Home » Latest Stories » ಯಶಸ್ಸಿನ ಕಥೆಗಳು » ವರ್ಮಿಕಾಂಪೋಸ್ಟ್ ಕೃಷಿಯನ್ನೇ ಕಾಯಕವನ್ನಾಗಿಸಿ ಸಕ್ಸಸ್‌ ಆಗಿರುವ ಗದಗದ ಮಹೇಂದ್ರ

ವರ್ಮಿಕಾಂಪೋಸ್ಟ್ ಕೃಷಿಯನ್ನೇ ಕಾಯಕವನ್ನಾಗಿಸಿ ಸಕ್ಸಸ್‌ ಆಗಿರುವ ಗದಗದ ಮಹೇಂದ್ರ

by Vinaykumar M Patil
347 views

ಸಮಗ್ರ ಕೃಷಿಯನ್ನೇ ಅವಲಂಬಿಸಿ ತಮ್ಮ ಫಾರ್ಮಿಂಗ್‌ ಅನ್ನು ಸದೃಢಗೊಳಿಸಿದ ಜನರು ಸಾಕಷ್ಟಿದ್ದಾರೆ. ಆದರೆ, ಸಾವಯವ ಕೃಷಿಯನ್ನೇ ಮಾಡಿ, ಅದರ ಮೂಲಕ ಸಮಗ್ರ ಕೃಷಿಯನ್ನು ಮಾಡಿದ ಕೆಲವರಲ್ಲಿ ಮಹೇಂದ್ರ ಕೂಡ ಒಬ್ಬರು. ಮೂಲತಃ ಗದಗ ಜಿಲ್ಲೆಯವರಾದ ಅವರು, ಕೃಷಿ ಕುಟುಂಬದಿಂದ ಬಂದವರು. ಹಾವೇರಿ ಜಿಲ್ಲೆಯಲ್ಲಿ ಇಂಗ್ಲೀಷ್‌ ಟೀಚರ್‌ ಆಗಿದ್ದ ಅವರಿಗೆ, ಮೊದಲಿನಿಂದಲೂ ಸಾವಯವ ಕೃಷಿಯಲ್ಲಿ ಆಸಕ್ತಿ. 3 ರಿಂದ 4 ವರ್ಷ ಗೆಸ್ಟ್‌ ಲೆಕ್ಚರ್‌ ಆಗಿ ಕೆಲಸ ಮಾಡಿದ ನಂತರ ತಮ್ಮದೇ ಸ್ವಂತ ಬಿಸಿನೆಸ್‌ ಆರಂಭಿಸಲು ಆಸಕ್ತಿ ತೋರಿದರು. 

ಸಣ್ಣವರಿದ್ದಾಗಿಂದಲೇ ಅವರಿಗೆ ಸಾವಯವ ಕೃಷಿಯಲ್ಲಿ ಆಸಕ್ತಿ ಇದ್ದುದರಿಂದ, ಅದನ್ನೇ ಮಾಡಲು ನಿರ್ಧಾರ ಮಾಡಿ, ಮೊದಲಿಗೆ ತಮ್ಮ ಫಾರ್ಮ್‌ನಲ್ಲಿ ಕುರಿ ಮತ್ತು ಮೇಕೆ ಸಾಕಣೆಯನ್ನು ಆರಂಭಿಸಿದರು. ರಾಜಸ್ಥಾನದಿಂದ ಶಿರೋಹಿ ತಳಿ, ಪಂಜಾಬ್‌ನಿಂದ ಬೀಟಲ್‌ ತಳಿ ಹಾಗೂ ಉಸ್ಮಾನಾಬಾದಿ ತಳಿಯ ಮೇಕೆಗಳನ್ನು ಆಮದು ಮಾಡಿಕೊಂಡರು. ಅದಷ್ಟೇ ಅಲ್ಲದೇ ನಾರಿ ಸುವರ್ಣ ತಳಿಯ ಮೇಕೆಗಳನ್ನು ಪಡೆದು ಕೇವಲ 14 ತಿಂಗಳಲ್ಲಿ ಎರಡರಿಂದ ಮೂರು ಕೋಳಿ ಮರಿಗಳನ್ನು ಪಡೆದುಕೊಂಡರು. 

ffreedom appನಿಂದ ಕಲಿಕೆ

ಕುರಿ ಮತ್ತು ಮೇಕೆ ಸಾಕಣೆ ಬಿಸಿನೆಸ್‌ ಮಾಡುತ್ತಿರುವಾಗ ಅವರು, ಯೂಟ್ಯೂಬ್‌ ಜಾಹೀರಾತಿನಲ್ಲಿ ffreedom app ಬಗ್ಗೆ ತಿಳಿದುಕೊಂಡರು. ತಕ್ಷಣವೇ ಅದನ್ನು ಇನ್‌ಸ್ಟಾಲ್‌ ಮಾಡಿಕೊಂಡು, ಕೋರ್ಸ್‌ಗಳನ್ನು ನೋಡಲು ಆರಂಭಿಸಿದರು. ಅಪ್ಲಿಕೇಶನ್‌ನಲ್ಲಿ ಮೊದಲಿಗೆ ಜೇನುಸಾಕಣೆ ಕೋರ್ಸ್‌, ಔಷಧಿ ಸಸ್ಯಗಳ ಕೋರ್ಸ್‌ ಗಳನ್ನು ಕಲಿತಿದ್ದಾರೆ. ffreedom appನ ಮಿಷನ್‌ ಏನೆಂದರೆ ಪ್ರತಿಯೊಬ್ಬರಿಗೂ ಜ್ಞಾನ ಮತ್ತು ಅವಕಾಶಗಳಿಗೆ ಪ್ರವೇಶವನ್ನು ಒದಗಿಸಿ, ಕಮ್ಯೂನಿಟಿ ಲೆಡ್ ಕಾಮರ್ಸ್ ಮೂಲಕ ಜೀವನೋಪಾಯದ ಅವಕಾಶಗಳಿಗೆ ಪ್ರವೇಶವನ್ನು ಒದಗಿಸುವುದು.

ffreedom appನಲ್ಲಿ ವರ್ಮಿಕಾಂಪೋಸ್ಟ್‌ ಕೋರ್ಸ್‌ ನೋಡುವ ಮೂಲಕ ಅವರು ಭೂದೇವಿ ಎಂಬ ವರ್ಮಿಕಾಂಪೋಸ್ಟ್‌ ಮಾರುವ ಫರ್ಮ್‌ ಅನ್ನು ಆರಂಭಿಸಿದ್ದಾರೆ. ಈ ಕೃಷಿ ಆರಂಭಿಸುವ ಮೊದಲು ಅವರು, ತಿಂಗಳಿಗೆ 6000 ರೂಪಾಯಿ ಗಳಿಸುತ್ತಿದ್ದರು. ಅದೇ ವರ್ಮಿಕಾಂಪೋಸ್ಟ್‌ ಫರ್ಮ್‌ ಆರಂಭಿಸಿದ ನಾಲ್ಕೇ ತಿಂಗಳಲ್ಲಿ ಒಂದು ಲಕ್ಷ ರೂಪಾಯಿ ಗಳಿಸಿದ್ದಾರೆ. ಹಿಂದಿನ ವರ್ಷ ಅವರು ಸುಮಾರು ಆರರಿಂದ ಏಳು ಲಕ್ಷ ಬರೀ ಕುರಿ ಮತ್ತು ಮೇಕೆ ಸಾಕಣಿಕೆಯಿಂದ ಗಳಿಸಿದ್ದರು. 

ಮಹೇಂದ್ರ ಅವರು ಅಪ್ಲಿಕೇಶನ್‌ನಲ್ಲಿ ಔಷಧಿ ಸಸ್ಯಗಳ ಕೋರ್ಸ್‌ ಅನ್ನು ವೀಕ್ಷಣೆ ಮಾಡಿ, ಅಶ್ವಗಂಧ, ದೊಡ್‌ಪದ್ರೆ, ಮಧುನಾಶೀನಿ, ತುಳಸಿ, ಲಾವಂಚ ಗಿಡಗಳನ್ನು ಸಣ್ಣ ಮಟ್ಟದಲ್ಲಿ ಬೆಳೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ತಮ್ಮದೇ ಸ್ವಂತ ನರ್ಸರಿ ಆರಂಭ ಮಾಡುವ ಕನಸಿದೆ. ಬರಿಯ ಔಷಧಿ ಸಸ್ಯಗಳಷ್ಟೇ ಅಲ್ಲದೇ, ಹಣ್ಣು ಮತ್ತು ತರಕಾರಿ ಬಿಸಿನೆಸ್‌ ಕೋರ್ಸ್‌ ನೋಡಿ, ತರಕಾರಿಯ ಫಾರ್ಮ್‌ ಅನ್ನು ಸ್ಥಾಪನೆ ಮಾಡಲು ಪ್ಲಾನ್‌ ಮಾಡುತ್ತಿದ್ದಾರೆ. 

ಜೊತೆಗೆ, ಐದು ಬಾಕ್ಸ್‌ಗಳಲ್ಲು ಜೇನುಗಳನ್ನು ಇಟ್ಟು, ಸಾಕುತ್ತಿದ್ದಾರೆ. ತಮ್ಮ ಫಾರ್ಮ್‌ನಲ್ಲಿ ಸುಮಾರು 500 ಮರಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಅವರ ಹೇಳಿಕೆ ಪ್ರಕಾರ, “ಫಾರ್ಮಿಂಗ್‌ ಆರಂಭ ಮಾಡುವ ಮೊದಲು ಅದರ ಬಗ್ಗೆ ಸಮಗ್ರ ಮಾಹಿತಿ ತಿಳಿದುಕೊಂಡು ಅದನ್ನು ಆರಂಭಿಸಿದರೆ, ಯಾರೂ ಕೂಡ ಯಶಸ್ವಿಯಾಗಬಹುದು”. 

ffreedom app ಅನ್ನು ಅವರು ತಮ್ಮ ಗುರು ಎಂದು ಭಾವಿಸಿ, ಅದನ್ನು ಉತ್ಕೃಷ್ಟವಾಗಿ ಮನಸ್ಸಿನಲ್ಲಿ ಇರಿಸಿಕೊಂಡಿದ್ದಾರೆ. 

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.