Home » Latest Stories » ಯಶಸ್ಸಿನ ಕಥೆಗಳು » ಹೆಣ್ಮಕ್ಳೇ ಸ್ಟ್ರಾಂಗು ಗುರು – ತಮ್ಮ ಸ್ವಂತ ಟೈಲರಿಂಗ್‌ ಬಿಸಿನೆಸ್‌ ಆರಂಭಿಸಿ ಸಕ್ಸಸ್ಫುಲ್‌ ಗೃಹಿಣಿ ಎನಿಸಿಕೊಂಡ ರಶ್ಮಿ

ಹೆಣ್ಮಕ್ಳೇ ಸ್ಟ್ರಾಂಗು ಗುರು – ತಮ್ಮ ಸ್ವಂತ ಟೈಲರಿಂಗ್‌ ಬಿಸಿನೆಸ್‌ ಆರಂಭಿಸಿ ಸಕ್ಸಸ್ಫುಲ್‌ ಗೃಹಿಣಿ ಎನಿಸಿಕೊಂಡ ರಶ್ಮಿ

by Vinaykumar M Patil
640 views

ಒಂದು ಬಿಸಿನೆಸ್‌ ಮಾಡಹೊರಟಾಗ, ಅಲ್ಲಿಗೆ ಸವಾಲುಗಳು ಸರ್ವೇಸಾಮಾನ್ಯ. ಅದರಲ್ಲಿಯೂ ನಮ್ಮ‌ ಸುತ್ತಮುತ್ತಲೂ ಇರುವ ಜನರೇ ನಮ್ಮನ್ನು ಹಿಂದೇಟು ಹಾಕಿಸಿ ಮುಳುಗಿಸಿಬಿಡುತ್ತಾರೆ. ಇಂತಹ ಅಡೆತಡೆಗಳನ್ನು ದಾಟಿ ಮುಂದೆ ಬರುವುದೇ ಒಂದು ದೊಡ್ಡ ಸವಾಲಾಗಿಬಿಡುತ್ತದೆ. ಪುರುಷ ಪ್ರಧಾನವಾದ ಈ ಸಮಾಜದಲ್ಲಿ ಮಹಿಳೆಯರು ಮುಂದೆ ಬಂದು ತಮ್ಮದೇ ಸ್ವಂತ ಬಿಸಿನೆಸ್‌ ಆರಂಭ ಮಾಡಲು ಇಷ್ಟ ಪಡುವುದಿಲ್ಲ. 

ಅದರಲ್ಲಿಯೂ ಹಳ್ಳಿಯಲ್ಲಿ ಇರುವ ಮಹಿಳೆಯರು, ತಮ್ಮ ಗಂಡಂದಿರಿಗೆ ಕೃಷಿಯಲ್ಲಿ ಸಹಾಯ ಮಾಡುತ್ತ, ಮನೆಗೆಲಸ ಮಾಡುತ್ತ ಕಾಲ ಕಳೆಯುತ್ತಾರೆ. ಈ ನಂಬಿಕೆಯನ್ನು ಸುಳ್ಳು ಮಾಡಿ, ಬೆಂಗಳೂರಿನಂತಹ ದೊಡ್ಡ ಊರಿನಲ್ಲಿ, ತಮ್ಮದೇ ಸ್ವಂತ ಡಿಸೈನರ್‌ ಹ್ಯಾಂಡ್‌ಬ್ಯಾಗ್‌ ಬಿಸಿನೆಸ್‌ ಅನ್ನು ಆರಂಭಿಸಿ ಯಶಸ್ಸು ಪಡೆದ ಮಹಿಳೆಯೊಬ್ಬರಿದ್ದಾರೆ. ಅವರ ಹೆಸರೇ ರಶ್ಮಿ. 

ಬೆಂಗಳೂರಿನ ಮಾಗಡಿಯಲ್ಲಿ ನೆಲೆಸಿರುವ ಇವರು, ಮದುವೆಯಾದ ಮೇಲೆ ತಾವು ಏನಾದರೂ ಒಂದು ಸ್ವಂತ ಬಿಸಿನೆಸ್‌ ಮಾಡಿ ಎಲ್ಲರ ಹತ್ತಿರ ಸೈ ಎನಿಸಿಕೊಳ್ಳಬೇಕು ಎಂಬ ಮಹದಾಸೆಯನ್ನು ಇಟ್ಟುಕೊಂಡಿದ್ದರು. ಆದರೆ, ಅವರಿಗೆ ಇದ್ದ ಅಡೆತಡೆಗಳು ಅಷ್ಟಿಷ್ಟಲ್ಲ. ಅವರ ಸುತ್ತಲಿನ ಪರಿಸರದವರೇ ಅವರನ್ನು ಹಿಂಗೆಡಿಸಿ ಬಿಸಿನೆಸ್‌ ಮಾಡುವ ಅವರ ಮನಸ್ಥಿತಿಯನ್ನು ಹದಗೆಡಿಸಿದ್ದರು. 

ಯಾವುದಕ್ಕೂ ಎದೆಗುಂದದೇ, ರಶ್ಮಿ ಅವರು ತಮ್ಮ ಗಂಡನ ಸಹಾಯ ಪಡೆದು, ಸ್ವಂತ ಟೈಲರಿಂಗ್‌ ಬಿಸಿನೆಸ್‌ ಆರಂಭಿಸಿ ಬಿಟ್ಟರು. ಮೊದಲಿಗೆ ಟೈಲರಿಂಗ್‌ ಕ್ಲಾಸ್‌ ಅಟೆಂಡ್‌ ಮಾಡಿ ಅವರು ತಮ್ಮ ಗಂಡನಿಗೆ ಒಂದು ಶರ್ಟ್‌ ಸ್ಟಿಚ್‌ ಮಾಡಿಕೊಟ್ಟರು. ಆಗ ಅವರಿಗೆ ಸಿಕ್ಕ ರೆಸ್ಪಾನ್ಸ್‌ ನೋಡಿ ತಾವೂ ಸಹ ಈ ಟೈಲರಿಂಗ್‌ ಬಿಸಿನೆಸ್‌ ಅನ್ನು ನಡೆಸಬಹುದು ಎನ್ನುವ ಆತ್ಮವಿಶ್ವಾಸ ಬಂದಿತು. ಆದರೆ, ಅವರಿಗೆ ಎಲ್ಲ ರೀತಿಯ ಡ್ರೆಸ್‌ಗಳನ್ನು ಡಿಸೈನ್‌ ಮಾಡಲು ಮತ್ತು ಸ್ಟಿಚ್‌ ಮಾಡಲು ಕಷ್ಟವಾಗುತ್ತಿತ್ತು. 

ಕೈ ಹಿಡಿದ ffreedom app 

ಇಂತಹ ಸಮಯದಲ್ಲಿ ಅವರ ಕೈ ಹಿಡಿದಿದ್ದೇ ffreedom app. ತಮ್ಮ ಬಟ್ಟೆಗಳಿಗೆ ಸರಿಯಾದ ಅಳತೆ, ಡಿಸೈನ್‌ ಮತ್ತಿತರ ಮಾಹಿತಿಗಳಿಗೆ ಅವರು ffreedom app ಅನ್ನು ಡೌನ್‌ಲೋಡ್‌ ಮಾಡಿಕೊಂಡರು. ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿದ ತಕ್ಷಣ ಅವರು ಟೈಲರಿಂಗ್‌ ಕೋರ್ಸ್‌ ವೀಕ್ಷಿಸಿದರು. ಕೋರ್ಸ್‌ ಟ್ರೈಲರ್‌ ನೋಡಿ ಅವರಿಗೆ ಕೋರ್ಸ್‌ ಬಗ್ಗೆ ಉತ್ತಮ ಭಾವನೆ ಮೂಡಿತು. 

ನಂತರ ಅವರು ಅಪ್ಲಿಕೇಶನ್‌ಗೆ ಚಂದಾದಾರರಾದರು. ಟೈಲರಿಂಗ್‌ ಕೋರ್ಸ್‌ ಅನ್ನು ಸಂಪೂರ್ಣವಾಗಿ ವೀಕ್ಷಿಸಿದ ನಂತರ ಅವರು ಡಿಸೈನರ್‌ ಹ್ಯಾಂಡ್‌ಬ್ಯಾಗ್‌ ಕೋರ್ಸ್‌ ಅನ್ನು ಪಡೆದುಕೊಂಡರು. ಈ ಎರಡೂ ಕೋರ್ಸ್‌ಗಳನ್ನು ಕಲಿತ ನಂತರ ತಾವೂ ಸಹ ಒಬ್ಬ ಫ್ಯಾಷನ್‌ ಡಿಸೈನರ್‌ ಆಗಬಹುದು ಎಂಬ ಆತ್ಮವಿಶ್ವಾಸ ಅವರಲ್ಲಿ ಮೂಡಿತು. ಈ ಆತ್ಮವಿಶ್ವಾಸವೇ ಅವರನ್ನು ತಮ್ಮ ಸ್ವಂತ ಟೈಲರಿಂಗ್‌ ಬಿಸಿನೆಸ್‌ ಆರಂಭಿಸಿ, ಇನ್ನಷ್ಟು ಬಟ್ಟೆಗಳನ್ನು ಸ್ಟಿಚ್‌ ಮಾಡಲು ಪ್ರೇರೇಪಿಸಿತು. 

ಅವರು ಬಿಸಿನೆಸ್‌ ಆರಂಭಿಸಿದಾಗ ಅವರ ಗಂಡ ಅವರಿಗೆ ತಕ್ಕ ಸಪೋರ್ಟ್‌ ನೀಡಿದರು.  ಅವರು ತಮ್ಮ‌ ನೆಂಟರು, ಸ್ನೇಹಿತರಿಗೆ ಬಟ್ಟೆಗಳನ್ನು ಸ್ಟಿಚ್‌ ಮಾಡಿಕೊಡುತ್ತಾರೆ. ಅದಷ್ಟೇ ಅಲ್ಲದೇ ffreedom appನ ಮಾರ್ಕೆಟ್‌ಪ್ಲೇಸ್‌ ನಲ್ಲಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ. ffreedom appನ ಮಿಷನ್‌ ಏನೆಂದರೆ ಪ್ರತಿಯೊಬ್ಬರಿಗೂ ಜ್ಞಾನ ಮತ್ತು ಅವಕಾಶಗಳಿಗೆ ಪ್ರವೇಶವನ್ನು ಒದಗಿಸಿ, ಕಮ್ಯೂನಿಟಿ ಲೆಡ್ ಕಾಮರ್ಸ್ ಮೂಲಕ ಜೀವನೋಪಾಯದ ಅವಕಾಶಗಳಿಗೆ ಪ್ರವೇಶವನ್ನು ಒದಗಿಸುವುದು.

ಮಾರ್ಕೆಟಿಂಗ್‌ ಮತ್ತು ಮುಂದಿನ ಗುರಿ?

ತಾವು ಸ್ಟಿಚ್‌ ಮಾಡಿದ ಬಟ್ಟೆಗಳನ್ನು ಗ್ರಾಹಕರ ಇಷ್ಟಕ್ಕೆ ತಕ್ಕಂತೆ ಡಿಸೈನ್‌ ಮಾಡಿ ಮಾರಾಟ ಮಾಡುವ ರಶ್ಮಿ ಅವರಿಗೆ, ತಮ್ಮದೇ ಸ್ವಂತ ಗಾರ್ಮೆಂಟ್‌ ಅಂಗಡಿಯನ್ನು ಓಪನ್‌ ಮಾಡಿ ಬಿಸಿನೆಸ್‌ ನಡೆಸಬೇಕೆಂಬ ಆಸಕ್ತಿ ಇದೆ. ಆದರೆ, ಸಾಲ-ಸೂಲ ಮಾಡಿಕೊಂಡು ಅಂಗಡಿ ಓಪನ್‌ ಮಾಡುವ ಇರಾದೆ ಅವರಿಗಿಲ್ಲ. ತಾವೇ ಸ್ವಂತವಾಗಿ ದುಡಿದು, ತಮ್ಮ ಅಂಗಡಿಯನ್ನು ನಡೆಸಿಕೊಂಡು ಹೋಗಬೇಕು ಎಂಬ ಯೋಚನೆ ಅವರಲ್ಲಿದೆ. 

ಅವರು ಬಟ್ಟೆಗಳನ್ನಷ್ಟೇ ಅಲ್ಲದೇ, ಚಿಕ್ಕಮಕ್ಕಳಿಗೆ ಬ್ಯಾಗ್‌ಗಳು, ಡಿಸೈನರ್‌ ಬಟ್ಟೆಗಳು, ಡಿಸೈನರ್‌ ಹ್ಯಾಂಡ್‌ಬ್ಯಾಗ್‌, ವ್ಯಾನಿಟಿ ಬ್ಯಾಗ್‌ ಮುಂತಾದವುಗಳನ್ನು ಹೊಲಿಯುತ್ತಾರೆ. ಅವರಲ್ಲಿರುವ ಆತ್ಮವಿಶ್ವಾಸ ಮತ್ತು ಟ್ಯಾಲೆಂಟ್‌ ಅವರನ್ನು ಯಶಸ್ವಿ ಮಹಿಳಾ ಉದ್ಯಮಿಯನ್ನಾಗಿ ಮಾಡಿದೆ. ffreedom app ಇಲ್ಲದಿದ್ದರೆ ಈ ರೀತಿ ಸ್ವಂತ ಬಿಸಿನೆಸ್‌ ಆರಂಭಿಸಲು ಸಾಧ್ಯವಿಲ್ಲ ಎನ್ನುತ್ತಾರೆ ರಶ್ಮಿ. 

ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲ ರೀತಿಯ ಬಟ್ಟೆಗಳನ್ನು ಸ್ಟಿಚ್‌ ಮಾಡುವ ಅವರು, ತಮ್ಮ ಸುತ್ತಮುತ್ತಲಿನ ಗೃಹಿಣಿಯರಿಗೆ ಸ್ಫೂರ್ತಿ.

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.