ನರಸಿಂಹ ಮೂರ್ತಿ ಅವರು ತುಮಕೂರು ಜಿಲ್ಲೆ, ಮಧುಗಿರಿ ತಾಲೂಕು, ಜಡೆಗೊಂಡನಹಳ್ಳಿ ಗ್ರಾಮದ ಪ್ರಗತಿಪರ ರೈತರು. ಹಲವಾರು ವರ್ಷಗಳೊಂದ ಅವರು ತಮ್ಮ ಜಮೀನಿನಲ್ಲಿ ರಾಗಿ ಬೆಳೆ ಬೆಳೆಯುತ್ತಿದ್ದರು. ಕೃಷಿ ಮತ್ತು ಕೃಷಿಯಲ್ಲಿ ಇತ್ತೀಚೆಗೆ ಬಂದಿರುವ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಳ್ಳಲು ಅವರಿಗೆ ಅತೀವ ಆಸಕ್ತಿ ಇತ್ತು. ಕೃಷಿಗೆ ಸಂಬಂಧಪಟ್ಟ ಪ್ರತಿಯೊಂದು ಕಾರ್ಯಕ್ರಮವನ್ನು ಅವರು ಅಟೆಂಡ್ ಆಗುತ್ತಿದ್ದರು. ಕೃಷಿ ತಂತ್ರಜ್ಞಾನಗಳ ಬಗ್ಗೆ ಅವರಿಗೆ ಸಾಕಷ್ಟು ಅನುಭವ ಇದ್ದರೂ ಸಹ, ತಮ್ಮ ಜಮೀನಿನಲ್ಲಿ ಯಾವುದಾದರೂ ಹೊಸತಾದ ಬೆಳೆಯೊಂದನ್ನು ಬೆಳೆಯಲು ಅವರು ಕಾಯುತ್ತಿದ್ದರು. YouTubeನಲ್ಲಿ ವಿಡಿಯೋಗಳನ್ನು ನೋಡುತ್ತಿರುವಾಗ ಜಾಹೀರಾತಿನ ಮೂಲಕ ಅವರು ffreedom appನ ಬಗ್ಗೆ ತಿಳಿದುಕೊಂಡರು.
ffreedom appನಲ್ಲಿರುವ ಕೋರ್ಸ್‌ಗಳನ್ನು ನೋಡಿದಾಗ ಅವರಿಗೆ ಪಪ್ಪಾಯಿ ಫಾರ್ಮಿಂಗ್ ಕೋರ್ಸ್ ಬಗ್ಗೆ ಆಸಕ್ತಿ ಹುಟ್ಟಿಕೊಂಡಿತು. ಆ ಆಸಕ್ತಿಯಿಂದ ಪಪ್ಪಾಯಿ ಫಾರ್ಮಿಂಗ್ ಕೋರ್ಸ್ ಪಡೆದುಕೊಂಡ ಅವರು, ತಮ್ಮ 1 ಎಕರೆ ಜಮೀನಿನಲ್ಲಿ ಪಪ್ಪಾಯಿ ಕೃಷಿಯನ್ನು ಆರಂಭಿಸಿದರು. ಊರಿನಲ್ಲಿರುವ ಹೆದ್ದಾರಿಯ ಪಕ್ಕದಲ್ಲಿ ಅವರು ತಮ್ಮ ಸ್ವಂತ ಅಂಗಡಿಯನ್ನು ಹೊಂದಿದ್ದಾರೆ. ತಾವು ಬೆಳೆದ ಪ್ರತಿಯೊಂದು ಬೆಳೆಯನ್ನು ಅವರು ತಮ್ಮ ಸ್ವಂತ ಅಂಗಡಿಯಲ್ಲೇ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಪಪ್ಪಾಯಿ ಹಣ್ಣಿನ ದರ ಸುಮಾರು 40 ರೂಪಾಯಿ ಇದ್ದರೆ, ಅವರ ಅಂಗಡಿಯಲ್ಲಿ ಪಪ್ಪಾಯಿ ಹಣ್ಣಿನ ಬೆಲೆಯು ಸುಮಾರು 35 ರೂಪಾಯಿಗೆ ಸಿಗುತ್ತದೆ.
ffreedom appನಿಂದ ಕಲಿಕೆ
ffreedom appನ ಮೂಲಕ ಅವರು ಕೃಷಿ ಮತ್ತು ಕೃಷಿಗೆ ಸಂಬಂಧಪಟ್ಟ ತಂತ್ರಜ್ಞಾನಗಳ ಬಗ್ಗೆ ಹಲವಾರು ವಿಷಯಗಳನ್ನು ಕಲಿತುಕೊಂಡಿದ್ದಾರೆ. ಅವರು ಪಡೆದುಕೊಂಡ ಪಪ್ಪಾಯಿ ಕೃಷಿ ಕೋರ್ಸ್‌ನಿಂದ, ಪಪ್ಪಾಯಿ ಕೃಷಿಯಲ್ಲಿ ಹವಾಮಾನದ ಪರಿಣಾಮ, ಬಿತ್ತನೆ ಮಾಡುವಾಗ ಯಾವ ತಳಿಯ ಪಪ್ಪಾಯಿಯನ್ನು ಆಯ್ಕೆ ಮಾಡಬೇಕು, ಜಮೀನಿನಲ್ಲಿ ಅವುಗಳನ್ನು ಬಿತ್ತನೆ ಮಾಡುವ ಸಮಗ್ರ ವಿಧಾನ, ಮುಂತಾದ ವಿಷಯಗಳನ್ನು ಕಲಿತಿದ್ದಾರೆ. ನರಸಿಂಹ ಮೂರ್ತಿಯವರು ತಮ್ಮ ತಂದೆಯ ಮಾತಿನಂತೆ ಜಮೀನಿನಲ್ಲಿ ಸಾವಯವ ಕೃಷಿಯನ್ನೇ ಮಾಡಿ ಯಶಸ್ಸನ್ನು ಪಡೆದುಕೊಂಡಿದ್ದಾರೆ. ತಾವು ಬೆಳೆದ ಪಪ್ಪಾಯಿ ಹಣ್ಣುಗಳನ್ನು ಡೈರೆಕ್ಟಾಗಿ ಗ್ರಾಹಕರಿಗೆ ಮಾರಾಟ ಮಾಡುವ ಅವರು, ಇದರಿಂದ ಸಾಕಷ್ಟು ಹಣ ಉಳಿಸಬಹುದು ಎಂದು ಹೇಳುತ್ತಾರೆ. ಹೆದ್ದಾರಿಯ ಪಕ್ಕದಲ್ಲಿ ಇರುವ ತಮ್ಮ ಅಂಗಡಿಯಲ್ಲಿ ಸಾಕಷ್ಟು ಗ್ರಾಹಕರು ಅವರ ಹಣ್ಣುಗಳನ್ನು ಖರೀದಿಸಿಕೊಂಡು ಹೋಗುತ್ತಾರೆ.
ffreedom appನಲ್ಲಿ ಕೋರ್ಸ್ ನೋಡಿದ ಬಳಿಕ ತಮ್ಮ ಜಮೀನಿನಲ್ಲಿ ಪಪ್ಪಾಯಿ ಬೀಜಗಳನ್ನು ನೆಡುವ ವಿಧಾನದ ಬಗ್ಗೆಯೂ ಸಹ, ಕೋರ್ಸ್ ಮಾರ್ಗದರ್ಶಕರಿಂದ ತಿಳಿದುಕೊಂಡರು. ತಮ್ಮ 1 ಎಕರೆ ಜಮೀನಿನಲ್ಲಿ ಅವರು 900 ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಅವರ ಈ ಸಾವಯವ ಪಪ್ಪಾಯಿ ಹಣ್ಣಿನಿಂದ ದಿನಕ್ಕೆ ಸುಮಾರು 1,500ರೂ ಹಣವನ್ನು ಗಳಿಸುತ್ತಿದ್ದಾರೆ.
ಅವರ ಮುಂದಿನ ಗುರಿ?
ಅವರ ಜಮೀನಿನಲ್ಲಿ ಇನ್ನೂ ಹಲವಾರು ವಿಧಗಳ ಪಪ್ಪಾಯಿ ಹಣ್ಣನ್ನು ಬೆಳೆದು, ಅದರ ಮೂಲಕ ಹೆಚ್ಚಿನ ಹಣ ಗಳಿಸಿ, ಈ ಪಪ್ಪಾಯಿ ಕೃಷಿಯಲ್ಲಿ ಯಶಸ್ವಿಉಯಾಗಬೇಕು ಎಂಬುದು ಅವರ ಗುರಿಯಾಗಿದೆ. ಅವರು ತಮ್ಮ ಪಪ್ಪಾಯಿ ಕೃಷಿ ಅರಂಭ ಮಾಡುವ ಮೊದಲು, ಸರ್ಕಾರದ ಕಡೆಯಿಂದ ಸಾವಯವ ಪದ್ಧತಿಯಲ್ಲಿ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. ಅದಷ್ಟೇ ಅಲ್ಲದೇ, ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಒಂದು ಸಾವಯವ ಅಂಗಡಿಯನ್ನು ತೆರೆದು, ಅದರ ಮೂಲಕ ಎಲ್ಲ ಬೆಳೆಗಳನ್ನೂ ಮಾರಾಟ ಮಾಡಿ ಹಣ ಗಳಿಸುವ ಇರಾದೆ ಹೊಂದಿದ್ದಾರೆ. ತಮ್ಮ ಸುತ್ತಮುತ್ತಲಿನ ರೈತರೆಲ್ಲರೂ ಸಹ, ಇದೇ ವಿಧಾನದ ಮೂಲಕ, ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗದೇ, ಡೈರೆಕ್ಟಾಗಿ ಗ್ರಾಹಕರಿಗೆ ಮಾರಾಟ ಮಾಡಿದರೆ, 100% ಲಾಭ ಗಳಿಸಬಹುದು ಎಂದು ತಿಳಿಹೇಳುತ್ತಾರೆ.
ಪ್ರತಿಯೊಬ್ಬ ರೈತರೂ ಸಹ, ತಮ್ಮ ಜಮೀನಿನಲ್ಲಿ ಹೊಸತಾದ ಬೆಳೆಯನ್ನು ಬೆಳೆದು, ಕೃಷಿಯಲ್ಲಿ ಲಭ್ಯವಿರುವ ಅನೇಕ ತಂತ್ರಜ್ಞಾನಗಳ ಸಹಾಯ ಪಡೆದುಕೊಂಡು ಯಶಸ್ವಿ ಕೃಷಿಕರಾಗಬೇಕು ಎಂದು ನರಸಿಂಹ ಮೂರ್ತಿ ಅವರು ರೈತರಿಗೆ ಕರೆ ನೀಡಿದ್ದಾರೆ. ಎಲ್ಲ ರೈತರೂ ರೈತೋದ್ಯಮಿ ಆಗಬೇಕು ಎಂದು ಸಲಹೆ ನೀಡಿದ್ದಾರೆ.