ಶಿವಣ್ಣ ಅವರು ಮೂಲತಃ ಮಂಡ್ಯ ಜಿಲ್ಲೆಯವರು. ಸಾಮಾನ್ಯ ಕೃಷಿ ಕುಟುಂಬದ ಹಿನ್ನಲೆಯಿಂದ ಬಂದಿದ್ದ ಇವರು ಮೊದಲಿಗೆ ಕೃಷಿಯನ್ನು ಆರಂಭಿಸಿ ಮತ್ತು ಅದರಲ್ಲಿ ನಷ್ಟವನ್ನು ಅನುಭವಿಸಿದ್ದರು.
ಜೀವನ ನಿರ್ವಹಣೆಗೆ ಕ್ಯಾಬ್ ಡ್ರೈವರ್ ವೃತ್ತಿ
ಕೃಷಿಯ ಬಗ್ಗೆ ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನ ಇಲ್ಲದ ಕಾರಣ ಕೃಷಿಯಲ್ಲಿ ಇವರು ನಷ್ಟವನ್ನು ಅನುಭವಿಸುವಂತಾಯಿತು. ನಂತರದಲ್ಲಿ ಬದುಕು ನಿರ್ವಹಣೆ ಮಾಡಲು ಇವರು ಕ್ಯಾಬ್ ಡ್ರೈವರ್ ವೃತ್ತಿಯನ್ನು ಆರಂಭಿಸಿದರು. ಯಾವುದೇ ವೃತ್ತಿಯನ್ನೂ ಸಹ ಶ್ರದ್ದೆಯಿಂದ ಮಾಡುತ್ತಿದ್ದ ಇವರು ಟ್ರಾವೆಲ್ ಬಿಸಿನೆಸ್ ಅನ್ನು ಪ್ರಾರಂಭಿಸಿ ಅದರಲ್ಲಿ ಯಶಸ್ಸನ್ನು ಸಹ ಪಡೆದು ಸುಮಾರು ಹತ್ತು ಕಾರ್ ಗಳ ಮಾಲೀಕರಾದರು.
ಕೋವಿಡ್ ಹೆಮ್ಮಾರಿ ಬಿಸಿನೆಸ್ ಗೆ ಹೊಡೆತ
ಉತ್ತಮವಾಗಿ ಸಾಗುತ್ತಿದ್ದ ಟ್ರಾವೆಲ್ ಬಿಸಿನೆಸ್ ಗೆ ಕೋವಿಡ್ ಎಂಬ ಹೆಮ್ಮಾರಿ ಆಘಾತವನ್ನು ನೀಡಿತು. ಈ ಕಾರಣದಿಂದ ಬಿಸಿನೆಸ್ ನಲ್ಲಿ ನಷ್ಟವನ್ನು ಅನುಭವಿಸುವಂತಾಯಿತು. ತಮ್ಮ ಬಳಿ ಇದ್ದ ಒಂದು ಕಾರ್ ಅನ್ನು ಬಿಟ್ಟು ಮಿಕ್ಕೆಲ ಕಾರ್ ಗಳನ್ನು ಮಾರಾಟ ಮಾಡಿದರು. ಜೀವನ ನಿರ್ವಹಣೆಗೆ ಮತ್ತೆ ಕ್ಯಾಬ್ ಡ್ರೈವರ್ ಆಗಿ ಕೆಲಸವನ್ನು ಆರಂಭಿಸಿದರು.
ಮತ್ತೆ ಭರವಸೆ ತುಂಬಿದ ffreedom App
ಕ್ಯಾಬ್ ಡ್ರೈವರ್ ಆಗಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಶಿವಣ್ಣ ಅವರು ffreedom App ಬಗ್ಗೆ ತಿಳಿದುಕೊಂಡರು. ಅವರು ಈ ಅಪ್ಲಿಕೇಶನ್ ಡೌನಲೋಡ್ ಮಾಡಿಕೊಂಡು ಹಣಕಾಸು ನಿರ್ವಹಣೆ, ಕೆರಿಯರ್ ಬಿಲ್ಡಿಂಗ್, ಕೃಷಿ, ಟ್ರಾವೆಲ್ ಬಿಸಿನೆಸ್ ಮುಂತಾದ ಹಲವು ಕೋರ್ಸ್ ಗಳನ್ನು ವೀಕ್ಷಣೆ ಮಾಡಿದರು. ಇದರಿಂದ ಅವರು ಹಲವು ವಿಷಯಗಳ ಬಗ್ಗೆ ಉತ್ತಮ ಜ್ಞಾನವನ್ನು ಪಡೆದುಕೊಂಡರು. ಈ ಮೂಲಕ ಮತ್ತೆ ಅವರ ಬದುಕಲ್ಲಿ ಭರವಸೆ ಮೂಡಿತು. ಸಾಧನೆ ಮಾಡಬೇಕು ಎಂಬ ತುಡಿತ ಮತ್ತೆ ಹೆಚ್ಚಾಯಿತು. ಕೃಷಿ ಮತ್ತು ಬಿಸಿನೆಸ್ ಆರಂಭಿಸಲು ಮತ್ತೆ ನಿರ್ಧಾರ ಮಾಡಿದರು.
ದೊಡ್ಡ ಕೃಷಿ ಉದ್ಯಮಿ ಆಗುವ ಗುರಿ
ffreedom App ಮೂಲಕ ಕಲಿತ ವಿಷಯಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಹಲವು ರೀತಿಯ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಬೆಳೆದ ತರಕಾರಿಗಳನ್ನು ತಾವೇ ಮಾರಾಟ ಮಾಡುವ ಮೂಲಕ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿದ್ದಾರೆ. ಈ ಮೂಲಕ ಉತ್ತಮ ಆದಾಯ ಮತ್ತು ಲಾಭವನ್ನು ಗಳಿಸುತ್ತಿದ್ದಾರೆ. ಕೃಷಿಯಲ್ಲಿ ಇನ್ನು ವಿವಿಧ ರೀತಿಯ ವಿಷಯಗಳನ್ನು ಅನ್ವೇಷಿಸುವ ಮೂಲಕ ಮಾಸಿಕವಾಗಿ ಒಂದು ಲಕ್ಷದಷ್ಟು ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿದ್ದಾರೆ.
ಕೃಷಿಯ ಜೊತೆ ಜೊತೆಗೆ ಟ್ರಾವೆಲ್ ಬಿಸಿನೆಸ್ ಅನ್ನು ಸಹ ಮತ್ತೆ ಶುರುಮಾಡಿದ ಶಿವಣ್ಣ ಅವರು ಈ ಬಿಸಿನೆಸ್ ನಲ್ಲಿ ಅನುಸರಿಸಬೇಕಾದ ಹಲವು ತಂತ್ರಗಳನ್ನು ಅಳವಡಿಸಿಕೊಂಡು ನಿಧಾನವಾಗಿ ಯಶಸ್ಸನ್ನು ಪಡೆಯುತ್ತಿದ್ದಾರೆ. ಈ ಬಿಸಿನೆಸ್ ನಲ್ಲಿ ಉತ್ತಮವಾಗಿ ಹಣಕಾಸುಗಳ ನಿರ್ವಹಣೆಯನ್ನು ಮಾಡುವ ಮೂಲಕ ಮೊದಲಿಗಿಂತ ಒಳ್ಳೆಯ ಆದಾಯ ಮತ್ತು ಲಾಭವನ್ನು ಗಳಿಸುತ್ತಿದ್ದಾರೆ. ಪ್ರಸ್ತುತ ತಮ್ಮ ಟ್ರಾವೆಲ್ ಬಿಸಿನೆಸ್ ನಲ್ಲಿ 5 ಕಾರ್ ಗಳನ್ನು ಹೊಂದಿರುವ ಶಿವಣ್ಣ ಅವರು ಮುಂದಿನ ದಿನಗಳಲ್ಲಿ 50ರಿಂದ 100 ಕಾರ್ ಗಳನ್ನು ಹೊಂದುವ ಮೂಲಕ ದೊಡ್ಡ ಟ್ರಾವೆಲ್ ಉದ್ಯಮವನ್ನು ಸ್ಥಾಪಿಸಬೇಕು ಎಂಬ ಮಹದಾಸೆಯನ್ನು ಇಟ್ಟುಕೊಂಡಿದ್ದಾರೆ.