ಕೆಲವು ವರ್ಷಗಳ ಹಿಂದೆ ಕೃಷಿಯು ವಿದ್ಯಾವಂತರ ಆಯ್ಕೆಯಲ್ಲ ಎಂಬ ಮಾತುಗಳು ಹಳ್ಳಿಗಳಲ್ಲಿ ಕೇಳಿಬರುತ್ತಿದ್ದವು. ಆದರೆ ಇಂದು ಸಮಯ ಬದಲಾಗಿದೆ. ವಿದೇಶದಲ್ಲಿ ಕಲಿತ ವಿದ್ಯಾವಂತರು ಸಹ ಇಂದು ಕೃಷಿಯ ಕಡೆಗೆ ಮುಖಮಾಡುತ್ತಿದ್ದಾರೆ. ಕೃಷಿಯ ಮೂಲಕವೂ ಸಹ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು ಎಂಬುದನ್ನು ತೋರಿಸಿ ಬಹಳಷ್ಟು ಮಂದಿ ಮಾದರಿಯಾಗಿದ್ದಾರೆ. ಈ ಸಾಲಿನಲ್ಲಿ ಮಹೇಂದ್ರ ಎಚ್ ಬೆಟಗೇರಿ ಅವರು ಕೂಡ ಒಬ್ಬರು ಎಂದು ಹೇಳಬಹುದು.
ಶಿಕ್ಷಕ ವೃತ್ತಿಯಲ್ಲಿದ್ದರು ಸಾಧನೆಯ ಕನಸು ಇದಿದ್ದು ಕೃಷಿಯಲ್ಲಿ
ಮೂಲತಃ ಗದಗದ ಲಕ್ಷ್ಮೇಶ್ವರ ಬಡಾವಣೆಯ ರಾಮಗಿರಿ ಗ್ರಾಮದ ಮಹೇಂದ್ರ ಎಚ್ ಬೆಟಗೇರಿ ಅವರು ಎಂಟು ವರ್ಷಗಳ ಹಿಂದೆ ಹಾವೇರಿಯ ಕೆಎಲ್ಇ ಕಾಲೇಜಿನಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಕೆಲಸದಿಂದ ಇವರು ಕೇವಲ 8 ಸಾವಿರದಷ್ಟು ಮಾತ್ರ ಆದಾಯವನ್ನು ಗಳಿಸುತ್ತಿದ್ದರು. ಇದರ ಜೊತೆಗೆ ಸ್ಟೀಲ್ ಮತ್ತು ಹಾರ್ಡ್ವೇರ್ ಬಿಸಿನೆಸ್ ಅನ್ನು ಸಹ ಇವರು ಪ್ರಾರಂಭಿಸಿದರು. ಇವರದೇ ಮಾಲೀಕತ್ವದ ಈ ಅಂಗಡಿಯನ್ನು ಇವರ ಸಹೋದರ ನಿರ್ವಹಣೆ ಮಾಡುತ್ತಿದ್ದಾರೆ. ಮಹೇಂದ್ರ ಎಚ್ ಬೆಟಗೇರಿ ಅವರು ಸುಮಾರು 5 ರಿಂದ 6 ವರ್ಷಗಳಿಂದ ಈ ವ್ಯವಹಾರವನ್ನು ಮಾಡುತ್ತಿದ್ದಾರೆ ಮತ್ತು ಅದರ ಮೂಲಕ ವರ್ಷಕ್ಕೆ 2 ರಿಂದ 3 ಲಕ್ಷದಷ್ಟು ಆದಾಯವನ್ನು ಸಹ ಗಳಿಸುತ್ತಿದ್ದಾರೆ. ಆದರೆ ಇವರ ಒಲವು ಇದಿದ್ದು ಕೃಷಿಯಲ್ಲಿ ಏನಾದರು ಸಾಧನೆ ಮಾಡುವ ಕಡೆಗೆ.
ಕೃಷಿಯಲ್ಲಿ ಸಾಧನೆ ಮಾಡಲು ಮಾರ್ಗದರ್ಶಿಯಾದ Ffreedom App
ಕೃಷಿಯ ಬಗ್ಗೆ ಸರಿಯಾದ ಜ್ಞಾನವನ್ನು ಹೊಂದುವ ನಿಟ್ಟಿನಲ್ಲಿ ಮಹೇಂದ್ರ ಎಚ್ ಬೆಟಗೇರಿ ಅವರು ನಮ್ಮ Ffreedom App ಅನ್ನು ಡೌನ್ಲೋಡ್ ಮಾಡಿಕೊಂಡರು. ನಮ್ಮ ಅಪ್ಲಿಕೇಶನ್ ನಲ್ಲಿ ವರ್ಮಿಕಾಂಪೋಸ್ಟ್, ಜೇನು ಸಾಕಣೆ, ಔಷಧೀಯ ಸಸ್ಯ ಕೃಷಿ ಮತ್ತು ಸಾವಯವ ಕೃಷಿ ಕೋರ್ಸ್ ಗಳನ್ನು ವೀಕ್ಷಿಸುವ ಮೂಲಕ ಉತ್ತಮ ಜ್ಞಾನವನ್ನು ಪಡೆದುಕೊಂಡರು. ಈ ಮೂಲಕ ಸಾವಯವ ಕೃಷಿಯನ್ನು ಪ್ರಾರಂಭಿಸಿದರು. ಇದರ ಜೊತೆಗೆ ಸಾವಯವ ಕೃಷಿಯ ಪ್ರಯೋಜನಗಳ ಬಗ್ಗೆ ಇತರೆ ರೈತರಿಗೆ ತಿಳುವಳಿಕೆ ನೀಡುವ ಪ್ರಯತ್ನವನ್ನು ಸಹ ಅವರು ಪ್ರಾರಂಭಿಸಿದರು.
ಸಂಯೋಜಿತ ಕೃಷಿಯ ಮೂಲಕ ಕೈತುಂಬಾ ಆದಾಯ
Ffreedom App ಬಳಕೆಗೂ ಮೊದಲು ಮಹೇಂದ್ರ ಎಚ್ ಬೆಟಗೇರಿ ಅವರು ಸಂಯೋಜಿತ ಕೃಷಿಯನ್ನು ಪ್ರಾರಂಭಿಸಿದ್ದರು. ಆದರೆ ಈ ಕೃಷಿಯ ಬಗ್ಗೆ ಅವರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಅದರಲ್ಲಿ ನಷ್ಟವನ್ನು ಅನುಭವಿಸಿದ್ದರು. ನಂತರದಲ್ಲಿ ನಮ್ಮ ಅಪ್ಲಿಕೇಶನ್ ಮೂಲಕ ಈ ಕೃಷಿಯನ್ನು ಆರಂಭಿಸುವ ಬಗ್ಗೆ ವಿವರವಾಗಿ ತಿಳಿದುಕೊಂಡರು. ವಿವಿಧ ತಳಿಯ ಉತ್ತಮ ಮೇಕೆಗಳ ಬಗ್ಗೆ ತಿಳಿದುಕೊಂಡು ತುಮಕೂರು-ನಾರಿ ಸುವರ್ಣ ಹಾಗೂ ರಾಜಸ್ಥಾನದಿಂದ ಸಿರೋಹಿ ತಳಿಯ ಮೇಕೆಗಳನ್ನು ತಂದು ಸಾಕಣೆಯನ್ನು ಆರಂಭಿಸಿದರು. ಈ ಮೇಕೆಗಳನ್ನು ಸರಿಯಾಗಿ ನಿರ್ವಹಣೆ ಮಾಡುವ ಬಗ್ಗೆ, ಲಸಿಕೆಗಳನ್ನು ನೀಡುವ ಬಗ್ಗೆ, ಉತ್ತಮ ಆಹಾರವನ್ನು ಒದಗಿಸುವ ಬಗ್ಗೆ ತಿಳಿದುಕೊಂಡು ಯಶಸ್ಸನ್ನು ಪಡೆದಿದ್ದಾರೆ. ಇಂದು ವಾರ್ಷಿಕವಾಗಿ ಲಕ್ಷಗಳಲ್ಲಿ ಆದಾಯವನ್ನು ಗಳಿಸುತ್ತಿರುವ ಇವರು, ಕೃಷಿಯಲ್ಲಿ ಇನ್ನೂ ಸಹ ದೂಡ್ಡ ಮಟ್ಟದ ಸಾಧನೆ ಮಾಡುವ ಕನಸನ್ನು ಬೆನ್ನತ್ತಿ ಸಾಗುತ್ತಿದ್ದಾರೆ.