Home » Latest Stories » ಯಶಸ್ಸಿನ ಕಥೆಗಳು » ಹವ್ಯಾಸವನ್ನೇ ಬಿಸಿನೆಸ್‌ ಆಗಿ ಪರಿವರ್ತಿಸಿ ಯಶಸ್ವಿ ಬಿಸಿನೆಸ್‌ ವುಮನ್‌ ಎನಿಸಿಕೊಂಡ ನಾಗಲಕ್ಷ್ಮಿ

ಹವ್ಯಾಸವನ್ನೇ ಬಿಸಿನೆಸ್‌ ಆಗಿ ಪರಿವರ್ತಿಸಿ ಯಶಸ್ವಿ ಬಿಸಿನೆಸ್‌ ವುಮನ್‌ ಎನಿಸಿಕೊಂಡ ನಾಗಲಕ್ಷ್ಮಿ

by Vinaykumar M Patil

ಊಟಕ್ಕೆ ಉಪ್ಪಿನಕಾಯಿ ರುಚಿ ಎಂಬಂತೆ, ಅಡುಗೆಗೆ ಮಸಾಲೆ ಇಲ್ಲದಿದ್ದರೆ ಸಪ್ಪೆ ಎನಿಸುತ್ತದೆ. ಉಪ್ಪಿನಕಾಯಿಗಳ ಸಿಹಿಗೆ ಮನಸೋತು, ಅದನ್ನೇ ತಮ್ಮ ಪ್ರಮುಖ ಬಿಸಿನೆಸ್‌ ಆಗಿ ಮಾಡಿಕೊಂಡು ಜೀವನ ನಡೆಸುತ್ತಿರುವ ನಾಗಲಕ್ಷ್ಮಿ ಅವರ ಹುಮ್ಮಸ್ಸು ನಿಜಕ್ಕೂ ಶ್ಲಾಘನೀಯ.  65ರ ಇಳಿವಯಸ್ಸಿನಲ್ಲಿಯೂ ತಮ್ಮ ಛಲವನ್ನು ಬಿಡದೇ, ಬಿಸಿನೆಸ್‌ ಅನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಅವರ ಯಶಸ್ಸು ನಮಗೆ ನಿಜವಾಗಿಯೂ ಸ್ಫೂರ್ತಿ. 

ಮೊದಲಿಗೆ ಉಪ್ಪಿನಕಾಯಿ ಮಾರಾಟವನ್ನು ಹವ್ಯಾಸವನ್ನಾಗಿ ನಡೆಸಿಕೊಂಡು ಹೋಗುತ್ತಿದ್ದ ಅವರು, ತಮ್ಮ ಸ್ನೇಹಿತರು, ಬಂಧು-ಬಳಗ ಮುಂತಾದವರಲ್ಲಿ ಉಪ್ಪಿನಕಾಯಿ ಹಂಚುತ್ತಿದರು. ದಿನ ಕಳೆದಂತೆ, ಅವರ ರುಚಿ ಎಲ್ಲರಿಗೂ ಹಿಡಿಸಿ, ಇನ್ನೂ ಜಾಸ್ತಿ ಆರ್ಡರ್‌ಗಳು ಬರತೊಡಗಿದವು. ಹವ್ಯಾಸ ಎಂದೇ ನಡೆಸಿಕೊಂಡು ಹೋಗುತ್ತಿದ್ದ ಉಪ್ಪಿನಕಾಯಿ, ಬಿಸಿನೆಸ್‌ ಆಗಿ ಬದಲಾಯಿತು. 

freedom appನ ಸಹಾಯ

ನಾಗಲಕ್ಷ್ಮಿ ಅವರಿಗೆ ಉಪ್ಪಿನಕಾಯಿ ಮಾರಾಟ ಮಾಡಲು ಬರುತ್ತಿತ್ತೇ ವಿನಃ, ತಮ್ಮ ಬಿಸಿನೆಸ್‌ “ಸೂರ್ಯ ಅಯ್ಯಂಗಾರ್‌ ಹೋಮ್‌ಮೇಡ್‌ ಪ್ರಾಡಕ್ಟ್ಸ್”‌ ಅನ್ನು ಮಾರ್ಕೆಟಿಂಗ್‌ ಮಾಡುವಲ್ಲಿ ಅಷ್ಟೊಂದು ಜ್ಞಾನ ಇರಲಿಲ್ಲ. ಅವರ ಪ್ರಾಡಕ್ಟ್‌ಗಳು ಬರಿಯ ಬಾಯಿಮಾತಲ್ಲಿ ಮಾರಾಟವಾಗುತ್ತಿದ್ದವು. ಕಳೆದ 20 ವರ್ಷಗಳಿಂದ ಅವರು ಉಪ್ಪಿನಕಾಯಿ ಹಾಗೂ ಮಸಾಲೆ ಮಾರಾಟ ಮಾಡುತ್ತಿದ್ದಾರೆ. ಅವರ ಪ್ರಾಡಕ್ಟ್‌ಗಳು ಬರಿಯ ಬಾಯಿಮಾತಲ್ಲಿ ಮಾರಾಟವಾಗುತ್ತಿದ್ದವು. 

ಹೀಗೆ ಒಂದಿನ ಟಿ.ವಿ. ಸೀರಿಯಲ್‌ ನೋಡಬೇಕಾದರೆ, ಜಾಹೀರಾತಿನ ಮೂಲಕ ಅವರಿಗೆ freedom appನ ಬಗ್ಗೆ ಗೊತ್ತಾಯಿತು. ffreedom appನ ಮಿಷನ್‌ ಏನೆಂದರೆ ಪ್ರತಿಯೊಬ್ಬರಿಗೂ ಜ್ಞಾನ ಮತ್ತು ಅವಕಾಶಗಳಿಗೆ ಪ್ರವೇಶವನ್ನು ಒದಗಿಸಿ, ಕಮ್ಯೂನಿಟಿ ಲೆಡ್ ಕಾಮರ್ಸ್ ಮೂಲಕ ಜೀವನೋಪಾಯದ ಅವಕಾಶಗಳಿಗೆ ಪ್ರವೇಶವನ್ನು ಒದಗಿಸುವುದು.

 ಅಪ್ಲಿಕೇಶನ್‌ ಮೂಲಕ ಅವರು ತಮ್ಮ ಬಿಸಿನೆಸ್‌ ಅನ್ನು ಮಾರ್ಕೆಟಿಂಗ್‌ ಮಾಡುವ ಬಗ್ಗೆ ಮಾಹಿತಿ ಪಡೆದುಕೊಂಡರು. ಅವರ ಬಿಸಿನೆಸ್‌ಗೆ ಇನ್ನಷ್ಟು ಬೂಸ್ಟ್‌ ನೀಡಿದರು. ಈ ಮೂಲಕ ತಮ್ಮ ಪ್ರಾಡಕ್ಟ್‌ಗಳು ಇನ್ನಷ್ಟು ಹೆಚ್ಚಿನ ಗ್ರಾಹಕರಿಗೆ ತಲುಪುವಂತೆ ನೋಡಿಕೊಂಡರು. ಅವರು ಬರಿಯ ಉಪ್ಪಿನಕಾಯಿ ಮತ್ತು ಮಸಾಲೆ ಉತ್ಪನ್ನ ಅಲ್ಲದೇ, ಪುಳಿಯೋಗರೆ ಗೊಜ್ಜು,  ಲೇಹಗಳನ್ನು ಸಹ ಮಾರಾಟ ಮಾಡುತ್ತಾರೆ. 

ಯಶಸ್ಸಿನ ಹಾದಿ

“ನಮ್ಮ ವಯಸ್ಸು ನಮಗೆ ಯಾವತ್ತೂ ಅಡ್ಡಿ ಆಗಬಾರದು. ನಮ್ಮಲ್ಲಿರುವ ಪ್ಯಾಷನ್‌ ಎನ್ನುವ ತುಡಿತ ನಮ್ಮನ್ನು ಕುಗ್ಗಲು ಬಿಡಬಾರದು” ಎನ್ನುವುದು ನಾಗಲಕ್ಷ್ಮಿಯವರ ಮಾತು. ಇದೇ ರೀತಿ ಹಿಂದೇಟು ಹಾಕದೇ ನಾವು ಮುಂದುವರೆದರೆ, ಯಶಸ್ಸು ಖಂಡಿತ ಎಂದು ಅವರು ಹೇಳುತ್ತಾರೆ. 

ಅಪ್ಲಿಕೇಶನ್‌ನಲ್ಲಿ ಅವರು ಪಿಕಲ್‌ ಬಿಸಿನೆಸ್‌ ಕೋರ್ಸ್‌ ಅನ್ನು ಕಲಿತಿದ್ದಾರೆ. ಅವರ ಬಿಸಿನೆಸ್‌ನಿಂದ ಬಂದ ಹಣವನ್ನು ಹೋಲ್‌ಸೇಲ್‌ ಬಿಸಿನೆಸ್‌ಗಳಲ್ಲಿ ಇನ್ವೆಸ್ಟ್‌ ಮಾಡುವುದಾಗಿ ಅವರು ಹೇಳುತ್ತಾರೆ. ಕೋರ್ಸ್‌ ಮೂಲಕ ಅವರು, ಡಿಮಾಂಡ್‌ ಮತ್ತು ಸಪ್ಲೈ, ಬೆಲೆ ಮತ್ತು ವೆಚ್ಚ, ಮಾರ್ಕೆಟಿಂಗ್‌ ಮತ್ತು ಗ್ರಾಹಕ ನಿರ್ವಹಣೆ, ರೆಜಿಸ್ಟ್ರೇಶನ್‌, ಮಾಲೀಕತ್ವ ಹಾಗೂ ವಿವಿಧ ಅನುಮತಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಅರಿತಿದ್ದಾರೆ. 

ಈ ಕಲಿಕೆಯಿಂದ ಅವರು, ತಮ್ಮ ಬಿಸಿನೆಸ್‌ಗೆ ಮಾರ್ಕೆಟಿಂಗ್‌ ಅನ್ನು ಆರಂಭಿಸಿದರು. ಈ ಮೂಲಕ ಅವರು ಮಾರುವ ಪ್ರತಿಯೊಂದು ಬಾಟಲ್‌ ಮೇಲೆ ಸುಮಾರು, 10% ರಿಂದ 12%ರಷ್ಟು ಲಾಭ ಗಳಿಸುತ್ತಿದ್ದಾರೆ. ನವೆಂಬರ್ 2021ರಲ್ಲಿ ಅವರು ʼfssaiʼ ಕಡೆಯಿಂದ ಬ್ರ್ಯಾಂಡ್‌ ಎಂದು ಲೈಸೆನ್ಸ್‌ ಪಡೆದುಕೊಂಡಿದ್ದಾರೆ. 

ಅವರು ತಮ್ಮ ಬಿಸಿನೆಸ್‌ ನಡೆಸಲು ವಾಟ್ಸಾಪ್‌ ಗ್ರೂಪ್‌ ನಿರ್ವಹಣೆ ಮಾಡುತ್ತಾರೆ. ತಮ್ಕ ಬಿಸಿನೆಸ್‌ಗೆ ಡಿಜಿಟಲ್‌ ಪೇಮೆಂಟ್‌ಗಳ ಮೂಲಕ ಹಣ ಗಳಿಸುತ್ತಿದ್ದಾರೆ. ಅವರು ತಮ್ಮ ಸುತ್ತಮುತ್ತಲಿನ ಅಂಗಡಿಗಳಲ್ಲಿ ತಮ್ಮ ಪಿಕಲ್‌ಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. 

ಮುಂದಿನ ಗುರಿ?

ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಬಿಸಿನೆಸ್ ಅನ್ನು ಅವರು, ವೆಬ್‌ಸೈಟ್‌ ಮೂಲಕ ನಿರ್ವಹಣೆ ಮಾಡುವ ಗುರಿ ಹೊಂದಿದ್ದಾರೆ. ತಮ್ಮ ಉತ್ಪನ್ನಗಳನ್ನು ʼವರ್ಡ್‌ ಆಫ್‌ ಮೌತ್ʼ ಮೂಲಕ ಜನ ಕೊಂಡುಕೊಳ್ಳುವುದು ಜಾಸ್ತಿ ಎಂದು ಹೇಳುವ ಅವರು, ಇ-ಕಾಮರ್ಸ್‌ ವೆಬ್‌ಸೈಟ್‌ಗಳಾದ ಅಮೆಜಾನ್‌ ಮತ್ತು ಬಿಗ್‌ಬಾಸ್ಕೆಟ್‌ ಗಳಲ್ಲಿ ಸಹ ಮಾರಾಟ ಮಾಡುತ್ತಿದ್ದಾರೆ. ಈ ವಯಸ್ಸಿನಲ್ಲಿ ಉತ್ಕೃಷ್ಟ ಮಟ್ಟದ ಬಿಸಿನೆಸ್‌ ನಿರ್ವಹಿಸಿಕೊಂಡು ಹೋಗುತ್ತಿರುವ ನಾಗಲಕ್ಷ್ಮಿ ಅವರು ffreedom appಗೆ ಥ್ಯಾಂಕ್ಸ್‌ ಹೇಳುತ್ತಾರೆ. 

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.