ಊರಲ್ಲಿ ಈ ಬೆಳೆಯನ್ನು ಯಾರು ಬೆಳದಿಲ್ಲ. ನಾನು ಬೆಳೆದು ಇದನ್ನು ಪರಿಚಯಿಸುತ್ತೇನೆ ಎಂದು ಆ ಬೆಳೆಯ ನಾಟಿ ಮಾಡಿ ಇಂದು ಯಶಸ್ವಿಯಾಗಿ ಲಾಭವನ್ನು ಪಡೆಯುತ್ತಿದ್ದಾರೆ ಈ ರೈತ. ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಗಂಗರಾಜು. 35 ವರ್ಷದ ರೈತನಾಗಿದ್ದು, ಎಸ್‌ಎಸ್‌ಎಲ್‌ಸಿ ಡಿಪ್ಲೊಮಾ ಕೂಡ ಪಡೆದಿದ್ದಾರೆ. ಮೂಲತ: ಕೃಷಿ ಕುಟುಂಬದಿಂದ ಬಂದವರು. ಕೇವಲ ಸಾಂಪ್ರದಾಯಕ ಬೆಳೆಯನ್ನು ಬೆಳೆಯುತ್ತಿದ್ದ ಇವರು ffreedom appನ ಕೋರ್ಸ್ ಮೂಲಕ ಬ್ರೂಕೋಲಿ ಕೃಷಿಯ ಹೊಸ ಸಾಹಸಕ್ಕೆ ಕೈ ಹಾಕಿದರು.
ಗಂಗರಾಜು ಅವರು ತಮ್ಮ ತಂದೆಯವರ ಕಾಲದಿಂದಲೂ ಜೋಳ, ರಾಗಿ, ಕಡಲೆಕಾಯಿ, ಭತ್ತ, ಜೋಳವನ್ನು ಬೆಳೆಯುತ್ತಿದ್ದರು. ತಂದೆಯ ನಿಧನ ಬಳಿಕ ಇವರು ಕೃಷಿಯನ್ನು ಮುಂದುವರೆಸಿಕೊಂಡು ಬಂದ ಇವರು ಮೆಕ್ಕೆಜೋಳ, ಕಾಲಿಫ್ಲಾವರ್ ಮುಂತಾದ ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ.
ಇವರ ಕುಟುಂಬವು ಕೃಷಿ ಹಿನ್ನೆಲೆಗೆ ಹೊಂದಿದ್ದರೂ, ಅಸ್ಥಿರ ಆದಾಯದ ಕಾರಣ ಆರ್ಥಿಕವಾಗಿ ತನ್ನನ್ನು ತಾನು ಸ್ಥಿರಗೊಳಿಸಲು ವಿವಿಧ ಆದಾಯದ ಮೂಲಗಳನ್ನು ಹುಡುಕುತ್ತಿದ್ದರು. ಆಗ ಅವರಿಗೆ ಹೊಳೆದಿದ್ದೇ ffreedom app.
ಯೂಟ್ಯೂಬ್ ನೋಡುತ್ತಿದ್ದಾಗ ffreedom appನಲ್ಲಿ ಬ್ರೂಕೋಲಿ ಕೋರ್ಸ್‌ಗೆ ಸಂಬಂಧಿಸಿದ ಜಾಹೀರಾತು ಗಂಗರಾಜು ಅವರನ್ನು ಆಕರ್ಷಿಸಿತ್ತು. ಊರಲ್ಲಿ ಈ ಕೃಷಿಯ ಪರಿಚಯವಿರಲಿಲ್ಲ. ಹಾಗಾಗಿ ಈ ಕೃಷಿಯಲ್ಲಿ ಆಸಕ್ತಿ ಹೊಂದಿದ್ದರಿಂದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಬ್ರೂಕೋಲಿ ಕೃಷಿಯ ಬಗ್ಗೆ ಸಂಪೂರ್ಣ ಮಾರ್ಗದರ್ಶನ ನೀಡುವ ಬ್ರೂಕೋಲಿ ಕೃಷಿ ಕೋರ್ಸ್ ಅನ್ನು ವೀಕ್ಷಿಸಿದರು. ಈ ಕೃಷಿಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಕಲಿತು ಜಾಗರೂಕತೆಯಿಂದ ಅನುಷ್ಠಾನಕ್ಕೆ ತಂದರು.
ಬ್ರೂಕೋಲಿ ಕೃಷಿಗೆ ಸಂಬಂಧಿಸಿದಂತೆ ಅಗತ್ಯವಿರುವ ಹಣಕಾಸು, ಸವಾಲುಗಳು ಮತ್ತು ಹಣ ನಿರ್ವಹಣೆಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಯನ್ನು ಪಡೆದುಕೊಂಡು, ತಮ್ಮದೇ ಆದ ಬ್ರೊಕೊಲಿ ಫಾರ್ಮ್ ಅನ್ನು ಯಶಸ್ವಿಯಾಗಿ ರೂಪಿಸಿದರು. ಇಂದು ಇವರು ಇತರ ಕೃಷಿಯೊಂದಿಗೆ 10 ಗುಂಟೆಯಲ್ಲಿ 200 ಬ್ರೂಕೋಲಿ ಸಸಿಗಳನ್ನು ನಾಟಿ ಮಾಡಿದ್ದಾರೆ. ಈ ಎರಡು ಸಾವಿರ ಗಿಡದಲ್ಲಿ ಕೇವಲ 2 ತಿಂಗಳಲ್ಲಿ ಖರ್ಚುಗಳನ್ನು ತೆಗೆದು 40,000 ಆದಾಯವನ್ನು ಇವರು ಗಳಿಸಿದ್ದಾರೆ.
ffreedom app ಇವರಿಗೆ ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸಮಯದಲ್ಲಿ ಮಾರ್ಗದರ್ಶನ ನೀಡಿ ಇಂದು ಇವರನ್ನು ಯಶಸ್ಸಿನ ಮೆಟ್ಟಿಲಾಗಿ ಪರಿವರ್ತಿಸಿತು. ಈ ನಿಟ್ಟಿನಲ್ಲಿ ffreedom ಆ್ಯಪ್‌ನ ಮಾರ್ಗದರ್ಶನ ಮರೆಯಲಾಗದು ಎನ್ನುತ್ತಾರೆ ಗಂಗಾಧರ್. ಮುಂದಿನ ದಿನಗಳಲ್ಲಿ ಡ್ರ್ಯಾಗನ್ ಫ್ರೂಟ್‌ನ ಕೃಷಿಯನ್ನು ಮಾಡುವ ಅಭಿಲಾಶೆಯನ್ನು ಹೊಂದಿದ್ದಾರೆ.