Home » Latest Stories » ಯಶಸ್ಸಿನ ಕಥೆಗಳು » ಶ್ರೀಗಂಧ ಮತ್ತು ಮಹಾಗನಿಯ ಕೃಷಿ – ಉಜ್ವಲ ಭವಿಷ್ಯಕ್ಕೆ ಅಡಿಗಲ್ಲು 

ಶ್ರೀಗಂಧ ಮತ್ತು ಮಹಾಗನಿಯ ಕೃಷಿ – ಉಜ್ವಲ ಭವಿಷ್ಯಕ್ಕೆ ಅಡಿಗಲ್ಲು 

by Punith B

ಉತ್ತಮ ಭವಿಷ್ಯಕ್ಕೆ  ಶ್ರೀಗಂಧ ಮತ್ತು ಮಹಾಗನಿ ಕೃಷಿ

ಮಂಜುನಾಥ್ ಅವರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಉತ್ತಮವಾದ ಕೊಡುಗೆಯನ್ನು ನೀಡಬೇಕೆಂದು ಸದಾ ಕಾಲ ಯೋಚಿಸುತ್ತಿದ್ದರು. ಬರೀ ಸಂಬಳ ಪಡೆಯುವ ಕೆಲಸದಿಂದ ಆರ್ಥಿಕ ಸ್ವಾತಂತ್ರ್ಯವನ್ನು ಗಳಿಸಲು ಸಾಧ್ಯವಿಲ್ಲ ಎಂದು ನಂಬಿರುವ ಇವರು ಸಂಪತ್ತನ್ನು ಗಳಿಸಲು ಸ್ವಂತವಾಗಿ ಏನಾದರು ಆರಂಭಿಸಬೇಕು ಎಂದು ತೀರ್ಮಾನಿಸಿದರು.   ಈ ಬಗ್ಗೆ ಹಲವು ಬಾರಿ ಚಿಂತನೆ ನಡೆಸಿದ ಬಳಿಕ ಕೃಷಿ ಮಾಡುವುದರಿಂದ ಒಳ್ಳೆಯ ಲಾಭಗಳಿಸಬಹುದು ಎಂದು ತಿಳಿದುಕೊಂಡರು.  ಕೃಷಿಯ ಬಗ್ಗೆ ಹಲವು ಮಾಹಿತಿಗಳನ್ನು ಕಲೆಹಾಕುತ್ತಿರುವಾಗ ಶ್ರೀಗಂಧ ಮತ್ತು ಮಹಾಗನಿ ಕೃಷಿಯು ದೀರ್ಘಾವಧಿಯಲ್ಲಿ ದೊಡ್ಡ ಲಾಭವನ್ನು ತಂದು ಕೊಡಬಲ್ಲದು ಎಂಬುದನ್ನು ತಿಳಿದುಕೊಂಡರು. 

ಮಾರ್ಗದರ್ಶಿಯಾದ Ffreedom App 

ಶ್ರೀಗಂಧ ಮತ್ತು ಮಹಾಗನಿ ಕೃಷಿಯನ್ನು ಆರಂಭಿಸಬೇಕು ಎಂದು ತೀರ್ಮಾನ ಮಾಡಿದಾಗ ಮಂಜುನಾಥ್ ಅವರಿಗೆ ಈ ಕೃಷಿಯ ಬಗ್ಗೆ ಸರಿಯಾದ ಮಾಹಿತಿಯ ಕೊರತೆ ಎದುರಾಗಿತ್ತು. ಇಂತಹ ಸಂದರ್ಭದಲ್ಲಿ ಒಮ್ಮೆ ಸಾಮಾಜಿಕ ಜಾಲತಾಣದ ಮೂಲಕ ಇವರು ffreedom App ಬಗ್ಗೆ ತಿಳಿದುಕೊಂಡರು. ಅಪ್ಲಿಕೇಶನ್ ಅನ್ನು ಡೌನಲೋಡ್ ಮಾಡಿ ಚಂದಾದಾರಿಕೆಯನ್ನು ಪಡೆದುಕೊಂಡ ನಂತರ ಶ್ರೀಗಂಧ ಮತ್ತು ಮಹಾಗನಿಯ ಕುರಿತ ಹಲವಾರು ಕೋರ್ಸ್ ಗಳನ್ನು ವೀಕ್ಷಣೆ ಮಾಡಿದರು ಮತ್ತು ಈ ಕೃಷಿಯ ಬಗ್ಗೆ ಅವರು ಹಲವಾರು ಉತ್ತಮ ಮಾಹಿತಿಗಳನ್ನು ಪಡೆದುಕೊಂಡರು. ಇದರಿಂದ ತಮ್ಮ ಬಳಿಯಿದ್ದ ಹಲವಾರು ಪ್ರಶ್ನೆ ಮತ್ತು ಗೊಂದಲಗಳಿಗೆ ಉತ್ತರವನ್ನು ಪಡೆದುಕೊಂಡರು. ಅಪ್ಲಿಕೇಶನ್ ನ ಸಹಾಯದಿಂದ ಹಲವಾರು ಯಶಸ್ವಿ ಸಾಧಕ ಮಾರ್ಗದರ್ಶಕರನ್ನು ಸಂಪರ್ಕಿಸುವ ಅವಕಾಶವೂ ಸಹ ಅವರಿಗೆ ಸಿಕ್ಕಿತು. ಈ ಕೃಷಿಯ ಕುರಿತು ಮಾರ್ಗದರ್ಶಕರಿಂದ ಹಲವು ವಿಚಾರವಾಗಿ ಸಲಹೆ ಸೂಚನೆಗಳನ್ನು ಸಹ ಪಡೆದುಕೊಂಡರು. ಇದರಿಂದ ಈ  ಕೃಷಿಯನ್ನು  ಆರಂಭಿಸಲು ಮಂಜುನಾಥ್ ಅವರಿಗೆ ಇನ್ನಷ್ಟು ಧೈರ್ಯ ಮತ್ತು ಸ್ಫೂರ್ತಿ ಸಿಕ್ಕಿತು.  ಒಟ್ಟು 16 ಎಕರೆ ಕೃಷಿ ಭೂಮಿ ಹೊಂದಿರುವ ಇವರು ಪ್ರಸ್ತುತ 2.5 ಎಕರೆಯಲ್ಲಿ 1000 ಶ್ರೀಗಂಧ ಮತ್ತು 1200 ಮಹಾಗನಿಯನ್ನು ನೆಡಲು ಸಿದ್ಧತೆ ನಡೆಸಿದ್ದಾರೆ.       

ಕೃಷಿಯಿಂದ ವರ್ಷವಿಡೀ ಆದಾಯ ಗಳಿಸಲು ಯೋಜನೆ 

ದೀರ್ಘಾವಧಿಯ ಉತ್ತಮ ಲಾಭಕ್ಕೆ ಶ್ರೀಗಂಧ ಮತ್ತು ಮಹಾಗನಿ ಕೃಷಿಯನ್ನು ಆರಿಸಿಕೊಂಡ ಮಂಜುನಾಥ್ ಅವರು ಕೃಷಿಯ ಮೂಲಕ ನಿಯಮಿತ ಆದಾಯವನ್ನು ವರ್ಷವಿಡೀ ಗಳಿಸುವ ಬಗ್ಗೆ ಸಹ ಆಲೋಚನೆಯನ್ನು ಮಾಡಿದರು. ಈ ಕುರಿತಾಗಿ ffreedom App ನಲ್ಲಿ  ಹಲವಾರು ಕೋರ್ಸ್ ಗಳನ್ನು ವೀಕ್ಷಣೆ ಮಾಡಿದರು. ಪ್ರಮುಖವಾಗಿ ಸಮಗ್ರ ಕೃಷಿ, ಕೋಳಿ ಸಾಕಾಣಿಕೆ, ಮೇಕೆ ಸಾಕಾಣಿಕೆ ಮತ್ತು ಮೀನು ಸಾಕಾಣಿಕೆ ಕುರಿತ ಕೋರ್ಸ್ ಗಳು ಹೆಚ್ಚು ಗಮನ ಸೆಳೆಯಿತು. ತಾವೂ ಸಹ ಸಮಗ್ರ ಕೃಷಿ ಮತ್ತು ಪ್ರಾಣಿ ಸಾಕಾಣಿಕೆ ಮಾಡಬೇಕು ಎಂದುಕೊಂಡು ತಮ್ಮ  ಸ್ವಂತ ಜಾಗದಲ್ಲಿ ಕೋಳಿ, ಮೇಕೆ ಮತ್ತು ಮೀನು ಸಾಕಣೆಯನ್ನು ಆರಂಭಿಸಿದ್ದಾರೆ. ಒಂದು ಸಾಕಣೆಯ ತ್ಯಾಜ್ಯ ಇನ್ನೊಂದು ಸಾಕಣೆಗೆ ಆಹಾರವಾಗುವ ವಿಧಾನವನ್ನು  ಬಳಸಿಕೊಳ್ಳುವ ಮೂಲಕ ಒಟ್ಟು ಸಾಕಾಣೆಯ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿಕೊಳ್ಳುವ ಮೂಲಕ ಅಧಿಕ ಲಾಭವನ್ನು ಗಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೃಷಿಯ ಮೂಲಕ ದೈನಂದಿನ ಆದಾಯ, ವಾರದ ಮತ್ತು ಮಾಸಿಕ ಆದಾಯವನ್ನು ಗಳಿಸುವೆಡೆ ಸಹ ಉತ್ತಮ ಯೋಜನೆಯನ್ನು ರೂಪಿಸುತ್ತಿದ್ದಾರೆ. ಕೃಷಿಯ ಮೂಲಕ ಸಿರಿತನವನ್ನು ಗಳಿಸಬಹುದು ಎಂದು ತೋರಿಸಲು ಮುಂದಾಗಿರುವ ಇವರ ನಡೆ ಹಲವರಿಗೆ ಸ್ಪೂರ್ತಿದಾಯಕವಾಗಲಿದೆ.  

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.