Home » Latest Stories » ಯಶಸ್ಸಿನ ಕಥೆಗಳು » ಕುಡಿತದ ಚಟವನ್ನು ಹಿಮ್ಮೆಟ್ಟಿಸಿ ಇಂದು ಯಶಸ್ವಿ ಕುರಿ ಮತ್ತು ಕೋಳಿ ಸಾಕಣೆ ಮಾಡುತ್ತಿರುವ ಶಂಕರ್ 

ಕುಡಿತದ ಚಟವನ್ನು ಹಿಮ್ಮೆಟ್ಟಿಸಿ ಇಂದು ಯಶಸ್ವಿ ಕುರಿ ಮತ್ತು ಕೋಳಿ ಸಾಕಣೆ ಮಾಡುತ್ತಿರುವ ಶಂಕರ್ 

by Punith B
890 views

ದೇವನಾಯಕನಹಳ್ಳಿಯವರಾದ ಶಂಕರ್ ಅವರು ತಮ್ಮ ಜೀವನದ ಆರಂಭಿಕ ದಿನಗಳಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿದರು, ಹೀಗಾಗಿ ಅವರು ತಮ್ಮ ಶಾಲಾ ಶಿಕ್ಷಣವನ್ನು 8 ನೇ ತರಗತಿಯವರೆಗೆ ಮಾತ್ರ ಮುಗಿಸಲು ಸಾಧ್ಯವಾಯಿತು. ನಂತರದಲ್ಲಿ ಅವರು ಗಾರೆ ಕೆಲಸದ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಮುಂದಾದರು. ಗಾರೆ ಕೆಲಸದಲ್ಲಿ ಅವರು ಸುಮಾರು 10ಕ್ಕೂ ಹೆಚ್ಚು ಜನರನ್ನು ನಿರ್ವಹಣೆ ಮಾಡುತ್ತಿದ್ದರು ಮತ್ತು ಈ ಮೂಲಕ ಉತ್ತಮ ಆದಾಯವನ್ನು ಸಹ ಗಳಿಸುತ್ತಿದ್ದರು. ಆದರೆ ಈ ಮಧ್ಯೆ ಅವರು ಕುಡಿತದ ಅಭ್ಯಾಸವನ್ನು ಬೆಳೆಸಿಕೊಂಡರು ಮತ್ತು ಗಳಿಸಿದ ಹಣವನ್ನೆಲ್ಲ ಕಳೆದುಕೊಂಡರು. ನಂತರದಲ್ಲಿ ಮನಪರಿವರ್ತನೆ ಆದ ಬಳಿಕ ಅವರು ಕುಡಿತದ ಚಟದಿಂದ ಹೊರಬಂದು ಉತ್ತಮ ಜೀವನವನ್ನು ನಡೆಸಬೇಕು ಎಂಬ ನಿರ್ಧಾರ ಮಾಡಿದರು. 

ಹೀಗಾಗಿ ಅವರು ಗಾರೆ ಕೆಲಸವನ್ನು ತ್ಯಜಸಿ 10.5 ಸಾವಿರ ಸಂಬಳಕ್ಕೆ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ಕಳೆದ ಏಳು ವರ್ಷಗಳಿಂದ ಅವರು ಅದೇ ಫ್ಯಾಕ್ಟರಿಯಲ್ಲಿ ಕೆಲಸವನ್ನು ಮಾಡುತ್ತಿದ್ದು  ಪ್ರಸ್ತುತ ಅವರು 19.5 ಸಾವಿರ ಸಂಬಳವನ್ನು ಪಡೆಯುತ್ತಿದ್ದಾರೆ. ಆದರೆ ಕೇವಲ ಒಂದೇ ಕೆಲಸವನ್ನು ಮಾಡುವುದರಿಂದ ಆರ್ಥಿಕವಾಗಿ ಬೆಳೆಯಲು ಸಾಧ್ಯವಿಲ್ಲ ಎಂಬುದನ್ನು ಅರಿತ ಮೇಲೆ, ಹೆಚ್ಚಿನ ಆದಾಯಕ್ಕಾಗಿ ಬೇರೆ ಏನಾದರು ಬಿಸಿನೆಸ್ ಮಾಡಲು ನಿರ್ಧರಿಸಿದರು. ಇದೇ ಸಂದರ್ಭದಲ್ಲಿ ಅವರು ಯೂಟ್ಯೂಬ್ ಮೂಲಕ ffreedom app ಬಗ್ಗೆ ತಿಳಿದುಕೊಂಡರು. ನಂತರದಲ್ಲಿ ಅವರು ಅದನ್ನು ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಂಡರು ಮತ್ತು ಅದರ ಚಂದಾದಾರಿಕೆಯನ್ನು ಸಹ ಪಡೆದುಕೊಂಡರು. ಅಪ್ಲಿಕೇಶನ್ ನಲ್ಲಿ ಮೊದಲಿಗೆ ಅವರು ಕುರಿ ಸಾಕಣೆ ಮತ್ತು ಕೋಳಿ ಸಾಕಣೆ ಕುರಿತ ಕೋರ್ಸ್ ಗಳನ್ನು ವೀಕ್ಷಿಸಿದರು. ಅದರಿಂದ ಕಲಿತ ಜ್ಞಾನದಿಂದ ಶಂಕರ್ ಅವರು ಕುರಿ ಮತ್ತು ಕೋಳಿ ಸಾಕಣೆಯನ್ನು ಪ್ರಾರಂಭಿಸಿದರು. 

ಮೊದಲಿಗೆ ಕೇವಲ ಒಂದು ಕುರಿಯಿಂದ ಕುರಿ ಸಾಕಣೆಯನ್ನು ಪ್ರಾರಂಭಿಸಿದ ಶಂಕರ್ ಅವರು ಬಹು ಬೇಗನೆ ಅದರಲ್ಲಿ ಅಭಿವೃದ್ಧಿಯನ್ನು ಕಂಡರು ಮತ್ತು ಪ್ರಸ್ತುತ ಅವರು 5 ಕುರಿಗಳನ್ನು ಸಾಕಣೆ ಮಾಡುತ್ತಿದ್ದಾರೆ. ಇದರಲ್ಲಿ ಬಂಡೂರು ಮತ್ತು ನಾರಿ ಸುವರ್ಣ ತಳಿಯ ಕುರಿಗಳೂ ಸಹ ಸೇರಿವೆ. ಇದರ ಜೊತೆಗೆ ಅವರು ತಮ್ಮ ಕುರಿಗಳಿಗಾಗಿ 21×17 ಜಾಗದಲ್ಲಿ ಶೆಡ್ ಅನ್ನು ಸಹ ನಿರ್ಮಿಸಿದ್ದಾರೆ. ಹೆಚ್ಚುವರಿಯಾಗಿ ಕುರಿಗಳ ಜೊತೆಗೆ ಅವರು 5 ಕೋಳಿಗಳನ್ನು ಸಹ ಸಾಕಣೆ ಮಾಡುತ್ತಿದ್ದಾರೆ ಮತ್ತು ಅದರಿಂದ ಮೊಟ್ಟೆಗಳನ್ನು ಸಹ ಪಡೆಯುತ್ತಿದ್ದಾರೆ. ಶಂಕರ್ ಅವರು ಪ್ರಸ್ತುತ ಕುರಿ ಸಾಕಾಣಿಕೆ ಬಿಸಿನೆಸ್ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ನಡೆಸುತ್ತಿದ್ದಾರೆ ಮತ್ತು ಅದರಿಂದ ಉತ್ತಮ ಆದಾಯವನ್ನು ಕೂಡ ಗಳಿಸುತ್ತಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ಅವರು ತಮ್ಮ ಕುರಿ ಸಾಕಣೆಯನ್ನು ವಿಸ್ತರಿಸಲು ಅಗತ್ಯ ಸಿದ್ದತೆಯನ್ನು ಸಹ ನಡೆಸುತ್ತಿದ್ದಾರೆ.

ಹಿಂದೊಮ್ಮೆ ಕುಡಿತದ ಚಟಕ್ಕೆ ಸಿಲುಕಿ ಜೀವನವನ್ನು ಹಾಳು ಮಾಡಿಕೊಂಡಿದ್ದ ಶಂಕರ್ ಅವರು ಇಂದು ತಮ್ಮ ತಪ್ಪನ್ನು ಅರಿತು ಸರಿ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಇಂದು ಅವರಿಗೆ ಬದುಕಿನಲ್ಲಿ ಹಲವಾರು ಕನಸುಗಳಿವೆ ದುಡಿಯಬೇಕೆಂಬ ಛಲವಿದೆ. ಸಮಾಜದಲ್ಲಿ ಉತ್ತಮ ಗೌರವವನ್ನು ಪಡೆಯುವ ಮೂಲಕ ಅವರು ಮಾದರಿ ಜೀವನವನ್ನು ನಡೆಸುತ್ತಿದ್ದಾರೆ. ಬದುಕಿನಲ್ಲಿ ಏನಾದರು ಸಾಧಿಸಬೇಕು ಎಂದು ಅಂದುಕೊಂಡ ಸಂದರ್ಭದಲ್ಲಿ ffreedom app ಶಂಕರ್ ಅವರಿಗೆ ಅಗತ್ಯ ಜ್ಞಾನ ಮತ್ತು ಬೆಂಬಲವನ್ನು ಒದಗಿಸುವ ಮೂಲಕ ಭರವಸೆಯ ಬೆಳಕಿನಂತೆ ಕೆಲಸ ಮಾಡಿದೆ. ಅದನ್ನು ಸರಿಯಾಗಿ ಬಳಸಿಕೊಂಡು ಶಂಕರ್ ಅವರು ಇಂದು ಕುರಿ ಮತ್ತು ಕೋಳಿ ಸಾಕಣೆಯಿಂದ ಹೆಚ್ಚುವರಿ ಆದಾಯದ ಮೂಲವನ್ನು ಹುಡುಕಿಕೊಂಡಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ತಮ್ಮ ಸಾಕಣೆಯನ್ನು ಇನ್ನು ದೊಡ್ಡದಾಗಿ ವಿಸ್ತರಿಸುವ ಮೂಲಕ ಅಧಿಕ ಲಾಭವನ್ನು ಗಳಿಸುವ ಆಶಯವನ್ನು ಹೊಂದಿದ್ದಾರೆ. 

ತಮ್ಮ ಬದುಕನ್ನು ಸರಿಯಾದ ಮತ್ತು ಗೌರವವಾದ ರೀತಿಯಲ್ಲಿ ಕಟ್ಟಿಕೊಳ್ಳಲು ಎಲ್ಲ ರೀತಿಯಲ್ಲೂ ಸಹ ನೆರವಾಗಿರುವ ffreedom appಗೆ ಶಂಕರ್ ಅವರು ತಮ್ಮ ಧನ್ಯವಾದಗಳನ್ನು ಸಲ್ಲಿಸುತ್ತಾರೆ. 

ಯಾವುದೇ ಕೆಲಸಕ್ಕೆ ಸರಿಯಾದ ಜ್ಞಾನ ಮತ್ತು ಮಾರ್ಗದರ್ಶನವಿದ್ದರೆ ಜೊತೆಗೆ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪವಿದ್ದರೆ ಯಾರು ಎನ್ನನ್ನು ಬೇಕಾದರೂ ಸಹ ಸಾಧಿಸಬಹುದು ಎಂಬುದಕ್ಕೆ ಶಂಕರ್ ಅವರ ಬದುಕಿನ ಕಥೆಯು ಉತ್ತಮ ಉದಾಹರಣೆಯಾಗಿದೆ. ಆಯಾ ಕ್ಷೇತ್ರದ ಅತ್ಯಂತ ಯಶಸ್ವಿ ಸಾಧಕರ ಮಾರ್ಗದರ್ಶನದಲ್ಲಿ ಸಿದ್ಧಗೊಂಡಿರುವ ffreedom appನ ಕೋರ್ಸ್ ಗಳನ್ನು ವೀಕ್ಷಿಸುವ ಮೂಲಕ ಶಂಕರ್ ಅವರು ಕುರಿ ಮತ್ತು ಕೋಳಿ ಸಾಕಣೆ ಬಗ್ಗೆ ಅಗತ್ಯವಾದ ಜ್ಞಾನವನ್ನು ಪಡೆದುಕೊಂಡಿದ್ದಾರೆ, ಮತ್ತು ಅದನ್ನು ಸರಿಯಾಗಿ ಅಳವಡಿಸಿಕೊಂಡು ಉತ್ತಮ ಆದಾಯವನ್ನು ಸಹ ಗಳಿಸುತ್ತಿದ್ದಾರೆ. ಒಂದೇ ಆದಾಯವನ್ನು ನಂಬಿಕೊಳ್ಳಬಾರದು ಎಂಬ ಉದ್ದೇಶದಿಂದ ಶಂಕರ್ ಅವರು ಕುರಿ ಮತ್ತು ಕೋಳಿ ಸಾಕಣೆಯನ್ನು ಬಿಸಿನೆಸ್ ಅನ್ನು ಆರಂಭಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಬದುಕಿನಲ್ಲಿ ಸಾಧನೆ ಮಾಡಬೇಕು ಎಂದು ಬಯಸುವ  ಮತ್ತು ಸ್ವಾವಲಂಬಿಯಾದ ಬದುಕನ್ನು ಕಟ್ಟಿಕೊಳ್ಳಬೇಕೆಂದು ಕನಸು ಕಾಣುವ ಲಕ್ಷಾಂತರ ಮಂದಿಗೆ ಅಗತ್ಯ ಜ್ಞಾನ, ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸುವುದು ffreedom appನ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅದು ತನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ. ಈ ಮೂಲಕ ಲಕ್ಷಾಂತರ ಭಾರತೀಯರ ಬದುಕನ್ನು ಸಕಾರಾತ್ಮಕ ರೀತಿಯಲ್ಲಿ ಪರಿವರ್ತಿಸಬೇಕು ಎಂಬ ಸಂಕಲ್ಪವನ್ನು ffreedom app ತೊಟ್ಟಿದೆ. 

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.