Home » Latest Stories » ಯಶಸ್ಸಿನ ಕಥೆಗಳು » ತೈವಾನ್‌ ಸೀಬೆ ಕೃಷಿ: ಕಡಿಮೆ ಖರ್ಚು ವರ್ಷಪೂರ್ತಿ ಆದಾಯ ಪಡೆಯುವ ರೈತ

ತೈವಾನ್‌ ಸೀಬೆ ಕೃಷಿ: ಕಡಿಮೆ ಖರ್ಚು ವರ್ಷಪೂರ್ತಿ ಆದಾಯ ಪಡೆಯುವ ರೈತ

by Poornima P
70 views

ಕೋಲಾರ ಜಿಲ್ಲೆ ಬರದ ನಾಡು ಎಂದರೆ ತಪ್ಪಾಗಲಾರದು. ಆದರೆ ಇಲ್ಲಿನ ರೈತರು ವ್ಯವಸಾಯದಲ್ಲಿ ಮುಂದಿದ್ದಾರೆ. ಬರಪೀಡಿತ ಜಿಲ್ಲೆಯಾಗಿದ್ದರೂ ಇಲ್ಲಿನ ರೈತನೊಬ್ಬ ffreedom app ಮೂಲಕ ತೈವಾನ್‌ ಸೀಬೆ ಕೃಷಿ ಮಾಡಿ ಯಶಸ್ವಿಯಾಗಿ ಲಾಭ ಗಳಿಸುತ್ತಿದ್ದಾರೆ. ಈ ಮಾದರಿ ರೈತರ ಯಶೋಗಾಧೆ ಇಲ್ಲಿದೆ.

ಇವರು ಅಂಜಪ್ಪ ಗೌಡ. ಮೂಲತ: ಕೋಲಾರ ಜಿಲ್ಲೆಯವರು. ಇವರು ಮೊದಲಿಗೆ ರಾಸಾಯನಿಕಗಳನ್ನು ಬಳಸಿ ಕೃಷಿ ಮಾಡುತ್ತಿದ್ದವರು. ಬಳಿಕ ಸಂಪೂರ್ಣವಾಗಿ ನೈಸರ್ಗಿಕ ಗೊಬ್ಬರಗಳನ್ನು ಬಳಸಿ ತೈವಾನ್‌ ಸೀಬೆ ಕೃಷಿಯನ್ನು ಆರಂಭಿಸಿ ಇಂದು ಎಲ್ಲರಿಗೂ ಮಾದರಿಯಾಗಿದ್ದಾರೆ.  

ತೈವಾನ್‌ ಸೀಬೆ ಕೃಷಿ ಕಡಿಮೆ ಖರ್ಚಿನ, ಹೆಚ್ಚು ಆದಾಯ ತಂದುಕೊಡುವ ಬೆಳೆಯಾಗಿದೆ. 

ಅಂಜಪ್ಪ ಗೌಡ ಅವರಿಗೆ ಕಡಿಮೆ ಬಂಡವಾಳದಲ್ಲಿ ವರ್ಷಪೂರ್ತಿ ಆದಾಯ ತಂದುಕೊಡಬಲ್ಲ ತೈವಾನ್‌ ಸೀಬೆಯ ಕೃಷಿಯ ಬಗ್ಗೆ ತಿಳಿದುಕೊಂಡಿದ್ದು ffreedom app ಮೂಲಕ. ಇವರು ಮೊದಲು ಇಂಡಿಯನ್‌ ಮನಿ ಮೂಲಕ ತಮಗೆ ಹಣಕಾಸಿಗೆ ಸಂಬಂಧಿಸಿದ ವಿಷಯಗಳನ್ನು ಮಿಸ್‌ ಕಾಲ್‌ ಕೊಡುವುದರ ಮೂಲಕ ತಿಳಿದುಕೊಳ್ಳುತ್ತಿದ್ದರು. ಇಂಡಿಯನ್‌ ಮನಿಯಿಂದ ffreedom app ಆಗಿ ರೂಪಿಸಲ್ಪಟ್ಟ ಬಳಿಕ  ffreedom app ಡೌನ್‌ಲೋಡ್‌ ಮಾಡಿಕೊಂಡು ಚಂದದಾರಾಗುತ್ತಾರೆ. ಇದರಲ್ಲಿ ಹಣಕಾಸಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು ವೀಕ್ಷಿಸುತ್ತಿದ್ದರು. ಫಿನಾಷಿಶಿಯಲ್‌ಗೆ ಸಂಬಂಧಿಸಿದ ವಿಷಯಗಳನ್ನು ತಿಳಿದುಕೊಂಡ ಬಳಿಕ ಇವರು ಕೃಷಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು ವೀಕ್ಷಿಸಲಾರಂಭಿಸಿದರು. 

ಸುಮಾರು 20 ರಿಂದ 25  ಕೃಷಿಗೆ ಸಂಬಂಧಿಸಿದ ಕೋರ್ಸ್‌ ವಿಡಿಯೋಗಳನ್ನು ವೀಕ್ಷಿಸಿದ ಬಳಿಕ ಇವರಿಗೆ ಕಡಿಮೆ ಬಂಡವಾಳದಲ್ಲಿ ತೈವಾನ್‌ ಸೀಬೆ ಕೃಷಿ ಮಾಡುವ ಆಲೋಚನೆ ಮೂಡಿತು. ತೈವಾನ್ ಸೀಬೆಗೆ ಹೆಚ್ಚಿನ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಈ ಹಣ್ಣಿನಲ್ಲಿ  

ವಿಟಮಿನ್ ‘ಸಿ’, ಅಪಾರವಾದ ಫೈಬರ್‌ ಅಂಶ, ಕ್ಯಾನ್ಸರ್ ಮತ್ತು ಹೃದಯ ಕಾಯಿಲೆಗಳನ್ನು ದೂರವಿಡುವ ಶಕ್ತಿ ಈ ಹಣ್ಣುಗಿದೆ. ಹಾಗಾಗಿ ಇದರ ಬೇಡಿಕೆ ಮತ್ತು ವರ್ಷಪೂರ್ತಿ ಫಲ ನೀಡುವ ಕೃಷಿಯಾಗಿದ್ದು, ಹಾಗಾಗಿ ಈ ಬೆಳೆ ಬೆಳೆಯುವತ್ತ ಆಸಕ್ತಿ ತೋರಿಸುತ್ತಾರೆ. ಕಡಿಮೆ ಪ್ರಮಾಣದ ನೀರಿನಲ್ಲಿ ಇದನ್ನು ಬೆಳೆಯಬಹುದಾಗಿದೆ.

2000 ಸಸಿಗಳನ್ನು ಹಾಕಿದ್ದಾರೆ

ಕೋಲಾರ ಜಿಲ್ಲೆಯ ಅಂಜಪ್ಪ ಗೌಡ ತಮ್ಮ ಎರಡು ಎಕರೆ ಜಮೀನಿನಲ್ಲಿ ಸುಮಾರು 2000  ಸಸಿಗಳನ್ನು  ಹಾಕಿದ್ದಾರೆ. ಈ ಸಸಿಗಳನ್ನು ಅವರು ಛತ್ತೀಸ್‌ಗಡ್‌ನಿಂದ ಒಂದು ಸಸಿಗೆ 100ರೂ ನೀಡಿ ಖರೀದಿಸಿದ್ದಾರೆ. ಈ ಸಸಿಗಳೆಗೆ ಕೇವಲ ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿಗಳನ್ನು ಬಳಸಿ ಸಂಪೂರ್ಣವಾಗಿ ಸಾವಯವ ಕೃಷಿಯನ್ನು ಮಾಡಿಕೊಂಡಿದ್ದಾರೆ. ಇವರು ಐದು ಲಕ್ಷ ಬಂಡವಾಳ ಹೂಡಿದ್ದು, ಈಗಾಗಲೇ ಹಾಕಿರುವ ಬಂಡವಾಳ ಸಹ ವಾಪಸ್ ಪಡೆದಿದ್ದಾರೆ. ಇನ್ನು ಉತ್ತಮ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.