Home » Latest Stories » ಯಶಸ್ಸಿನ ಕಥೆಗಳು » ಲಾಭದ ಸುಗಂಧ ಬೀರಿದ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್: ಮಾರ್ಗದರ್ಶಿಯಾದ ffreedom app 

ಲಾಭದ ಸುಗಂಧ ಬೀರಿದ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್: ಮಾರ್ಗದರ್ಶಿಯಾದ ffreedom app 

by Punith B

ಮನೆಯಿಂದಲೇ ಏನಾದರು ಸಾಧನೆ ಮಾಡಬೇಕು ಎಂದು ಬಯಸುವ ಎಲ್ಲ ಗೃಹಿಣಿಯರಿಗೆ ಮಾಳವಿಕಾ ಅವರು ಸ್ಫೂರ್ತಿಯಾಗಿ ಕಾಣಿಸುತ್ತಾರೆ. ಮಾಳವಿಕಾ ಅವರು ಮೂಲತಃ ಮಂಗಳೂರಿನವರು ಮತ್ತು ಅವರು ಕಳೆದ ಎರಡು ವರ್ಷದಿಂದ ಕುಟುಂಬ ಸಮೇತವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 

ಮಾಳವಿಕಾ ಅವರು B.Ed ವಿದ್ಯಾಭ್ಯಾಸವನ್ನು ಮುಗಿಸಿದ್ದರೂ ಸಹ ಕಾರಣಾಂತರಗಳಿಂದ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ಈ ನಡುವೆ ಮದುವೆಯಾದ ನಂತರದಲ್ಲಿ ಅವರು ಗೃಹಿಣಿಯಾಗಿ ತಮ್ಮ ಸಂಸಾರವನ್ನು ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಆದಾಗ್ಯೂ ಅವರು ಬದುಕಿನಲ್ಲಿ ಏನಾದರು ಸಾಧಿಸಬೇಕು ಎಂಬ ಕನಸನ್ನು ಹೊಂದಿದ್ದರು, ಈ ನಿಟ್ಟಿನಲ್ಲಿ ಮನೆಯಿಂದಲೇ ಯಾವುದಾದರೂ ಬಿಸಿನೆಸ್ ಅನ್ನು ಆರಂಭಿಸಬೇಕು ಮತ್ತು ಅದರ ಮೂಲಕ ಉತ್ತಮ ಆದಾಯವನ್ನು ಗಳಿಸಬೇಕು ಎಂಬ ಬಯಕೆಯನ್ನು ಕೂಡ ಹೊಂದಿದ್ದರು. 

ಇದೇ ಸಂದರ್ಭದಲ್ಲಿ ಮಾಳವಿಕಾ ಅವರು ತಮ್ಮ ಮಗನ ಮೂಲಕ ffreedom app ಬಗ್ಗೆ ತಿಳಿದುಕೊಂಡರು. ಇದು ಅವರ ಬದುಕಿಗೆ ಹೊಸ ತಿರುವನ್ನು ನೀಡಿತು.  ಮೊದಲಿನಿಂದಲೂ ಸಹ ಅವರು ಕ್ಯಾಂಡಲ್ ಮೇಕಿಂಗ್ ಬಗ್ಗೆ ಆಸಕ್ತಿಯನ್ನು ಹೊಂದಿದ್ದರು. ಹೀಗಾಗಿ ffreedom appನಲ್ಲಿ, ಅವರು ಕ್ಯಾಂಡಲ್ ಮೇಕಿಂಗ್ ಕೋರ್ಸ್ ಅನ್ನು ವೀಕ್ಷಿಸಿದರು. ನಂತರದಲ್ಲಿ ಅವರು ffreedom appನ ಯಶಸ್ವಿ ಮಾರ್ಗದರ್ಶಕ ಮತ್ತು ಉದ್ಯಮಿ ಆಗಿರುವ ಶ್ರೀ ವಿದ್ಯಾ ಕಾಮತ್ ಅವರನ್ನು ಭೇಟಿಯಾಗುವ ಮತ್ತು ಅವರಿಂದ ವೈಯಕ್ತಿಕವಾಗಿ ತರಬೇತಿಯನ್ನು ಪಡೆಯುವ ಅವಕಾಶವನ್ನು ಸಹ ಅವರು ಪಡೆದುಕೊಂಡರು.  

ತರಬೇತಿಯನ್ನು ಪಡೆದ ನಂತರ ಆರಂಭದಲ್ಲಿ, ಮಾಳವಿಕಾ ಅವರು ಕೆಲವು ಕ್ಯಾಂಡಲ್ ಗಳನ್ನು ತಯಾರಿಸಿದರು, ಮತ್ತು ಅದನ್ನು ತಮ್ಮ ನೆರೆಹೊರೆಯವರಿಗೆ ಉಡುಗೊರೆಯಾಗಿ ನೀಡಿದರು. ಕ್ಯಾಂಡಲ್ ಗಳ ಬಗ್ಗೆ ಎಲ್ಲರಿಂದಲೂ ಸಹ ಸಕಾರಾತ್ಮಕವಾದ ಪ್ರತಿಕ್ರಿಯೆ ಮೂಡಿತು ಮತ್ತು ಬೇಡಿಕೆಯೂ ಸಹ ಹೆಚ್ಚಿತು. ಇದು ಮಾಳವಿಕಾ ಅವರಿಗೆ ತಮ್ಮದೇ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸುವ ವಿಶ್ವಾಸವನ್ನು ನೀಡಿತು. ಪ್ರಸ್ತುತ ಅವರು “ಹೆವನ್ ಸೆಂಟ್ ಕ್ಯಾಂಡಲ್ಸ್” ಎಂಬ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ವಿದೇಶಗಳಿಗೂ ಸಹ ತಮ್ಮ ಕ್ಯಾಂಡಲ್ ಗಳನ್ನು ರಫ್ತು ಮಾಡುವ ಕನಸನ್ನು ಅವರು ಹೊಂದಿದ್ದಾರೆ.

ಚಿಕ್ಕ ಹಳ್ಳಿಯಿಂದ ಬಂದವರಾಗಿದ್ದರೂ, ಜೊತೆಗೆ ಬಿಸಿನೆಸ್ ಬಗ್ಗೆ ಯಾವುದೇ ಅನುಭವವಿಲ್ಲದಿದ್ದರೂ ಸಹ ಮಾಳವಿಕಾ ಅವರು ಇಂದು ffreedom appನ ಸಹಾಯದಿಂದ ಯಶಸ್ವಿ ಬಿಸಿನೆಸ್ ಅನ್ನು ನಿರ್ಮಿಸಿದ್ದಾರೆ. ಅವರ ಕ್ಯಾಂಡಲ್ ಗಳು ಎಲ್ಲೆಡೆ ಜನಪ್ರಿಯವಾಗುತ್ತಿವೆ ಮತ್ತು ಅದು ಉತ್ತಮವಾದ ಗ್ರಾಹಕರ ನೆಲೆಯನ್ನೂ ಸಹ ನಿರ್ಮಿಸುತ್ತಿದೆ. ಮುಂದಿನ ಹಂತವಾಗಿ ಅವರು ತಮ್ಮ ಬಿಸಿನೆಸ್ ಅನ್ನು ಇನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಬೇಕು ಮತ್ತು ತಮ್ಮ ಕ್ಯಾಂಡಲ್ ಗಳನ್ನು ವಿದೇಶಗಳಿಗೆ ರಫ್ತು ಮಾಡಬೇಕು ಎಂಬ ಕನಸನ್ನು ಹೊಂದಿದ್ದಾರೆ. 

ಜೀವನದಲ್ಲಿ ಎಲ್ಲೇ ಇದ್ದರೂ ಸಹ ಕಲಿಯಲು ಮತ್ತು ಬೆಳೆಯಲು ಯಾವಾಗಲೂ ಅವಕಾಶಗಳಿವೆ ಎಂಬುದನ್ನು ಮಾಳವಿಕಾ ಅವರ ಈ ಯಶಸ್ಸಿನ ಪ್ರಯಾಣವು ನಮಗೆ ತೋರಿಸುತ್ತದೆ. ffreedom appನಲ್ಲಿ ಶ್ರೀವಿದ್ಯಾ ಕಾಮತ್ ಅವರಂತಹ ಯಶಸ್ವಿ ಮಾರ್ಗದರ್ಶಕರಿಂದ ಕಲಿಯುವ ಮೂಲಕ ಮಾಳವಿಕಾ ಅವರು  ಕ್ಯಾಂಡಲ್ ಬಗ್ಗೆ ತಮಗಿದ್ದ ಪ್ಯಾಷನ್ ಅನ್ನು ಲಾಭದಾಯಕ ಬಿಸಿನೆಸ್ ಆಗಿ  ಪರಿವರ್ತಿಸಿದ್ದಾರೆ. 

‘ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ, ಮನಸ್ಸು ಮಾಡಿದರೆ ಆಕೆ ಏನು ಬೇಕಾದರೂ ಸಹ ಸಾಧಿಸಬಲ್ಲಳು’ ಎಂದು ಮಾಳವಿಕಾ ಅವರು ಹೇಳುತ್ತಾರೆ. ಕಠಿಣ ಪರಿಶ್ರಮ, ದೃಢಸಂಕಲ್ಪ ಮತ್ತು ಕಲಿಯುವ ಇಚ್ಛೆಯಿದ್ದರೆ ಯಾರು ಬೇಕಾದರೂ ಸಹ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬಹುದು ಎಂಬುದಕ್ಕೆ ಅವರ ಯಶಸ್ಸು ಸಾಕ್ಷಿಯಾಗಿದೆ. ಮಾಳವಿಕಾ ಅವರು ffreedom appನ ಕೋರ್ಸ್ ಗಳನ್ನು ವೀಕ್ಷಿಸುವ ಮೂಲಕ ಅದನ್ನು ಸಮರ್ಥವಾಗಿ ಬಳಸಿಕೊಂಡು ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಬಿಸಿನೆಸ್ ಆರಂಭಿಸುವ ಮೂಲಕ ತಾವೂ ಸಹ ಯಶಸ್ವಿ ಉದ್ಯಮಿಯಾಗಬೇಕು ಮತ್ತು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬ ಕನಸು ಕಂಡಿರುವ ಲಕ್ಷಾಂತರ ಮಂದಿಗೆ ಅಗತ್ಯ ಜ್ಞಾನ, ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸುವುದು ffreedom appನ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅದು ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ. ಈ ಮೂಲಕ ಲಕ್ಷಾಂತರ ಭಾರತೀಯರ ಬದುಕನ್ನು ಸಕಾರಾತ್ಮಕ ರೀತಿಯಲ್ಲಿ ಪರಿವರ್ತಿಸಬೇಕು ಎಂಬ ಸಂಕಲ್ಪವನ್ನು ತೊಟ್ಟಿದೆ. 

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.