Home » Latest Stories » ವೈಯಕ್ತಿಕ ಹಣಕಾಸು » ಅತ್ಯುತ್ತಮ ಕಾರ್ ಲೋನ್ ಆಯ್ಕೆ ಮಾಡಿ ನಿಮ್ಮ ಹಣ ಉಳಿಸಿ 

ಅತ್ಯುತ್ತಮ ಕಾರ್ ಲೋನ್ ಆಯ್ಕೆ ಮಾಡಿ ನಿಮ್ಮ ಹಣ ಉಳಿಸಿ 

by Punith B

ನೀವು ನಿಮ್ಮ ಹೊಸ ಕಾರನ್ನು ಖರೀದಿಸುವ ಬಗ್ಗೆ ಆಲೋಚಿಸುತ್ತಿದ್ದರೆ, ನಿಮ್ಮ ಖರೀದಿಗೆ ಹಣಕಾಸು ಒದಗಿಸಲು ನೀವು ಸಾಲವನ್ನು ತೆಗೆದುಕೊಳ್ಳುವ ಕುರಿತು ಯೋಚಿಸುತ್ತಿರಬಹುದು. ನಿಮ್ಮ ಕನಸಿನ ಕಾರಿಗೆ ಹಣಕಾಸು ಒದಗಿಸಲು ಕಾರು ಸಾಲಗಳು ಅನುಕೂಲಕರ ಮಾರ್ಗವಾಗಿದ್ದರೂ, ಇದರ ಕುರಿತ ಎಲ್ಲ ನಿಯಮಗಳು ಮತ್ತು ಷರತ್ತುಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಈ ಲೇಖನದಲ್ಲಿ, ಕಾರ್ ಲೋನ್‌ಗಳು ಹೇಗೆ ಕೆಲಸ ಮಾಡುತ್ತವೆ, ಇವುಗಳಲ್ಲಿ ಲಭ್ಯವಿರುವ ವಿವಿಧ ಪ್ರಕಾರಗಳು ಯಾವುದು ಮತ್ತು ಇದನ್ನು ತೆಗೆದುಕೊಳ್ಳುವುದರಿಂದ ಆಗುವ ಸಾಧಕ-ಬಾಧಕಗಳು ಸೇರಿದಂತೆ ಕಾರ್ ಲೋನ್‌ಗಳ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ತಿಳಿದುಕೊಳ್ಳುತ್ತೀರಿ. 

ಕಾರ್ ಲೋನ್ ಎಂದರೇನು?

ಕಾರ್ ಲೋನ್ ಎನ್ನುವುದು ಕಾರ್ ಖರೀದಿಗೆ ಹಣಕಾಸು ಒದಗಿಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಒಂದು ರೀತಿಯ ಸಾಲವಾಗಿದೆ. ಸಾಲದಾತರಿಂದ ನಿರ್ದಿಷ್ಟ ಪ್ರಮಾಣದ ಹಣವನ್ನು ಸಾಲ ಪಡೆಯಲು ಇದು ನಿಮ್ಮನ್ನು ಅನುಮತಿಸುತ್ತದೆ, ನಂತರ ಅದನ್ನು ನೀವು ಕಾರ್ ಖರೀದಿಗೆ ಪಾವತಿಸಲು ಬಳಸಬಹುದು. ಸಾಲವು ಸಂಪೂರ್ಣವಾಗಿ ತೀರುವವರೆಗೆ ಸಾಲದಾತನು ನಿಮಗೆ ಒಂದಿಷ್ಟು ನಿರ್ಧಿಷ್ಟ ಹಣವನ್ನು ಮಾಸಿಕವಾಗಿ ಪಾವತಿ ಮಾಡಲು ಅನುಮತಿಸಿರುತ್ತಾನೆ. 

ಕಾರು ಲೋನ್ ಹೇಗೆ ಕೆಲಸ ಮಾಡುತ್ತವೆ?

ನೀವು ಕಾರ್ ಖರೀದಿಸಿದಾಗ ಸಾಮಾನ್ಯವಾಗಿ ಕಾರಿನ ಮೇಲೆ ಡೌನ್ ಪೇಮೆಂಟ್ ಮಾಡಬೇಕಾಗುತ್ತದೆ. ಡೌನ್ ಪೇಮೆಂಟ್ ಒಟ್ಟು ಖರೀದಿ ಬೆಲೆಯ ಶೇಕಡಾವಾರು ಪ್ರಮಾಣವಾಗಿರುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ಖರೀದಿಯ ಸಮಯದಲ್ಲಿ ಮುಂಗಡವಾಗಿ ಪಾವತಿಸಬೇಕಾಗುತ್ತದೆ. ಮತ್ತು ಖರೀದಿ ಬೆಲೆಯ ಉಳಿದ ಮೊತ್ತವನ್ನು ಲೋನ್ ಮೂಲಕ ನೀಡಲಾಗುತ್ತದೆ.

ಒಮ್ಮೆ ನೀವು ಸಾಲದ ನಿಯಮಗಳನ್ನು ಒಪ್ಪಿಕೊಂಡರೆ, ಸಾಲವು ಸಂಪೂರ್ಣವಾಗಿ ತೀರುವವರೆಗೆ ನೀವು ಸಾಲದಾತನಿಗೆ ಮಾಸಿಕವಾಗಿ ಕಂತುಗಳಲ್ಲಿ ಪಾವತಿಗಳನ್ನು ಮಾಡಬೇಕಾಗುತ್ತದೆ. ನಿಮ್ಮ ಮಾಸಿಕ ಪಾವತಿಯ ಮೊತ್ತವು ಬಡ್ಡಿ ದರ, ಸಾಲದ ಅವಧಿಯ ಉದ್ದ ಮತ್ತು ಎರವಲು ಪಡೆದ ಒಟ್ಟು ಮೊತ್ತವನ್ನು ಒಳಗೊಂಡಂತೆ ಸಾಲದ ನಿಯಮಗಳನ್ನು ಅವಲಂಬಿಸಿರುತ್ತದೆ.

ಕಾರ್ ಲೋನ್ ವಿಧಗಳು

ಮಾರುಕಟ್ಟೆಯಲ್ಲಿ ಹಲವಾರು ವಿಧದ ಕಾರ್ ಲೋನ್‌ಗಳು ಲಭ್ಯವಿದೆ, ಪ್ರತಿಯೊಂದೂ ತನ್ನದೇ ಆದ ನಿಯಮಗಳು ಮತ್ತು ಷರತ್ತುಗಳನ್ನು ಹೊಂದಿದೆ. ಕಾರ್ ಲೋನ್ ಗಳ ಸಾಮಾನ್ಯ ವಿಧಗಳು ಇಲ್ಲಿವೆ:

ಡೈರೆಕ್ಟ್ ಲೋನ್: ಕಾರ್ ಡೀಲರ್‌ಶಿಪ್‌ಗಳಿಂದ ಡೈರೆಕ್ಟ್ ಲೋನ್ ಗಳನ್ನು ನೀಡಲಾಗುತ್ತದೆ ಮತ್ತು ಸಾಮಾನ್ಯವಾಗಿ ಇದಕ್ಕೆ ಕಾರೇ ಮೇಲಾಧಾರವಾಗಿರುತ್ತದೆ. ಇದರರ್ಥ ನೀವು ಸಾಲವನ್ನು ಕಟ್ಟಲು ವಿಫಲವಾದರೆ, ಸಾಲದಾತನು ಕಾರನ್ನು ವಾಪಸ್ಸು ತೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತಾನೆ. 

ಬ್ಯಾಂಕ್ ಲೋನ್ ಗಳು: ಬ್ಯಾಂಕ್ ಲೋನ್ ಗಳನ್ನು ಬ್ಯಾಂಕ್‌ಗಳು ಮತ್ತು ಕ್ರೆಡಿಟ್ ಯೂನಿಯನ್‌ಗಳು ನೀಡುತ್ತವೆ ಮತ್ತು ಇವುಗಳಲ್ಲಿ ಸುರಕ್ಷಿತ ಅಥವಾ ಅಸುರಕ್ಷಿತ ಲೋನ್ ಎಂಬ ಎರಡು ವಿಧಗಳಿವೆ. ಸುರಕ್ಷಿತ ಲೋನ್ ಗಳು ಕಾರು ಅಥವಾ ಮನೆಯಂತಹ ಮೇಲಾಧಾರದಿಂದ ಬೆಂಬಲಿತವಾಗಿದೆ, ಆದರೆ ಅಸುರಕ್ಷಿತ ಲೋನ್ ಈ ತರಹದ ಮೇಲಾಧಾರವನ್ನು ಹೊಂದಿರುವುದಿಲ್ಲ. 

ಲೀಸ್/ಗುತ್ತಿಗೆಗಳು: ಕಾರ್ ಲೀಸ್ ಎನ್ನುವುದು ಒಂದು ರೀತಿಯ ಹಣಕಾಸು ಆಯ್ಕೆಯಾಗಿದ್ದು, ಇದರಲ್ಲಿ ನೀವು ಕಾರನ್ನು ನಿರ್ದಿಷ್ಟ ಸಮಯದವರೆಗೆ ಸಾಮಾನ್ಯವಾಗಿ ಮೂರು ವರ್ಷಗಳವರೆಗೆ ಬಳಸಲು ನಿರ್ಧಿಷ್ಟ ಪಾವತಿಗಳನ್ನು ಮಾಡಿರುತ್ತೀರಿ. ಗುತ್ತಿಗೆ ಅವಧಿಯ ಕೊನೆಯಲ್ಲಿ, ನೀವು ಕಾರನ್ನು ಖರೀದಿಸಲು ಅಥವಾ ಗುತ್ತಿಗೆ ಕಂಪನಿಗೆ ಹಿಂತಿರುಗಿಸುವ ಕುರಿತಾಗಿ ಆಯ್ಕೆ ಮಾಡಬಹುದು.

ಕಾರು ಲೋನ್ ಗಳ ಒಳಿತು ಮತ್ತು ಕೆಡುಕುಗಳು

ಕಾರು ಲೋನ್ ತೆಗೆದುಕೊಳ್ಳುವುದು ಅದರದೇ ಆದ ಸಾಧಕ-ಬಾಧಕಗಳನ್ನು ಹೊಂದಿದೆ. ಕಾರು ಸಾಲಗಳ ಕೆಲವು ಪ್ರಯೋಜನಗಳು ಹೀಗಿವೆ:

ಅನುಕೂಲತೆ: ಸಂಪೂರ್ಣ ಮೊತ್ತವನ್ನು ಮುಂಗಡವಾಗಿ ಪಾವತಿಸದೆಯೇ ಕಾರಿನ ಖರೀದಿಗೆ ಹಣಕಾಸು ಒದಗಿಸಲು ಕಾರ್ ಲೋನ್‌ಗಳು ನಿಮಗೆ ಅವಕಾಶ ನೀಡುತ್ತದೆ. ನೀವು ಒಂದೇ ಬಾರಿಗೆ ಸಂಪೂರ್ಣ ನಗದನ್ನು ನೀಡಿ ಪಾವತಿಸಲು ಸಾಧ್ಯವಾಗದ ಕಾರನ್ನು ಖರೀದಿಸಲು ಇದು ಸುಲಭವಾಗುತ್ತದೆ.

ಕ್ರೆಡಿಟ್ ಬಿಲ್ಡಿಂಗ್: ನಿಮ್ಮ ಕಾರ್ ಲೋನ್ ಪಾವತಿಗಳನ್ನು ನೀವು ಸಮಯಕ್ಕೆ ಸರಿಯಾಗಿ ಮಾಡಿದರೆ, ಅದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನಿರ್ಮಿಸಲು ಅಥವಾ ಸುಧಾರಿಸಲು ಸಹಾಯ ಮಾಡುತ್ತದೆ. ನೀವು ಭವಿಷ್ಯದಲ್ಲಿ ಅಡಮಾನ ಅಥವಾ ಇತರ ದೊಡ್ಡ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ ಈ ಕ್ರೆಡಿಟ್ ಸ್ಕೋರ್ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ಕಸ್ಟಮೈಸ್ ಆಯ್ಕೆಗಳು: ನಿಮ್ಮ ಬಜೆಟ್ ಮತ್ತು ಅಗತ್ಯಗಳಿಗೆ ಸರಿಹೊಂದುವಂತೆ ಸಾಲದ ನಿಯಮಗಳನ್ನು ಕಸ್ಟಮೈಸ್ ಮಾಡಲು ಅನೇಕ ಕಾರು ಲೋನ್ ಗಳು ನಿಮಗೆ ಅವಕಾಶ ಮಾಡಿಕೊಡುತ್ತವೆ. ಉದಾಹರಣೆಗೆ, ನೀವು ಸಾಲದ ಅವಧಿಯ ಉದ್ದ, ಡೌನ್ ಪೇಮೆಂಟ್ ಮೊತ್ತ ಮತ್ತು ಮಾಸಿಕ ಪಾವತಿಯ ಮೊತ್ತವನ್ನು ನಿಮಗೆ ಅನುಕೂಲವಾಗುವ ರೀತಿ ಕಸ್ಟಮೈಸ್ ಆಗಿ ಆಯ್ಕೆ ಮಾಡಬಹುದು.

ಮತ್ತೊಂದೆಡೆ, ಕಾರು ಸಾಲವನ್ನು ತೆಗೆದುಕೊಳ್ಳುವಲ್ಲಿ ಕೆಲವು ಸಂಭಾವ್ಯ ನ್ಯೂನತೆಗಳಿವೆ, ಅವುಗಳೆಂದರೆ:

ಬಡ್ಡಿ: ಹೆಚ್ಚಿನ ಕಾರು ಲೋನ್ ಗಳು ಬಡ್ಡಿಯೊಂದಿಗೆ ಬರುತ್ತವೆ, ಇದು ಎರವಲು ಪಡೆದ ಒಟ್ಟು ಮೊತ್ತಕ್ಕೆ ಹೆಚ್ಚುವರಿ ವೆಚ್ಚವನ್ನು ಸೇರಿಸುತ್ತದೆ. ಹೆಚ್ಚಿನ ಬಡ್ಡಿದರದಿಂದ ನೀವು ದೀರ್ಘಾವಧಿಯವೆರೆಗೆ ಲೋನ್ ಪಾವತಿಸಬೇಕಾಗುತ್ತದೆ. 

ವಶಪಡಿಸಿಕೊಳ್ಳುವ ಅಪಾಯ: ನೀವು ಡೀಲರ್‌ಶಿಪ್‌ನಿಂದ ನೇರ ಸಾಲವನ್ನು ತೆಗೆದುಕೊಂಡರೆ ಮತ್ತು ಸಾಲದಲ್ಲಿ ಡೀಫಾಲ್ಟ್ ಆಗಿದ್ದರೆ, ಸಾಲದಾತನು ನಿಮ್ಮ ಕಾರನ್ನು ವಶಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಉದ್ಯೋಗ ನಷ್ಟ ಅಥವಾ ವೈದ್ಯಕೀಯ ತುರ್ತುಸ್ಥಿತಿಯಂತಹ ಅನಿರೀಕ್ಷಿತ ಸಂದರ್ಭಗಳಿಂದಾಗಿ ನೀವು ಪಾವತಿಗಳನ್ನು ಮಾಡಲು ಸಾಧ್ಯವಾಗದಿದ್ದರೆ ಲೋನ್ ವಿಷಯದಲ್ಲಿ ಇದು ಅಪಾಯವನ್ನು ತರಬಹುದು. 

ಸವಕಳಿ/ಡೆಪ್ರಿಸಿಯೇಷನ್: ಖರೀದಿಸಿದ ಕಾಲಾನಂತರದಲ್ಲಿ ಕಾರುಗಳ ಮೌಲ್ಯವು ಕುಸಿಯುತ್ತವೆ, ಅಂದರೆ ನೀವು ನಿಮ್ಮ ಕಾರನ್ನು ಮಾರಾಟ ಮಾಡುವ ಸಮಯ ಬಂದಾಗ ನೀವು ಖರೀದಿಸಿದ್ದಕ್ಕಿಂತ ಅಥವಾ ಪಾವತಿಸಿದ್ದಕ್ಕಿಂತ ಕಡಿಮೆ ಮೌಲ್ಯದಲ್ಲಿ ಅದನ್ನು ಮಾರಬೇಕಾಗುತ್ತದೆ. 

ಸೀಮಿತ ಫ್ಲೆಕ್ಸಿಬಿಲಿಟಿ: ಒಮ್ಮೆ ನೀವು ಕಾರು ಸಾಲವನ್ನು ತೆಗೆದುಕೊಂಡರೆ, ಸಾಲವನ್ನು ಸಂಪೂರ್ಣ ಪಾವತಿಸುವವರೆಗೆ ಮಾಸಿಕ ಪಾವತಿಗಳನ್ನು ಮಾಡಲು ನೀವು ಬದ್ಧರಾಗಿರುತ್ತೀರಿ. ಹೀಗಾಗಿ ಇದು ನಿಮ್ಮ ಹಣಕಾಸಿನ ಫ್ಲೆಕ್ಸಿಬಿಲಿಟಿಯನ್ನು ಮಿತಿಗೊಳಿಸುತ್ತದೆ. 

ಸರಿಯಾದ ಕಾರ್ ಲೋನ್ ಅನ್ನು ಹೇಗೆ ಆರಿಸುವುದು

ನೀವು ಕಾರ್ ಲೋನ್ ತೆಗೆದುಕೊಳ್ಳುವುದನ್ನು ಪರಿಗಣಿಸುತ್ತಿದ್ದರೆ, ನೀವು ಸಾಧ್ಯವಾದಷ್ಟು ಉತ್ತಮವಾದ ಡೀಲ್ ಅನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನೀವು ಮಾಡಬಹುದಾದ ಕೆಲವು ವಿಷಯಗಳಿವೆ. ಸರಿಯಾದ ಕಾರ್ ಲೋನ್ ಆಯ್ಕೆ ಮಾಡಲು ಕೆಲವು ಸಲಹೆಗಳು ಇಲ್ಲಿವೆ:

ಬಹಳಷ್ಟು ಕಡೆಯಿಂದ ತಿಳಿದುಕೊಳ್ಳಿ: ನೀವು ಸ್ವೀಕರಿಸುವ ಮೊದಲ ಕಾರ್ ಲೋನ್ ಆಫರ್‌ಗೆ ತೃಪ್ತಿಪಡಬೇಡಿ. ಬದಲಾಗಿ, ಉತ್ತಮ ಡೀಲ್ ಅನ್ನು ಹುಡುಕಲು ಬಹಳಷ್ಟು ಕಡೆ ತಿರುಗಾಡಿ ಮತ್ತು ಬಹಳ ಸಾಲದಾತರ ದರಗಳನ್ನು ಹೋಲಿಕೆ ಮಾಡಿ. ಇದು ಬ್ಯಾಂಕುಗಳು, ಸಾಲ ಒಕ್ಕೂಟಗಳು ಮತ್ತು ಆನ್‌ಲೈನ್ ಸಾಲದಾತರನ್ನು ಒಳಗೊಂಡಿರುತ್ತದೆ. 

ಕಡಿಮೆ ಬಡ್ಡಿ ದರಕ್ಕೆ ಮಾತುಕತೆ ಮಾಡಿ: ನಿಮ್ಮ ಕಾರು ಸಾಲದ ಮೇಲಿನ ಬಡ್ಡಿ ದರವು, ಸಾಲದ ಒಟ್ಟು ಮೊತ್ತದಲ್ಲಿ ದೊಡ್ಡ ವ್ಯತ್ಯಾಸವನ್ನು ಮಾಡಬಹುದು. ಹೀಗಾಗಿ ಕಡಿಮೆ ಬಡ್ಡಿ ದರದಲ್ಲಿ ಲೋನ್ ಪಡೆಯಲು ಸಾಲದಾತರೊಂದಿಗೆ ಮಾತುಕತೆ ನಡೆಸಲು ಹಿಂಜರಿಯದಿರಿ.

ಸಾಲದ ಅವಧಿಯ ಉದ್ದವನ್ನು ಪರಿಗಣಿಸಿ: ಸಾಲದ ಅವಧಿಯ ಉದ್ದವು, ನಿಮ್ಮ ಮಾಸಿಕ ಪಾವತಿಯ ಗಾತ್ರ ಮತ್ತು ಸಾಲದ ಒಟ್ಟು ಮೊತ್ತದ ಮೇಲೆ ಪರಿಣಾಮ ಬೀರಬಹುದು. ಕಡಿಮೆ ಸಾಲದ ಅವಧಿಯು ಮಾಸಿಕವಾಗಿ ಹೆಚ್ಚಿನ ಮೊತ್ತದ ಪಾವತಿಗಳಿಗೆ ಕಾರಣವಾಗಬಹುದು, ಆದರೆ ಕಡಿಮೆ ಬಡ್ಡಿದರಗಳ ಕಾರಣದಿಂದಾಗಿ ದೀರ್ಘಾವಧಿಯಲ್ಲಿ ನಿಮ್ಮ ಹಣವನ್ನು ಉಳಿಸಬಹುದು.

ಫೈನ್ ಪ್ರಿಂಟ್ ಓದಿ: ನೀವು ಯಾವುದೇ ಸಾಲದ ನಿಯಮಗಳನ್ನು ಒಪ್ಪಿಕೊಳ್ಳುವ ಮೊದಲು, ಎಲ್ಲಾ ಫೈನ್ ಪ್ರಿಂಟ್ ಅನ್ನು ಓದಿ ಅರ್ಥಮಾಡಿಕೊಳ್ಳಲು ಮರೆಯದಿರಿ. ಇದು ಬಡ್ಡಿ ದರ, ಶುಲ್ಕಗಳು, ದಂಡಗಳು ಅಥವಾ ನಿರ್ಬಂಧಗಳನ್ನು ಮುಂತಾದವುಗಳನ್ನು ಒಳಗೊಂಡಿರುತ್ತದೆ.

ಕೊನೆಯಲ್ಲಿ, ಕಾರ್ ಲೋನ್‌ಗಳು ಕಾರಿನ ಖರೀದಿಗೆ ಹಣಕಾಸು ಒದಗಿಸಲು ಅನುಕೂಲಕರ ಮಾರ್ಗವಾಗಿದೆ, ಆದರೆ ನೀವು ಇದನ್ನು ತೆಗೆದುಕೊಳ್ಳುವ ಮೊದಲು ನಿಯಮಗಳು ಮತ್ತು ಷರತ್ತುಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಇದರ ಜೊತೆಗೆ ಬಡ್ಡಿದರವನ್ನು ಮತ್ತು ಸಾಲದ ಅವಧಿಯನ್ನು ಎಚ್ಚರಿಕೆಯಿಂದ ಪರಿಗಣಿಸುವುದು ಸಹ ಅಗತ್ಯವಾಗಿದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ವಿವರವಾಗಿ ತಿಳಿಯಲು ಈಗಲೇ ffreedom App ಅನ್ನು ಈಗಲೇ ಡೌನಲೋಡ್ ಮಾಡಿ.  

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.