ಬಾಳಗೊಂಡಪ್ಪ, ಅವರು ಕರ್ನಾಟಕದ ವಿಜಯಪುರದವರು, ಅವರು ಕೃಷಿ ಹಿನ್ನಲೆಯ ಕುಟುಂಬದಿಂದ ಬಂದವರಾದ್ದರಿಂದ ಬಾಲ್ಯದಿಂದಲೂ ಸಹ ಕೃಷಿಯ ಬಗ್ಗೆ ಅಪಾರವಾದ ಆಸಕ್ತಿಯನ್ನು ಹೊಂದಿದ್ದರು. ಬಿಎ ಮತ್ತು ಬಿಎಡ್ ಶಿಕ್ಷಣವನ್ನು ಪೂರ್ಣಗೊಳಿಸಿದ ಮೇಲೆ ಅವರು ಕೆಲವು ಸಮಯ ಶಿಕ್ಷಕರಾಗಿ ಕಾರ್ಯವನ್ನು ನಿರ್ವಹಿಸಿದರು ಆದರೆ ಕೃಷಿಯ ಮೇಲಿನ ಒಲವಿನಿಂದಾಗಿ ನಂತರದಲ್ಲಿ ಅವರು ಸಂಪೂರ್ಣವಾಗಿ ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿಕೊಂಡರು.
ಬಾಳಗೊಂಡಪ್ಪ ಅವರು ತಮ್ಮ ಐದು ಎಕರೆ ಜಮೀನಿನಲ್ಲಿ ಸಾಂಪ್ರದಾಯಿಕ ಬೆಳೆಗಳಾದ ಜೋಳ, ಮೆಕ್ಕೆ ಜೋಳ, ಹತ್ತಿ ಮುಂತಾದವುಗಳನ್ನು ಬೆಳೆಯಲು ಆರಂಭಿಸಿದರು. ಆದರೆ, ಈ ಬೆಳೆಗಳಿಂದ ತಕ್ಕಮಟ್ಟಿಗಿನ ಲಾಭವನ್ನು ಗಳಿಸಲು ಸಹ ಹೆಣಗಾಡಿದರು. ಹೀಗಾಗಿ ಅವರು ತಮ್ಮ ಜೀವನಮಟ್ಟವನ್ನು ಸುಧಾರಿಸಲು ಕೃಷಿಯಲ್ಲಿ ಬೇರೆ ಏನಾದರು ಹೊಸತನ್ನು ಮಾಡಬೇಕೆಂದು ಅಂದುಕೊಂಡರು.
COVID-19 ಸಾಂಕ್ರಾಮಿಕ ಸಮಯದಲ್ಲಿ, ಬಾಲಗೊಂಡಪ್ಪ ಅವರು ಯೂಟ್ಯೂಬ್ ಮೂಲಕ ಹಲವು ರೀತಿಯ ಕೃಷಿಯ ಬಗ್ಗೆ ಹುಡುಕಾಟ ನಡೆಸುತ್ತಿರುವಾಗ ffreedom appನ ಬಗ್ಗೆ ತಿಳಿದುಕೊಂಡರು. ಇನ್ನೂ ಹೆಚ್ಚಿನದನ್ನು ಕಲಿಯುವ ಉತ್ಸುಕತೆಯಿಂದ ಅವರು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡರು ಮತ್ತು ಅದಕ್ಕೆ ಚಂದಾದಾರರಾದರು. ಅಪ್ಲಿಕೇಶನ್ ನಲ್ಲಿ ಲಭ್ಯವಿದ್ದ ನೂರಾರು ಕೃಷಿಗೆ ಸಂಬಂಧಪಟ್ಟ ಕೋರ್ಸ್ ಗಳನ್ನು ನೋಡಿ ಬಾಳಗೊಂಡಪ್ಪ ಅವರು ಸಂತಸಗೊಂಡರು, ಮತ್ತು ಕೃಷಿಗೆ ಸಂಬಂಧಪಟ್ಟಂತೆ ಸರಿಯಾದ ಜ್ಞಾನವನ್ನು ಪಡೆಯಲು ಇದು ಅತ್ಯುತ್ತಮ ವೇದಿಕೆಯಾಗಿದೆ ಎಂಬುದನ್ನು ಅವರು ಅರಿತುಕೊಂಡರು.
ಬಾಳಗೊಂಡಪ್ಪ ಅವರು ಮೊದಲಿಗೆ ಅರಣ್ಯ ಕೃಷಿ ಕೋರ್ಸ್ ಅನ್ನು ಮತ್ತು ಸಮಗ್ರ ಕೃಷಿ ಕೋರ್ಸ್ ಅನ್ನು ffreedom appನಲ್ಲಿ ವೀಕ್ಷಿಸಿದರು ಮತ್ತು ಅದರ ಕುರಿತಾಗಿ ಸಂಪೂರ್ಣವಾದ ಜ್ಞಾನವನ್ನು ಪಡೆದುಕೊಂಡರು. ನಂತರದಲ್ಲಿ ಅವರು ತಮ್ಮ 1.5 ಎಕರೆ ಜಮೀನಿನಲ್ಲಿ 330 ಶ್ರೀಗಂಧದ ಮರಗಳು, 100 ಹೆಬ್ಬೇವಿನ ಮರಗಳು, 60 ಸೀತಾಫಲ ಮರಗಳು, 60 ಚೀಕೂ ಹಣ್ಣಿನ ಮರಗಳು, 60 ನಿಂಬೆ ಮರಗಳು, 100 ಹಲಸು ಮರಗಳು, 100 ಪೇರಲ ಮರಗಳು, 10 ತೆಂಗಿನ ಮರಗಳು ಮತ್ತು 10 ಮಾವಿನ ಮರಗಳನ್ನು ನೆಟ್ಟರು. ಬಾಲಗೊಂಡಪ್ಪ ಅವರು ಪ್ರಸ್ತುತ ತಮ್ಮ ಜಮೀನಿನಲ್ಲಿ 17 ವಿವಿಧ ಜಾತಿಯ ಸುಮಾರು 750 ಸಸಿಗಳನ್ನು ನೆಟ್ಟಿದ್ದಾರೆ.
ಆದರೆ ಅವರು ಅಷ್ಟಕ್ಕೇ ಸುಮ್ಮನಾಗಲಿಲ್ಲ. ಬಾಲಗೊಂಡಪ್ಪ ಅವರು ffreedom app ಮೂಲಕ ತಮ್ಮ ಕಲಿಕೆಯನ್ನು ಮುಂದುವರೆಸಿದರು. ಹೈನುಗಾರಿಕೆ, ಕೋಳಿ ಸಾಕಣೆ ಮತ್ತು ಕುರಿ ಸಾಕಾಣಿಕೆ ಕುರಿತ ಕೋರ್ಸ್‌ಗಳನ್ನು ವೀಕ್ಷಿಸಿದರು. ಕುರಿ ಸಾಕಾಣಿಕೆ ಕೋರ್ಸ್ ನಿಂದ ಪ್ರಭಾವಿತರಾದ ಅವರು ಕುರಿ ಸಾಕಣೆಗಾಗಿ 20×20 ಶೆಡ್ ನಿರ್ಮಿಸಿ 30 ಕುರಿ ಮತ್ತು 30 ಆಡುಗಳನ್ನು ಸಾಕಲು ಪ್ರಾರಂಭಿಸಿದರು.
ಪ್ರಸ್ತುತ ಬಾಲಗೊಂಡಪ್ಪ ಅವರ ಸಮಗ್ರ ಕೃಷಿ ಪದ್ಧತಿಯು ಫಲ ನೀಡುತ್ತಿದ್ದು, ಅದರಿಂದ ಅವರು ಉತ್ತಮ ಲಾಭವನ್ನು ಗಳಿಸುತ್ತಿದ್ದಾರೆ ಮತ್ತು ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಇದಿಷ್ಟೇ ಅಲ್ಲದೇ ಅರಣ್ಯ ಕೃಷಿಯನ್ನು ಸಹ ಯಶಸ್ವಿಯಾಗಿ ಮಾಡುತ್ತಿರುವ ಬಾಲಗೊಂಡಪ್ಪ ಅವರು, ಭವಿಷ್ಯದಲ್ಲಿ ಶ್ರೀಗಂಧದಿಂದ ಸುಮಾರು 3 ಕೋಟಿಯಷ್ಟು ಆದಾಯವನ್ನು ಗಳಿಸುವ ನಿರೀಕ್ಷೆಯನ್ನು ಹೊಂದಿದ್ದಾರೆ. ಇದರ ಜೊತೆಗೆ ಹೆಬ್ಬೇವಿನಿಂದ ಸಹ ಅವರು ಸುಮಾರು 5 ಲಕ್ಷದಷ್ಟು ಆದಾಯವನ್ನು ಗಳಿಸುವ ನಿರೀಕ್ಷೆಯನ್ನು ಹೊಂದಿದ್ದಾರೆ.
ಅವರ ಆದಾಯವು ಇಷ್ಟಕ್ಕೇ ನಿಲ್ಲುವುದಿಲ್ಲ, ನಿಂಬೆ ಹಣ್ಣನ್ನು ಸಹ ಬೆಳೆಯುತ್ತಿರುವ ಬಾಲಗೊಂಡಪ್ಪ ಅವರು, ಬೇಡಿಕೆ ಇದ್ದಾಗ ನಿಂಬೆಹಣ್ಣನ್ನು ನೇರವಾಗಿ ಮಾರಾಟ ಮಾಡಿ ಮತ್ತು ಉಳಿದ ಸಮಯದಲ್ಲಿ ಅವುಗಳಿಂದ ಉಪ್ಪಿನಕಾಯಿಯನ್ನು ತಯಾರಿಸಿ ಅದನ್ನು ಮಾರಾಟ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ತಮ್ಮದೇ ಆದ ಒಂದು ದೊಡ್ಡ ಉಪ್ಪಿನಕಾಯಿ ಬ್ರಾಂಡ್ ಅನ್ನು ಸ್ಥಾಪಿಸಿ ಅದನ್ನು ವಿಸ್ತರಿಸುವ ಗುರಿಯನ್ನು ಸಹ ಹೊಂದಿದ್ದಾರೆ.
ಕೃಷಿ ಹಿನ್ನಲೆಯ ಕುಟುಂಬದಿಂದ ಬಂದಿದ್ದರೂ ಸಹ ಬಾಳಗೊಂಡಪ್ಪ ಅವರು ಕೃಷಿಯಲ್ಲಿ ಯಾವಾಗಲು ನಷ್ಟವನ್ನೇ ಅನುಭವಿಸುತ್ತಿದ್ದರು. ಆದರೆ ಇಂತಹ ಸಂದರ್ಭದಲ್ಲಿ ಅವರು ffreedom app ಬಗ್ಗೆ ತಿಳಿದುಕೊಂಡರು. ಮತ್ತು ಅದರ ನೆರವಿನಿಂದ ಇಂದು ಕೋಟಿಯನ್ನು ಗಳಿಸುವ ಕಾಯಕದಲ್ಲಿ ನಿರತವಾಗಿದ್ದಾರೆ ಮತ್ತು ಕೃಷಿಯ ಮೂಲಕ ಲಾಭದಾಯಕ ಮತ್ತು ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿದ್ದಾರೆ. ಇಷ್ಟೆಲ್ಲವನ್ನು ಸಾಧಿಸಲು ಗುರುವಿನಂತೆ ಮಾರ್ಗದರ್ಶನ ಮಾಡಿದ ffreedom appಗೆ ಬಾಳಗೊಂಡಪ್ಪ ಅವರು ತಮ್ಮ ಹೃದಯ ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತಾರೆ.
ಕೃಷಿ ನಮ್ಮ ದೇಶದ ಬೆನ್ನೆಲುಬಾಗಿದೆ ಆದರೆ ಬಹಳಷ್ಟು ಮಂದಿ ಕೃಷಿಕರು ಇಂದಿಗೂ ಸಹ ಸರಿಯಾದ ಮಾರ್ಗದರ್ಶನವಿಲ್ಲದೆ ಕೃಷಿಯಲ್ಲಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಅಂತವರಿಗೆ ಸರಿಯಾದ ಜ್ಞಾನ ಮತ್ತು ಮಾರ್ಗದರ್ಶನವನ್ನು ಒದಗಿಸುವುದು ffreedom appನ ಉದ್ದೇಶವಾಗಿದೆ. ಪ್ರತಿಯೊಬ್ಬ ಕೃಷಿಕನೂ ಸಹ ಕೃಷಿಯಲ್ಲಿ ಯಶಸ್ಸನ್ನು ಸಾಧಿಸಬೇಕು ಮತ್ತು ಈ ಮೂಲಕ ಸ್ವಾವಲಂಬಿಯಾದ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಮಹತ್ತರವಾದ ಆಶಯವನ್ನು ffreedom app ಹೊಂದಿದೆ. ಮತ್ತು ಈ ನಿಟ್ಟಿನಲ್ಲಿ ಅದು ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ. ರೈತರು ಲಾಭದಾಯಕತೆ ಕಡೆಗೆ ವಾಲಲು ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡಲು ffreedom app ಟೊಂಕ್ಕ ಕಟ್ಟಿ ನಿಂತಿದೆ. ಜೊತೆಗೆ ಸದೃಢ ಮತ್ತು ಸಮರ್ಥ ಸ್ವಾವಲಂಬಿ ಭಾರತವನ್ನು ನಿರ್ಮಿಸುವಲ್ಲಿ ತನ್ನದೇ ಆದ ಕೊಡುಗೆಯನ್ನು ಅದು ಸಮಾಜಕ್ಕೆ ನೀಡುತ್ತಿದೆ.