ಮಹಾನಗರಿ ಬೆಂಗಳೂರಿನಲ್ಲಿ ತಮ್ಮ ಕುಟುಂಬದೊಂದಿಗೆ ಪುರೋಹಿತ ವೃತ್ತಿಯನ್ನು ಮಾಡಿಕೊಂಡು ಸುಖ ಸಂಸಾರವನ್ನು ನಡೆಸಿಕೊಂಡು ಜೀವನವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದವರಿಗೆ ಕೊರೊನಾ ಮಾಹಾಮಾರಿ ಅಡ್ಡಬಂತು. ಮನೆ ಬಾಡಿಗೆ ಕಟ್ಟಲೂ ಸಾಧ್ಯವಾಗದ ಪರಿಸ್ಥಿತಿ ಬಂದೊದಗಿತು. ಕಮಿಟಿಯಿಂದ ಯಾವುದೇ ಸಹಾಯಹಸ್ತ ದೊರೆಯಲಿಲ್ಲ. ಮಗಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಮಾಡುವಂತಾಯಿತು. ಇನ್ನು ಬೆಂಗಳೂರಿನಲ್ಲಿ ಜೀವನವನ್ನು ನಡೆಸಲು ಸಾಧ್ಯವಿಲ್ಲ ಎಂದು ಅರಿತ ಅವರು ಊರಿಗೆ ಮರಳಲು ಸಿದ್ಧರಾದರು.
ಇವರು ಭಾಸ್ಕರ್ ಜೋಯಿಸ್ ಮೂಲತ: ಶಿವಮೊಗ್ಗ ಜಿಲೆಯವರು. ಇವರು ವೃತ್ತಿಯಲ್ಲಿ ಅರ್ಚಕರಾಗಿ ತಮ್ಮ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ಜೀವನವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದವರಿಗೆ, ಮಹಾಮಾರಿ ಕೊರೊನಾ ಯಾವಾಗ ಕಾಲಿಟ್ಟಿತ್ತೋ ಇವರ ಜೀವನ ಅಲ್ಲೋಲ ಕಲ್ಲೋಲವಾಗಿ ಹೋಯಿತು.
ಊರಲ್ಲಿ ಕೃಷಿ ಭೂಮಿ ಇದ್ದರೂ ಕೃಷಿ ಮಾಡಲು ಸಾಧ್ಯವಿಲ್ಲ ಎಂದು ಬೆಂಗಳೂರಿಗೆ ಬಂದು ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಭಾಸ್ಕರ್ ಜೋಯಿಸರಿಗೆ ಕೊರೊನಾ ಮಹಾಮಾರಿಯಿಂದ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಲು ಆರಂಭಿಸಿದರು. ಕೊರೊನಾ ಸಮಯದಲ್ಲಿ ಕಮಿಟಿಯಿಂದ ಯಾವುದೇ ಸಹಾಯ ದೊರೆಯಲಿಲ್ಲ. ಮನೆ ಬಾಡಿಗೆ ಕಟ್ಟಲು, ಮಗಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಯಿತು. ಇನ್ನು ಬೆಂಗಳೂರಿನಲ್ಲಿ ದಿನದೂಡಲು ಸಾಧ್ಯವಿಲ್ಲ ಎಂದು ತಿಳಿದ ಅವರು ಮರಳಿದ್ದು ಮತ್ತೆ ತಮ್ಮ ಊರಿಗೆ.
ಊರಲ್ಲಿ ಮೊದಲೇ ಹಿರಿಯರು ಮಾಡಿದ್ದ ತೆಂಗಿನ ತೋಟವಿತ್ತು. ತೆಂಗಿನ ಮರದಿಂದ ಬರುವ ಆದಾಯದೊಂದಿಗೆ ದಿನದೂಡುತ್ತಿದ್ದರು. ಹೀಗಿದ್ದವರಿಗೆ ಒಂದು ದಿನ ffreedom app ಬಗ್ಗೆ ತಿಳಿಯಿತು. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಆಯಪ್ ಡೌನ್‌ಲೋನ್ ಮಾಡಿಕೊಂಡು ಚಂದಾದರಾಗುತ್ತಾರೆ. ಕೃಷಿ ಆಧಾರಿತ ಹಲವಾರು ಕೋರ್ಸ್‌ಗಳನ್ನು ನೋಡುತ್ತಾರೆ. ಮೊದಲೇ ತೆಂಗಿನ ತೋಟ ಇದ್ದುದ್ದರಿಂದ ಸಮಗ್ರ ಕೃಷಿ ಮಾಡುವ ಆಲೋಚನೆ ಅವರಲ್ಲಿ ಮೂಡುತ್ತದೆ. ffreedom appನ ಕೋರ್ಸ್‌ನ ಮಾರ್ಗದರ್ಶನದ ಮೂಲಕವೇ ತೆಂಗಿನ ಮರಗಳ ನಡುವೆ ತರಕಾರಿ ಸಸಿಗಳನ್ನು ನಾಟಿ ಮಾಡುತ್ತಾರೆ. ಆದರೆ ಮಳೆ ಹೆಚ್ಚಾಗಿದ್ದರಿಂದ ಗಿಡಗಳು ಕೊಳೆತು ಹೋಗಿ ನಷ್ಟ ಉಂಟಾಗುತ್ತದೆ.
ಬಳಿಕ ಪ್ರೀಡಂ ಆಯಪ್‌ನಲ್ಲಿ ಇನ್ನಷ್ಟು ಕೃಷಿ ಸಂಬಂಧಿತ ಕೋರ್ಸ್‌ಗಳನ್ನು ವೀಕ್ಷಿಸಿ ತಮ್ಮ ತೆಗಿನ ಮರದ ತೋಟದಲ್ಲಿ ಸಮಗ್ರ ಕೃಷಿ ಪದ್ಧತಿಯಡಿ ಅಡಿಕೆ ಮರ, ಹಣ್ಣುಗಳ ಗಿಡ, ಮಸಾಲೆ ಪದಾರ್ಥಗಳಾದ ಏಲಕ್ಕಿ, ಜಾಯಿಕಾಯಿಗಳನ್ನು ಬೆಳೆಸಿ ಸಮಗ್ರ ಕೃಷಿಯನ್ನು ಮಾಡುತ್ತಾರೆ. ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಿರುವ ಭಾಸ್ಕರ್ ಜೋಯಿಸ ಅವರು ಯೋಜಿತ ಬೇಸಾಯದ ಮೂಲಕ ಲಾಭದ ದಾರಿಯಲ್ಲಿ ಸಾಗುತ್ತಿದ್ದಾರೆ. ಇದರಿಂದ ಇವರು ತರಕಾರಿ ಸಸಿಗಳ ನಾಟಿಯಿಂದ ಇಂದು ತಮ್ಮ ಮನೆಗೆ ಬೇಕಾಗುವ ತರಕಾರಿಗಳನ್ನು ತಾವೇ ಉತ್ಪಾದಿಸಿ, ಹಣ ಕೊಟ್ಟು ತರಕಾರಿಗಳನ್ನು ಕೊಳ್ಳುವುದನ್ನು ತಪ್ಪಿಸುತ್ತಾರೆ.
ಸಂಪೂರ್ಣ ಸಾವಯವ ಕೃಷಿ
ಭಾಸ್ಕರ್ ಜೋಯಿಸ ಅವರು ತಮ್ಮ ಕೃಷಿಯಲ್ಲಿ ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸುತ್ತಿಲ್ಲ. ಸಾವಯವ ಗೊಬ್ಬರದ ಜೊತೆಗೆ ಜೀವಾಮೃತ, ಗೋಕೃಪಾಮೃಂತಗಳನ್ನು ಬಳಸಿ ಸಂಪೂರ್ಣವಾಗಿ ಸಾವಯವವಾಗಿ ಕೃಷಿಯನ್ನು ಮಾಡುತ್ತಿದ್ದಾರೆ. ಕೃಷಿಯಲ್ಲಿ ಕೃಪಾಮೃತ ಮತ್ತು ಜೀವಾಮೃತಗಳ ಪ್ರಾಮುಖ್ಯತೆಯನ್ನು ಅವರು ffreedom app ನ ಕೋರ್ಸ್‌ಗಳ ಮೂಲಕವೇ ತಿಳಿದುಕೊಂಡಿದ್ದು ಆಸಕ್ತಿಕರವಾಗಿದೆ.
ಸಾಲ ಮರುಪಾವತಿ ಬಗ್ಗೆ ffreedom app ನಿಂದ ಕಲಿಕೆ
ಭಾಸ್ಕರ್ ಜೋಯಿಸ್ ಅವರಿಗೆ ಕೇವಲ ಕೃಷಿ ಸಂಬಂಧಿತ ಕೋರ್ಸ್‌ಗಳು ಮಾತ್ರವಲ್ಲದೆ, ಫೈನಾಶಿಯಲ್ ಕೋರ್ಸ್‌ಗಳಿಂದ ಕೂಡ ಹಲವಾರು ಪ್ರಯೋಜನಗಳನ್ನು ಈ ಕೋರ್ಸ್ ಮೂಲಕ ಪಡೆದುಕೊಂಡಿದ್ದಾರೆ. ಹಣವನ್ನು ಹೇಗೆ ಉಳಿತಾಯ ಮಾಡುವ ಮಾರ್ಗಗಳು ಯಾವುವು, ಹಣವನ್ನು ಉಳಿತಾಯ ಮಾಡುವುದು ಹೇಗೆ, ಇರುವ ಸಾಲಗಳನ್ನು ತೀರಿಸುವುದು ಹೇಗೆ ಎಂಬುವುದರ ಕೋರ್ಸ್ ಇವರಿಗೆ ತುಂಬಾ ಸಹಾಯ ಮಾಡಿತು ಎನ್ನುತ್ತಾರೆ ಜೋಯಿಸ್.
ದೊಡ್ಡದಾದ ನಿರೀಕ್ಷೆ ಬೇಡ
ನಾವು ಯಾವತ್ತು ದೊಡ್ಡದಾದ ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು. ಆ ನಿರೀಕ್ಷೆಗಳಿಂದ ನಾವೂ ಯಾವುದನ್ನು ಸಾಧಿಸಲು ಸಾಧ್ಯವಿಲ್ಲ. ಆದರೆ ಚಿಕ್ಕ ನಿರೀಕ್ಷೆಯೊಂದಿಗೆ ಆರಂಭಿಸಿದರೆ ಅದು ತಾನಾಗಿಯೇ ಮುಂದೆ ದೊಡ್ಡದಾಗಿ ಬೆಳೆಯುತ್ತದೆ. ಲಾಕ್‌ಡೌನ್ ಸಮಯದಲ್ಲಿ ffreedom Appನಿಂದ ಬಹಳ ಸಹಾಯವಾಯಿತು ಎನ್ನುತ್ತಾರೆ ಭಾಸ್ಕರ್ ಜೋಯಿಸ್.
ಇಂದು ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಊರಲ್ಲಿಯೇ ಪೊರೋಹಿತ ವೃತ್ತಿಯ ಜತೆಗೆ ಇಂದು ಸಮಗ್ರ ಕೃಷಿಯೊಂದಿಗೆ ನಗರದ ಜಂಜಾಟವಿಲ್ಲದೆ ಆರೋಗ್ಯಕರ ಜೀವನವನ್ನು ಸಾಗಿಸುತ್ತಿರುವ ಭಾಸ್ಕರ್ ಜೋಯಿಸರು ನಮಗೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ.