Home » Latest Stories » ಯಶಸ್ಸಿನ ಕಥೆಗಳು » ಡೈರಿ ಫಾರ್ಮಿಂಗ್‌ನೊಂದಿಗೆ ಅತ್ಯುತ್ತಮ ಆದಾಯ ಗಳಿಸುತ್ತಿರುವ ಮಂಜುಳಾ

ಡೈರಿ ಫಾರ್ಮಿಂಗ್‌ನೊಂದಿಗೆ ಅತ್ಯುತ್ತಮ ಆದಾಯ ಗಳಿಸುತ್ತಿರುವ ಮಂಜುಳಾ

by Vinaykumar M Patil

ಮನೆಯೊಡತಿಯೊಬ್ಬರು ಬಿಸಿನೆಸ್‌ ಮಾಡಿ ಯಶಸ್ವಿ ಆಗಿರುವ ಹಲವಾರು ಕಥೆಗಳನ್ನು ನೀವು ಕೇಳಿರುತ್ತೀರಿ. ಆದರೆ, ಮನೆಯೊಡತಿ ಆಗುವ ಜೊತೆಗೆ ಕೃಷಿಯನ್ನು ಆರಂಭಿಸಿ, ಅದರ ಮೂಲಕ ಆದಾಯ ಗಳಿಸುತ್ತಿರುವ ಕಥೆಗಳು ವಿರಳ. ಇಂತಹ ಒಬ್ಬ ಮಹಿಳೆ ದೊಡ್ಡಬಳ್ಳಾಪುರ ತಾಲೂಕಿನವರು. ಮಂಜುಳಾ ಅವರು, ಮನೆಯೊಡತಿ ಆಗುವ ಜತೆಜತೆಗೆ, ಡೈರಿ ಫಾರ್ಮಿಂಗ್‌ ಮಾಡಿ ಯಶಸ್ವಿ ಎನ್ನಿಸಿಕೊಂಡಿದ್ದಾರೆ. 

ಮನೆಯಲ್ಲಿಯೇ ಕುಳಿತು ಏನಾದರೂ ಮಾಡಲೇಬೇಕೆಂಬ ಹಂಬಲ ಅವರನ್ನು ಸದಾ ಕಾಡುತ್ತಿತ್ತು. ಒಂದು ಸ್ಮಾರ್ಟ್‌ಫೋನ್‌ ತೆಗೆದುಕೊಂಡು ಅದರ ಮೂಲಕ, ಅಡುಗೆ ಮಾಡುವ ವಿಡಿಯೋಗಳನ್ನು ಅವರು ಪ್ರತಿದಿನ ನೋಡುತ್ತಿದ್ದರು. ಯೂಟ್ಯೂಬ್‌ನಲ್ಲಿ ಅಡುಗೆ ವಿಡಿಯೋಗಳನ್ನು ನೋಡಬೇಕಾದರೆ, ಒಂದಿನ ಅವರಿಗೆ ffreedom appನ ಜಾಹೀರಾತು ಬರುತ್ತದೆ.  ತಕ್ಷಣವೇ ಅದನ್ನು ಡೌನ್‌ಲೋಡ್‌ ಮಾಡಿ, ಚಂದಾದಾರರಾದರು.

ffreedom app ಮೂಲಕ ಕಲಿತದ್ದೇನು?

ಮೊದಲಿಗೆ ಕ್ಯಾಂಡಲ್‌ ಮೇಕಿಂಗ್‌ ಬಿಸಿನೆಸ್‌ ಕೋರ್ಸ್‌ ಅನ್ನು ನೋಡುವ ಮೂಲಕ ಅವರು ತಮ್ಮ ಕಲಿಕೆಯನ್ನು ಆರಂಭಿಸಿದರು. ಆ ಕೋರ್ಸ್‌ ಮೂಲಕ ಅವರು ಬಹಳಷ್ಟು ವಿಷಯಗಳನ್ನು ಕಲಿತರು. ಕ್ಯಾಂಡಲ್‌ ಮೇಕಿಂಗ್‌ ಬಿಸಿನೆಸ್‌ ನಡೆಸಲು ಅವರ ಮನೆಯಲ್ಲಿ ಅಷ್ಟೊಂದು ಜಾಗ ಇಲ್ಲದ ಕಾರಣ, ಆ ಯೋಚನೆಯನ್ನು ಕೈಬಿಟ್ಟರು. ನಂತರ, ಡೈರಿ ಫಾರ್ಮಿಂಗ್‌ ಕೋರ್ಸ್‌ ವೀಕ್ಷಿಸಿದರು. ffreedom appನ ಮಿಷನ್‌ ಏನೆಂದರೆ ಪ್ರತಿಯೊಬ್ಬರಿಗೂ ಜ್ಞಾನ ಮತ್ತು ಅವಕಾಶಗಳಿಗೆ ಪ್ರವೇಶವನ್ನು ಒದಗಿಸಿ, ಕಮ್ಯೂನಿಟಿ ಲೆಡ್ ಕಾಮರ್ಸ್ ಮೂಲಕ ಜೀವನೋಪಾಯದ ಅವಕಾಶಗಳಿಗೆ ಪ್ರವೇಶವನ್ನು ಒದಗಿಸುವುದು.

ffreedom app ಮೂಲಕ ಅವರು, ಡೈರಿ ಫಾರ್ಮ್‌ ಅನ್ನು ಆರಂಭಿಸುವ ಮೂಲಭೂತ ಅಂಶಗಳು, ಸಾಲ ಹಾಗೂ ಸರ್ಕಾರದ ಸವಲತ್ತುಗಳು, ಅನುಮತಿ, ರೆಜಿಸ್ಟ್ರೇಶನ್‌, ಆಹಾರ ಮತ್ತು ರೋಗದ ಗುಣಲಕ್ಷಣ, ಹಾಲು, ಕಾರ್ಮಿಕರ ಅಗತ್ಯತೆಯ ಬಗ್ಗೆ ತಿಳಿದುಕೊಂಡರು. ಬೆಲೆ ಹಾಗೂ ವೆಚ್ಚದ ನಿರ್ವಹಣೆ, ಮಾರ್ಕೆಟ್‌, ಮಾರಾಟ, ಲಾಭ ಹಾಗೂ ಸವಾಲುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅರಿತುಕೊಂಡಿದ್ದಾರೆ. 

ಡೈರಿ ಫಾರ್ಮಿಂಗ್‌ ಆರಂಭಿಸಲು ಅವರಿಗೆ ಒಂದು ಆಕಳದ ಅಗತ್ಯವಿತ್ತು. ತಕ್ಷಣ ಒಂದು ಆಕಳನ್ನು ತೆಗೆದುಕೊಂಡು ಡೈರಿ ಫಾರ್ಮಿಂಗ್‌ ಆರಂಭಿಸಿಯೇಬಿಟ್ಟರು. ಹೀಗೆ ಆರಂಭಿಸಿ, 2 ಕುರಿಗಳನ್ನು ಖರೀದಿಸಿ ಸುಮಾರು 35,000 ರೂ. ಗೇ ಮಾರಾಟ ಮಾಡಿದರು. ಅವರ ಬಿಸಿನೆಸ್‌ ಹೀಗೆಯೇ ಮುಂದುವರೆದು ಈಗ ಅವರ ಹತ್ತಿರ 4 ಮೇಕೆಗಳು, 30 ಕೋಳಿಗಳು ಇವೆ. ಡೈರಿ ಫಾರ್ಮಿಂಗ್‌ ಜೊತೆಗೆ ಅವರು ಕೋಳಿ ಸಾಕಣೆಯನ್ನು ಸಹ ನಿರ್ವಹಣೆ ಮಾಡುತ್ತಿದ್ದಾರೆ. ಕೋಳಿಗಳ ಮೊಟ್ಟೆಯನ್ನು ಸಹ ಮಾರಾಟ ಮಾಡಿ ಉತ್ತಮ ಆದಾಯ ಗಳಿಸುತ್ತಿರುವ ಅವರ ಕಥೆ ನಿಜವಾಗಿಯೂ ಎಲ್ಲ ಗೃಹಿಣಿಯರಿಗೆ ಸ್ಫೂರ್ತಿ ತುಂಬುತ್ತದೆ. 

ಅವರು ಯಶಸ್ಸಿನ ಮೆಟ್ಟಿಲು ಹತ್ತಿದ್ದು ಹೇಗೆ?

ಬೆಳಗಿನ ಜಾವ ಸುಮಾರು 4.30 ಕ್ಕೆ ಎದ್ದೇಳುವ ಮಂಜುಳಾ, ಮೊದಲಿಗೆ ಹಾಲನ್ನು ಕರೆದು ಅದನ್ನು ಮಾರಾಟಕ್ಕೆ ಕಳುಹಿಸುತ್ತಾರೆ. ನಂತರ, ಮನೆಗೆಲಸವನ್ನು ಮುಗಿಸಿ, ಕೋಳಿ ಸಾಕಣೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ. ಅವರಲ್ಲಿರುವ ದುಡಿಯಬೇಕೆನ್ನುವ ತುಡಿತ, ಎಲ್ಲರಲ್ಲೂ ಶಕ್ತಿ ತುಂಬುತ್ತದೆ. 

ಮಂಜುಳಾ ಅವರು ಬರೀ ಹಾಲಿನ ಮಾರಾಟ ಅಷ್ಟೇ ಅಲ್ಲದೇ, ಬೆಣ್ಣೆ, ತುಪ್ಪ, ಮೊಸರನ್ನು ಸಹ ಮಾರಾಟ ಮಾಡಿ ಹಣ ಗಳಿಸುತ್ತಾರೆ. ದಿನಕ್ಕೆ ಸುಮಾರು 20 ಲೀಟರ್‌ ಹಾಲನ್ನು ಮಾರಾಟ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಅವರ ಮಾತಿನಲ್ಲಿಯೇ ಹೇಳಬೇಕೆಂದರೆ, “ಎಲ್ಲರ ಹತ್ತಿರವೂ ಸಹ ದಿನದ 24 ಗಂಟೆ ಇರುತ್ತದೆ, ಅದೇ 24 ಘಂಟೆಗಳಲ್ಲಿ ನಮ್ಮಷ್ಟಕ್ಕೆ ನಾವು ಎಷ್ಟು ಸಮಯ ಮೀಸಲಿಡುತ್ತೇವೆ ಎನ್ನುವುದು ಮುಖ್ಯ”.

ಅವರ ಮುಂದಿನ ಗುರಿ ಏನು?

ಸದ್ಯದ ಮಟ್ಟಿಗೆ ಅವರ ಸ್ವಂತ ಸೈಟ್‌ನಲ್ಲಿ ಡೈರಿ ಫಾರ್ಮಿಂಗ್‌ ಯಶಸ್ವಿಯಾಗಿ ನಡೆಸುತ್ತಿರುವ ಅವರು, ಮುಂದೊಂದು ದಿನ, ಶ್ರೀವಿದ್ಯಾ ಕಾಮತ್‌ ಅವರಂತೆ ತಾವೂ ಸಹ ಯಶಸ್ವಿ ಕ್ಯಾಂಡಲ್‌ ಮೇಕಿಂಗ್‌ ಬಿಸಿನೆಸ್‌ ಅನ್ನು ಆರಂಭಿಸುವ ಬಯಕೆ ಹೊಂದಿದ್ದಾರೆ. ಅದಷ್ಟೇ ಅಲ್ಲದೇ ಪಾರ್ಟ್ರಿಜ್‌ ಕೃಷಿಯನ್ನು ಆರಂಭಿಸುವಲ್ಲಿ ಮಂಜುಳಾ ಅವರ ಆಸಕ್ತಿ ಬಹಳವಾಗಿದೆ. 

ffreedom appಗೆ ಧನ್ಯವಾದ ಹೇಳುವ ಅವರು, ಅಪ್ಲಿಕೇಶನ್‌ ಇಲ್ಲದಿದ್ದರೆ, ಮನೆಯಲ್ಲಿ ಕೆಲಸವಿಲ್ಲದೇ ಕೂರಬೇಕಾಗಿತ್ತು ಎನ್ನುತ್ತಾರೆ. ಎಲ್ಲ ಗೃಹಿಣಿಯರು ಈ ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್‌ ಮಾಡಿ ತಮ್ಮದೇ ಸ್ವಂತ ಬಿಸಿನೆಸ್‌ ಆರಂಭಿಸಲು ಅವರು ತಿಳಿಹೇಳುತ್ತಾರೆ. 

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.