Home » Latest Stories » ಯಶಸ್ಸಿನ ಕಥೆಗಳು » ಬಿ.ಎಸ್ಸಿ ವಿದ್ಯಾರ್ಥಿಯ ಕೃಷಿ ಯಶೋಗಾಧೆ

ಬಿ.ಎಸ್ಸಿ ವಿದ್ಯಾರ್ಥಿಯ ಕೃಷಿ ಯಶೋಗಾಧೆ

by Bharadwaj Rameshwar

ಕುರಿ ಮೇಕೆ ಸಾಕಣಿಕೆ ಇಂದು ಹೆಚ್ಚಾಗುತ್ತಿದೆ. ಪ್ರಸ್ತುತ ಯುವಜನತೆ ಇತ್ತೀಚಿನ ದಿನಗಳಲ್ಲಿ ಕೃಷಿಯತ್ತ ಒಲವು ತೋರುತ್ತಿರುವುದು ಬಹಳ ಸಂತಸದ ವಿಷಯ. ಬಿಎಸ್ಸಿ ಪದವಿ ಪಡೆಯುತ್ತಿರುವ ಯುವಕನೊಬ್ಬ ತನ್ನ ವಿದ್ಯಾಭ್ಯಾಸದೊಂದಿಗೆ ಕುರಿ- ಮೇಕೆಯನ್ನು ಸಾಕಣೆ ಮಾಡಿ ಕಲಿಕೆಯೊಂದಿಗೆ ಕುಟುಂಬಕ್ಕೂ ಆಧಾರವಾಗಿದ್ದಾರೆ. ಇವರು ತೆಲಂಗಾಣದ  21 ವರ್ಷದ ಬನ್ನೆ ಪರಶುರಾಮುಲು  ಅವರ ಕೃಷಿ ಸಾಧನೆಯ ಬಗ್ಗೆ ನಿಮಗೆ ಹೇಳುತ್ತಿದ್ದೇವೆ. ಇವರು ಬಿಎಸ್ಸಿ ಪದವಿಯೊಂದಿಗೆ ಕೃಷಿಯನ್ನು ಅನುಸರಿಸುತ್ತಿದ್ದಾರೆ. ಇವರ ಕೃಷಿ ಸಾಧನೆ ಎಲ್ಲಾ ಯುವಕರಿಗೂ ಸ್ಪೂರ್ತಿದಾಯಕವಾಗಿದೆ. 

ಯ್ಯೂಟೂಬ್‌ ನಲ್ಲಿ ಗಮನ ಸೆಳೆಯಿತು ffreedom App

ಪರಶುರಾಮುಲು ಯೂಟ್ಯೂಬ್ ವಿಡಿಯೋ ನೋಡುತ್ತಿದ್ದ ಸಮಯದಲ್ಲಿ ffreedom App  ನ ಬಗ್ಗೆ ತಿಳಿದುಕೊಳ್ಳುತ್ತಾರೆ. ಈ ಆ್ಯಪ್‌ನ ಮೂಲಕ ಎಕರೆಗೆ 1 ಲಕ್ಷದಲ್ಲಿ ಸಮಗ್ರ ಕೃಷಿ, ಕುರಿ ಮತ್ತು ಮೇಕೆ ಸಾಕಾಣಿಕೆ, ಸಾಗವಾನಿ ಕೃಷಿ, ಹೈನುಗಾರಿಕೆ ಮತ್ತು ಮುರ್ರಾ ಎಮ್ಮೆ ಸಾಕಾಣಿಕೆ ಬಗ್ಗೆ ಮಾಹಿತಿಯನ್ನು ಪಡೆಯುತ್ತಾರೆ. ಸದ್ಯ ಇವರು ತಮ್ಮ ವಿದ್ಯಾಭ್ಯಾಸದೊಂದಿಗೆ ಕೃಷಿಯನ್ನು ಕೂಡ ಮಾಡುತ್ತಿದ್ದಾರೆ.  ಸ್ನೇಹಿತರು, ಕುಟುಂಬಸ್ಥರು ಸಹ ಇವರಿಗೆ ಬೆಂಬಲ ನೀಡುತ್ತಿಲ್ಲ. 21 ನೇ ವಯಸ್ಸಿನಲ್ಲಿ ಕೃಷಿ ಮತ್ತು ಕುರಿ ಸಾಕಾಣಿಕೆಗೆ ಬೇಡ ಎಂದರೂ ಕೇಳದೆ  ತನ್ನ ಉತ್ಸಾಹ ಮತ್ತು ಹಣ ಗಳಿಸಲು ಈ ಕೃಷಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹೆಚ್ಚಿನ ಭೂಮಿಯಲ್ಲಿ ತರಕಾರಿ ಕೃಷಿಯನ್ನು ಮುಂದುವರಿಸಿ ಯಶಸ್ವಿ ಕೃಷಿಕನಾಗಬೇಕು ಎಂಬುವುದು ಇವರ ಮನದಾಸೆ. 

ಮೇಕೆ- ಕುರಿ ಸಾಕಣೆಯನ್ನು ಪ್ರೀಡಂನಿಂದ ಕಲಿತ ಪರಶುರಾಮುಲು  

ಇವರು ಪ್ರೀಡಂ ಅಪ್ಲಿಕೇಶನ್‌ ನಲ್ಲಿ  ಹಲವಾರು ಕೋರ್ಸ್‌ ಗಳನ್ನು ವೀಕ್ಷಿಸುತ್ತಾರೆ. ಆದರೆ ಇವರನ್ನು  ಹೆಚ್ಚು ಆಕರ್ಷಿಸಿದ ಕೋರ್ಸ್‌ಗಳು ಸಮಗ್ರ ಕೃಷಿ ಮತ್ತು ಮೇಕೆ ಮತ್ತು ಕುರಿ ಸಾಕಣೆ. ಪ್ರೀಡಂ ಆಯಪ್‌ ನಿಂದ ಅವರು ಹೂಡಿಕೆ, ಸಾಲಗಳು, ಸರ್ಕಾರದ ಬೆಂಬಲ, ನೋಂದಣಿ ಕಾರ್ಯವಿಧಾನಗಳು, ಪರವಾನಗಿ, ಶೆಡ್ ತಯಾರಿ, ತಳಿ, ಆಹಾರ, ರೋಗಗಳು, ಲಾಭಗಳು ಮತ್ತು ಸವಾಲುಗಳ ಬಗ್ಗೆ ಕಲಿತರು. ಇದಕ್ಕಿಂತ ಮೊದಲು ಅವರು ಸಣ್ಣ ಕುರಿಗಳನ್ನು ಖರೀದಿಸಿ ಮೋಸ ಹೋದರು. ಸಣ್ಣ ಕುರಿಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುವುದರಿಂದ ಅವುಗಳನ್ನು ಖರೀದಿಸಬಾರದು ಎಂದು ಅವರಿಗೆ ತಿಳಿದಿರಲಿಲ್ಲ. ಇದೆಲ್ಲ ಅವರು ffreedom App ನಿಂದ ಮಾಹಿತಿಯನ್ನು ಪಡೆಯುತ್ತಾರೆ. 

ಕಲಿಕೆಯೊಂದಿಗೆ ಕುರಿ ಸಾಕಣಿಕೆ 

ಪ್ರಸ್ತುತ ಇವರು ಸಮಗ್ರ ಕೃಷಿ ಮತ್ತು ಮೇಕೆ ಮತ್ತು ಕುರಿ ಸಾಕಣೆಯನ್ನು ಮಾಡುತ್ತಿದ್ದಾರೆ. ಇವರು 15 ಕುರಿಗಳಿಗೆ 5 ಸಾವಿರ ರೂಗಳಿಗೆ ಖರೀದಿಸಿ ಇಂದು ಸಾಕಣೆ ಮಾಡುತ್ತಿದ್ದಾರೆ. ಅವುಗಳಿಗೆ ಮೇವು ಕೂಡ ಇವರು ತಮ್ಮ ಜಮೀನಿನಲ್ಲೇ ಬೆಳೆಯುತ್ತಿದ್ದಾರೆ. ಇವರು ಯಾವುದೇ ಶೆಡ್‌ ಗಳನ್ನು ನಿರ್ಮಾಣ ಮಾಡದೆ ಸಾಮಾನ್ಯವಾಗಿ ಒಂದು ಜೋಪಡಿಯಲ್ಲಿ ಈ ಕುರಿಗಳನ್ನು ಸಾಕಣೆ ಮಾಡುತ್ತಿದ್ದಾರೆ. 

21ನೇ ವಯಸ್ಸಿಗೆ ಬಿಸಿನೆಸ್ ಮ್ಯಾನ್

ಸದ್ಯ ಇವರು ತನ್ನ ಕುರಿ ಮತ್ತು ಮೇಕೆಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಈ ವರ್ಷ 15 ಕುರಿಗಳನ್ನು 1 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. 21ನೇ ವಯಸ್ಸಿಗೆ 40 ಸಾವಿರಕ್ಕೂ ಹೆಚ್ಚು ಲಾಭ ಗಳಿಸಿದ ಈತ ಈಗ ಬಿಸಿನೆಸ್ ಮ್ಯಾನ್.

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.