್ ಕೋರ್ಸ್ ಅನ್ನು ವೀಕ್ಷಿಸಿದ ನಂತರ, ಕೃಷಿಯನ್ನು ಮತ್ತೊಮ್ಮೆ ಪ್ರಯತ್ನಿಸುವ ವಿಶ್ವಾಸವನ್ನು ಗುರುರಾಜ್ ಅವರು ಮರಳಿ ಪಡೆದರು.

ಪುಷ್ಪ ಕೃಷಿಯಲ್ಲಿ ಯಶಸ್ಸು

ಹೊಸ ಸಂಕಲ್ಪದೊಂದಿಗೆ, ಗುರುರಾಜ್ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಸೇವಂತಿಗೆ ಹೂವುಗಳನ್ನು ಬೆಳೆಯುವ ಮೂಲಕ 35 ಕ್ವಿಂಟಾಲ್‌ಗಳ ಉತ್ತಮ ಇಳುವರಿಯನ್ನು ಸಾಧಿಸಿದರು. ಇದರ ಜೊತೆಗೆ ಮಧ್ಯವರ್ತಿಗಳ ಹಾವಳಿಗಳನ್ನು ತಪ್ಪಿಸಲು ತನ್ನ ಹೂವುಗಳ ಮಾರಾಟವನ್ನು ಸ್ವತಃ ತಾವೇ ಮಾಡಲು ನಿರ್ಧರಿಸಿದರು ಮತ್ತು ಉತ್ತಮ ಮಾರುಕಟ್ಟೆಯನ್ನು ಸಹ ಕಂಡುಕೊಂಡರು. ಈ ಮೂಲಕವಾಗಿ ಗುರುರಾಜ್ ಅವರು ಮತ್ತೆ ಪುಷ್ಪ ಕೃಷಿಯಲ್ಲಿ ಗೆಲುವಿನ ದಾರಿಗೆ ಮರಳಿದರು. ನಂತರದಲ್ಲಿ  ಸೇವಂತಿಗೆ ಜೊತೆಗೆ ಮಲ್ಲಿಗೆ, ಗುಲಾಬಿ, ಸುಗಂದರಾಜ ಸೇರಿದಂತೆ ವಿವಿಧ ಬಗೆಯ ಏಳು ಹೂವುಗಳನ್ನು ಬೆಳೆಯಲು ಆರಂಭಿಸಿದರು.

ಇಂದು ಗುರುರಾಜ್ ಅವರು ತಮ್ಮ ಪುಷ್ಪ ಕೃಷಿಯಿಂದ ವರ್ಷಕ್ಕೆ ಅಂದಾಜು 2 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದಿನಕ್ಕೆ 2 ಸಾವಿರದಂತೆ ತಿಂಗಳಿಗೆ 60 ಸಾವಿರದಷ್ಟು ಆದಾಯವನ್ನು ಗಳಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ಕಠಿಣ ಪರಿಶ್ರಮ, ಸಂಕಲ್ಪ ಮತ್ತು ffreedom Appನ ಸಹಾಯದ ಮೂಲಕ ಗುರುರಾಜ್ ಅವರು ತಮ್ಮ ಪುಷ್ಪ ಕೃಷಿ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ಗುರುರಾಜ್ ಅವರ ಈ ಕಥೆಯು ಸ್ಪೂರ್ತಿದಾಯಕವಾಗಿದ್ದು, ಪರಿಶ್ರಮ ಮತ್ತು ಸರಿಯಾದ ಸಂಪನ್ಮೂಲಗಳಿದ್ದರೆ, ಯಾವುದೇ ಕ್ಷೇತ್ರದಲ್ಲಿಯೂ ಸಹ ಯಶಸ್ಸು ಸಾಧಿಸಲು ಸಾಧ್ಯ ಎಂಬುದನ್ನು ಇದು ತೋರಿಸುತ್ತದೆ. ಆರಂಭಿಕ ಹಿನ್ನಡೆಗಳು ಮತ್ತು ವೈಫಲ್ಯಗಳ ಹೊರತಾಗಿಯೂ, ಅವರು ತಮ್ಮ ಕನಸುಗಳನ್ನು ಎಂದಿಗೂ ಬಿಟ್ಟುಕೊಡದೇ ಮತ್ತೆ ಯಶಸ್ಸನ್ನು ಪಡೆದಿರುವುದು ಬಹಳಷ್ಟು ಮಂದಿಗೆ ಸ್ಫೂರ್ತಿ ನೀಡುತ್ತದೆ. 

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.