ಮನೆಯಿಂದಲೇ ಏನಾದರು ಸಣ್ಣ ಬಿಸಿನೆಸ್ ಅನ್ನು ಪ್ರಾರಂಭಿಸಿ ಒಳ್ಳೆಯ ಆದಾಯವನ್ನು ಗಳಿಸಲು ಬಯಸುವ ಗೃಹಿಣಿಯರಿಗೆ ಚಂದ್ರಿಕ ರಾವ್ ಅವರು ಸ್ಫೂರ್ತಿಯಾಗಿದ್ದಾರೆ. ಅವರು MA (ಸಮಾಜಶಾಸ್ತ್ರ) ದಲ್ಲಿ ತಮ್ಮ ಪದವಿಯನ್ನು ಪಡೆದಿದ್ದಾರೆ ಮತ್ತು ಚಂದ್ರಿಕಾ ರಾವ್ ಅವರು ವಕೀಲರನ್ನು ಮದುವೆ ಆಗಿದ್ದಾರೆ.
ಒಂದು ಕಡೆ ಪತಿ ವಕೀಲ ವೃತ್ತಿಯನ್ನು ಮಾಡುತ್ತಿದ್ದರೆ, ಇನ್ನೊಂದೆಡೆ ರಾಯಪುರದಲ್ಲಿರುವ ತಮ್ಮ 9 ಎಕರೆ ಜಮೀನಿನಲ್ಲಿ ಚಂದ್ರಿಕ ರಾವ್ ಅವರು ಜೋಳವನ್ನು ಬೆಳೆಯುತ್ತಿದ್ದಾರೆ. ಪ್ರಸ್ತುತ ಅವರು ಇದರ ಜೊತೆಗೆ ಕ್ಯಾಂಡಲ್, ಚಾಕೊಲೇಟ್, ಮಶ್ರೂಮ್ ಮತ್ತು ಸೋಪ್ ಬಿಸಿನೆಸ್ ಅನ್ನು ಆರಂಭಿಸುವ ಮೂಲಕ ಉತ್ತಮವಾದ ಆದಾಯವನ್ನು ಗಳಿಸುತ್ತಿದ್ದಾರೆ. ಅವರ ಈ ಎಲ್ಲ ಬಿಸಿನೆಸ್ ಗಳ ಯಶಸ್ಸಿಗೆ ffreedom app ಪ್ರಮುಖ ಪಾತ್ರವನ್ನು ವಹಿಸಿದೆ.
ಒಮ್ಮೆ ಮೊಬೈಲ್ ನಲ್ಲಿ ಯೂಟ್ಯೂಬ್ ವಿಡಿಯೋಗಳನ್ನು ವೀಕ್ಷಿಸುತ್ತಿರುವಾಗ ಚಂದ್ರಿಕ ಅವರು ffreedom appನ ಬಗ್ಗೆ ತಿಳಿದುಕೊಂಡರು. ಕುತೂಹಲದಿಂದ ಅವರು ಗೂಗಲ್ ಪ್ಲೇ ಸ್ಟೋರ್ ನಿಂದ ffreedom app ಅನ್ನು ಡೌನ್ಲೋಡ್ ಮಾಡಿಕೊಂಡರು ಮತ್ತು ಅದರ ಚಂದಾದಾರಿಕೆಯನ್ನು ಸಹ ಪಡೆದುಕೊಂಡರು. ಅಪ್ಲಿಕೇಶನ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಉದ್ದೇಶದಿಂದ ಚಂದ್ರಿಕ ಅವರು ffreedom appನ ಚಾಕೊಲೇಟ್ ಬಿಸಿನೆಸ್, ಡ್ರ್ಯಾಗನ್ ಫ್ರೂಟ್ ಕೃಷಿ, ಕ್ಯಾಂಡಲ್ ಮೇಕಿಂಗ್, ಸಮಗ್ರ ಕೃಷಿ, ತೈವಾನ್ ಪೇರಲ, ಮುದ್ರಾ ಲೋನ್ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ ಗಳನ್ನು ವೀಕ್ಷಿಸಿದರು. ಈ ಕೋರ್ಸ್ ಗಳಿಂದ ಅವರು ಬಿಸಿನೆಸ್ ಮತ್ತು ಕೃಷಿಯ ಬಗ್ಗೆ ಅಪಾರವಾದ ಜ್ಞಾನವನ್ನು ಪಡೆದುಕೊಂಡರು. ಅವರು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವ ಉದ್ದೇಶವನ್ನು ಹೊಂದಿದ್ದರು, ಹೀಗಾಗಿ ಅವರು ಮೊದಲ ಹಂತದಲ್ಲಿ ಕ್ಯಾಂಡಲ್ ಮೇಕಿಂಗ್, ಚಾಕೊಲೇಟ್ ಮತ್ತು ಅಣಬೆ ಕೃಷಿಯನ್ನು ಪ್ರಾರಂಭಿಸಿದರು.
ಅವರು ತಮ್ಮ ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಅನ್ನು 40 ಸಾವಿರದ ಆರಂಭಿಕ ಬಂಡವಾಳದಿಂದ ಮತ್ತು ತಮ್ಮ ಚಾಕೊಲೇಟ್ ಬಿಸಿನೆಸ್ ಅನ್ನು 30 ಸಾವಿರದ ಆರಂಭಿಕ ಬಂಡವಾಳದಿಂದ ಪ್ರಾರಂಭಿಸಿದರು. ಮತ್ತು ಅವರು ಅದರಿಂದ ಒಟ್ಟಾರೆಯಾಗಿ 20 ಸಾವಿರದಷ್ಟು ಲಾಭವನ್ನು ಪಡೆಯುತ್ತಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಈ ಎಲ್ಲ ವ್ಯವಹಾರದಿಂದ ಒಟ್ಟಾರೆ 2 ಲಕ್ಷದಷ್ಟು ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಅವರು ಈಗಾಗಲೇ ದೊಡ್ಡ ದೊಡ್ಡ ಆರ್ಡರ್ ಗಳನ್ನು ಪಡೆಯುತ್ತಿದ್ದಾರೆ ಮತ್ತು ಕುಟುಂಬ ಮತ್ತು ಸ್ನೇಹಿತರಿಂದ ಉತ್ತಮ ಪಾಸಿಟಿವ್ ಫೀಡ್ ಬ್ಯಾಕ್ ಅನ್ನು ಪಡೆಯುತ್ತಿದ್ದಾರೆ. ಇದರ ಜೊತೆಗೆ ಅವರು ತಮ್ಮ ಕ್ಯಾಂಡಲ್ ಮೇಕಿಂಗ್, ಚಾಕೊಲೇಟ್ ಮತ್ತು ಅಣಬೆ ಕೃಷಿಯನ್ನು ವಿಸ್ತರಿಸುವ ಗುರಿಯನ್ನು ಸಹ ಹೊಂದಿದ್ದಾರೆ.
ಚಂದ್ರಿಕಾ ಅವರ ಈ ಎಲ್ಲ ಸಾಧನೆಗೆ ffreedom app ಬೆಂಬಲವಾಗಿ ನಿಂತಿದೆ. ಬದುಕಲ್ಲಿ ಏನಾದರೂ ಸಾಧನೆ ಮಾಡಬೇಕು ಆದರೆ ಎಲ್ಲಿಂದ ಹೇಗೆ ಪ್ರಾರಂಭಿಸಬೇಕು ಎಂಬ ಗೊಂದಲದಲ್ಲಿದ್ದ ಅವರಿಗೆ ffreedom app ಒಂದು ಉತ್ತಮ ಮಾರ್ಗದರ್ಶಿಯಾಗಿದೆ. ಇಂದು ಚಂದ್ರಿಕಾ ಅವರು ಹಲವಾರು ಯಶಸ್ವಿ ಬಿಸಿನೆಸ್ ಮತ್ತು ಕೃಷಿಯನ್ನು ಆರಂಭಿಸಿದ್ದಾರೆ ಮತ್ತು ಅದರ ಮೂಲಕ ಹಲವು ಆದಾಯದ ಮೂಲಗಳನ್ನು ಕಂಡುಕೊಂಡಿದ್ದಾರೆ. ತಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಈಗಾಗಲೇ ಯಶಸ್ವಿ ಮಹಿಳಾ ಉದ್ಯಮಿಯಾಗಿ ಕಂಗೊಳಿಸುತ್ತಿರುವ ಅವರು ಹಲವಾರು ಮಹಿಳೆಯರಿಗೆ ಸಾಧನೆ ಮಾಡಲು ಪ್ರೇರಣೆಯಾಗಿದ್ದಾರೆ. ಮನೆಯಲ್ಲಿರುವ ಗೃಹಿಣಿಯರೂ ಸಹ ಮನೆಯಿಂದಲೇ ಒಂದು ಸಣ್ಣ ಬಿಸಿನೆಸ್ ಅನ್ನು ಆರಂಭಿಸುವ ಮೂಲಕ ಆದಾಯದ ಮೂಲವನ್ನು ಕಂಡುಕೊಳ್ಳಬೇಕು, ಮತ್ತು ಈ ಮೂಲಕ ಅವರು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಬೇಕು ಎಂಬುದು ffreedom appನ ಉದ್ದೇಶವಾಗಿದೆ. ಇದರ ಜೊತೆಗೆ ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿಕೊಳ್ಳಲು ಬಯಸುವವರಿಗೆ ಅಗತ್ಯವಿರುವ ಎಲ್ಲ ರೀತಿಯ ಜ್ಞಾನವನ್ನು ಮತ್ತು ಅವಕಾಶಗಳನ್ನು ಒದಗಿಸಲು ffreedom app ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ.