Home » Latest Stories » ಯಶಸ್ಸಿನ ಕಥೆಗಳು » ಗೃಹಿಣಿಯ ಕೈಹಿಡಿದಿದ್ದು ಹೈನುಗಾರಿಕೆ…

ಗೃಹಿಣಿಯ ಕೈಹಿಡಿದಿದ್ದು ಹೈನುಗಾರಿಕೆ…

by Bharadwaj Rameshwar
668 views

ಲಾಭದಾಯಕ ಹೈನುಗಾರಿಕೆ. ಹೈನುಗಾರಿಕೆಯು ಅನಾದಿ ಕಾಲದಿಂದ ನಡೆದುಬಂದ ವೃತ್ತಿ. ಇದು ಇತರ ವೃತ್ತಿಗಳಿಗಿಂತ ಶ್ರೇಷ್ಠ ಎಂಬ ಭಾವನೆ ಇದೆ. ಭಾರತದಲ್ಲಿ ಹಸುವಿನ ಬಗ್ಗೆ ಗೋಮಾತೆ ಎಂಬ ಪವಿತ್ರ ಭಾವನೆ ಇದೆ. ಹಾಲಿನ ಜತೆಗೆ ಕೃಷಿಗೆ ಪೂರಕ ಗೊಬ್ಬರ ಜಾನುವಾರುಗಳಿಂದ ಲಭಿಸುತ್ತಿದೆ. ಇದನ್ನು ಇನ್ನಷ್ಟು ಲಾಭದಾಯಕವಾಗಿ ಮಾಡುವ ದೃಷ್ಟಿಯಿಂದ ಆಧುನಿಕ ಹೈನುಗಾರಿಕೆ ಪದ್ಧತಿ ಅನುಸರಿಸಬೇಕಾಗುತ್ತದೆ. ಹೈನುಗಾರಿಕೆಯಿಂದ ಕೃಷಿಕರು ಹೆಚ್ಚಿನ ಲಾಭ ಪಡೆಯಬಹುದು. ಈ ಹೈನುಗಾರಿಕೆಯನ್ನು ಸರಿಯಾದ ಮಾಹಿತಿ ಮತ್ತು ಯೋಜನೆಯೊಂದಿಗೆ ಆರಂಭಿಸಿದರೆ ಬಹಳಷ್ಟು ಲಾಭವನ್ನು ಪಡೆಯಬಹುದಾಗಿದೆ. ಇಂದು ಹೆಚ್ಚಿನ ಗೃಹಣಿಯರು ತಮ್ಮ ಮನೆಕೆಲಸದೊಂದಿಗೆ ಜೀವಾನೋಯಕ್ಕೆ ಆದಾಯವನ್ನು ಕೂಡ ಗಳಿಸುತ್ತಿದ್ದಾರೆ. ಇಂದು ಮಹಿಳೆಯರು ಕೂಡ ಮನೆಯಲ್ಲೇ ಇದ್ದುಕೊಂಡು ಸ್ವಾವಲಂಭಿ ಜೀವನ ನಡೆಸುತ್ತಿರುವ ಹಲವು ಉದಾಹರಣೆಗಳಿವೆ. 

ಇಲ್ಲಿ ನಾವು ನಿಮಗೆ ಸಾಮಾನ್ಯ ಕುಟುಂಬದ ಗೃಹಿಣಿಯೊಬ್ಬರು ಪ್ರೀಡಂ ಆ್ಯಪ್‌ ಮೂಲಕ ಹೈನುಗಾರಿಕೆ ಕೋರ್ಸ್‌ನ ಮೂಲಕ ಹೇಗೆ ಆದಾಯ ಗಳಿಸಬಹುದು ಎಂಬುವುದನ್ನು ಎಲ್ಲರಿಗೂ ತೋರಿಸಿಕೊಟ್ಟಿದ್ದಾರೆ. ಇವರ ಹೆಸರು ಮಂಜುಳಾ. ಮಂಜುಳಾ ಮೂಲತ: ದೊಡ್ಡಬಳ್ಳಾಪುರ ತಾಲೂಕು ಬೈರಸಂದ್ರಪಾಳ್ಯ ಗ್ರಾಮದವರು. ಪ್ರೀಡಂ ಆ್ಯಪ್‌ ಮೂಲಕ ಹೈನುಗಾರಿಕೆ ಹಾಗೂ ಇತರ ಕೋರ್ಸ್‌ ವೀಕ್ಷಿಸಿ ಕೋರ್ಸ್ ವೀಕ್ಷಿಸುವ ಮೂಲಕ ಗ್ರಾಹಕರು ಹೈನುಗಾರಿಕೆ ಆರಂಭಿಸಿ ಇಂದು ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ. 

ಪ್ರೀಡಂ ಆಯಪನಿಂದ ಪ್ರೇರಣೆ ಪಡೆದ ಮಂಜುಳಾ

ಮಂಜುಳಾ ಅವರು ಸಾಮಾನ್ಯ ಕುಟುಂಬದಿಂದ ಬಂದವರಾಗಿದ್ದಾರೆ. ತಾವು ಹೊಸದಾಗಿ ಪೋನ್‌ ಕೊಂಡು ಯೂಟ್ಯೂಬ್‌ ನಲ್ಲಿ ಅಡುಗೆಯ ವಿಡಿಯೋ ನೋಡುವಾಗ ಅವರಿಗೆ ಕಂಡಿದ್ದು ಪ್ರೀಡಂ ಆಯಪ್.‌ ಇದರಿಂದ ಪ್ರೇರಣೆಗೊಂಡು ಪ್ರೀಡಂ ಆ್ಯಪ್‌  ಅನ್ನು ಡೌನ್‌ ಲೋಡ್‌ ಮಾಡಿಕೊಳ್ಳುತ್ತಾರೆ. ಇವರಿಗೆ ಮೊದಲು ಕ್ಯಾಂಡೆಲ್‌ ಬಿಸಿನೆಸ್‌ ಮಾಡಬೇಕು ಎಂಬ ಯೋಜನೆ ಇತ್ತು. ಆದರೆ ಮನೆಯಲ್ಲಿ ಸಾಕಷ್ಟು ಕ್ಯಾಂಡಲ್‌ ಬಿಸಿನೆಸ್‌ ಗೆ ಜಾಗ ಸಾಕಾಗದಿದ್ದಾಗ ಇವರು ಹೈನುಗಾರಿಕೆಯತ್ತ ಮುಖ ಮಾಡುತ್ತಾರೆ. ಪ್ರೀಡಂ ಆ್ಯಪ್‌ ಮೂಲಕ ಹೈನುಗಾರಿಕೆಯ ಸಂಪೂರ್ಣ ಕೋರ್ಸ್‌ ಅನ್ನು ಮಾಡಿಕೊಂಡು ಒಂದು ನಾಟಿ ಹಸುವನ್ನು ಸಾಕುತ್ತಾರೆ. ಇಂದು ಮಂಜುಳಾ ಅವರಲ್ಲಿ ನಾಲ್ಕು ದನಗಳಿವೆ. ಇಂದು ಇವರು ದಿನಕ್ಕೆ ೨೦ ಲೀಟರ್‌ ಹಾಲು ಅನ್ನು ಡೈರಿಗೆ ಮಾರಾಟ ಮಾಡುವ ಮೂಲಕ ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ. ಕೋರ್ಸ್‌ನಿಂದ, ಅವರು ಡೈರಿ ಫಾರ್ಮ್ ಅನ್ನು ಪ್ರಾರಂಭಿಸಲು ಅಗತ್ಯತೆಗಳು, ಬಂಡವಾಳ, ಸಾಲಗಳು ಮತ್ತು ಸರ್ಕಾರದ ಬೆಂಬಲ, ಅನುಮತಿಗಳು, ನೋಂದಣಿ, ಆಹಾರ ಮತ್ತು ರೋಗಗಳು, ಹಾಲು, ಉಪ-ಉತ್ಪನ್ನಗಳು ಮತ್ತು ಕಾರ್ಮಿಕರು, ಬೆಲೆಗಳು, ಮಾರುಕಟ್ಟೆ, ಮಾರಾಟ, ವೆಚ್ಚಗಳು ಮತ್ತು ಲಾಭ, ಸವಾಲುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದು ಇಂದು ಹೈನುಗಾರಿಯಲ್ಲಿ ಉತ್ತಮ ಲಾಭವನ್ನು ಗಳಿಸುತ್ತಿದ್ದಾರೆ. ಇವರಿಗೆ ಮನೆಯವರಿಂದಲೂ ಪ್ರೊತ್ಸಾಹ ದೊರೆದಿದ್ದು, ಮುಂದಿನ ದಿನಗಳಲ್ಲಿ ಇದೇ ಬಿಸಿನೆಸ್‌ ಅನ್ನು ಮುಂದುವರಿಸಿಕೊಂಡು ಹೋಗಬೇಕು ಎಂಬುದು ಮಂಗಳಾ ಅವರ ಕನಸು. 

ಹೈನುಗಾರಿಕೆಯೊಂದಿಗೆ ಇತರ ಕೃಷಿ: 

ಮಂಜುಳಾ ಕೇವಲ ಹೈನುಗಾರಿಕೆ ಮಾತ್ರವಲ್ಲದೆ ಪ್ರೀಡಂ ಆಯಪ್‌ ನ ಮೂಲಕ ನಾಟಿ ಕೋಳಿ ಸಾಕಣೆ, ಕುರಿ ಸಾಕಣೆ ಕೋರ್ಸ್‌ ನಿಂದ ಪ್ರೇರಣೆ ಹೊಂದಿಗೆ ಇಂದು ಟಗರು, ನಾಟಿ ಕೋಳಿ ಸಾಕಣೆಯನ್ನು ಮಾಡುತ್ತಿದ್ದಾರೆ. ಇಂದು ಇವರು ೩೦ ನಾಟಿ ಕೊಳಿಯನ್ನು ಜೊತೆಗೆ ನಾಲ್ಕು ಟಗರುಗಳನ್ನು ಸಾಕಣೆ ಮಾಡುತ್ತಿದ್ದಾರೆ. ಇದರೊಂದಿಗೆ ಕೋಳಿ ಮೊಟ್ಟೆ, ಬೆಣ್ಣೆಯನ್ನು ಕೂಡ ಮಾರಾಟ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಂಜುಳಾ ಅವರಿಗೆ ಕೌಜಿಕ ಹಕ್ಕಿ ಫಾರ್ಮ್‌ ಮಾಡುವ ಮಹದಾಸೆಯನ್ನು ಹೊಂದಿದ್ದಾರೆ ಎನ್ನುತ್ತಾರೆ ಮಂಜುಳಾ ಅವರು.

ಸಾಕಷ್ಟು ಗೃಹಣಿಯರಿಗೆ ಮಾದರಿಯಾಗಿರುವ ಮಂಜುಳಾ

ಗೃಹಿಣಿಯೊಬ್ಬರು ಮನಸ್ಸು ಮಾಡಿದರೆ ಯಾವ ರೀತಿಯಲ್ಲೂ ಆದಾಯವನ್ನು ಗಳಿಸಬಹುದು ಎಂಬುವುದನ್ನು ಮಂಜುಳಾ ಅವರು ಸಾಧಿಸಿ ತೋರಿಸಿದ್ದಾರೆ. ಇವರು ಒಬ್ಬ ಸಾಮಾನ್ಯ ಮಹಿಳೆಯಾಗಿದ್ದು, ಮಹಿಳೆಯರೂ ಕೂಡ ಮನೆಯಲ್ಲಿ ಇದ್ದುಕೊಂಡು ಹೇಗೆ ಹೈನುಗಾರಿಕೆ ಮಾಡಬಹುದು ಎಂಬುವುದನ್ನು ಸಾಧಿಸಿ ಎಲ್ಲಾ ಮಹಳೆಯರಿಗೂ ಇವರು ಮಾದರಿಯಾಗಿದ್ದಾರೆ. 

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.