Home » Latest Stories » ಯಶಸ್ಸಿನ ಕಥೆಗಳು »  ಅರಣ್ಯ ಕೃಷಿ ಮಾಡಿ ಯಶಸ್ವಿ ರೈತ ಮಹಿಳೆಯಾಗಿರುವ ಮಂಗಳಮ್ಮ!

 ಅರಣ್ಯ ಕೃಷಿ ಮಾಡಿ ಯಶಸ್ವಿ ರೈತ ಮಹಿಳೆಯಾಗಿರುವ ಮಂಗಳಮ್ಮ!

by Vinaykumar M Patil

ಯಶಸ್ಸಿಗೆ ಯಾವುದೇ ವಯಸ್ಸಿನ ಅಡ್ಡಿ ಬರುವುದಿಲ್ಲ ಎನ್ನುವುದಕ್ಕೆ ಗೌರಿಬಿದನೂರಿನ ರೈತ ಮಹಿಳೆ ಮಂಗಳಮ್ಮ ಅವರು ಜ್ವಲಂತ ಉದಾಹರಣೆ. ತಮ್ಮ 50ರ ಇಳಿವಯಸ್ಸಿನಲ್ಲಿಯೂ ಕೃಷಿ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ತಮ್ಮ ಸುತ್ತಮುತ್ತಲಿನ ಮಹಿಳೆಯರಿಗೆ ಅತ್ಯುತ್ತಮ ಪ್ರೇರಣೆಯಾಗಿದ್ದಾರೆ. ಕೃಷಿ ಮಾಡುವ ಮೊದಲು ಅವರು ಸೀರೆ ನೇಕಾರಿಕೆ ಮಾಡುತ್ತಿದ್ದರು. ಆದರೆ, ಕೆಲಸಗಾರರ ಅಲಭ್ಯತೆಯಿಂದಾಗಿ ನೇಕಾರಿಕೆಯನ್ನು ನಿಲ್ಲಿಸಿ ಕೃಷಿಯತ್ತ‌ ಮುಖ ಮಾಡಿದರು. 1 ಎಕರೆ ಜಮೀನಿನಲ್ಲಿ ಕೃಷಿ ಮಾಡುವ ಅವರು, ಯಶಸ್ವಿ ರೈತ ಮಹಿಳೆ ಎನ್ನಿಸಿಕೊಂಡಿದ್ದಾರೆ. 

ಕೃಷಿಯಲ್ಲಿ ಸದಾ ಹೊಸ ತಂತ್ರ ಮತ್ತು ವಿಧಾನಗಳನ್ನು ಅಳವಡಿಸಲು ಬಯಸುವ ಅವರು, Youtube ವಿಡಿಯೋಗಳ ಮೂಲಕ, ಕೃಷಿಯ ವಿಧಾನಗಳ ಬಗ್ಗೆ ತಿಳಿದುಕೊಂಡಿದ್ದಾರೆ. Youtube ಜಾಹೀರಾತಿನ ಮೂಲಕ ಅವರು ffreedom app ಬಗ್ಗೆ ತಿಳಿದುಕೊಂಡಿದ್ದರು. ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಂಡು, ಕೃಷಿಗೆ ಸಂಬಂಧಪಟ್ಟ ಕೋರ್ಸ್‌ಗಳನ್ನು ನೋಡಿದ್ದರು. 

ಕೋರ್ಸ್‌ಗಳ ಕಲಿಕೆ:

ffreedom appನಲ್ಲಿ ಮಂಗಳಮ್ಮ ಅವರು ಫಾರೆಸ್ಟ್‌ ಫಾರ್ಮಿಂಗ್‌ ಕೋರ್ಸ್‌ ಮತ್ತು‌ ಮಲ್ಟಿ ಫಾರ್ಮಿಂಗ್‌ ಕೋರ್ಸ್‌ಗಳನ್ನು ಪಡೆದುಕೊಂಡು ಅವುಗಳ ಬಗ್ಗೆ ಸಮಗ್ರ ಅಧ್ಯಯನ ಮಾಡಿದ್ದಾರೆ, ಕೋರ್ಸ್‌ನಲ್ಲಿ ಕಲಿತ ತಂತ್ರಗಳಿಂದ ಅವರು, ತಮ್ಮ ಜಮೀನನ್ನು ಅರಣ್ಯ ಕೃಷಿಯನ್ನಾಗಿ ಪರಿವರ್ತಿಸಿ, ಅದರಲ್ಲಿ ಮಲ್ಟಿ-ಕ್ರಾಪ್‌ ಫಾರ್ಮಿಂಗ್‌ ಅನ್ನು ಸಹ ಅಳವಡಿಸಿದರು. ffreedom appನ ಮಿಷನ್‌ ಏನೆಂದರೆ ಪ್ರತಿಯೊಬ್ಬರಿಗೂ ಜ್ಞಾನ ಮತ್ತು ಅವಕಾಶಗಳಿಗೆ ಪ್ರವೇಶವನ್ನು ಒದಗಿಸಿ, ಕಮ್ಯೂನಿಟಿ ಲೆಡ್ ಕಾಮರ್ಸ್ ಮೂಲಕ ಜೀವನೋಪಾಯದ ಅವಕಾಶಗಳಿಗೆ ಪ್ರವೇಶವನ್ನು ಒದಗಿಸುವುದು. ಈ ಕೋರ್ಸ್‌ಗಳನ್ನು ಪಡೆದುಕೊಂಡು ಅವರು, ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ವಿಧಾನ, ಅರಣ್ಯ ಕೃಷಿಗೆ ಅಗತ್ಯ ಅನುಮತಿಗಳ ಮಹತ್ವ ಹಾಗೂ ಮಲ್ಟಿ-ಕ್ರಾಪ್‌ ಫಾರ್ಮಿಂಗ್‌ನ ವ್ಯಾಪ್ತಿಗಳ ಬಗ್ಗೆ ಅರಿತುಕೊಂಡು ಕೃಷಿಯನ್ನು ಆರಂಭಿಸಿದರು. 

ಕೋರ್ಸ್‌ಗಳ ಮೂಲಕ ಕಲಿತ ಮಾಹಿತಿಯನ್ನು ಅಷ್ಟಕ್ಕೇ ನಿಲ್ಲಿಸದ ಅವರು, ಸಮಗ್ರ ಕಲಿಕೆಯನ್ನು ಕೃಷಿಯಲ್ಲಿ ಅಳವಡಿಸಿಕೊಂಡು, ತಮ್ಮ ಸ್ವಂತ ಜಮೀನಿನಲ್ಲಿ ಜಾರಿಗೆ ತಂದರು. ಮಲ್ಟಿ-ಕ್ರಾಪ್ ಫಾರ್ಮಿಂಗ್‌ನಲ್ಲಿ ಅವರು, ಶ್ರೀಗಂಧ ಮತ್ತು ಮಹಾಗನಿ ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ.

ಮುಂದಿನ ಗುರಿ?

ಮಂಗಳಮ್ಮ ಅವರ ಜಮೀನಿನಲ್ಲಿ ಬೆಳೆದ ಬೆಳೆಗಳು ಯಾವೂ ಸಹ ಬೇಗನೇ ರಿಸಲ್ಟ್‌ ಕೊಡುವುದಿಲ್ಲ. ಫಾರೆಸ್ಟ್‌ ಫಾರ್ಮಿಂಗ್‌ನಲ್ಲಿರುವ ಬೆಳೆಗಳು ಬೆಳೆದು ದೊಡ್ಡದಾಗಲು ಹಲವಾರು ವರ್ಷಗಳು ಬೇಕು. ಮಂಗಳಮ್ಮ ಅವರಿಗೆ ಸದ್ಯದ ಮಟ್ಟಿಗೆ ಯಾವುದೇ ಗ್ರಾಹಕರಿಲ್ಲ. ಅವರು ನೆಟ್ಟ ಬೆಳೆಗಳಿಗೆ ಮುಂದಿನ 10-15 ವರ್ಷಗಳ ಯೋಜನೆಯನ್ನು ಮಂಗಳಮ್ಮ ಹೊಂದಿದ್ದಾರೆ. ತಮ್ಮ 1 ಎಕರೆ ಜಮೀನಿನಲ್ಲಿ 300 ಶ್ರೀಗಂಧ,  40 ಮಹಾಗನಿ ಹಾಗೂ ನಿಂಬೆ ಮತ್ತು ನುಗ್ಗೆ ಗಿಡಗಳನ್ನು ನೆಟ್ಟಿದ್ದಾರೆ. 

ಮಂಗಳಮ್ಮ ಅವರ ಗುರಿ ಸದ್ಯಕ್ಕೆ ಸ್ಪಷ್ಟವಾಗಿದೆ. ಮುಂದಿನ 10ರಿಂದ 15 ವರ್ಷಗಳ ತನಕ ಈ ಸಸಿಗಳನ್ನು ಪೋಷಿಸಿ, 15 ವರ್ಷ ಕಳೆದ ಮೇಲೆ ಈ ಬೆಳೆಗಳಿಂದ ಸುಮಾರು 1 ರಿಂದ 2 ಕೋಟಿ ಆದಾಯವನ್ನು ನಿರೀಕ್ಷಿಸುತ್ತಿದ್ದಾರೆ. 

ಮಾರುಕಟ್ಟೆಯಲ್ಲಿನ ಅವಕಾಶ:

ಮಂಗಳಮ್ಮ ಅವರು ಆರಂಭಿಸಿರುವ ಫಾರೆಸ್ಟ್‌ ಫಾರ್ಮಿಂಗ್‌ಗೆ ಜಾಗತಿಕವಾಗಿ ಉತ್ತಮ ಬೆಲೆ ಇದೆ. ವಾರ್ಷಿಕವಾಗಿ ಸುಮಾರು 6,000 ರಿಂದ 7,000 ಮೆಟ್ರಿಕ್‌ ಟನ್‌ಗಳಷ್ಟು ಶ್ರೀಗಂಧವನ್ನು ಬಳಸಲಾಗುತ್ತದೆ. ಭಾರತ ದೇಶದಲ್ಲಿ ವಾರ್ಷಿಕವಾಗಿ ಸುಮಾರು 200 ಟನ್‌ಗಳಷ್ಟು ಶ್ರೀಗಂಧ ಉತ್ಪಾದಿಸಿದ ನಂತರ ಸರಿಸುಮಾರು 5,400 ಟನ್‌ಗಳಷ್ಟು ಕೊರತೆ ಬೀಳುತ್ತದೆ. ಈ ಕೊರತೆಯನ್ನು ನಮ್ಮ ಭಾರತೀಯ ರೈತರು ಬೆಳೆದು ಹಣ ಸಂಪಾದನೆ ಮಾಡಬಹುದು ಎಂಬುದು ರೈತರ ವಾದ. 

ಮಂಗಳಮ್ಮ ಅವರ ಈ ಮಹತ್ತರವಾದ ನಿಲುವಿನಿಂದ ಭಾರತದಲ್ಲಿ ಅರಣ್ಯ ಸಂಪತ್ತು ಬೆಳೆಯುವ ನಿರೀಕ್ಷೆಯಿದೆ. ಅವರಂತಹ ರೈತ ಮಹಿಳೆಯರು ಸಮಾಜದಲ್ಲಿ ಇನ್ನಿತರ ರೈತರಿಗೆ ಸ್ಫೂರ್ತಿಯ ಸೆಲೆಯಾಗಿ ಕಾರ್ಯನಿರ್ವಹಿಸುತ್ತಾರೆ. ಇಂತಹ ಹಲವಾರು ಮಹಿಳೆಯರು ಅರಣ್ಯ ಕೃಷಿ ಮಾಡಿ ಭುವಿಯನ್ನು ಹಸಿರಾಗಿಸಲಿ ಎಂದು ಹಾರೈಸೋಣ. 

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.