Home » Latest Stories » ಬಿಸಿನೆಸ್ » ಪೆಟ್‌ ಶಾಪ್‌ನ ಮಾಲೀಕರಾಗಬೇಕೇ? ಇಲ್ಲಿದೆ ಅಗತ್ಯ ಸಲಹೆಗಳು

ಪೆಟ್‌ ಶಾಪ್‌ನ ಮಾಲೀಕರಾಗಬೇಕೇ? ಇಲ್ಲಿದೆ ಅಗತ್ಯ ಸಲಹೆಗಳು

by Poornima P
77 views

ಸಾಕು ಪ್ರಾಣಿಗಳು ಎಂದರೆ ಯಾರಿಗೆ ಇಷ್ಟವಿಲ್ಲ. ಅನಾದಿ ಕಾಲದಿಂದಲೂ ಪ್ರಾಣಿ ಮತ್ತು ಮನುಷ್ಯನ ನಡುವೆ ಅವಿನಾಭಾವ ಸಂಬಂಧವಿದೆ. ಸಾಕು pet shop business ಪ್ರಾಣಿಗಳು ಮನುಷ್ಯನ ಒತ್ತಡವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಂಶೋಧನೆಗಳ ಪ್ರಕಾರ ಮನುಷ್ಯನಿಗೆ ಪ್ರಾಣಿಗಳಿಂದ ಬಹಳಷ್ಟು ಉಪಯೋಗಗಳಿವೆ. ಮನುಷ್ಯನ ಆರೋಗ್ಯ ಉತ್ತಮವಾಗುತ್ತದೆ, ಮಾನಸಿಕ ನೆಮ್ಮದಿ ಮತ್ತು ಒತ್ತಡ ಕಡಿಮೆಯಾಗುತ್ತದೆ ಎಂದು ತಿಳಿದುಬಂದಿದೆ.

ಸಾಕು ಪ್ರಾಣಿನ ನಂಟು ಮನುಷ್ಯನ ಆತ್ಮವಿಶ್ವಾಸವನ್ನುಕೂಡ  ಹೆಚ್ಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳತ್ತ ಒಲವು ತೋರಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎಲ್ಲರ pet shop ಮನೆಯಲ್ಲೂ ಇಂದು ನಾಯಿ, ಬೆಕ್ಕು, ಮೀನು ಮುಂತಾದ ಸಾಕು ಪ್ರಾಣಿಗಳಿವೆ. ಇಂದು ಜಾಗತಿಕವಾಗಿ 2001ರಲ್ಲಿ ಪೆಟ್‌ ಕೇರ್‌ ಮಾರ್ಕೆಟ್‌ 245 ಬಿಲಿಯನ್‌ ಅಂದರೆ  1837500 ಕೋಟಿ ರೂ ಇದ್ದದ್ದು, 2022 ರಲ್ಲಿ 261 ಬಿಲಿಯನ್‌ 1957500 ಕೋಟಿ ರೂ ಪೆಟ್‌ ಕೇರ್‌ ಮಾರ್ಕೆಟಿಗ್‌ ಇದೆ. 

ಪೆಟ್ ಶಾಪ್ ಎನ್ನುವುದು ಸಾಕುಪ್ರಾಣಿಗಳು, ಸಾಕುಪ್ರಾಣಿ ಸರಬರಾಜುಗಳು ಮತ್ತು ಸಾಕುಪ್ರಾಣಿಗಳಿಗೆ ಬೇಕಾಗುವ ವಸ್ತುಗಳನ್ನು  ಮಾರಾಟ ಮಾಡುವ ಸ್ಥಳವಾಗಿದೆ. ಇಲ್ಲಿ ವಿವಿಧ ತಳಿಯ ನಾಯಿಗಳು, ಬೆಕ್ಕುಗಳು, ಪಕ್ಷಿಗಳು, ಮೀನುಗಳನ್ನು ಮಾರಾಟ ಮಾಡುವ ಸ್ಥಳವಾಗಿದೆ. ಸಾಕುಪ್ರಾಣಿ ಅಂಗಡಿಗಳು ಸಾಕುಪ್ರಾಣಿಗಳ ಆಹಾರ, ಆಟಿಕೆಗಳನ್ನು ಕೂಡ ಇಲ್ಲಿ ಮಾರಾಟ ಮಾಡಲಾಗುತ್ತದೆ. ಇಲ್ಲಿ ನೀವು ಪೆಟ್‌ ಶಾಪ್‌ ಅನ್ನು ಆರಂಭಿಸುವ ಕೆಲವು ತಂತ್ರಗಳು ಮತ್ತು ಟಿಪ್ಸ್‌ ಗಳ ಬಗ್ಗೆ ಇಲ್ಲಿ ಮಾಹಿತಿಯನ್ನು ಪಡೆಯಬಹುದಾಗಿದೆ. 

ತಳಿಗಳು ಮತ್ತು ಆಯ್ಕೆ ಹೇಗೆ? 

ಭಾರತದಲ್ಲಿ ಅತೀ ಹೆಚ್ಚು ಇಷ್ಟ ಪಡುವ ಸಾಕುಪ್ರಾಣಿಯೆಂದರೆ ನಾಯಿ. ಭಾರತದಲ್ಲಿ ೨೦ ಮಿಲಿಯನ್‌ ನಾಯಿಗಳನ್ನು ಸಾಕುತ್ತಿದ್ದಾರೆ. ಬೆಕ್ಕು, ನಾಯಿ, ಹಕ್ಕಿ, ಮೀನು, ರಾಬಿಟ್‌  ಸಾಕಣಿಕೆ ಸಾಧ್ಯ. ನಾಯಿಗಳಲ್ಲಿ ನೀವು ಚಿಕ್ಕ ನಾಯಿಯಿಂದ ಹಿಡಿದು ದೊಡ್ಡ ನಾಯಿಗಳವರೆಗೆ ನೀವು ಮಾರಾಟ ಮಾಡಬಹದು. ಡ್ಯಾಶ್‌ ಹಂಟ್‌, ಪೆಮೋರಿಯನ್, ಬೀಗಲ್‌, ಹಸ್ಕಿ, ಲಾಬ್‌, ಮುಂತಾದ ವಿವಿಧ ತಳಿಗಳು ಇದೆ. ಇನ್ನು pet store business  ಈ ನಾಯಿಗಳು ಒಂದು ಲಕ್ಷದವರೆಗೆ ಬೆಳೆಬಾಳುವ ತಳಿಗಳು ಕೂಡ ಇವೆ. ಇನ್ನು ಹಕ್ಕಿಗಳಲ್ಲೂ ಹಲವಾರು ತಳಿಗಳಿದ್ದು, ಲವ್‌ ಬರ್ಡ್‌, ಆಫ್ರಿಕನ್‌ ಲವ್‌ ಬರ್ಡ್‌, ಸಂಕೋನೆಸ್‌, ಗಿಳಿಗಳು ಮುಂತಾದ ತಳಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇನ್ನು ಬೆಕ್ಕಗಳಿಗೆ ಬಂದರೆ ನೀವು ಪರ್ಸಿಯನ್‌, ಹಿಮಾಲಯನ್‌ ಬ್ರೀಡ್‌ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಬೆಕ್ಕುಗಳಾಗಿವೆ. ಮೀನುಗಳಲ್ಲಿ ಗೋಲ್ಡ್‌ ಫಿಶ್‌, ಎಸ್ಕೆ ಗೋಲ್ಡ್‌ ಫಿಶ್‌, ಬೀಟಾ ಫಿಶ್‌, ಟೆಟ್ರಾಸ್‌ ಮುಂತಾದ ತಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುತ್ತದೆ. ಇನ್ನು ತಳಿಗಳನ್ನು ಆಯ್ಕೆ ಮಾಡುವಾಗ ಅನುಭವ ಮತ್ತು ತಿಳುವಳಿಕೆ ಬಹಳ ಮುಖ್ಯವಾಗಿದೆ. ನೀವು ತಳಿಗಳನ್ನು ತೆಗೆದುಕೊಳ್ಳುವಾಗ ಸರ್ಟಿಫಿಕೇಟ್‌, ಪಪ್ಪಿಯ ತಾಯಿ ಗುರುತಿಸುವ ಮೂಲಕ ನೀವು ತಳಿಗಳನ್ನು ಖರೀದಿಸಬಹುದು. ೪೫ ದಿನಗಳ ನಾಯಿ ಮರಿ ಸಾಕಣಿಕೆಗೆ ಸೂಕ್ತವಾಗಿದೆ. ಪೆಟ್‌ ಬಿಸ್‌ ನೆಸ್‌ ಗೆ ಕೆಸಿಐ ಸರ್ಟಿಫಿಕೇಟ್‌ ಅಗತ್ಯವಾಗಿ ಬೇಕು. ಇನ್ನು ನೀವು ತಳಿಗಳನ್ನು ಆಯ್ಕೆ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. 

  1. ಜನಪ್ರಿಯತೆ: ಯಾವ ತಳಿಗಳು ಪ್ರಸ್ತುತ ಪ್ರವೃತ್ತಿಯಲ್ಲಿವೆ ಎಂಬುವುದನ್ನು ಪರಿಗಣಿಸುವುದು ಬಹಳ ಮುಖ್ಯವಾಗಿದೆ.
  1.  ಗಾತ್ರ: ವಿಭಿನ್ನ ತಳಿಗಳು ವಿಭಿನ್ನ ಗಾತ್ರಗಳಲ್ಲಿ ಬರುತ್ತವೆ, ಆದ್ದರಿಂದ ಪ್ರತಿ ತಳಿಗೆ ಲಭ್ಯವಿರುವ ಸ್ಥಳವನ್ನು ಪರಿಗಣಿಸುವುದು ಮುಖ್ಯವಾಗಿದೆ. ನೀವು ಸಣ್ಣ ಸಾಕುಪ್ರಾಣಿಗಳ ಅಂಗಡಿಯನ್ನು ಹೊಂದಿದ್ದರೆ, ದೊಡ್ಡ ತಳಿಗಳನ್ನು ಸಾಗಿಸಲು ಸಾಧ್ಯವಾಗದಿರಬಹುದು.
  1. ಮನೋಧರ್ಮ: ಕೆಲವು ತಳಿಗಳು ತಮ್ಮ ಶಾಂತ ಮತ್ತು ಸ್ನೇಹಪರ ವ್ಯಕ್ತಿತ್ವಗಳಿಗೆ ಹೆಸರುವಾಸಿಯಾಗಿದೆ. ಆದರೆ ಇತರರು ಹೆಚ್ಚು ಶಕ್ತಿಯುತ ಮತ್ತು ಹೆಚ್ಚಿನ ನಿರ್ವಹಣೆಯನ್ನು ಹೊಂದಿರಬಹುದು. ಸಂಭಾವ್ಯ ಮಾಲೀಕರಿಗೆ ಉತ್ತಮವಾದ ಫಿಟ್ ಅನ್ನು ಖಚಿತಪಡಿಸಿಕೊಳ್ಳಲು ಪ್ರತಿ ತಳಿಯ ಮನೋಧರ್ಮವನ್ನು ಪರಿಗಣಿಸುವುದು ಮುಖ್ಯವಾಗಿದೆ. 
  1. ಆರೋಗ್ಯ: ಕೆಲವು ತಳಿಗಳು ಕೆಲವು ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತವೆ, ಆದ್ದರಿಂದ ಪ್ರತಿ ತಳಿಯ ಒಟ್ಟಾರೆ ಆರೋಗ್ಯ ಮತ್ತು ಅವುಗಳ ಆರೈಕೆಗೆ ಸಂಬಂಧಿಸಿದ ಸಂಭಾವ್ಯ ವೆಚ್ಚಗಳನ್ನು ಪರಿಗಣಿಸುವುದು ಮುಖ್ಯವಾಗಿದೆ. 
  1. ನಿರ್ವಹಣೆ: ಕೆಲವು ತಳಿಗಳಿಗೆ ಇತರರಿಗಿಂತ ಹೆಚ್ಚು ಅಂದಗೊಳಿಸುವಿಕೆ ಮತ್ತು ಗಮನ ಬೇಕಾಗುತ್ತದೆ, ಆದ್ದರಿಂದ ಪ್ರತಿ ತಳಿಯನ್ನು ಕಾಳಜಿ ವಹಿಸಲು ಅಗತ್ಯವಿರುವ ಸಮಯ ಮತ್ತು ಸಂಪನ್ಮೂಲಗಳನ್ನು ಪರಿಗಣಿಸುವುದು ಮುಖ್ಯವಾಗಿದೆ.
  1. ಕುಟುಂಬಗಳು ಮತ್ತು ಮಕ್ಕಳೊಂದಿಗೆ ಹೊಂದಾಣಿಕೆ: ಕುಟುಂಬಗಳು ಮತ್ತು ಮಕ್ಕಳೊಂದಿಗೆ ಪ್ರತಿ ತಳಿಯ ಹೊಂದಾಣಿಕೆಯನ್ನು ಪರಿಗಣಿಸುವುದು ಮುಖ್ಯವಾಗಿದೆ, ಏಕೆಂದರೆ ಕೆಲವು ತಳಿಗಳು ಚಿಕ್ಕ ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಇತರರಿಗಿಂತ ಹೆಚ್ಚು ಸೂಕ್ತವಾಗಿರುತ್ತದೆ. 
  1. ವೆಚ್ಚ: ವಿಭಿನ್ನ ತಳಿಗಳು ವಿಭಿನ್ನ ಬೆಲೆಗಳನ್ನು ಹೊಂದಿವೆ, ಆದ್ದರಿಂದ ಪ್ರತಿ ತಳಿಯ ವೆಚ್ಚವನ್ನು ಪರಿಗಣಿಸುವುದು ಮತ್ತು ನಿಮ್ಮ ವ್ಯವಹಾರಕ್ಕೆ ಇದು ಕಾರ್ಯಸಾಧ್ಯವೇ ಎಂಬುದನ್ನು ಪರಿಗಣಿಸುವುದು ಮುಖ್ಯವಾಗಿದೆ.

ಆಹಾರ, ನೀರು ಮತ್ತು ಸಂತಾನೋತ್ಪತ್ತಿ

 ಇನ್ನು ಇವುಗಳ ಆಹಾರದ ಬಗ್ಗೆ ಹೇಳುವುದಾದರೆ ನಾಯಿಗಳಿಗೆ ಸಂಬಂಧಿಸಿದಂತೆ ೪೫ ದಿನದ ಮರಿಗೆ ನಾಲ್ಕು ಬಾರಿ ಆಹಾರವನ್ನು ನೀಡಬೇಕಾಗುತ್ತದೆ. ನೀರನ್ನು ಪದೇ ಪದೇ ನೀಡಬೇಕಾಗುತ್ತದೆ. ನಾಯಿಗಳಿಗೆ ಸ್ವೀಟ್ಸ್‌, ಚಾಕಲೇಟ್‌ ನೀಡಬಾರದು. ಸರಿಯಾದ pet store ಆಹಾರ ಕ್ರಮದಿಂದ ಗಾತ್ರ ಮತ್ತು ಗುಣಮಟ್ಟ ಇರುತ್ತದೆ. ಇನ್ನು ನೀವು ನಾಯಿಗಳಿಗೆ ಮೊಸರು ಅನ್ನ, ರಾಗಿ ಗಂಜಿ ನೀಡುವುದು ಬಹಳ ಉತ್ತಮ. ಹಕ್ಕಿಗಳಿಗೆ ನವಣೆ, ಸೂರ್ಯಕಾಂತಿ ಬೀಜ ಹಾಗೂ ಹಣ್ಣುಗಳನ್ನು ನೀಡಬಹುದು. ಹಕ್ಕಿಗಳಿಗೆ ನೀವು ಒಂದು ಬಾರಿ ಆಹಾರ ನೀಡಿದರೆ ಉತ್ತಮ. ಮೀನುಗಳಿಗೆ ಅದರದ್ದೇ ಆಹಾರವನ್ನು ನೀಡಬೇಕಾಗುತ್ತದೆ. ಮೀನುಗಳಿಗೆ ಜಾಸ್ತಿ ಆಹಾರ ಕೂಡ ನೀಡಬಾರದು. ಒಂದು ಬಾರಿ ಆಹಾರ ನೀಡಿದರೆ ಸಾಕಾಗುತ್ತದೆ. ಹೆಚ್ಚು ಆಹಾರ ನೀಡಿವುದರಿಂದ ಮೀನುಗಳು ಸಾಯುವ ಸಾಧ್ಯತೆ ಹೆಚ್ಚಿರುತ್ತದೆ. ಬೆಕ್ಕುಗಳಿಗೆ ನೀವು ಮನೆಯಲ್ಲೇ ಆಹಾರವನ್ನು ನೀಡಬಹುದು. ಇನ್ನು ನಾಯಿಗಳ ಸಂತಾನೋತ್ಪತ್ತಿ ವಿಷಯಕ್ಕೆ ಬಂದರೆ ಹಕ್ಕಿಗಳು ಆಗಸ್ಟ್‌ ತಿಂಗಳಲ್ಲಿ ಬ್ರೀಡಿಂಗ್‌ ಬರುತ್ತದೆ. ಈ ಹಕ್ಕಿಗಳು ೮ ಮೊಟ್ಟೆಗಳನ್ನು ಇಡುತ್ತದೆ. ನೀವು ಬ್ರೀಡಿಂಗ್‌ ಸಮಯದಲ್ಲಿ ಮಡಿಕೆಗಳನ್ನು ಇಡಬೇಕು.

ರೋಗ ನಿಯಂತ್ರಣ ಮತ್ತು ವ್ಯಾಕ್ಸಿನೇಷನ್

 ನಾಯಿಗಳಿಗೆ ಹುಳು ಬಾಧಿಸುತ್ತದೆ. ವಾಕ್ಸಿನ್‌ ನೀಡಬೇಕು. ಪ್ರತಿ ವರ್ಷ ವ್ಯಾಕ್ಸಿನ್‌ ನೀಡಬೇಕು. ಹಕ್ಕಿಗಳಿಗೆ ಸೊಳ್ಳೆ ಕಚ್ಚದಂತೆ ನೋಡಿಕೊಳ್ಳಬೇಕು. ೪೫ ದಿನದ ಮರಿಗೆ ಪಪ್ಪಿ ವಾಕ್ಸಿನೇಶನ್‌ ನೀಡಬೇಕು. ಹಕ್ಕಿಗಳಿಗೆ ತುಳಸಿ, ಪುದೀನ ಸೊಪ್ಪು ನೀಡಬೇಕು. ನಾಯಿಗಳನ್ನು ಬಿಸಿಲು ಇರುವ ಸಮಯದಲ್ಲಿ ಸ್ನಾನ ಮಾಡಿಸುವುದು ಸೂಕ್ತ. ಬೆಕ್ಕುಗಳಿಗೆ ವರ್ಷಕ್ಕೆ ಒಮ್ಮೆ ವಾಕ್ಸಿನೇಶನ್‌ ಮಾಡಿಸುವುದು ಉತ್ತಮ. 

ಮಾರ್ಕೆಟಿಂಗ್‌, ಆನ್‌ ಲೈನ್‌ ಪ್ರಚಾರ

ಗುಣಮಟ್ಟದ ಪೆಟ್‌ ಗಳಿಗೆ ಬೇಡಿಕೆ ಹೆಚ್ಚು. ಪೆಟ್‌ ತರುವಾಗ ಬಹಳ ಜಾಗೂರಕರಾಗಿರಬೇಕು. ಗಾಳಿಯಾಡುವಂತೆ ಎಟ್‌ ಪ್ಯಾಕಿಂಗ್‌ ಮಾಡಬೇಕು. ಸಕ್ರಿಯವಾದ ಪೆಟ್‌ ಗಳಿಗೆ ಬೇಡಿಕೆ ಹೆಚ್ಚು. ಪ್ಯಾಕಿಂಗ್‌ ಮಾಡುವುದು ಬಹಳ ಮುಖ್ಯ. ವೆಬ್‌ ಸೈಟ್‌ ಮೂಲಕ ಮಾರಾಟ ಮಾಡುವುದು ಉತ್ತಮ. ನೀವು ನಾಯಿಗಳನ್ನು ಬಸ್‌, ಗಾಡಿ ಮುಂತಾದವುಗಳನ್ನು ನೀವು ಸಾಗಿಸಬಹುದು. ಆನ್‌ ಲೈನ್‌ ಮುಖಾಂತರ ಮಾರಾಟ ಮಾಡುವುದು ಬಹಳ ಮುಖ್ಯ. ಪೆಟ್‌ ಗಳಿಗೆ ಮಾರುಕಟ್ಟೆಯಲ್ಲಿಯೇ ಬೆಲೆ ನಿಗದಿ ಪಡಿಸಲಾಗುತ್ತದೆ. ಸಾಗಾಟ ಮಾಡುವಾಗ ಸರಿಯಾದ ನೀರು ನೀಡಬೇಕು. ಈ ಪೆಟ್‌ ಶಾಪ್‌ ಗಳ ಬಗ್ಗೆ Ffreedom App ನಲ್ಲಿ ಮಾಹಿತಿಯನ್ನು ಪಡೆಯಬಹುದು. 

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.