Home » Latest Stories » ಯಶಸ್ಸಿನ ಕಥೆಗಳು » ಖಾಸಗಿ ಕೆಲಸಕ್ಕೆ ಗುಡ್‌ಬೈ ಹೇಳಿ ಸಮಗ್ರ ಕೃಷಿ ಕೈ ಹಿಡಿದ ವಿನಯ್‌ ಕುಮಾರ್

ಖಾಸಗಿ ಕೆಲಸಕ್ಕೆ ಗುಡ್‌ಬೈ ಹೇಳಿ ಸಮಗ್ರ ಕೃಷಿ ಕೈ ಹಿಡಿದ ವಿನಯ್‌ ಕುಮಾರ್

by Vinaykumar M Patil
22 views

ಸೋಷಿಯಲ್‌ ಮೀಡಿಯಾ, ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಅದರ ಮೂಲಕ, ಜೀವನವನ್ನು ಕಟ್ಟಿಕೊಳ್ಳಬಹುದು ಹಾಗೂ ನುಚ್ಚು ನೂರಾಗಿಯೂ ಸಹ ಮಾಡಿಕೊಳ್ಳಬಹುದು. ಇದೇ ಸೋಷಿಯಲ್‌ ಮೀಡಿಯಾದ ಮೂಲಕ, ಅಪ್ಲಿಕೇಶನ್‌ ಒಂದನ್ನು ತಿಳಿದುಕೊಂಡು, ತಮ್ಮ ಬದುಕಿನ ದಿಕ್ಕನ್ನು ಬದಲಾಯಿಸಿಕೊಂಡ ವ್ಯಕ್ತಿಯೇ ವಿನಯ್‌ ಕುಮಾರ್‌ ಚವ್ವಾ. 

ಬಿ.ಕಾಮ್‌ ಪದವೀಧರರಾದ ವಿನಯ್‌ ಕುಮಾರ್‌ ಅವರು, ಮೊದಲಿಗೆ ಹತ್ತು ವರ್ಷಗಳ ಕಾಲ ಪ್ರೈವೇಟ್‌ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆ ಮೊದಲಿನಿಂದಲೂ ಕೃಷಿಯಲ್ಲಿ ಆಸಕ್ತಿ ಇದ್ದುದರಿಂದ, ಅದರತ್ತ ಸೆಳೆತ ತುಸು ಜಾಸ್ತಿಯೇ ಇತ್ತು. ಅವರ ಫಾರ್ಮ್‌ನಲ್ಲಿ ಕೋಳಿ ಸಾಕಣೆ, ಮೀನು ಸಾಕಣೆ ಮುಂತಾದ ಕೃಷಿಯನ್ನು ಮಾಡಿಕೊಂಡಿದ್ದರು. ಉತ್ತಮ ಜ್ಞಾನ, ಕಾರ್ಮಿಕರ ಹಾಗೂ ಹವಾಮಾನದ ಕೊರತೆಯಿಂದ ಅವರು ತುಂಬಾ ನಷ್ಟವನ್ನು ಅನುಭವಿಸಿದ್ದಾರೆ. 

ಅದೇ ಕಷ್ಟಕರ ಸಮಯದಲ್ಲಿ ಅವರಿಗೆ ffreedom appನಿಂದ ಫೋನ್‌ ಬರುತ್ತದೆ. ಆಗ ಅವರು ಅಪ್ಲಿಕೇಶನ್‌ ಬಗ್ಗೆ ಡೆಮೋ ವಿಡಿಯೋ ನೋಡಿ, ಚಂದಾದಾರರಾದರು.

ffreedom appನಿಂದ ಕಲಿಕೆ

ffreedom app ಡೌನ್‌ಲೋಡ್‌ ಮಾಡಿ ಅದಕ್ಕೆ ಚಂದಾದಾರರಾದ ತಕ್ಷಣ ಅವರು, ವೀಕ್ಷಿಸಿದ್ದು ಜೇನು ಸಾಕಣೆ, ಮಶ್ರೂಮ್‌ ಫಾರ್ಮಿಂಗ್‌ ಹಾಗೂ ಸಮಗ್ರ ಕೃಷಿ ಕೋರ್ಸ್‌ಗಳು. ಅವರಿಗೆ ಈ ಕೋರ್ಸ್‌ಗಳನ್ನು ನೋಡಿದ ನಂತರ, ಕೃಷಿಯಲ್ಲಿ ಒಂದಷ್ಟು ಕಾನ್ಫಿಡೆನ್ಸ್‌ ಮೂಡತೊಡಗಿ ವಾಪಸ್‌ ಕೃಷಿಯತ್ತ ಒಲವು ತೋರಿದರು. ಅಪ್ಲಿಕೇಶನ್‌ನಲ್ಲಿ ಅವರು ಮಿಶ್ರ ಕೃಷಿಯ ಬಗ್ಗೆ ಕಲಿತರು. ಸಮಗ್ರ ಕೃಷಿಗೆ ಯಾವ ರೀತಿ ಫಾರ್ಮ್‌ ಅನ್ನು ತಯಾರು ಮಾಡಬೇಕು? ಸಮಗ್ರ ಕೃಷಿಗೆ ಸರ್ಕಾರದ ಸವಲತ್ತು ಮತ್ತು ಬಂಡವಾಳದ ಅವಶ್ಯಕತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ffreedom appನ ಮಿಷನ್‌ ಏನೆಂದರೆ ಪ್ರತಿಯೊಬ್ಬರಿಗೂ ಜ್ಞಾನ ಮತ್ತು ಅವಕಾಶಗಳಿಗೆ ಪ್ರವೇಶವನ್ನು ಒದಗಿಸಿ, ಕಮ್ಯೂನಿಟಿ ಲೆಡ್ ಕಾಮರ್ಸ್ ಮೂಲಕ ಜೀವನೋಪಾಯದ ಅವಕಾಶಗಳಿಗೆ ಪ್ರವೇಶವನ್ನು ಒದಗಿಸುವುದು.

ಸಮಗ್ರ ಕೃಷಿಯ ಮೂಲಕ ಹಣ ಗಳಿಸುವುದು ಹೇಗೆ? ಸಮಗ್ರ ಕೃಷಿಗೆ ಅಗತ್ಯವಿರುವ ಕೃಷಿ ತಂತ್ರಜ್ಞಾನಗಳು, ರಸಗೊಬ್ಬರದ ಮಹತ್ವ, ಹವಾಮಾನ, ಸಮಗ್ರ ಕೃಷಿಯ ಮಾರುಕಟ್ಟೆ, ಬೆಳವಣಿಗೆ ಹಾಗೂ ಸಮಗ್ರ ಕೃಷಿಯಲ್ಲಿನ ಸವಾಲುಗಳ ಬಗ್ಗೆ ಅವರು ಕಲಿತರು. 

ಅಳವಡಿಕೆ

ಕೋರ್ಸ್‌ಗಳನ್ನು ನೋಡುತ್ತಾ ಹೋದಂತೆ ಅವರಿಗೆ ತಮ್ಮ ಕೃಷಿಯಲ್ಲಿನ ತಪ್ಪುಗಳ ಬಗ್ಗೆ ತಿಳಿಯುತ್ತಾ ಹೋಯಿತು. ಅವರು ಕೃಷಿಯ ಬಗ್ಗೆ ಇನ್ನಷ್ಟು ಹೆಚ್ಚಿನ ಆಸಕ್ತಿ ವಹಿಸಿ ಎಲ್ಲವನ್ನೂ ಕಲಿತುಕೊಂಡರು. ಮೂಲತಃ ಹೈದರಾಬಾದ್‌ ಜಿಲ್ಲೆಯವರಾದ ಅವರು, ಅಪ್ಲಿಕೇಶನ್‌ನಲ್ಲಿ ಹಲವಾರು ಕೋರ್ಸ್‌ಗಳು ಕನ್ನಡ, ತೆಲುಗು ಭಾಷೆಯಲ್ಲಿ ಇವೆ. ಆದರೆ, ಪ್ರತಿಯೊಂದು ಕೋರ್ಸ್‌ ಸಹ ತೆಲುಗು ಭಾಷೆಯಲ್ಲಿ ಲಭ್ಯವಿದ್ದರೆ ಚೆನ್ನಾಗಿತ್ತು ಎಂದು ಹೇಳುತ್ತಾರೆ. ಕೋರ್ಸ್‌ಗಳಿಂದ ಪ್ರಭಾವಿತರಾದ ಅವರು ತಮ್ಮ ಬೆಳೆಗಳನ್ನು ಮಾರ್ಕೆಟಿಂಗ್‌ ಮಾಡುವುದು ಕಮ್ಮಿ. ತಮ್ಮ ಊರು, ಸೋಲಿಪೇಟ ಕ್ಕೆ ಜನರೇ ಬಂದು ಬೆಳೆಗಳನ್ನು ಕೊಂಡೊಯ್ಯುತ್ತಾರೆ ಎನ್ನುತ್ತಾರೆ ವಿನಯ್‌ ಕುಮಾರ್.‌ 

ಪ್ರಸ್ತುತ ಬೆಳೆಗಳು ಮತ್ತು ಗುರಿ:

ವಿನಯ್ ಕುಮಾರ್‌ ಅವರಲ್ಲಿ ಸುಮಾರು 26 ಎಕರೆ ಕೃಷಿ ಭೂಮಿ ಇದ್ದು, ಅದರಲ್ಲಿ 70 ತರಹದ ಎಲೆಕೋಸುಗಳ ತರಕಾರಿಯನ್ನು ಬಿತ್ತನೆ ಮಾಡಿದ್ದಾರೆ. 25 ದನಗಳಿದ್ದ ಅವರ ಲೈವ್‌ಸ್ಟಾಕ್‌ ಬಿಸಿನೆಸ್‌ ಇದೀಗ 62ಕ್ಕೆ ಏರಿದೆ. ಮೊದಲಿಗೆ 20 ಇದ್ದ ಜೇನು ಮತ್ತು ಕೋಳಿಸಾಕಣೆ, ಇದೀಗ 120ಕ್ಕೆ ಏರಿಕೆ ಕಂಡಿದೆ. ಅವರು ವಿದೇಶಿ ತರಕಾರಿ, ಹಣ್ಣು, ಹಸುಗಳು, ಕೋಳಿಸಾಕಣೆ ಮತ್ತಿ ತರಹೇವಾರಿ ಮೀನುಸಾಕಣೆಯನ್ನು ನಿರ್ವಹಿಸುತ್ತಿದ್ದಾರೆ. 

ಅವರ ತಂದೆ, 2006ರಿಂದ ಪ್ರಾಕೃತಿಕ ಕೃಷಿ ಮಾಡುತ್ತಿದ್ದು, ವಿನಯ್‌ ಕುಮಾರ್‌ ಅವರು 2017ರಲ್ಲಿ ಕೃಷಿ ಆರಂಭಿಸಿದರು. ಅವರೊಬ್ಬ ಸೌಂಡ್‌ ಎಂಜಿನಿಯರ್‌ ಆಗಿದ್ದರೂ ಸಹ, ತಮ್ಮ ವೃತ್ತಿಯನ್ನು ತೊರೆದು ಕೃಷಿಯತ್ತ ತಿರುಗಿದ್ದು ನಿಜಕ್ಕೂ ಶ್ಲಾಘನೀಯ. ತಮ್ಮ ಹಾಗೂ ತಮ್ಮ ಸುತ್ತಲಿನ ಜನರನ್ನು ಆರೋಗ್ಯಕರವಾಗಿ ಕಾಣಬಯಸುವ ಅವರು, ಸಮಗ್ರ ಕೃಷಿಯನ್ನು ಆರಂಭಿಸಿದ್ದು ಅದಕ್ಕೇ ಎಂದು ಹೇಳುತ್ತಾರೆ. ಅದಷ್ಟೇ ಅಲ್ಲದೇ, ತಮ್ಮ ಹಳ್ಳಿಯ ರೈತರಿಗೆ ಉತ್ತಮ ಭವಿಷ್ಯವನ್ನು ತೋರ್ಪಡಿಸಲು ಕೆಲಸ ಮಾಡುತ್ತಿರುವುದಾಗಿ ತಿಳಿಸುತ್ತಾರೆ. 

ಸಾಫ್ಟ್‌ವೇರ್‌ ಅನ್ನೇ ನಂಬಿಕೊಂಡು ಬದುಕುವ ಈ ಕಾಲದಲ್ಲಿ ಎಲ್ಲವನ್ನೂ ತೊರೆದು ಪ್ರಕೃತಿ ಸಹಜ ಕೃಷಿಗೆ ಮರಳಿದ ವಿನಯ್‌ ಕುಮಾರ್‌ ಚವ್ವಾ ನಿಜಕ್ಕೂ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿ.

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.