Home » Latest Stories » ಯಶಸ್ಸಿನ ಕಥೆಗಳು » ಲಾಭವನ್ನು ಕ್ಯಾರಿ ಮಾಡಲು ಕ್ಯಾರಿ ಬ್ಯಾಗ್ ಬಿಸಿನೆಸ್

ಲಾಭವನ್ನು ಕ್ಯಾರಿ ಮಾಡಲು ಕ್ಯಾರಿ ಬ್ಯಾಗ್ ಬಿಸಿನೆಸ್

by Punith B
227 views

ಚಂದ್ರಕಲಾ ಅವರು ಬಾಲ್ಯದಿಂದಲೂ ಸಹ ಉದ್ಯಮಿಯಾಗಬೇಕು ಎಂಬ ಕನಸನ್ನು ಕಂಡಿದ್ದರು. ಸಾಮಾನ್ಯ ಕುಟುಂಬದ ಹಿನ್ನಲೆಯಿಂದ ಬಂದಿದ್ದ ಅವರಿಗೆ ಇದು ಸುಲಭದ ಹಾದಿಯಲ್ಲ ಎಂಬುದು ಅವರಿಗೆ ತಿಳಿದಿತ್ತು. ಆದರೆ ಅವರು ತಮ್ಮ ಕನಸನ್ನು ಬಿಟ್ಟುಕೊಡಲು ಸಿದ್ದರಿರಲಿಲ್ಲ. ಹೀಗಾಗಿ, ಅವರು ಎಷ್ಟೇ ಕಷ್ಟ ಬಂದರೂ ಸಹ ಅದನ್ನು ಎದುರಿಸಲು ನಿರ್ಧರಿಸಿದರು. ತಮ್ಮದೇ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸುವ ಮೊದಲು, ಅವರು ಐದು ವರ್ಷಗಳ ಕಾಲ ಟೆಲಿಕಾಂ ಕಂಪನಿಯಲ್ಲಿ ಕೆಲಸ ಮಾಡಿದರು. ಆದರೆ ಬಿಸಿನೆಸ್ ಬಗ್ಗೆ ಅವರು ಹೆಚ್ಚು ಒಲವನ್ನು ಹೊಂದಿದ್ದ ಕಾರಣ, ಅವರು ಹೆಚ್ಚು ದಿನಗಳ ಕಾಲ ಸಂಬಳ ಬರುವ ಕೆಲಸದಲ್ಲಿ ಮುಂದುವರಿಯಲು ಇಷ್ಟ ಪಡಲಿಲ್ಲ. 

ಆರಂಭದಲ್ಲಿ ಚಂದ್ರಕಲಾ ಅವರು ಸರ್ಕಾರದಿಂದ ಸಾಲ ಪಡೆದು ಕ್ಯಾರಿ ಬ್ಯಾಗ್ ಬಿಸಿನೆಸ್ ಅನ್ನು ದೊಡ್ಡ ಮಟ್ಟದಲ್ಲಿ ಆರಂಭಿಸಿದರು. ಆದರೆ ಅವರಿಗೆ ಮಾರ್ಕೆಟಿಂಗ್ ಬಗ್ಗೆ ಹೆಚ್ಚಿನ ಪರಿಣತಿ ಇಲ್ಲದ ಕಾರಣ ಅದರಲ್ಲಿ ನಷ್ಟವನ್ನು ಅನುಭವಿಸಿದರು. ಇದು ಅವರಿಗೆ ಕಷ್ಟದ ಸಮಯವಾಗಿತ್ತು ಆದರೆ ಅವರು ಭರವಸೆ ಕಳೆದುಕೊಳ್ಳಲಿಲ್ಲ. ಬಿಸಿನೆಸ್ ಮತ್ತು ಮಾರ್ಕೆಟಿಂಗ್ ಬಗ್ಗೆ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಲು ಅವರು ವಿವಿಧ ಮಾರ್ಗಗಳನ್ನು ಅನ್ವೇಷಿಸುವುದನ್ನು ಮುಂದುವರೆಸಿದರು.

ಒಂದು ದಿನ, ಅವರು ಪತ್ರಿಕೆಯಲ್ಲಿ ಬಂದ ಆರ್ಟಿಕಲ್ ಮೂಲಕ ffreedom app ಬಗ್ಗೆ ತಿಳಿದುಕೊಂಡರು. ಕುತೂಹಲದಿಂದ, ಅವರು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡರು ಮತ್ತು ಅದರ ಚಂದಾದಾರಿಕೆಯನ್ನು ಸಹ ಪಡೆದುಕೊಂಡರು. ffreedom app ಕೋರ್ಸ್‌ಗಳಿಂದ, ಚಂದ್ರಕಲಾ ಅವರು ಹಣವನ್ನು ಹೇಗೆ ಗಳಿಸುವುದು, ಖರ್ಚು ಮಾಡುವುದು ಮತ್ತು ಉಳಿಸುವುದು ಮುಂತಾದ ವೈಯಕ್ತಿಕ ಹಣಕಾಸು ವಿಷಯದ ಬಗ್ಗೆ ಹೆಚ್ಚು ಕಲಿತರು. ಇದರ ಜೊತೆಗೆ ಅವರು ಸುಕನ್ಯಾ ಸಮೃದ್ಧಿ ಯೋಜನೆ, ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಗಳಂತಹ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಲಭ್ಯವಿರುವ ವಿವಿಧ ಸರ್ಕಾರಿ ಯೋಜನೆಗಳ ಬಗ್ಗೆ ಸಹ ಕೋರ್ಸ್‌ಗಳ ಮೂಲಕ ಜ್ಞಾನವನ್ನು ಪಡೆದುಕೊಂಡರು.

ಚಂದ್ರಕಲಾ ಅವರಿಗೆ ಬಿಸಿನೆಸ್ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದಿದ್ದರಿಂದ ಅವರು ffreedom appನಲ್ಲಿ ಪೇಪರ್ ಪ್ಲೇಟ್‌ ಮತ್ತು ಕಪ್‌ ಮ್ಯಾನುಫ್ಯಾಕ್ಚರಿಂಗ್ ಕೋರ್ಸ್ ಮತ್ತು ಕಾಟನ್ ಬ್ಯಾಗ್ ಮ್ಯಾನುಫ್ಯಾಕ್ಚರಿಂಗ್ ಕೋರ್ಸ್ ಗಳನ್ನು ವೀಕ್ಷಿಸಿದರು. ಈ ಮೂಲಕ ಅವರು ಆಯಾ ಬಿಸಿನೆಸ್ ಗಳ ಬಗ್ಗೆ ಸಮಗ್ರ ಜ್ಞಾನವನ್ನು ಪಡೆದುಕೊಂಡರು. ನಂತರದಲ್ಲಿ ಅವರು ಕ್ಯಾರಿ ಬ್ಯಾಗ್ ಬಿಸಿನೆಸ್ ಅನ್ನು ಪ್ರಾರಂಭಿಸಿದರು. ಕಠಿಣ ಪರಿಶ್ರಮ, ಡೆಡಿಕೇಶನ್ ಮತ್ತು ಸಾಧಿಸಲೇಬೇಕು ಎಂಬ ಛಲದಿಂದಾಗಿ, ಅವರ ಬಿಸಿನೆಸ್ ಇಂದು ಬೆಳವಣಿಗೆಯ ಹಾದಿಯಲ್ಲಿದೆ. ಇಂದು ಅವರು ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಇದರ ಜೊತೆಗೆ ಅವರು ತಮ್ಮ ಬಿಸಿನೆಸ್ ಮೂಲಕ ಹಲವು ಮಂದಿಗೆ ಉದ್ಯೋಗವನ್ನು ನೀಡುವ ಮೂಲಕ ಹಲವರ ಬಾಳಿಗೆ ಬೆಳಕಾಗಿದ್ದಾರೆ.    

ಕಷ್ಟಗಳು ನಮ್ಮ ಜೀವನವನ್ನು ಪ್ರವೇಶಿಸುವುದು ನಾವು ನಮ್ಮ ನಿಜವಾದ ಸಾಮರ್ಥ್ಯವನ್ನು ಕಂಡುಕೊಳ್ಳಲು ಎಂದು ಚಂದ್ರಕಲಾ ಅವರು ನಂಬುತ್ತಾರೆ. ತನ್ನ ಉದ್ಯಮಶೀಲತೆಯ ಪ್ರಯಾಣದಲ್ಲಿ ಅವರು ಇಲ್ಲಯವರೆಗೆ ಅನೇಕ ಸವಾಲುಗಳನ್ನು ಎದುರಿಸಿದ್ದಾರೆ, ಆದರೆ ಅವೆಲ್ಲವನ್ನು ಅವರು ಸಮರ್ಥವಾಗಿ ಎದುರಿಸಿ ಇಂದು ಯಶಸ್ಸನ್ನು ಪಡೆದಿದ್ದಾರೆ. ಇಷ್ಟಕ್ಕೆ ತೃಪ್ತರಾಗದ ಚಂದ್ರಕಲಾ ಅವರು ಮುಂದಿನ ದಿನಗಳಲ್ಲಿ ತಮ್ಮ ಬಿಸಿನೆಸ್ ನ ಉತ್ಪನ್ನಗಳನ್ನು ರಫ್ತು ಮಾಡುವ ಕನಸನ್ನು ಹೊಂದಿದ್ದಾರೆ.  ಈ ಮೂಲಕ ತಮ್ಮ ಬಿಸಿನೆಸ್ ಅನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸುವ ಕನಸನ್ನು ಹೊಂದಿದ್ದಾರೆ. ತಾವು ಸಹ ಬಿಸಿನೆಸ್ ಅನ್ನು ಪ್ರಾರಂಭಿಸಬೇಕು ಮತ್ತು ಅದರಲ್ಲಿ ಯಶಸ್ಸನ್ನು ಪಡೆಯಬೇಕು ಎಂದು ಕನಸು ಕಾಣುವ ಎಲ್ಲ ಯುವ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಚಂದ್ರಕಲಾ ಅವರು ಸ್ಫೂರ್ತಿಯಾಗಿದ್ದಾರೆ. 

ಚಂದ್ರಕಲಾ ಅವರ ಯಶಸ್ಸಿನಲ್ಲಿ ffreedom app ಬಹುದೊಡ್ಡ ಪಾತ್ರವನ್ನು ವಹಿಸಿದೆ. ಬಿಸಿನೆಸ್ ಬಗ್ಗೆ ಕನಸು ಕಂಡಿದ್ದ ಅವರಿಗೆ ಅಪ್ಲಿಕೇಶನ್ ನ ಕೋರ್ಸ್ ಗಳು ಅಗತ್ಯ ಜ್ಞಾನ ಮತ್ತು ಮಾರ್ಗದರ್ಶನವನ್ನು ನೀಡುವ ಮೂಲಕ ಅವರ ಕನಸುಗಳನ್ನು ಬೆಂಬಲಿಸಿದೆ. ಮತ್ತು ಒಂದು ಬಿಸಿನೆಸ್ ಅನ್ನು ಉತ್ತಮವಾಗಿ ನಡೆಸುವಲ್ಲಿ ಅವರನ್ನು ಸಮರ್ಥರನ್ನಾಗಿಸಿದೆ. 

ffreedom app ಭಾರತದ ಅತಿ ದೊಡ್ಡ ಜೀವನೋಪಾಯ ವೇದಿಕೆಯಾಗಿದ್ದು, ಅದು ಬಿಸಿನೆಸ್, ಕೃಷಿ ಮತ್ತು ವೈಯಕ್ತಿಕ ಹಣಕಾಸಿನ ಬಗ್ಗೆ ಉಪಯುಕ್ತವಾದ ಪರಿಣಿತ ಮಾಹಿತಿಯನ್ನು ಸರಳ ರೀತಿಯಲ್ಲಿ ತಿಳಿಸಿಕೊಡುವ ಏಕೈಕ ವೇದಿಕೆಯಾಗಿದೆ. ನಾವೂ ಸಹ ಯಶಸ್ವಿ ಉದ್ಯಮಿಯಾಗಬೇಕು ಮತ್ತು ಈ  ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಕನಸು ಕಂಡಿರುವ ಲಕ್ಷಾಂತರ ಮಂದಿಗೆ ಅಗತ್ಯ ಜ್ಞಾನ, ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸುವುದು ffreedom appನ ಉದ್ದೇಶವಾಗಿದೆ. ಈ ಮಾರ್ಗದಲ್ಲಿ ಅದು ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ. ಬಿಸಿನೆಸ್ ಮತ್ತು ಕೃಷಿ ಮೂಲಕ ಲಕ್ಷಾಂತರ ಭಾರತೀಯರ ಬದುಕನ್ನು ಸಕಾರಾತ್ಮಕ ರೀತಿಯಲ್ಲಿ ಪರಿವರ್ತಿಸಲು ಮತ್ತು ಈ ಮೂಲಕ ಭಾರತವನ್ನು ಸದೃಢವಾಗಿ ನಿರ್ಮಿಸಲು, ತನ್ನದೇ ಆದ ರೀತಿಯಲ್ಲಿ ffreedom app ಕೊಡುಗೆಯನ್ನು ನೀಡುತ್ತಿದೆ. ನೀವೂ ಸಹ ಇದರ ಪ್ರಯೋಜನವನ್ನು ಪಡೆದುಕೊಂಡು ನಿಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಬದಲಾಯಿಸಿಕೊಳ್ಳಬಹುದು.  

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.