ಮೊದಲಿಗೆ ತಮ್ಮ ಕುಟುಂಬದ ಆರೋಗ್ಯವನ್ನು ಸುಧಾರಿಸಲು ಬಯಸಿದ್ದ ರಾಜು ಅವರು ಈಗ ತಮ್ಮ ಬಿಸಿನೆಸ್ ಮೂಲಕ ಸಮಾಜದ ಅರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜು ಅವರು ಮೂಲತಃ ತುಮಕೂರು ಜಿಲ್ಲೆಯವರು. ಅವರು ತಮ್ಮ ಆಯಿಲ್ ಮಿಲ್ ಬಿಸಿನೆಸ್ ಅನ್ನು ಆರಂಭಿಸುವ ಮುಂಚೆ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮನೆಯಲ್ಲಿ ಬಳಸುತ್ತಿದ್ದ ರಾಸಾಯನಿಕ ಮಿಶ್ರಿತ ಅಡುಗೆ ಎಣ್ಣೆಯಿಂದಾಗಿ ಒಮ್ಮೆ ರಾಜು ಅವರ ಮಗಳು ಅನಾರೋಗ್ಯಕ್ಕೆ ತುತ್ತಾಗಿದ್ದರು. ಇದೇ ಸಂದರ್ಭದಲ್ಲಿ ಅವರು ವೈದ್ಯರ ಸಲಹೆ ಮೇರೆಗೆ ಶುದ್ಧ ಗಾಣದ ಎಣ್ಣೆಯನ್ನು ಅಡುಗೆಯಲ್ಲಿ ಬಳಕೆ ಮಾಡಲು ನಿರ್ಧರಿಸಿದರು. ಅದಕ್ಕೋಸ್ಕರ ಅವರು ಒಂದು ಸಣ್ಣ ಎಣ್ಣೆ ಗಿರಣಿ ಯಂತ್ರವನ್ನು ಮನೆಗೆ ತಂದರು ಮತ್ತು ಈ ಮೂಲಕ ಶುದ್ಧ ಎಣ್ಣೆಯನ್ನು ಹೊರತೆಗೆದು ಅದರ ಬಳಕೆಯನ್ನು ಆರಂಭಿಸಿದರು.
ಶುದ್ಧ ಅಡುಗೆ ಎಣ್ಣೆಯ ಬಳಕೆಯು ಅವರ ಮಗಳ ಕಾಯಿಲೆಯನ್ನು ಕ್ರಮೇಣವಾಗಿ ಗುಣಪಡಿಸಿತು. ಮಾತ್ರವಲ್ಲದೆ, ಸ್ಥಳೀಯರಿಂದ ನಿಧಾನವಾಗಿ ಗಾಣದ ಎಣ್ಣೆಗೆ ಬೇಡಿಕೆ ಸಹ ಪ್ರಾರಂಭವಾಯಿತು. ಈ ಅವಕಾಶವನ್ನು ಬಳಸಿಕೊಂಡು ಅದನ್ನೇ ಬಿಸಿನೆಸ್ ಆಗಿಸಲು ರಾಜು ಅವರು ಯೋಚಿಸಿದರು.
ಇದೇ ಸಂದರ್ಭದಲ್ಲಿ ಅವರು ಯೂಟ್ಯೂಬ್ ಮೂಲಕ ffreedom app ಬಗ್ಗೆ ತಿಳಿದುಕೊಂಡರು. ನಂತರದಲ್ಲಿ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಂಡರು ಮತ್ತು ಅದರ ಚಂದಾದಾರಿಕೆಯನ್ನು ಸಹ ಪಡೆದುಕೊಂಡರು. ಬಿಸಿನೆಸ್ ಅನ್ನು ಪ್ರಾರಂಭಿಸುವ ಉದ್ದೇಶದಿಂದ ಅವರು ಅಪ್ಲಿಕೇಶನ್ ನಲ್ಲಿ ಆಯಿಲ್ ಮಿಲ್ ಬಿಸಿನೆಸ್ ಕೋರ್ಸ್ ಅನ್ನು ವೀಕ್ಷಿಸಿದರು. ಅತ್ಯಂತ ಯಶಸ್ವಿ ಸಾಧಕರ ಮಾರ್ಗದರ್ಶನದಲ್ಲಿ ಅವರು ಆಯಿಲ್ ಮಿಲ್ ಬಿಸಿನೆಸ್ ಗೆ ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಕೌಶಲ್ಯವನ್ನು ಪಡೆದುಕೊಂಡರು.
ಬಿಸಿನೆಸ್ ಮಾಡಲು ಧೈರ್ಯ ಮಾಡಿದ ನಂತರದಲ್ಲಿ ಮೊದಲಿಗೆ ಅವರು 2.5 ಲಕ್ಷ ಮೊತ್ತದ ಒಂದು ಆಯಿಲ್ ಮಿಲ್ ಮಷೀನ್ ಅನ್ನು ಖರೀದಿಸಿದರು ಮತ್ತು ಒಟ್ಟಾರೆಯಾಗಿ 3 ಲಕ್ಷದಷ್ಟು ಖರ್ಚು ಮಾಡಿ ಈ ಬಿಸಿನೆಸ್ ಅನ್ನು ಆರಂಭಿಸಿದರು.
ರಾಜು ಅವರು ಆರಂಭಿಕವಾಗಿ ಬಿಸಿನೆಸ್ ನಲ್ಲಿ ಒಂದಿಷ್ಟು ಸವಾಲುಗಳನ್ನು ಎದುರಿಸಿದರು. ಆದರೆ, ffreedom appನ ಸಹಾಯದಿಂದ ಅವೆಲ್ಲವನ್ನು ಸಮರ್ಥವಾಗಿ ಎದುರಿಸಿದರು ಮತ್ತು ಅದನ್ನು ಜಯಿಸಿ ಯಶಸ್ವಿಯಾದರು. ಇದರ ಜೊತೆಗೆ ಅವರು ಹರಳೆಣ್ಣೆಯನ್ನು ಹೊರತೆಗೆಯಲು 1.10 ಲಕ್ಷ ಮೌಲ್ಯದ ಹೆಚ್ಚುವರಿ ತೈಲ ಗಿರಣಿ ಯಂತ್ರವನ್ನು ಸಹ ಖರೀದಿಸಿದರು.
ಪ್ರಸ್ತುತ ರಾಜು ಅವರು ತಮ್ಮ ಆಯಿಲ್ ಮಿಲ್ ಬಿಸಿನೆಸ್ ಮೂಲಕ ತಿಂಗಳಿಗೆ ಸುಮಾರು 15-20 ಸಾವಿರದಷ್ಟು ಆದಾಯವನ್ನು ಗಳಿಸುತ್ತಿದ್ದಾರೆ. ಇದರ ಜೊತೆಗೆ ffreedom appನ ಸಹಾಯದಿಂದ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಅನ್ನು ಮಾಡುವ ಮೂಲಕ ತಮ್ಮ ಬಿಸಿನೆಸ್ ಅನ್ನು ವಿಸ್ತರಿಸುವ ಕನಸನ್ನು ಹೊಂದಿದ್ದಾರೆ.
ಯಶಸ್ವಿ ಬಿಸಿನೆಸ್ ಅನ್ನು ನಿರ್ಮಿಸಲು ಮತ್ತು ಈ ಮೂಲಕ ತಮ್ಮ ಬದುಕನ್ನು ಬದಲಿಸಿಕೊಳ್ಳಲು ಎಲ್ಲ ರೀತಿಯಲ್ಲೂ ಸಹ ನೆರವಾಗಿರುವ ffreedom appಗೆ ಅವರು ತಮ್ಮ ಧನ್ಯವಾದಗಳನ್ನು ಸಲ್ಲಿಸುತ್ತಾರೆ. ರಾಜು ಅವರ ಈ ಬಿಸಿನೆಸ್ ಪಯಣವು ಬಹಳಷ್ಟು ಮಂದಿಗೆ ಸ್ಪೂರ್ತಿಯಾಗಿದೆ. ಈ ಬಿಸಿನೆಸ್ ಮೂಲಕ ಅವರು ಕೇವಲ ತಮ್ಮ ಜೀವನವನ್ನು ಬದಲಿಸಿಕೊಳ್ಳುವುದು ಮಾತ್ರವಲ್ಲದೆ ಸಮಾಜದ ಆರೋಗ್ಯವನ್ನು ಸಹ ಕಾಪಾಡುವತ್ತ ಟೊಂಕ ಕಟ್ಟಿ ನಿಂತಿದ್ದಾರೆ.
ಸರಿಯಾದ ಮಾರ್ಗದರ್ಶನ, ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪವಿದ್ದರೆ ಯಾರು ಎನ್ನನ್ನು ಬೇಕಾದರೂ ಸಹ ಸಾಧಿಸಬಹುದು ಎಂಬುದಕ್ಕೆ ರಾಜು ಅವರ ಯಶಸ್ಸು ಸಾಕ್ಷಿಯಾಗಿದೆ. ffreedom appನ ಕೋರ್ಸ್ ಗಳನ್ನು ವೀಕ್ಷಿಸುವ ಮೂಲಕ ರಾಜು ಅವರು ಅಗತ್ಯವಾದ ಬಿಸಿನೆಸ್ ಜ್ಞಾನವನ್ನು ಪಡೆದುಕೊಂಡರು ಮತ್ತು ಅದನ್ನು ಸರಿಯಾಗಿ ಅಳವಡಿಸಿಕೊಂಡು ಉತ್ತಮ ಬಿಸಿನೆಸ್ ಅನ್ನು ನಿರ್ಮಿಸುವ ಮೂಲಕ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದರು. ಬಿಸಿನೆಸ್ ಆರಂಭಿಸುವ ಮೂಲಕ ತಾವೂ ಸಹ ಯಶಸ್ವಿ ಉದ್ಯಮಿಯಾಗಬೇಕು ಮತ್ತು ಸ್ವಾವಲಂಬಿಯಾದ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಕನಸು ಕಂಡಿರುವ ಲಕ್ಷಾಂತರ ಮಂದಿಗೆ ಅಗತ್ಯ ಜ್ಞಾನ, ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸುವುದು ffreedom appನ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅದು ತನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ. ಈ ಮೂಲಕ ಲಕ್ಷಾಂತರ ಭಾರತೀಯರ ಬದುಕನ್ನು ಸಕಾರಾತ್ಮಕ ರೀತಿಯಲ್ಲಿ ಪರಿವರ್ತಿಸಬೇಕು ಎಂಬ ಸಂಕಲ್ಪವನ್ನು ffreedom app ತೊಟ್ಟಿದೆ.