Home » Latest Stories » ಯಶಸ್ಸಿನ ಕಥೆಗಳು » ಫೋಟೋ ಸ್ಟುಡಿಯೋವನ್ನು ಆರಂಭಿಸಿ ಲಾಭವನ್ನು ಸೆರೆ ಹಿಡಿಯುತ್ತಿರುವ ಯುವಕ ಧನುಷ್  

ಫೋಟೋ ಸ್ಟುಡಿಯೋವನ್ನು ಆರಂಭಿಸಿ ಲಾಭವನ್ನು ಸೆರೆ ಹಿಡಿಯುತ್ತಿರುವ ಯುವಕ ಧನುಷ್  

by Punith B

ಕರ್ನಾಟಕದ ಮಂಡ್ಯ ಜಿಲ್ಲೆಯವರಾದ ಧನುಷ್ ಅವರು ಮೊದಲಿನಿಂದಲೂ ಸಹ ಫೋಟೋಗ್ರಫಿಯ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿದ್ದರು ಮತ್ತು ಬಾಲ್ಯದಲ್ಲಿಯೇ ಕ್ಯಾಮೆರಾಗಳು ಮತ್ತು ಫೋಟೋಗಳ ಕಡೆಗೆ ಹೆಚ್ಚು ಆಕರ್ಷಿತರಾಗಿದ್ದರು. ಅವರು ಶಿಕ್ಷಣವನ್ನು ಮುಗಿಸಿದ ಮೇಲೆ, ತಮ್ಮ ಪ್ಯಾಷನ್ ಅನ್ನು ಅನುಸರಿಸಲು ನಿರ್ಧರಿಸಿ ಫೋಟೋ ಸ್ಟುಡಿಯೋ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಚಿಕ್ಕಂದಿನಿಂದಲೂ ಸಹ ಧನುಷ್ ಅವರು ಬೇಸಿಗೆ ರಜೆಯ ಸಮಯದಲ್ಲಿ ಪ್ರೊಫೆಷನಲ್ ಫೋಟೋಗ್ರಾಫರ್ ಗಳ ಜೊತೆಗೆ ಸಹಾಯಕರಾಗಿ ಸೇರಿ ಕೆಲಸ ಮಾಡುತ್ತಾ ಫೋಟೋಗ್ರಫಿಯನ್ನು ಕಲಿತರು. ಈ ಅನುಭವವು ಧನುಷ್ ಅವರಿಗೆ ತಮ್ಮದೇ ಸ್ವಂತ ಬಿಸಿನೆಸ್ ಅನ್ನು ನಡೆಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸಿತು.

ITI ಶಿಕ್ಷಣವನ್ನು ಮುಗಿಸಿದ ಬಳಿಕ ಧನುಷ್ ಅವರು 18 ಸಾವಿರ ಸಂಬಳಕ್ಕೆ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಆದರೆ ಆ ಕೆಲಸ ಅವರಿಗೆ ತೃಪ್ತಿ ನೀಡಲಿಲ್ಲ. ಫೋಟೋಗ್ರಫಿ ಬಗ್ಗೆ ಇರುವ ಪ್ಯಾಷನ್ ಮತ್ತು ತಮ್ಮದೇ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸಬೇಕು ಎಂಬ ಹಂಬಲ ಅವರನ್ನು ಕೆಲಸವನ್ನು ತೊರೆದು ಮತ್ತೆ ಫೋಟೋಗ್ರಫಿ ಕಡೆಗೆ ವಾಲುವಂತೆ ಮಾಡಿತು. ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡುವುದಕ್ಕಿಂತ ಸ್ವಂತವಾಗಿ ಬಿಸಿನೆಸ್ ಮಾಡುವುದು ಉತ್ತಮ ಎಂಬುದು ಅವರ ನಂಬಿಕೆಯಾಗಿತ್ತು. ಹೀಗಾಗಿ ಅವರು ಬಿಸಿನೆಸ್ ಆರಂಭಿಸುವ ಬಗ್ಗೆ ಉತ್ಸುಕತೆಯನ್ನು ಹೊಂದಿದ್ದರು. 

ಇದೇ ಸಂದರ್ಭದಲ್ಲಿ ಧನುಷ್ ಅವರು ಯೂಟ್ಯೂಬ್ ಮೂಲಕ ffreedom app ಬಗ್ಗೆ ತಿಳಿದುಕೊಂಡರು. ಬಿಸಿನೆಸ್ ಬಗ್ಗೆ ಹೆಚ್ಚಿನ ಜ್ಞಾನ ಮತ್ತು ಮಾರ್ಗದರ್ಶನವನ್ನು ಪಡೆದುಕೊಳ್ಳುವ ಉದ್ದೇಶದಿಂದ ಅವರು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರ ಚಂದಾದಾರಿಕೆಯನ್ನು ಸಹ ಪಡೆದುಕೊಂಡರು. ಅಪ್ಲಿಕೇಶನ್ ನಲ್ಲಿ ಅವರು ಫೋಟೋಗ್ರಫಿಯ ಕೋರ್ಸ್ ಅನ್ನು ವೀಕ್ಷಿಸಿದರು ಮತ್ತು ಈ ಉದ್ಯಮದಲ್ಲಿ ಸಾಧನೆ ಮಾಡಿರುವ ಸಾಧಕರಿಂದ ಮಾರ್ಗದರ್ಶನವನ್ನು ಸಹ ಪಡೆದುಕೊಂಡರು. 

ನಂತರದಲ್ಲಿ ಧನುಷ್ ಅವರು ತಮ್ಮದೇ ಸ್ವಂತ ಫೋಟೋ ಸ್ಟುಡಿಯೋ ಬಿಸಿನೆಸ್ ಅನ್ನು ಪ್ರಾರಂಭಿಸಿದರು. ಬಾಲ್ಯದಿಂದ ಇಲ್ಲಿಯವರೆಗೆ ಧನುಷ್ ಅವರು ಪಟ್ಟ ಪರಿಶ್ರಮವು ಈಗ ಫಲ ನೀಡುತ್ತಿದ್ದು, ಅವರು ಕಳೆದ ನಾಲ್ಕು ತಿಂಗಳಿಂದ ತಮ್ಮದೇ ಸ್ವಂತ ಫೋಟೋ ಸ್ಟುಡಿಯೋ ಬಿಸಿನೆಸ್ ಅನ್ನು ನಡೆಸುತ್ತಿದ್ದಾರೆ. ಪ್ರಸ್ತುತ ಧನುಷ್ ಅವರ ಫೋಟೋ ಸ್ಟುಡಿಯೋ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಹೆಚ್ಚು ಹೆಚ್ಚು ಗ್ರಾಹಕರನ್ನು ಆಕರ್ಷಿಸುತ್ತಿದೆ. ಧನುಷ್ ಅವರು ತಮ್ಮ ಸ್ಟುಡಿಯೋವನ್ನು ನಡೆಸುವ ಜೊತೆಗೆ, ಕೆಲವು ಪತ್ರಿಕೆಗಳು ಮತ್ತು ಸುದ್ದಿ ಚಾನೆಲ್‌ಗಳಿಗೆ ಫ್ರೀಲಾನ್ಸ್ ಫೋಟೋಗ್ರಫರ್ ಆಗಿ ಸಹ ಕೆಲಸವನ್ನು ಮಾಡುತ್ತಿದ್ದಾರೆ. ಪ್ರಸ್ತುತ, ಅವರು ತಮ್ಮ ಬಿಸಿನೆಸ್ ಮೂಲಕ ತಿಂಗಳಿಗೆ 30 ರಿಂದ 40 ಸಾವಿರದವರೆಗೆ ಆದಾಯವನ್ನು ಗಳಿಸುತ್ತಿದ್ದಾರೆ.

ಫೋಟೋಗ್ರಫಿಯಲ್ಲಿ ತಮ್ಮದೇ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸುವ ಮೊದಲು ಉತ್ತಮ ಕೋರ್ಸ್‌ಗಳಿಂದ ಕಲಿತು ಮತ್ತು ವೃತ್ತಿಪರರ ಅಡಿಯಲ್ಲಿ ಸ್ವಲ್ಪ ಸಮಯದವರೆಗೆ ಕೆಲಸ ಮಾಡುವ ಮೂಲಕ ಅಗತ್ಯ ಜ್ಞಾನ ಮತ್ತು ಕೌಶಲ್ಯವನ್ನು ಪಡೆಯುವುದು ಸೂಕ್ತ ಎಂಬ ಸಲಹೆಯನ್ನು ಧನುಷ್ ನೀಡುತ್ತಾರೆ. 

ಮುಂದಿನ ದಿನಗಳಲ್ಲಿ, ಧನುಷ್ ಅವರು ತಮ್ಮ ಬಿಸಿನೆಸ್ ಅನ್ನು ವಿಸ್ತರಿಸುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳುವ ಆಶಯವನ್ನು ಹೊಂದಿದ್ದಾರೆ. ಧನುಷ್ ಅವರ ಈ ಯಶೋಗಾಥೆಯು ನಿಜಕ್ಕೂ ಯುವಕರಿಗೆ ಸ್ಪೂರ್ತಿದಾಯಕವಾಗಿದೆ. ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಸರಿಯಾದ ಮಾರ್ಗದರ್ಶನದಿಂದ ಯಾರು ಬೇಕಾದರೂ ಸಹ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬಹುದು ಎಂಬುದನ್ನು ಇದು ನಮಗೆ ಸೂಚಿಸುತ್ತದೆ.

ಧನುಷ್ ಅವರು ffreedom appನ ಕೋರ್ಸ್ ಗಳನ್ನು ವೀಕ್ಷಿಸುವ ಮೂಲಕ ಮತ್ತು ಕಲಿತದ್ದನ್ನು ಸಮರ್ಥವಾಗಿ ಅಳವಡಿಸಿಕೊಳ್ಳುವ ಮೂಲಕ ಇಂದು ಯಶಸ್ವಿ ಫೋಟೋ ಸ್ಟುಡಿಯೋ ಬಿಸಿನೆಸ್ ಅನ್ನು  ನಡೆಸುತ್ತಿದ್ದಾರೆ ಮತ್ತು ಅದರ ಮೂಲಕ ಉತ್ತಮ ಆದಾಯವನ್ನು ಸಹ ಗಳಿಸುತ್ತಿದ್ದಾರೆ. ಬಿಸಿನೆಸ್ ಅನ್ನು ಆರಂಭಿಸುವ ಮೂಲಕ ತಾವೂ ಸಹ ಯಶಸ್ವಿ ಉದ್ಯಮಿಯಾಗಬೇಕು ಮತ್ತು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬ ಕನಸು ಕಂಡಿರುವ ಲಕ್ಷಾಂತರ ಮಂದಿಗೆ ಅಗತ್ಯ ಜ್ಞಾನ, ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸುವುದು ffreedom appನ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅಪ್ಲಿಕೇಶನ್ ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ. ಬಿಸಿನೆಸ್ ಮತ್ತು ಕೃಷಿ ಮೂಲಕ ಲಕ್ಷಾಂತರ ಭಾರತೀಯರ ಬದುಕನ್ನು ಸಕಾರಾತ್ಮಕ ರೀತಿಯಲ್ಲಿ ಪರಿವರ್ತಿಸಲು ಮತ್ತು ಈ ಮೂಲಕ ಭಾರತವನ್ನು ಸದೃಢವಾಗಿ ನಿರ್ಮಿಸಲು ದಣಿವರಿಯದ ರೀತಿಯಲ್ಲಿ ffreedom app ಪರಿಶ್ರಮವನ್ನು ಪಡುತ್ತಿದೆ. ಬಿಸಿನೆಸ್ ಮತ್ತು ಕೃಷಿ ಕ್ಷೇತ್ರದ ಅತ್ಯಂತ ಯಶಸ್ವಿ ಸಾಧಕರನ್ನು ಗುರುತಿಸಿ ಮತ್ತು ಅವರ ಮಾರ್ಗದರ್ಶನದಲ್ಲಿ ffreedom app ಅತ್ಯುತ್ತಮ ಕೋರ್ಸ್ ಗಳನ್ನು ಸಿದ್ದಪಡಿಸಿದ್ದು, ಈ ಮೂಲಕ ಇತರರೂ ಸಹ ಅದರ ಲಾಭವನ್ನು ಪಡೆದುಕೊಂಡು ಯಶಸ್ವಿಯಾಗಬೇಕು ಎಂಬ ಗುರಿಯನ್ನು ಇದು ಹೊಂದಿದೆ. ಮತ್ತು ಪ್ರಸ್ತುತ ಭಾರತದಾದ್ಯಂತ ಒಂದು ಕೋಟಿಗೂ ಹೆಚ್ಚಿನ ಜನರು ffreedom appನ ಪ್ರಯೋಜನವನ್ನು ಪಡೆದುಕೊಂಡು ಯಶಸ್ವಿಯಾಗಿ ಬದುಕಿನಲ್ಲಿ ಮುಂದೆ ಸಾಗುತ್ತಿದ್ದಾರೆ.   

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.