Home » Latest Stories » ಯಶಸ್ಸಿನ ಕಥೆಗಳು » ಯಶಸ್ವಿ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್: ಬದುಕು ಬೆಳಗಿಸಿದ ffreedom app 

ಯಶಸ್ವಿ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್: ಬದುಕು ಬೆಳಗಿಸಿದ ffreedom app 

by Punith B
52 views

ಬೆಂಗಳೂರಿನವರಾದ 33 ವರ್ಷದ ಅನುಷಾ ಮಾಳಗಿಹಾಳ್ ಅವರು M.A ಕನ್ನಡ ಪದವೀಧರೆ ಆಗಿದ್ದು, ಪ್ರಸ್ತುತ ಯಶಸ್ವಿ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ನಡೆಸುತ್ತಿದ್ದಾರೆ. ಅವರ ಬಿಸಿನೆಸ್ ಪ್ರಯಾಣವು ಬದುಕಿನಲ್ಲಿ ಯಶಸ್ಸನ್ನು ಪಡೆಯಲು ಮತ್ತು ಸ್ವಾವಲಂಬಿಯಾಗಿ ಬದುಕಲು ಪ್ರಯತ್ನಿಸುವವರಿಗೆ ಪ್ರೇರಣೆಯಾಗಿದೆ.   

ಅನುಷಾ ಅವರಿಗೆ ಮೊದಲಿನಿಂದಲೂ ಕ್ಯಾಂಡಲ್ ಗಳ ಬಗ್ಗೆ ಹೆಚ್ಚಿನ ಒಲವು ಇತ್ತು. ಒಮ್ಮೆ ಅವರು ffreedom appನ ಯೂಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿರುವ ಕ್ಯಾಂಡಲ್ ಮೇಕಿಂಗ್ ಕುರಿತ ವಿಡಿಯೋವನ್ನು ವೀಕ್ಷಿಸಿದರು, ಅದರ ಬಗ್ಗೆ ಇನ್ನೂ ಹೆಚ್ಚಿನದಾಗಿ ಮತ್ತು ವಿವರವಾಗಿ ಕಲಿಯಬೇಕು ಎಂದು ಅವರಿಗೆ ಅನಿಸಿತು, ಹೀಗಾಗಿ ಅವರ ಗಂಡನ ಜೊತೆ ಚರ್ಚಿಸಿ ಅವರು ಗೂಗಲ್ ಪ್ಲೇಸ್ಟೋರ್ ನಿಂದ ffreedom app ಅನ್ನು ಡೌನ್ಲೋಡ್ ಮಾಡಿಕೊಂಡರು ಮತ್ತು ಅದರ ಚಂದಾದಾರಿಕೆಯನ್ನು ಸಹ ಪಡೆದುಕೊಂಡರು. 

ಕ್ಯಾಂಡಲ್ ನ ಬಗ್ಗೆ ಹೆಚ್ಚು ಆಸಕ್ತಿ ಇದ್ದ ಕಾರಣ ffreedom appನಲ್ಲಿ ಅನುಷಾ ಅವರು ಮೊದಲಿಗೆ ಕ್ಯಾಂಡಲ್ ಮೇಕಿಂಗ್ ಕೋರ್ಸ್ ಅನ್ನು ಕಲಿಯಲು ಬಯಸಿದರು. ಆದರೆ ಪುಟ್ಟ ಮಗುವಿದ್ದ ಕಾರಣ ಅನುಷಾ ಅವರಿಗೆ ಸಹಾಯ ಮಾಡಲು ಅವರ ಪತಿ ನಿರ್ಧರಿಸಿದರು. ಈ ನಿಟ್ಟಿನಲ್ಲಿ ಅನುಷಾ ಅವರ ಪತಿಯೇ ಕ್ಯಾಂಡಲ್ ಮೇಕಿಂಗ್ ಕೋರ್ಸ್ ಅನ್ನು ವೀಕ್ಷಿಸಿದರು ಮತ್ತು ನಂತರದಲ್ಲಿ ಅದನ್ನು ಅನುಷಾ ಅವರಿಗೆ ಸ್ವತಃ ತಾವೇ ಮುತುವರ್ಜಿ ವಹಿಸಿ ಕಲಿಸಿದರು. 

ಇದಾದ ನಂತರದಲ್ಲಿ ಅನುಷಾ ಅವರು ffreedom appನ ಯಶಸ್ವಿ ಮಾರ್ಗದರ್ಶಕರಾದ ಶ್ರೀವಿದ್ಯಾ ಕಾಮತ್ ಅವರಿಂದ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ವಿಚಾರವಾಗಿ ಉಪಯುಕ್ತ ಸಲಹೆಯನ್ನು ಪಡೆದರು. ಪ್ರಸ್ತುತ ಅವರು ತಮ್ಮ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ಕಳೆದ ಒಂದು ವರ್ಷದಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ ಮತ್ತು 5 ಲಕ್ಷದಷ್ಟು ಆದಾಯವನ್ನು ಸಹ ಗಳಿಸುತ್ತಿದ್ದಾರೆ. ಇದಿಷ್ಟೇ ಅಲ್ಲದೆ ಅನುಷಾ ಅವರು ಕಳೆದ 6 ವರ್ಷದಿಂದ ಪ್ರೀಸ್ಕೂಲ್ ಬಿಸಿನೆಸ್ ಅನ್ನು ಸಹ ಯಶಸ್ವಿಯಾಗಿ ನಡೆಸುತ್ತಿದ್ದಾರೆ ಮತ್ತು ಅಲ್ಲಿ ಶಿಕ್ಷಕಿಯಾಗಿ ಸಹ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.  

ಪ್ರೀಸ್ಕೂಲ್ ಬಿಸಿನೆಸ್ ನಲ್ಲಿ ಯಶಸ್ವಿಯಾಗಿದ್ದರೂ ಸಹ ಅನುಷಾ ಅವರು ತಮ್ಮ ಕ್ಯಾಂಡಲ್ ಮೇಕಿಂಗ್ ಬಗೆಗಿನ ಪ್ಯಾಷನ್ ಅನ್ನು ಮುಂದುವರೆಸಲು ಬಯಸಿದ್ದರು, ಆದರೆ ಸರಿಯಾದ ಮಾರ್ಗದರ್ಶನವಿಲ್ಲದ ಕಾರಣ ಅದು ಈಡೇರಿರಲಿಲ್ಲ. ಆದರೆ ffreedom app ಡೌನ್ಲೋಡ್ ಮಾಡಿಕೊಂಡ ನಂತರದಲ್ಲಿ ಅವರು ಈ ಉದ್ಯಮದ ಅತ್ಯಂತ ಯಶಸ್ವಿ ಮಾರ್ಗದರ್ಶಕರಿಂದ ಉಪಯುಕ್ತವಾದ ಜ್ಞಾನವನ್ನು ಮತ್ತು ಮಾರ್ಗದರ್ಶನವನ್ನು ಪಡೆದರು. ನಂತರದಲ್ಲಿ ಅವರು ತಮ್ಮ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ಆರಂಭಿಸಲು ಹೆಚ್ಚು ಆತ್ಮವಿಶ್ವಾಸವನ್ನು ಪಡೆದರು. ಈ ಬಿಸಿನೆಸ್ ಅನ್ನು ಮನೆಯಿಂದಲೇ ಆರಂಭಿಸಬಹುದಾದ್ದರಿಂದ ಮತ್ತು ಈ ಬಿಸಿನೆಸ್ ಅನ್ನು ಅತ್ಯಂತ ಕಡಿಮೆ ಬಂಡವಾಳದಿಂದ ಆರಂಭಿಸಬಹುದಾದ್ದರಿಂದ ಅನುಷಾ ಅವರು ಈ ಬಿಸಿನೆಸ್ ಅನ್ನು ಆರಂಭಿಸಲು ಮನಸ್ಸು ಮಾಡಿದರು. ಮೊದಲಿಗೆ ಅವರು 20 ಸಾವಿರದ ಆರಂಭಿಕ ಹೂಡಿಕೆಯೊಂದಿಗೆ ಈ ಬಿಸಿನೆಸ್ ಅನ್ನು ಪ್ರಾರಂಭಿಸಿದರು. 

ಬಿಸಿನೆಸ್ ಅನ್ನು ಆರಂಭಿಸಿದ ಮೊದಲ ಕೆಲವು ದಿನಗಳು ಅವರು ಮಾರ್ಕೆಟಿಂಗ್ ಸಮಸ್ಯೆಯನ್ನು ಎದುರಿಸಿದರು. ಆದರೆ ffreedom app ಮತ್ತೆ ಈ ವಿಷಯದಲ್ಲಿ ಅವರ ನೆರವಿಗೆ ಬಂದಿತು. ಅನುಷಾ ಅವರು ತಮ್ಮ ಬಿಸಿನೆಸ್ ಗಾಗಿ ಉತ್ತಮ ಮಾರ್ಕೆಟಿಂಗ್ ತಂತ್ರಗಳನ್ನು ಸಹ ffreedom app ಮೂಲಕ ಕಲಿತುಕೊಂಡರು ಮತ್ತು ಅದನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳುವ ಮೂಲಕ ಅವರು ತಮ್ಮ ಬಿಸಿನೆಸ್ ಅನ್ನು ಲಾಭದಾಯಕತೆ ಕಡೆಗೆ ವಾಲಿಸಿದರು ಮತ್ತು ಪ್ರಸ್ತುತ ಅವರು ವಾರ್ಷಿಕವಾಗಿ 5 ಲಕ್ಷ ಆದಾಯವನ್ನು ಗಳಿಸುತ್ತಿದ್ದಾರೆ.     

ಬಿಸಿನೆಸ್ ಅನ್ನು ಆರಂಭಿಸಬೇಕು ಮತ್ತು ಸ್ವಾವಲಂಬಿಯಾದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಕೊಂಡಿರುವವರ ಕನಸಿಗೆ ಬೆಂಬಲವಾಗಿ ನಿಲ್ಲುವುದು ಮತ್ತು ಈ ನಿಟ್ಟಿನಲ್ಲಿ ಅಗತ್ಯವಿರುವ ಜ್ಞಾನ ಮತ್ತು ಅವಕಾಶಗಳಿಗೆ ಪ್ರವೇಶವನ್ನು ಒದಗಿಸುವುದು ffreedom appನ ಉದ್ದೇಶವಾಗಿದೆ. ಮತ್ತು ಈ ಮೂಲಕ ಲಕ್ಷಾಂತರ ಸಣ್ಣ ಉದ್ಯಮಿಗಳನ್ನು ನಿರ್ಮಿಸಲು ಮತ್ತು ಅವರ ಬೆಂಬಲವಾಗಿ ನಿಲ್ಲಲು ffreedom app ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ. 

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.