Home » Latest Stories » ಯಶಸ್ಸಿನ ಕಥೆಗಳು » ವೃತ್ತಿಯನ್ನು ತ್ಯಜಿಸಿ, ಸ್ವಂತ ರಿಯಲ್‌ ಎಸ್ಟೇಟ್‌ ಸ್ಥಾಪಿಸಿ ಯಶಸ್ವಿಯಾದ ಚಂದ್ರಕಲಾ

ವೃತ್ತಿಯನ್ನು ತ್ಯಜಿಸಿ, ಸ್ವಂತ ರಿಯಲ್‌ ಎಸ್ಟೇಟ್‌ ಸ್ಥಾಪಿಸಿ ಯಶಸ್ವಿಯಾದ ಚಂದ್ರಕಲಾ

by Vinaykumar M Patil
34 views

ಬಿಸಿನೆಸ್‌ನಲ್ಲಿ ಆಸಕ್ತಿ ಉಳ್ಳವರಿಗೆ ಇಂದಿನ ಕಾಲದಲ್ಲಿ ಹಲವಾರು ಅವಕಾಶಗಳು ಕೈಬೀಸಿ ಕರೆಯುತ್ತವೆ. ಆದರೆ, ಬಿಸಿನೆಸ್‌ ಆರಂಭಿಸಲು ಎಲ್ಲರಿಗೂ ಸರಿಯಾದ ಮಾರ್ಗದರ್ಶನ ಸಿಗುವುದಿಲ್ಲ. ಈ ಸೆಕ್ಟರ್‌ನಲ್ಲಿ ಹಲವಾರು ಜನ ಎಡವಿ ಬೀಳುತ್ತಾರೆ. ಬಿಸಿನೆಸ್‌ ಆರಂಭ ಮಾಡಲು ಸರಿಯಾದ ಮಾರ್ಗದರ್ಶನ ಮಾತ್ರವಲ್ಲದೆ ಉತ್ತಮ ಬಿಸಿನೆಸ್‌ ಮಾಡೆಲ್‌ ಸಹ ಇರಬೇಕು. 

ನಿಮಗೂ ಸಹ ಬಿಸಿನೆಸ್‌ ಮಾಡಲು ಆಸಕ್ತಿ ಇದೆಯಾ? ಹಾಗಿದ್ದರೆ, ತಕ್ಷಣವೇ ffreedom app ಡೌನ್‌ಲೋಡ್‌ ಮಾಡಿಕೊಂಡು ಅತ್ಯುತ್ತಮ ಮಾರ್ಗದರ್ಶನ ಪಡೆದುಕೊಳ್ಳಿ ಎನ್ನುತ್ತಾರೆ ನಲ್ಗೊಂಡ ಜಿಲ್ಲೆಯ ಬೊಳ್ಳಮ್‌ ಚಂದ್ರಕಲಾ. ಬಿ.ಎಸ್.‌ಸಿ ನರ್ಸಿಂಗ್‌ ಪದವೀಧರೆ ಆಗಿರುವ ಚಂದ್ರಕಲಾ ಅವರು, ಸರ್ಕಾರಿ ಶಾಲೆಯಲ್ಲಿ ಟೀಚರ್‌ ಆಗಿದ್ದರು. ಮೊದಲಿನಿಂದಲೂ ಅವರಿಗೆ ರಿಯಲ್‌ ಎಸ್ಟೇಟ್‌ ಮತ್ತು ಬಿಸಿನೆಸ್‌ನಲ್ಲಿ ಆಸಕ್ತಿ ಇತ್ತು. ಬಿಸಿನೆಸ್‌ ಆರಂಭ ಮಾಡಲು ಅವರಲ್ಲಿ ಜ್ಞಾನ ಹಾಗೂ ಬಂಡವಾಳ ಇರದೇ ಇದ್ದ ಕಾರಣ, ಸರಿಯಾದ ಮಾರ್ಗದರ್ಶಕರನ್ನು ಹುಡುಕುತ್ತಿದ್ದರು.

ffreedom appನಿಂದ ಮಾರ್ಗದರ್ಶನ:

ಇದೇ ಸಮಯಕ್ಕೆ ಅವರಿಗೆ ಸಿಕ್ಕಿದ್ದೇ ffreedom app. ಆನ್‌ಲೈನ್‌ನಲ್ಲಿ ಸಿ,ಎಸ್.‌ಸುಧೀರ್‌ ಅವರ ವೆಬಿನಾರ್‌ ಅಟೆಂಡ್‌ ಆದಾಗ ಅವರಿಗೆ ಸುಧೀರ್‌ ಅವರ ಮಾತಿನಿಂದ ಸ್ಫೂರ್ತಿ ಸಿಕ್ಕು, ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡರು. ಅದರಲ್ಲಿರುವ ಬಿಸಿನೆಸ್‌ ಕೋರ್ಸ್‌ಗಳನ್ನು ಕಲಿತರು. ಬಿಸಿನೆಸ್‌ ಆರಂಭ ಮಾಡುವುದು ಹೇಗೆ? ಆಹಾರಕ್ಕೆ ಸಂಬಂಧಪಟ್ಟ ಬಿಸಿನೆಸ್‌ಗಳು, ರಿಯಲ್‌ ಎಸ್ಟೇಟ್‌ ಬಿಸಿನೆಸ್‌, ಮುಂತಾದವು.

ಕೋರ್ಸ್‌ ಮೂಲಕ ಅವರು ಬಿಸಿನೆಸ್‌ಗಳಿಗೆ ಅಗತ್ಯವಿರುವ ಬಂಡವಾಳ, ಲೈಸೆನ್ಸ್‌ ಪಡೆಯುವುದು ಹೇಗೆ? ಗ್ರಾಹಕರ ಹಾಗೂ ನೆಟ್‌ವರ್ಕ್‌ ಅನ್ನು ಬೆಳೆಸುವುದು ಹೇಗೆ? ವಿವಿಧ ಕರಿಯರ್‌ಗಲ್ಲಿ ಇರುವ ಅವಕಾಶಗಳು, ಆನ್‌ಲೈನ್‌ ಪ್ರೆಸೆನ್ಸ್‌ ಮತ್ತು ಮಾರ್ಕೆಟಿಂಗ್‌, ರಿಯಲ್‌ ಎಸ್ಟೇಟ್‌ ಬ್ರೋಕರ್‌ ಆಗುವುದು ಹೇಗೆ? ಇದೆಲ್ಲ ಸವಾಲುಗಳಿಗೆ ಉತ್ತರವನ್ನು ಚಂದ್ರಕಲಾ ಅವರು ಪಡೆದುಕೊಂಡು, ತಮ್ಮದೇ ಸ್ವಂತ ರಿಯಲ್‌ ಎಸ್ಟೇಟ್‌ ಫರ್ಮ್‌ ಆರಂಭ ಮಾಡುವ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು. ffreedom appನ ಮಿಷನ್‌ ಏನೆಂದರೆ ಪ್ರತಿಯೊಬ್ಬರಿಗೂ ಜ್ಞಾನ ಮತ್ತು ಅವಕಾಶಗಳಿಗೆ ಪ್ರವೇಶವನ್ನು ಒದಗಿಸಿ, ಕಮ್ಯೂನಿಟಿ ಲೆಡ್ ಕಾಮರ್ಸ್ ಮೂಲಕ ಜೀವನೋಪಾಯದ ಅವಕಾಶಗಳಿಗೆ ಪ್ರವೇಶವನ್ನು ಒದಗಿಸುವುದು.

ffreedom appನ ಮೂಲಕ ಅವರು, ಬರೀ ಬಿಸಿನೆಸ್‌ ಬಗ್ಗೆ ಮಾಹಿತಿ ಅಷ್ಟೇ ಅಲ್ಲದೇ, ಉದ್ಯಮ ಶುರು ಮಾಡಲು ಉದ್ಯಮಿಯ ರೀತಿ ಯೋಚನೆ ಮಾಡಬೇಕು ಎಂದು ಸಹ ತಿಳಿದುಕೊಂಡರು. ನಿಮಗೆ ಯಾವುದೇ ರೀತಿಯ ಬಿಸಿನೆಸ್‌ ಆರಂಭ ಮಾಡುವಾಗ ಒಮ್ಮೆ ಉದ್ಯಮಿಯ ರೀತಿ ಯೋಚನೆ ಮಾಡಿ, ಮತ್ತೊಮ್ಮೆ ಕೆಲಸಗಾರನ ಯೋಚನೆ ಹೇಗಿರುತ್ತದೆ ಎಂದೂ ಸಹ ತಿಳಿದುಕೊಂಡರೆ, ಬಿಸಿನೆಸ್‌ ಯಶಸ್ವಿಯಾಗುವುದಂತೂ ಖಂಡಿತ ಎಂದು ಚಂದ್ರಕಲಾ ಹೇಳುತ್ತಾರೆ. 

ನೀವು ಜಾಬ್‌ ಮಾಡುತ್ತಿದ್ದು, ಬಿಸಿನೆಸ್‌ ಆರಂಭಿಸಲು ಆಸಕ್ತಿ ಇದ್ದಲ್ಲಿ, ಕೆಲವೊಂದಿಷ್ಟು ಹಣವನ್ನು ಬದಿಗಿಡಬೇಕು ಎನ್ನುತ್ತಾರೆ. ಕೋರ್ಸ್‌ ಪಡೆಯುವ ಮೊದಲಿಗೆ ಅವರ ಹತ್ತಿರ ರಿಯಲ್‌ ಎಸ್ಟೇಟ್‌ ಬಿಸಿನೆಸ್‌ ಇತ್ತು. ಆದರೆ, ಅವರಿಗೆ ಅದನ್ನು ಸರಿಯಾಗಿ ನಿರ್ವಹಣೆ ಮಾಡುವುದು ಹೇಗೆ ಎಂದು ಮಾಹಿತಿ ಇರಲಿಲ್ಲ.

ಯಶಸ್ಸಿನ ಮೆಟ್ಟಿಲು ಹತ್ತಿದ್ದು ಹೇಗೆ?

ಚಂದ್ರಕಲಾ ಅವರು ಬರೀ ಕೋರ್ಸ್‌ ಪಡೆಯುವುದಷ್ಟೇ ಅಲ್ಲದೇ, ಆನ್‌ಲೈನ್‌ ಮತ್ತು ಆಫ್‌ಲೈನ್‌ ವೆಬಿನಾರ್‌ಗಳನ್ನು ಅಟೆಂಡ್‌ ಮಾಡಿದರು. ffreedom appನಲ್ಲಿ ಅವರು ಮಹಿಳಾ ಉದ್ಯಮಿಗಳ ಹಾಗೂ ರಿಯಲ್‌ ಎಸ್ಟೇಟ್‌ಗೆ ಸಂಬಂಧಪಟ್ಟ ಎಲ್ಲ ಕೋರ್ಸ್‌ಗಳನ್ನೂ ಕಲಿತಿದ್ದಾರೆ. ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಮೊದಲಿಗೆ ಎಲ್ಲರೂ ಕಷ್ಟಪಡುತ್ತಾರೆ. ಏಕೆಂದರೆ, ಮಾರುಕಟ್ಟೆಯಲ್ಲಿ ಹಲವಾರು ರಿಯಲ್‌ ಎಸ್ಟೇಟ್‌ ಕಂಪನಿಗಳಿವೆ. ಪ್ರತಿಯೊಂದು ಕಂಪನಿಗೆ ಅವರದ್ದೇ ಆದ ಗ್ರಾಹಕರಿರುತ್ತಾರೆ. ಚಂದ್ರಕಲಾ ಅವರೂ ಸಹ ತಮ್ಮ ಕಂಪನಿ ಆರಂಭಿಸಿದಾಗ ಗ್ರಾಹಕರನ್ನು ಹುಡುಕಿ ತಮ್ಮ ಬಿಸಿನೆಸ್‌ ಸೆಟಪ್‌ ಮಾಡಲು ಕಷ್ಟಪಟ್ಟರು. 

ಕಾಲ ಕಳೆದಂತೆ ಅವರಿಗೆ ತಮ್ಮ ಕಂಪನಿಯನ್ನು ಮಾರ್ಕೆಟಿಂಗ್‌ ಮಾಡುವ ಬಗ್ಗೆ ಹಲವಾರು ತಂತ್ರಗಳು ffreedom app ಮೂಲಕ ಸಿಕ್ಕಿತು. ಅದನ್ನು ತಮ್ಮ ಬಿಸಿನೆಸ್‌ನಲ್ಲಿ ಅಳವಡಿಸಿಕೊಂಡಿದ್ದಾರೆ. 

ಚಂದ್ರಕಲಾ ಅವರು ವೃತ್ತಿ ಮಾಡಬೇಕಾದರೆ ತಿಂಗಳಿಗೆ  ಸುಮಾರು 40 ಸಾವಿರ ಹಣವನ್ನು ಗಳಿಸುತ್ತಿದ್ದರು. ಆದರೆ, ರಿಯಲ್‌ ಎಸ್ಟೇಟ್ ಬಿಸಿನೆಸ್‌ ಆರಂಭಿಸಿ ಅವರೀಗ ವರ್ಷಕ್ಕೆ 20 ಲಕ್ಷಕ್ಕೂ ಹೆಚ್ಚು ಆದಾಯ ಪಡೆಯುತ್ತಿದ್ದಾರೆ. ಅದಷ್ಟೇ ಅಲ್ಲದೇ, ಅದರ ಮೂಲಕ ಗಳಿಸಿದ ಹಣದಿಂದ ಅವರು ಸ್ವಂತ ಕಾರ್‌ ಅನ್ನು ಖರೀದಿಸಿದ್ದಾರೆ.

“ನನಗೆ ಪುಸ್ತಗಳನ್ನು ಓದುವ ಹವ್ಯಾಸವಿದೆ. Rich dad poor dad ಪುಸ್ತಕವಂತೂ ನನಗೆ ರಿಯಲ್‌ ಎಸ್ಟೇಟ್‌ ಬಿಸಿನೆಸ್‌ ನಡೆಸಲು ಸ್ಫೂರ್ತಿ ನೀಡಿದೆ. ಈ ಕೋರ್ಸ್‌ನಲ್ಲಿ ಹಲವಾರು ಮಾರ್ಗದರ್ಶಕರಿದ್ದು, ಅವರು ಯಶಸ್ವಿಯಾದರೂ ಸಹ ನನಗೆ ಏಕೆ ಸಕ್ಸಸ್‌ ಕಡಿದಾಯಿತು ಎಂದು ಅರ್ಥವಾಗುತ್ತಿಲ್ಲ. ಆದರೆ, ಈಗ ನನ್ನ ಯಶಸ್ಸು ನೋಡಿ” ಎಂದು ಚಂದ್ರಕಲಾ ಹೇಳಿದ್ದಾರೆ. “ ಸುಮಾರು 80% ಜನರು ಕೆಲಸ ಮಾಡಲು ಬಯಸಿದರೆ ಇನ್ನುಳಿದ 20% ಜನರು ಉದ್ಯಮಿಗಳಾಗಲು ಬಯಸುತ್ತಾರೆ. ನೀವೂ ಸಹ ಬಿಸಿನೆಸ್‌ ಮಾಡಿದರೆ ಜೀವನವನ್ನು ಎಂಜಾಯ್‌ ಮಾಡಬಹುದು” ಎಂದು ಚಂದ್ರಕಲಾ, ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾರೆ.

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.