ಕೋಳಿ ಮರಿಗಳನ್ನು ತಂದು ಅವುಗಳನ್ನು ದೊಡ್ಡದಾಗಿಸಿ ಮಾರಾಟ ಮಾಡುತ್ತಿದ್ದ ಈ ಯುವಕನಿಗೆ ಕೋಳಿ ಮೊಟ್ಟೆಗಳಿಂದಲೂ ಲಾಭ ಪಡೆಯಬಹುದು ಎಂಬ ಐಡಿಯಾ ಇರಲಿಲ್ಲ. ಈ ಐಡಿಯಾ ಹೊಳೆದಿದ್ದೇ ffreedom appನ ಮೂಲಕ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬಸವರಾಜ್ ರೇಡಿಯಂ ಸ್ಟಿಕ್ಕರ್ ತಯಾರಿಕಾ ಕಾರ್ಖಾನೆ ಮತ್ತು ವಾಲ್ ಪೇಂಟಿಂಗ್ ನಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ತಮ್ಮದೇ ಆದ ಸ್ವಂತ ಅಂಗಡಿಯನ್ನು ತೆರೆಯುತ್ತಾರೆ. ಬಾಲ್ಯದಿಂದಲೂ ಕೃಷಿಯಲ್ಲಿ ಆಸಕ್ತಿ ಇದ್ದ ಇವರಿಗೆ ಕೋಳಿ ಮರಿಗಳ ಸಾಕಣೆ ಆರಂಭಿಸುತ್ತಾರೆ. ಆದರೆ ಇವರಿಗೆ ಸರಿಯಾದ ಮಾರ್ಗದರ್ಶನ ಇರಲಿಲ್ಲ. ಕೋಳಿ ಸಾಕಣೆ, ಕುರಿ, ಮೇಕೆ ಸಾಕಣೆಯ ಕುರಿತು ಸಂಪೂರ್ಣವಾಗಿ ತಿಳಿದುಕೊಂಡಿದ್ದು ffreedom appನಿಂದ.
ಇಂದು ಲಕ್ಷಗಳಲ್ಲಿ ಆದಾಯ
ಇಂದು ಇವರು ಸಮಗ್ರ ಕೃಷಿ ವ್ಯವಸ್ಥೆಯ ಭಾಗವಾಗಿ ಕುರಿ, ಮೇಕೆ ಮತ್ತು ಕೋಳಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡು ಇಂದು ಲಕ್ಷದಲ್ಲಿ ಆದಾಯ ಪಡೆಯುತ್ತಿದ್ದಾರೆ. ಬಸವರಾಜ್ ಅವರು ಯುಟ್ಯೂಬ್ ನಲ್ಲಿ ffreedom app ಆ್ಯಡ್ ನೋಡಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಇದರಲ್ಲಿ ಕೋಳಿ ಸಾಕಣೆ, ಕುರಿ ಸಾಕಣೆ ಮತ್ತು ಮೇಕೆ ಸಾಕಣೆಯ ಬಗ್ಗೆ ತಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಆ ಮಾಹಿತಿಯ ಪ್ರಕಾರವೇ ಕೃಷಿ ಪದ್ಧತಿಯನ್ನು ಅನುಷ್ಠಾನಕ್ಕೆ ತಂದ ಬಸವರಾಜ್ ಇಂದು 6-7 ತಿಂಗಳಿನಲ್ಲಿ 3 ಲಕ್ಷಗಳವರೆಗೆ ಆದಾಯ ಗಳಿಸುತ್ತಿದ್ದಾರೆ. ಬಸವರಾಜ್ ಇಂದು ಕುರಿ, ಮೇಕೆ, ಕೋಳಿ ಸಾಕಣಿಕೆಯಿಂದ ಉತ್ತಮ ಆದಾಯದ ಜೊತೆಗೆ ಬಿಸಿನೆಸ್ ಯಾವ ರೀತಿ ಮುನ್ನಡೆಸಬೇಕು ಎಂಬುವುದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆ.
ffreedom appನಿಂದ ಕಲಿತುಕೊಂಡದ್ದು ಏನು
ffreedom app ನಲ್ಲಿ ಅವರು ಅವರು ಕೋಳಿ ಮತ್ತು ಕುರಿ ಮತ್ತು ಮೇಕೆ ಸಾಕಣೆಯ ಬಗ್ಗೆ ಜ್ಞಾನ ಮತ್ತು ಸೂಕ್ತ ಪ್ಲಾನ್ ಪಡೆದರು. ಕೋರ್ಸ್‌ನಿಂದ, ಅವರು ಬಂಡವಾಳ ಮತ್ತು ಹಣಕಾಸು, ಸರ್ಕಾರಿ ಬೆಂಬಲ, ನೋಂದಣಿ, ಮೂಲಸೌಕರ್ಯ, ಆಹಾರ ಸಂಗ್ರಹಣೆ, ಕೋಳಿ ಸಾಕಣೆ ಮತ್ತು ನಿರ್ವಹಣೆ, ವ್ಯಾಕ್ಸಿನೇಷನ್ ಮತ್ತು ರೋಗಗಳು, ಅಪಾಯ ನಿರ್ವಹಣೆ / ಸವಾಲುಗಳು, ಕಾರ್ಮಿಕ ಅವಶ್ಯಕತೆಗಳು, ಮಾರ್ಕೆಟಿಂಗ್ ಮತ್ತು ವಿತರಣೆ ಬಗ್ಗೆ ಕಲಿತುಕೊಂಡರು. ಈ ಕೋರ್ಸ್‌ಗಳಿಂದ ಪಡೆದ ಸಲಹೆಗಳನ್ನು ಬಳಸಿಕೊಂಡು ತಮ್ಮ ಕೃಷಿಯನ್ನು ಸುಧಾರಿಸಿದರು. ಪ್ರಸ್ತುತ ಅವರು 30 ಮೇಕೆ, 6 ರಿಂದ 7 ಕುರಿ, 35 ಕೋಳಿ ಮತ್ತು 4 ಸ್ವರ್ಣಧಾರ ಕೋಳಿಗಳನ್ನು ಸಾಕುತ್ತಿದ್ದಾರೆ. ಅವರು ಈ ಕೋರ್ಸ್‌ನ ಕಲಿಕೆಯಿಂದ ತನ್ನ 1 ಎಕರೆ ಭೂಮಿಯಲ್ಲಿ ಅವರು ತನ್ನ ಕೋಳಿ, ಕುರಿಗಳಿಗೆ ಶೆಡ್ ಅನ್ನು ರಚಿಸಿದ್ದಾರೆ.
ಇಂದು ಸಾಮಾನ್ಯ ಯುವಕನೂ ಕೂಡ ಕೃಷಿಯಲ್ಲಿ ತೊಡಗಿಸಿಕೊಂಡರೆ ಲಕ್ಷ ದುಡಿಯಬಹುದು ಎಂಬುವುದನ್ನು ಸಾಧಿಸಿ ತೋರಿಸಿದ್ದಾರೆ ಬಸವರಾಜ್ ಅವರು. ಇವರು ಸಮಗ್ರ ಕೃಷಿಯಲ್ಲಿ ತೊಡಗಿಕೊಂಡು ಇಂದು ಲಕ್ಷಗಳಲ್ಲಿ ಎಣಿಸಿ ಎಲ್ಲಾ ಯುವಕರಿಗೂ ಸ್ಪೂರ್ತಿಯಾಗಿದ್ದಾರೆ. ಯಾವುದೇ ಬಿಸಿನೆಸ್ ಅನ್ನು ಜಾರಿಗೆ ತರುವ ಮೊದಲು ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ffreedom appಸಹಾಯ ಮಾಡುತ್ತಿದ್ದು, ಈ ವೇದಿಕೆಯನ್ನು ಬಳಸಕೊಳ್ಳಬೇಕು ಎನ್ನುತ್ತಾರೆ ವಿನೋದ್.