Home » Latest Stories » ಯಶಸ್ಸಿನ ಕಥೆಗಳು » ffreedom appನಿಂದ ಸ್ವಾವಲಂಬಿ ಬದುಕು ಕಟ್ಟಿಕೊಂಡ ಗೃಹಿಣಿ 

ffreedom appನಿಂದ ಸ್ವಾವಲಂಬಿ ಬದುಕು ಕಟ್ಟಿಕೊಂಡ ಗೃಹಿಣಿ 

by Poornima P
326 views

ಗ್ರಾಮೀಣ ಪ್ರದೇಶದ ಮಹಿಳೆಯೊಬ್ಬರು ತಮ್ಮ ಸ್ಮಾರ್ಟ್‌ ಫೋನ್‌ನಲ್ಲಿ  ffreedom app ಮೂಲಕ ಹೈನುಗಾರಿಕೆ ಪರಿಕಲ್ಪನೆಯನ್ನು  ತಮ್ಮಲ್ಲಿ ಮೂಡಿಸಿಕೊಂಡು ಅದನ್ನು  ಅನುಷ್ಠಾನಕ್ಕೆ ತಂದು ಇಂದು ಯಶಸ್ವಿಯಾಗಿ ತಮ್ಮ ಮನೆ ಸಂಸಾರವನ್ನು ಮುನ್ನಡೆಸಿಕೊಂಡು ಹೋಗುತ್ತಾ, ಇತರ ಗೃಹಿಣಿಯರಿಗೂ ಸ್ಪೂರ್ತಿಯಾಗಿದ್ದಾರೆ.  ಆ ಮಹಿಳೆಯೇ ದೊಡ್ಡಬಳ್ಳಾಪುರ ತಾಲೂಕು ಬೈರಸಂದ್ರಪಾಳ್ಯ ಗ್ರಾಮದ ಮಂಜುಳಾ. 

ಮಂಜುಳಾ ಅವರು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ಗೃಹಿಣಿ. ಇವರಿಗೆ ಯಾವುದೇ ಬಿಸಿನೆಸ್‌ನ ಪರಿಕಲ್ಪನೆ ಇರಲಿಲ್ಲ. ಹೊಸ ಮೊಬೈಲ್‌ ತೆಗೆದುಕೊಂಡ ಆರಂಭದಲ್ಲಿ ಅಡುಗೆಗೆ ಸಂಬಂಧಿಸಿದ ವಿಡಿಯೋಗಳನ್ನು ವೀಕ್ಷಿಸುತ್ತಿದ್ದರಂತೆ. ಆಗ ಇವರಿಗೆ  ffreedom app  ಆ್ಯಡ್ ಕಂಡು ಬಂತು. ಇದು ಇವರಲ್ಲಿ ಒಂದು ಬಿಸಿನೆಸ್‌ ಕಲ್ಪನೆಯನ್ನು ಉಂಟುಮಾಡಿತ್ತು. ಇದರಿಂದ ಪ್ರೇರಣೆಗೊಂಡ ಮಂಜುಳಾ ತಕ್ಷಣವೇ ಡೌನ್‌ಲೋನ್‌ ಮಾಡಿಕೊಂಡು ಸಬ್‌ಸ್ಕೈಬ್‌ ತೆಗೆದುಕೊಳ್ಳುತ್ತಾರೆ. ಈ  ಆ್ಯಪ್‌ನ ಮೂಲಕ ವಿವಿಧ ಕೊರ್ಸ್‌, ವಿವಿಧ ಕೃಷಿ ಪದ್ಧತಿಗಳನ್ನು ವೀಕ್ಷಿಸಿ ಅದನ್ನು ಅನುಷ್ಠಾನಕ್ಕೆ ತರಲು ಮುಂದಾಗುತ್ತಾರೆ.  

ಇವರಿಗೆ ಕ್ಯಾಂಡಲ್‌ ಮೇಕಿಂಗ್‌ನಲ್ಲಿ‌ ಹೆಚ್ಚಿನ ಆಸಕ್ತಿ ಇತ್ತು. ಆದರೆ ಕ್ಯಾಂಡಲ್‌ ತಯಾರಿಸಲು ಮನೆಯಲ್ಲಿ ಹೆಚ್ಚಿನ ಸ್ಥಳಾವಕಾಶ ಇರಲಿಲ್ಲ. ಹೊರಗಡೆ ಸಾಕಷ್ಟು ಜಾಗವಿತ್ತು. ಹಾಗಾಗ ತಮ್ಮ ಆಸಕ್ತಿಯನ್ನು  ಹೈನುಗಾರಿಕೆಯತ್ತ ವಾಲಿಸಿ, ಹೈನುಗಾರಿಕೆಯನ್ನು ಆರಂಭಿಸಲು ಮುಂದಾಗುತ್ತಾರೆ. ಮೊದಲಿಗೆ ಒಂದು ನಾಟಿ ಹಸು ಸಾಕಣೆಯಿಂದ ಆರಂಭಿಸಿ ಇಂದು ನಾಲ್ಕು ಹಸುಗಳನ್ನು ಸಾಕಣೆ ಮಾಡುತ್ತಾ ಇಂದು ಇವರು ದಿನಕ್ಕೆ ೨೦ ಲೀಟರ್‌ ಹಾಲು ಅನ್ನು ಡೈರಿಗೆ ಮಾರಾಟ ಮಾಡುವ ಮೂಲಕ ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ. ಇವರಿಗೆ ಮನೆಯವರಿಂದಲೂ ಪ್ರೊತ್ಸಾಹ ದೊರೆದಿದ್ದು, ಮುಂದಿನ ದಿನಗಳಲ್ಲಿ ಇದೇ ಬಿಸಿನೆಸ್‌ ಅನ್ನು ಮುಂದುವರಿಸಿಕೊಂಡು ಹೋಗಬೇಕು ಎಂಬುವುದು ಮಂಗಳಾ ಅವರ ಕನಸು. 

ಹೈನುಗಾರಿಕೆಯೊಂದಿಗೆ ಇತರ ಕೃಷಿ

ಮಂಜುಳಾ ಕೇವಲ ಹೈನುಗಾರಿಕೆ ಮಾತ್ರವಲ್ಲದೆ ffreedom app ನ ಮೂಲಕ ನಾಟಿ ಕೋಳಿ ಸಾಕಣೆ, ಕುರಿ ಸಾಕಣೆ ಕೋರ್ಸ್‌ ನಿಂದ ಪ್ರೇರಣೆ ಹೊಂದಿಗೆ ಇಂದು ಟಗರು, ನಾಟಿ ಕೋಳಿ ಸಾಕಣೆಯನ್ನು ಮಾಡುತ್ತಿದ್ದಾರೆ. ಇಂದು ಇವರು ೩೦ ನಾಟಿ ಕೊಳಿಯನ್ನು ಜೊತೆಗೆ ನಾಲ್ಕು ಟಗರುಗಳನ್ನು ಸಾಕಣೆ ಮಾಡುತ್ತಿದ್ದಾರೆ. ಇದರೊಂದಿಗೆ ಕೋಳಿ ಮೊಟ್ಟೆ, ಬೆಣ್ಣೆಯನ್ನು ಕೂಡ ಮಾರಾಟ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೌಜಿಕ ಹಕ್ಕಿ ಫಾರ್ಮ್‌ ಮಾಡುವ ಮಹದಾಸೆಯನ್ನು ಹೊಂದಿದ್ದಾರೆ ಎನ್ನುತ್ತಾರೆ ಮಂಜುಳಾ ಅವರು.

ಗೃಹಿಣಿಯರಿಗೆ ಮಾದರಿ ಮಂಜುಳಾ ಸ್ಟೋರಿ

ಸಾಕಷ್ಟು ಗೃಹಣಿಯರಿಗೆ ಮಾದರಿಯಾಗಿರುವ ಮಂಜುಳಾ

ಗೃಹಿಣಿಯೊಬ್ಬರು ಮನಸ್ಸು ಮಾಡಿದರೆ ಯಾವ ರೀತಿಯಲ್ಲೂ ಆದಾಯವನ್ನು ಗಳಿಸಬಹುದು ಎಂಬುವುದನ್ನು ಸಾಧಿಸಿ ತೋರಿಸಿದ್ದಾರೆ. ಇವರು ಒಬ್ಬ ಸಾಮಾನ್ಯ ಮಹಿಳೆಯಾಗಿದ್ದು, ಮಹಿಳೆಯರೂ ಕೂಡ ಮನೆಯಲ್ಲಿ ಇದ್ದುಕೊಂಡು ಸ್ವಾವಲಂಬಿ ಒಬ್ಬ  ಗೃಹಿಣಿಯೂ ಕೂಡ ಮನೆ ಸಂಸಾರವನ್ನು ನಡೆಸಿಕೊಂಡು ಹೋಗಬಹುದು ಎಂಬುವುದನ್ನು ಸಾಧಿಸಿ ಇತರ ಗೃಹಿಣಿಯರಿಗೂ ಮಾದರಿಯಾಗಿದ್ದಾರೆ.
ಮೊದಲೆಲ್ಲ ನನ್ನ ಯಜಮಾನರೇ ಮನೆ ಸಂಸಾರವನ್ನು ನಡೆಸಿಕೊಂಡು ಹೋಗಬೇಕಿತ್ತು. ಆದರೆ ಇಂದು ನಾನು ಕೂಡ ಮನೆ ಸಂಸಾರ ಮುನ್ನಡೆಸಿಕೊಂಡು ಹೋಗುವಷ್ಟು ಆದಾಯ ಪಡೆಯುತ್ತಿದ್ದೇನೆ. ಇದಕ್ಕೆಲ್ಲ ಸಹಾಯವಾಗಿದ್ದು ffreedom app. ಏನೂ ತಿಳಿಯದ ನಾನು ಈ ಆ್ಯಪ್‌ ಮೂಲಕ ಜೀವನೋಪಾಯಕ್ಕೆ ಆಗುವ ಬಹಳಷ್ಟು ಕಲಿತುಕೊಂಡಿದ್ದೇನೆ. ಇತರ ಗೃಹಿಣಿಯರೂ ಕೂಡ ಈ ವೇದಿಕೆಯನ್ನು ಬಳಸಿ ಸ್ವಾವಲಂಬಿಯಾಗಬೇಕು ಎಂಬ ಕಿವಿಮಾತನ್ನು ಗೃಹಿಣಿಯರಿಗೆ ನೀಡುತ್ತಿದ್ದಾರೆ ಮಂಜುಳಾ.

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.