ಉತ್ತರ ಕನ್ನಡ ಜಿಲ್ಲೆ, ಶಿರಸಿ ತಾಲೂಕಿನ ನಿವಾಸಿಯಾಗಿರುವ ಸುಮಂಗಲಾ ವಿಶ್ವನಾಥ ಹೆಗಡೆ ಅವರು ತಮ್ಮ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಬಿಸಿನೆಸ್ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿದ್ದಾರೆ. ಅವರು ತಮ್ಮದೇ ಆದ ಶ್ರೀ ಆಯುರ್ವೇದಿಕ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಈ ಕಂಪನಿಯ ಮೂಲಕ ಅವರು 30 ರಿಂದ 35 ವಿವಿಧ ರೀತಿಯ ಆಯುರ್ವೇದ ಔಷಧಿಗಳನ್ನು ತಯಾರಿಸುತ್ತಾರೆ. ಈ ಬಿಸಿನೆಸ್ ಅನ್ನು ಆರಂಭಿಸುವಲ್ಲಿ ಅವರ ಪತಿಯು ಸಹ ಮಹತ್ವದ ಪಾತ್ರವನ್ನು ವಹಿಸಿದ್ದಾರೆ ಮತ್ತು ಕಳೆದ 20 ವರ್ಷಗಳಿಂದ ಸುಮಂಗಲಾ ಅವರು ಈ ಬಿಸಿನೆಸ್ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಸುಮಂಗಲಾ ಅವರ ಪತಿಯು ಈ ಮುಂಚೆ ಆಯುರ್ವೇದದ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡುವ ಉದ್ಯೋಗವನ್ನು ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಅವರು ಕೆಲವು ಆಯುರ್ವೇದ ಪಂಡಿತರ ಸಂಪರ್ಕವನ್ನು ಬೆಳೆಸಿದರು. ನಂತರದಲ್ಲಿ ಅದೇ ಪಂಡಿತರ ಮಾರ್ಗದರ್ಶನದಲ್ಲಿ ಸುಮಂಗಲಾ ಮತ್ತು ಪತಿ ಔಷಧಿಗಳನ್ನು ತಯಾರಿಸಲು ಪ್ರಾರಂಭಿಸಿದರು. ಮೊದಲಿಗೆ ಸಣ್ಣ ಮಟ್ಟದಲ್ಲಿ ಆಯುರ್ವೇದ ಮೆಡಿಸಿನ್ ತಯಾರಿಸುವ ಬಿಸಿನೆಸ್ ಅನ್ನು ಆರಂಭಿಸಿದ ಸುಮಂಗಲಾ ಅವರು, ನಂತರದಲ್ಲಿ ಪರಿಣಿತರ ನೆರವಿನಿಂದ ಅಗತ್ಯ ಪರವಾನಗಿ ಪಡೆದು ದೊಡ್ಡ ಮಟ್ಟದಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿದರು. ಔಷಧಗಳನ್ನು ತಯಾರಿಸಲು ಅಗತ್ಯವಿರುವ ಗಿಡಮೂಲಿಕೆಗಳನ್ನು ಅವರು ತಮ್ಮ ಜಮೀನಿನಲ್ಲೇ ಬೆಳೆಯುತ್ತಾರೆ ಮತ್ತು ಉಳಿದದ್ದನ್ನು ಮಾರುಕಟ್ಟೆಯಿಂದ ಖರೀದಿಸುತ್ತಾರೆ. ಪ್ರಸ್ತುತ, ಅವರು ತಮ್ಮ ಕಂಪನಿಯಲ್ಲಿ 10 ರಿಂದ 15 ಜನ ಕಾರ್ಮಿಕರನ್ನು ನೇಮಿಸಿಕೊಂಡಿದ್ದಾರೆ ಮತ್ತು ಇದರ ಜೊತೆಗೆ ಅವರು 20-25 ಮಷೀನ್ ಅನ್ನು ಮೆಡಿಸಿನ್ ತಯಾರಿಕೆಗೆ ಬಳಸುತ್ತಿದ್ದಾರೆ.
ಆರಂಭದಲ್ಲಿ, ಸುಮಂಗಲಾ ಅವರು 10-12 ಔಷಧಿಗಳನ್ನು ಮಾತ್ರ ತಯಾರಿಸುತ್ತಿದ್ದರು, ಆದರೆ ಈಗ ಅವರು 30 ರಿಂದ 35 ವಿವಿಧ ಮೆಡಿಸಿನ್ ಗಳನ್ನು ತಯಾರಿಸುತ್ತಿದ್ದಾರೆ. ಪೈಲ್ಸ್, ಹೈಪರ್ ಆಸಿಡಿಟಿ, ಅತಿಸಾರ, ಕೆಮ್ಮು, ನೆಗಡಿ ಮತ್ತು ಉಬ್ಬಸಕ್ಕೆ ಅವರು ಔಷಧಿಗಳನ್ನು ತಯಾರಿಸುತ್ತಿದ್ದಾರೆ. ಜೊತೆಗೆ ಮಲ್ಟಿವಿಟಮಿನ್‌ಗಳು ಮತ್ತು ಶಕ್ತಿಯನ್ನು ಹೆಚ್ಚಿಸಲು ಸಹ ಅವರು ಔಷಧಿಗಳನ್ನು ತಯಾರಿಸುತ್ತಿದ್ದಾರೆ. ತಯಾರಿಸಿದ ಔಷಧಿಗಳನ್ನು ಮಾರಾಟ ಮಾಡಲು ಸುಮಂಗಲಾ ಅವರು ಜಿಲ್ಲಾವಾರು ಸೇಲ್ಸ್ ರೆಪ್ರೆಸೆಂಟಿಟಿವ್ ಅನ್ನು ಸಹ ನೇಮಿಸಿಕೊಂಡಿದ್ದಾರೆ.
ಈಗಾಗಲೇ ಯಶಸ್ವಿ ಬಿಸಿನೆಸ್ ಅನ್ನು ನಿರ್ಮಿಸಿರುವ ಸುಮಂಗಲಾ ಅವರು ಕೃಷಿಯ ಬಗ್ಗೆ ಕೂಡ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಈ ಕಾರಣದಿಂದಾಗಿ ಅವರು ffreedom app ಅನ್ನು ಡೌನ್ಲೋಡ್ ಮಾಡಿಕೊಂಡು ಅದರ ಚಂದಾದಾರಿಕೆಯನ್ನು ಸಹ ಪಡೆದುಕೊಂಡಿದ್ದಾರೆ. ಅಪ್ಲಿಕೇಶನ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಉದ್ದೇಶದಿಂದ ಮತ್ತು ಕೃಷಿಯ ಬಗ್ಗೆ ತಮಗಿರುವ ಪ್ಯಾಷನ್ ಅನ್ನು ಮುಂದುವರಿಸುವ ಉದ್ದೇಶದಿಂದ ಸುಮಂಗಲಾ ಅವರು ಹಲವಾರು ಕೃಷಿ ಸಂಬಂಧಿತ ಕೋರ್ಸ್ ಗಳನ್ನು ವೀಕ್ಷಿಸಿದ್ದಾರೆ. ಪ್ರಮುಖವಾಗಿ ಅವರು ಮೆಡಿಸಿನಲ್ ಪ್ಲಾಂಟ್ಸ್ ಕೋರ್ಸ್ ಅನ್ನು ವೀಕ್ಷಿಸುವ ಮೂಲಕ ಪ್ರಸ್ತುತ ಅವರು ಮೆಡಿಸಿನ್ ತಯಾರಿಕೆಗೆ ಅಗತ್ಯವಿರುವ ಕೆಲವು ಗಿಡಮೂಲಿಕೆಗಳನ್ನು ತಾವೇ ಬೆಳೆಯುತ್ತಿದ್ದಾರೆ. ಇದರ ಜೊತೆಗೆ ತೈವಾನ್ ಪೇರಲ ಕೋರ್ಸ್ ಸಹ ಅವರಿಗೆ ಹೆಚ್ಚು ಪ್ರೇರಣೆ ನೀಡಿದೆ.
ಸುಮಂಗಲಾ ಮತ್ತು ಅವರ ಪತಿಯು 50 ಲಕ್ಷದ ಆರಂಭಿಕ ಹೂಡಿಕೆಯೊಂದಿಗೆ ಈ ಬಿಸಿನೆಸ್ ಅನ್ನು ಪ್ರಾರಂಭಿಸಿದರು. ಆರಂಭಿಕವಾಗಿ ಕೆಲವು ಸವಾಲುಗಳನ್ನು ಅವರು ಎದುರಿಸಿದರೂ ಸಹ ಅದನ್ನೆಲ್ಲ ಯಶಸ್ವಿಯಾಗಿ ಜಯಿಸಿ ಇಂದು ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ. ಅವರ ಬಿಸಿನೆಸ್ ಈಗ GMP ಪ್ರಮಾಣೀಕೃತವಾಗಿದೆ. ಇಷ್ಟಕ್ಕೇ ತೃಪ್ತರಾಗದ ಸುಮಂಗಲಾ ಅವರು ಮುಂದಿನ ದಿನಗಳಲ್ಲಿ ತಮ್ಮ ಬಿಸಿನೆಸ್ ಅನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ವಿಸ್ತರಿಸುವ ಕನಸನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ffreedom appನ ಕೋರ್ಸ್ ಗಳ ಮೂಲಕ ಅವರು ಮಾರ್ಕೆಟಿಂಗ್ ಮತ್ತು ಬ್ರಾಂಡಿಂಗ್ ಮಾಡುವುದನ್ನು ಕಲಿಯುತ್ತಿದ್ದಾರೆ. ಜ್ಞಾನದ ಅನ್ವೇಷಣೆಯಲ್ಲಿರುವ ಅವರಿಗೆ ffreedom app ಅಗತ್ಯವಾದ ಮಾಹಿತಿ ಮತ್ತು ಮಾರ್ಗದರ್ಶನವನ್ನು ಒದಗಿಸುತ್ತಿದೆ.
ಇದರ ಜೊತೆಗೆ ಸುಮಂಗಲಾ ಅವರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ffreedom appನ ಮಾರ್ಕೆಟ್ ಪ್ಲೇಸ್ ಅನ್ನು ಸಹ ಬಳಕೆ ಮಾಡುವ ಬಗ್ಗೆ ಆಸಕ್ತಿಯನ್ನು ಹೊಂದಿದ್ದಾರೆ. ಮತ್ತು ಇದು ಅವರಿಗೆ ಹೊಸ ಗ್ರಾಹಕರನ್ನು ತಲುಪಲು ಮತ್ತು ಅವರ ಬಿಸಿನೆಸ್ ಅನ್ನು ವಿಸ್ತರಿಸಲು ಸಹಾಯ ಮಾಡಲಿದೆ.
ಸುಮಂಗಲಾ ಅವರು ffreedom appನ ಕೋರ್ಸ್ ಗಳ ಮೂಲಕ ಅಗತ್ಯ ಜ್ಞಾನವನ್ನು ಪಡೆದು ತಮ್ಮ ಬಿಸಿನೆಸ್ ಅನ್ನು ಉತ್ತಮ ರೀತಿಯಲ್ಲಿ ಮಾರ್ಕೆಟಿಂಗ್ ಮತ್ತು ಬ್ರಾಂಡಿಂಗ್ ಮಾಡುವ ಗುರಿಯನ್ನು ಹೊಂದಿದ್ದಾರೆ. ಬಿಸಿನೆಸ್ ಅನ್ನು ಆರಂಭಿಸುವ ಮೂಲಕ ತಾವೂ ಸಹ ಯಶಸ್ವಿ ಉದ್ಯಮಿಯಾಗಬೇಕು ಮತ್ತು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬ ಕನಸು ಕಂಡಿರುವ ಲಕ್ಷಾಂತರ ಮಂದಿಗೆ ಅಗತ್ಯ ಜ್ಞಾನ, ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸುವುದು ffreedom appನ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅದು ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ. ಈ ಮೂಲಕ ಲಕ್ಷಾಂತರ ಭಾರತೀಯರ ಬದುಕನ್ನು ಸಕಾರಾತ್ಮಕ ರೀತಿಯಲ್ಲಿ ಪರಿವರ್ತಿಸಬೇಕು ಎಂಬ ಸಂಕಲ್ಪವನ್ನು ffreedom app ತೊಟ್ಟಿದೆ.