Home » Latest Stories » ಯಶಸ್ಸಿನ ಕಥೆಗಳು » ಕೈ ಹಿಡಿದ ಹಪ್ಪಳ ಬಿಸಿನೆಸ್: ಗುರಿ ತಲುಪಲು ಗುರುವಾದ ffreedom app

ಕೈ ಹಿಡಿದ ಹಪ್ಪಳ ಬಿಸಿನೆಸ್: ಗುರಿ ತಲುಪಲು ಗುರುವಾದ ffreedom app

by Punith B
49 views

ಸುಪ್ರೀತ್ ಅವರು ಬಾಲ್ಯದಿಂದಲೂ ವಾಲಿಬಾಲ್ ಕ್ರೀಡೆಯ ಬಗ್ಗೆ ಹೆಚ್ಚು ಒಲವನ್ನು ಹೊಂದಿದ್ದರು, ಮತ್ತು ಮುಂದೊಂದು ದಿನ ವಾಲಿಬಾಲ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಬೇಕು ಎಂಬ ಕನಸನ್ನು ಸಹ ಕಂಡಿದ್ದರು. ಆದರೆ ಈ ವಿಷಯದಲ್ಲಿ ಪರಿಸ್ಥಿತಿಗಳು ಅವರ ನೆರವಿಗೆ ಬರಲಿಲ್ಲ.  ಹೀಗಾಗಿ ಅವರು ಆ ಕನಸನ್ನು ಕೈಚೆಲ್ಲ ಬೇಕಾಯಿತು. 

ಮುಂದೆ ಅವರು ಹತ್ತನೇ ತರಗತಿ ಮುಗಿಸಿದ ನಂತರದಲ್ಲಿ ಬಿಸಿನೆಸ್ ಕ್ಷೇತ್ರದ ಕಡೆಗೆ ಹೆಚ್ಚು ಆಕರ್ಷಿತರಾದರು ಮತ್ತು ಅದರಲ್ಲಿ ಮುಂದುವರಿಯಲು ನಿರ್ಧರಿಸಿದರು. ಈ ನಿಟ್ಟಿನಲ್ಲಿ ಮೊದಲಿಗೆ ಅವರು ಒಂದು ಫೈನಾನ್ಸ್ ಕಂಪನಿಯನ್ನು ಪ್ರಾರಂಭಿಸಿದರು. ಆದರೆ ಹಲವಾರು ಕಾರಣಗಳಿಂದ ಅವರು ಈ ಬಿಸಿನೆಸ್ ನಲ್ಲಿ 80 ಲಕ್ಷದಷ್ಟು ನಷ್ಟವನ್ನು ಅನುಭವಿಸಿದರು. ನಂತರದಲ್ಲಿ ಅವರು ವಾಟರ್ ಸಪ್ಲೈ ಬಿಸಿನೆಸ್ ಅನ್ನು ಪ್ರಾರಂಭಿಸಿದರು, ಇದರ ಜೊತೆಗೆ ಅವರು ನೆಟವರ್ಕ್ ಮಾರ್ಕೆಟಿಂಗ್ ಮೂಲಕ ಒಂದು ಲಕ್ಷದಷ್ಟು ಹಣವನ್ನು ಗಳಿಸಿದರು. ಆದರೆ ಬಿಸಿನೆಸ್ ಬಗೆಗಿನ ಅವರ ಆಸಕ್ತಿ ಅವರನ್ನು ಇಷ್ಟಕ್ಕೆ ಸುಮ್ಮನಾಗಲು ಬಿಡಲಿಲ್ಲ. ಹೀಗಾಗಿ ಸುಪ್ರೀತ್ ಅವರು ಗೂಗಲ್ ಮತ್ತು ಯೂಟ್ಯೂಬ್ ಮೂಲಕ ಹೊಸ ರೀತಿಯ ಬಿಸಿನೆಸ್ ಗಳನ್ನು ಅನ್ವೇಷಿಸಲು ಆರಂಭಿಸಿದರು. 

ಹೀಗೇ ಒಮ್ಮೆ ಯೂಟ್ಯೂಬ್ ಮೂಲಕ ಹೊಸ ಮಾದರಿಯ ಬಿಸಿನೆಸ್ ಗಳ ಹುಡುಕಾಟದಲ್ಲಿದ್ದಾಗ ಅವರು ffreedom appನ ಬಗ್ಗೆ ತಿಳಿದುಕೊಂಡರು. ಮತ್ತು ಅವರು ಗೂಗಲ್ ಪ್ಲೇಸ್ಟೋರ್ ಮೂಲಕ ffreedom app ಅನ್ನು ಡೌನ್ಲೋಡ್ ಮಾಡಿಕೊಂಡರು ಮತ್ತು ಅದರ ಚಂದಾದಾರಿಕೆಯನ್ನು ಪಡೆದುಕೊಂಡರು. ನಂತರದಲ್ಲಿ ಸುಪ್ರೀತ್ ಅವರು ಸುಧೀರ್ ಅವರ ವರ್ಕ್ ಶಾಪ್ ಗಳಲ್ಲಿ ಸಹ ಭಾಗವಹಿಸಿದರು ಮತ್ತು ಅದರಿಂದ ಹೆಚ್ಚಿನ ಮಟ್ಟದ ಜ್ಞಾನವನ್ನು ಮತ್ತು ಪ್ರೇರಣೆಯನ್ನು ಪಡೆದುಕೊಂಡರು. ನಂತರದಲ್ಲಿ ಅವರು ತಮಗೆ ಆಸಕ್ತಿದಾಯಕ ಎನಿಸಿದ ಹಪ್ಪಳ ಬಿಸಿನೆಸ್ ಕೋರ್ಸ್ ಅನ್ನು ffreedom appನಲ್ಲಿ ವೀಕ್ಷಿಸಿದರು. ಉದ್ಯಮದ ಸಾಧಕರು ಮಾರ್ಗದರ್ಶನ ಮಾಡಿರುವ ಈ ಕೋರ್ಸ್ ಮೂಲಕ ಅವರು ಹಪ್ಪಳ ಬಿಸಿನೆಸ್ ಕುರಿತಂತೆ ಹಲವಾರು ಉಪಯುಕ್ತ ಮತ್ತು ಪ್ರಾಯೋಗಿಕವಾದ ಮಾಹಿತಿಯನ್ನು ಪಡೆದುಕೊಂಡರು. ಹಪ್ಪಳವನ್ನು ಹೇಗೆ ತಯಾರಿಸುವುದು, ಹಪ್ಪಳಗಳ ವಿವಿಧ ಪ್ರಕಾರಗಳು, ಹಪ್ಪಳಗಳನ್ನು ಹೇಗೆ ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವುದು ಎಂಬಿತ್ಯಾದಿಗಳ ಬಗ್ಗೆ ಸುಪ್ರೀತ್ ಅವರು ಸಂಪೂರ್ಣ ಜ್ಞಾನವನ್ನು ಪಡೆದುಕೊಂಡರು. 

ನಂತರದಲ್ಲಿ ಅವರು ವಿವಿಧ ರೀತಿಯ ರುಚಿಕರ ಹಪ್ಪಳಗಳನ್ನು ತಯಾರಿಸುವ ನಿಟ್ಟಿನಲ್ಲಿ ಹಲವು ಪ್ರಯೋಗಗಳನ್ನು ಮಾಡಿದರು ಮತ್ತು ಅದರಲ್ಲಿ ಯಶಸ್ವಿಯಾದರು. ಮೊದಲಿಗೆ ಕೇವಲ 10 ಸಾವಿರದ ಸಣ್ಣ ಬಂಡವಾಳದೊಂದಿಗೆ ಅವರು ತಮ್ಮದೇ ಸ್ವಂತ ಹಪ್ಪಳ ಬಿಸಿನೆಸ್ ಅನ್ನು ಪ್ರಾರಂಭಿಸಿದರು. ಬಿಸಿನೆಸ್ ಉತ್ತಮವಾಗುತ್ತ ಸಾಗಿದಾಗ ಅವರು ಕಾಲಾನಂತರದಲ್ಲಿ 1 ಲಕ್ಷ ಮೊತ್ತದ ಹಪ್ಪಳ ತಯಾರಿಕಾ ಮಷೀನ್ ಅನ್ನು ಸಹ ತಮ್ಮ ಬಿಸಿನೆಸ್ ಗಾಗಿ ಖರೀದಿಸಿದರು. ಪ್ರಸ್ತುತ ಅವರು ಈ ಹಪ್ಪಳ ತಯಾರಿಕೆ ಬಿಸಿನೆಸ್ ಅನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಸುಮಾರು 2.5 ವರ್ಷದಿಂದ ಅವರು ಈ ಬಿಸಿನೆಸ್ ನಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬಿಸಿನೆಸ್ ನಲ್ಲಿ ದೊಡ್ಡ ಗುರಿಯನ್ನು ಬೆನ್ನಟ್ಟುತ್ತಾ ಸಾಗುತ್ತಿರುವ ಸುಪ್ರೀತ್ ಅವರು ತಮ್ಮ ಹಪ್ಪಳಗಳನ್ನು ನಿಯಮಿತವಾಗಿ ಲಂಡನ್ ಗೂ ಸಹ ರಫ್ತು ಮಾಡುತ್ತಿದ್ದಾರೆ. ಈ ಮೂಲಕ ಪ್ರತಿ ತಿಂಗಳು ಸುಮಾರು 3.5 ಲಕ್ಷದಷ್ಟು ವಹಿವಾಟನ್ನು ಸಹ ನಡೆಸುತ್ತಿದ್ದಾರೆ ಮತ್ತು 50 ರಿಂದ 60 ಸಾವಿರದಷ್ಟು ಲಾಭವನ್ನು ಗಳಿಸುತ್ತಿದ್ದಾರೆ. ಇದರ ಜೊತೆಗೆ ಅವರು ತಮ್ಮ ಬಿಸಿನೆಸ್ ಅನ್ನು ಮಾರ್ಕೆಟಿಂಗ್ ಮಾಡಲು ಹಲವು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ.  
ಬಿಸಿನೆಸ್ ನಲ್ಲಿ ಬಹಳಷ್ಟು ಬಾರಿ ಬರಿ ನಷ್ಟವನ್ನೇ ಅನುಭವಿಸುತ್ತಿದ್ದ ಸುಪ್ರೀತ್ ಅವರಿಗೆ ffreedom app ಒಂದು ವರದಾನವಾಗಿದೆ. ಬಿಸಿನೆಸ್ ನ ಗುರುವಾಗಿ ffreedom appನ ಕೋರ್ಸ್ ಗಳು ಸುಪ್ರೀತ್ ಅವರಿಗೆ ಸರಿಯಾದ ಜ್ಞಾನವನ್ನು ಪಡೆಯಲು ಮತ್ತು ಸೂಕ್ತವಾದ ದಾರಿಯಲ್ಲಿ ನಡೆಯಲು ಮಾರ್ಗದರ್ಶಿಯಾಗಿದೆ. ಬಿಸಿನೆಸ್ ಬಗ್ಗೆ ಕನಸು ಕಾಣುವ ಎಲ್ಲ ವ್ಯಕ್ತಿಗಳಿಗೆ ಒಂದು ವಿಶ್ವಾಸಾರ್ಹ ಸಾಧನವಾಗಿ ಕೆಲಸ ಮಾಡುವ ಮೂಲಕ ಅವರನ್ನು ಸ್ವಾವಲಂಬಿಯಾಗಿಸಬೇಕು ಎಂಬುದು ffreedom appನ ಉದ್ದೇಶವಾಗಿದೆ. ಸುಪ್ರೀತ್ ಅಂತಹ ಇನ್ನೂ ಲಕ್ಷಾಂತರ ಉದ್ಯಮಿಗಳನ್ನು ಹುಟ್ಟಿಹಾಕುವ ಗುರಿಯನ್ನು ಹೊಂದಿರುವ ffreedom app ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ತನ್ನ ಕೆಲಸವನ್ನು ಮಾಡುತ್ತಿದೆ.

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.