ಅಮೃತ ಅವರು MCA ಪದವಿಯನ್ನು ಪಡೆದ ನಂತರ ಡಿಜಿಟಲ್ ಮಾರ್ಕೆಟಿಂಗ್ ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುತ್ತ ಸುಂದರವಾದ ಜೀವನವನ್ನು ನಡೆಸುತ್ತಿದ್ದರು. ಆದರೆ COVID-19 ಕಾರಣದಿಂದಾಗಿ ಅವರು ಆರ್ಥಿಕ ಬಿಕ್ಕಟ್ಟನ್ನು ಎದುರಿಸುವಂತಾಯಿತು. ಆದರೆ ಅವರು ಅದಕ್ಕೆ ಎದೆಗುಂದಲಿಲ್ಲ ಮತ್ತೆ ಪುಟಿದೇಳುವ ಛಲವನ್ನು ಹೊಂದಿದ್ದರು. ಇದೇ ಸಂದರ್ಭದಲ್ಲಿ ಅವರು ನಮ್ಮ ffreedom app ಬಗ್ಗೆ ಯೂಟ್ಯೂಬ್ ಮೂಲಕ ತಿಳಿದುಕೊಂಡರು ಮತ್ತು ಅದರಿಂದ ಪ್ರಭಾವಿತರಾಗಿ ನಮ್ಮ ffreedom app ಅನ್ನು ಪ್ಲೇಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಂಡರು ಮತ್ತು ಅದರ ಚಂದಾದಾರಿಕೆಯನ್ನು ಪಡೆದುಕೊಂಡರು.
ಹೊಸದನ್ನು ಕಲಿಯುವ ಬಗ್ಗೆ ಸದಾ ಉತ್ಸಾಹಿತರಾಗಿರುವ ಅಮೃತ ಅವರು ffreedom appನಲ್ಲಿನ ಹಲವಾರು ಆಸಕ್ತಿದಾಯಕವಾದ ಕೋರ್ಸ್ ಗಳನ್ನು ಅನ್ವೇಷಿಸಿದರು. ಅದರಂತೆಯೇ, ಅವರು ಮೊದಲಿಗೆ ಸ್ಟಾಕ್ ಮಾರ್ಕೆಟ್ ಕೋರ್ಸ್ ಅನ್ನು ಪಡೆಯುವ ಮೂಲಕ ಅದರ ಬಗ್ಗೆ ಸಂಪೂರ್ಣವಾದ ಜ್ಞಾನವನ್ನು ಪಡೆದುಕೊಂಡರು. ನಂತರದಲ್ಲಿ ಸ್ಟಾಕ್ಸ್ ಗಳಲ್ಲಿ ಹೂಡಿಕೆ ಮಾಡಿ 35-40% ನಷ್ಟು ಲಾಭವನ್ನು ಗಳಿಸಿದರು.
ಅಮೃತ ಅವರು ಮುಂಚಿನಿಂದಲೂ ಬಿಸಿನೆಸ್ ಬಗ್ಗೆ ಅಪಾರವಾದ ಆಸಕ್ತಿಯನ್ನು ಹೊಂದಿದ್ದರು ಮತ್ತು ತಮ್ಮದೇ ಆದ ಒಂದು ಸ್ವಂತ ಬಿಸಿನೆಸ್ ಅನ್ನು ಆರಂಭಿಸುವ ಬಗ್ಗೆ ದೊಡ್ಡದಾದ ಕನಸನ್ನು ಸಹ ಹೊಂದಿದ್ದರು. ಹೀಗಾಗಿ ಕಲಿಯುವುದನ್ನು ಅಲ್ಲಿಗೆ ನಿಲ್ಲಿಸದ ಅಮೃತ ಅವರು ffreedom appನಲ್ಲಿನ ಆಯಿಲ್ ಮಿಲ್ ಬಿಸಿನೆಸ್ ಕೋರ್ಸ್ ಅನ್ನು ವೀಕ್ಷಿಸಿದರು. ಈ ಕೋರ್ಸ್ ಅವರಿಗೆ ಆಯಿಲ್ ಮಿಲ್ ಬಿಸಿನೆಸ್ ನ ಬಗ್ಗೆ ಉತ್ತಮ ಪ್ರಾಯೋಗಿಕ ಜ್ಞಾನವನ್ನು ಒದಗಿಸಿತು. ಇದರಿಂದ ಅಮೃತ ಅವರು ಈ ಬಿಸಿನೆಸ್ ಅನ್ನು ಆರಂಭಿಸುವ ಬಗ್ಗೆ ಸ್ಫೂರ್ತಿ ಮತ್ತು ಧೈರ್ಯವನ್ನು ಪಡೆದುಕೊಂಡರು. ನಂತರದಲ್ಲಿ ಅವರು 1000 ಚದರ ಅಡಿಯ ಅಂಗಡಿಯನ್ನು ಬಾಡಿಗೆಗೆ ಪಡೆದರು ಮತ್ತು ಅದರಲ್ಲಿ ಕಡಲೆಕಾಯಿ ಆಯಿಲ್ ಮಿಲ್ ಬಿಸಿನೆಸ್ಅನ್ನು ಪ್ರಾರಂಭಿಸಿದರು. ಅವರ ತಂದೆಯವರೇ ಬೆಳೆಯುತ್ತಿದ್ದ ಕಡಲೆಕಾಯಿಗಳನ್ನು ಬಳಸಿಕೊಂಡು ಅವರು ಕಡಲೇಕಾಯಿ ಎಣ್ಣೆಯನ್ನು ತಯಾರಿಸಲು ಆರಂಭಿಸಿದರು. ಕೋರ್ಸ್ ನಿಂದ ಪಡೆದ ಜ್ಞಾನದಿಂದ ಅವರು ಈ ಬಿಸಿನೆಸ್ ಗಾಗಿ ಸರ್ಕಾರದ PMFME ಯೋಜನೆಯ ಲಾಭವನ್ನು ಪಡೆಯಲು ನಿರ್ಧರಿಸಿದರು ಮತ್ತು 8 ಲಕ್ಷ ಸಾಲವನ್ನು ಪಡೆಯುವಲ್ಲಿ ಯಶಸ್ವಿಯಾದರು. ಜೊತೆಗೆ ಒಂದು ಯಂತ್ರಕ್ಕೆ 1 ಲಕ್ಷದಷ್ಟು ಸಬ್ಸಿಡಿಯನ್ನು ಸಹ ಪಡೆದುಕೊಂಡರು. ಪ್ರಸ್ತುತ ಅವರು ದಿನಕ್ಕೆ 60 ಲೀಟರ್ ನಷ್ಟು ಕಡಲೆಕಾಯಿ ಮತ್ತು ತೆಂಗಿನ ಎಣ್ಣೆಯನ್ನು ಉತ್ಪಾದಿಸುತ್ತಿದ್ದಾರೆ ಮತ್ತು ಅವುಗಳನ್ನು ಲೀಟರ್ ಗೆ 350 ರೂಪಾಯಿಯಂತೆ ರಿಟೇಲ್ ನಲ್ಲಿ ಮಾರಾಟ ಮಾಡುತ್ತಿದ್ದಾರೆ. 25% ನಷ್ಟು ಲಾಭಾಂಶದೊಂದಿಗೆ 6 ಲಕ್ಷದಷ್ಟು ಆದಾಯವನ್ನು ಗಳಿಸುತ್ತಿರುವ ಅವರು ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ತಮ್ಮ ಬಿಸಿನೆಸ್ ನ ಕನಸನ್ನು ನನಸು ಮಾಡಿಕೊಳ್ಳಲು ಪ್ರತಿ ಹಂತದಲ್ಲೂ ನೆರವಾದ ffreedom appಗೆ ಅವರು ಮನಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಾರೆ. ಭಾರತದಲ್ಲಿ ಇಂತಹ ಲಕ್ಷಾಂತರ ಸಣ್ಣ ಉದ್ಯಮಿಗಳನ್ನು ನಿರ್ಮಿಸುವುದು ffreedom appನ ಉದ್ದೇಶವಾಗಿದೆ, ಬಿಸಿನೆಸ್ ಕನಸನ್ನು ಹೊತ್ತಿರುವ ಎಲ್ಲರಿಗು ಇದು ಒಂದು ಆಶಾಕಿರಣವಾಗಿ ಕಾರ್ಯನಿರ್ವಹಿಸುತ್ತಿದೆ.
ffreedom appಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂಬ ಜ್ಞಾನಾರ್ಜನೆಯ ಹಸಿವಿನಿಂದ ಅಮೃತ ಅವರು ಟರ್ಮ್ ಮತ್ತು ಹೆಲ್ತ್ ಇನ್ಶೂರೆನ್ಸ್ ಸೇರಿದಂತೆ ಆರ್ಥಿಕ ಸಾಕ್ಷರತೆಯ ಬಗೆಗಿನ ಹಲವು ಕೋರ್ಸ್ ಗಳನ್ನು ಸಹ ಅವರು ವೀಕ್ಷಿಸಿದರು ಮತ್ತು ಅದರಿಂದ ಉತ್ತಮ ಜ್ಞಾನವನ್ನು ಪಡೆದುಕೊಂಡರು ಮತ್ತು ತಮ್ಮ ಸ್ನೇಹಿತರಿಗೂ ಸಹ ಇನ್ಶೂರೆನ್ಸ್ ಅನ್ನು ಪಡೆದುಕೊಳ್ಳುವ ಬಗ್ಗೆ ಪ್ರೇರೇಪಿಸಿದರು. ffreedom app ಮೂಲಕ ಹಲವು ಕೌಶಲ್ಯಗಳನ್ನು ಕರಗತ ಮಾಡಿಕೊಂಡಿರುವ ಅವರು ಅದನ್ನು ಪರಿಣಾಮಕಾರಿಯಾಗಿ ತಮ್ಮ ಬಿಸಿನೆಸ್ ನಲ್ಲಿ ಅಳವಡಿಸಿಕೊಂಡು ಇನ್ನೂ ಎತ್ತರಕ್ಕೆ ಸಾಗುತ್ತಿದ್ದಾರೆ. ಸ್ವಾವಲಂಬಿ ಬದುಕಿನ ಕನಸು ಕಾಣುವವರು ffreedom app ಅನ್ನು ತಪ್ಪದೇ ಬಳಸಿಕೊಳ್ಳುವ ಮೂಲಕ ಜ್ಞಾನ ಮತ್ತು ಅವಕಾಶಗಳಿಗೆ ಸುಲಭವಾಗಿ ಪ್ರವೇಶವನ್ನು ಪಡೆಯಬಹುದು ಎಂಬ ಸಲಹೆಯನ್ನು ಸಹ ಅಮೃತ ಅವರು ನೀಡುತ್ತಾರೆ.