Home » Latest Stories » ಯಶಸ್ಸಿನ ಕಥೆಗಳು » ವಿನೋದ್‌ನ  ಕೃಷಿಯ ಕನಸಿಗೆ ದಾರಿ ತೋರಿಸಿದ್ದು ffreedom app

ವಿನೋದ್‌ನ  ಕೃಷಿಯ ಕನಸಿಗೆ ದಾರಿ ತೋರಿಸಿದ್ದು ffreedom app

by Poornima P

ಸುಮಾರು 15 ಎಕರೆ ಜಮೀನಿನಲ್ಲಿ 2 ಎಕರೆಯಲ್ಲಿ ದಾಳಿಂಬೆ, 2 ಎಕರೆಯಲ್ಲಿ ಸೀಬೆ ಹಣ್ಣು, 2 ಎಕರೆಯಲ್ಲಿ ಅಂಜೂರ, 3 ಎಕರೆಯಲ್ಲಿ ನಾಕ್ಪುರ್‌ ಆರೆಂಜ್‌, 400 ತೆಂಗಿನ ಗಿಡಗಳು, 1 ಎಕರೆಯಲ್ಲಿ ಅಡಿಕೆ, ಲಿಂಬೆ, ನೇರಳೆ, ಹುಣಸೆಹಣ್ಣು ಸೇರಿದಂತೆ 3.5 ಎಕರೆ ಜಾಗದಲ್ಲಿ ಮೀನು ಸಾಕಣೆ,  ನಾಟಿ ಕೋಳಿ, ಕುರಿ ಸಾಕಣೆಯನ್ನು ಮಾಡುತ್ತಾ ಕೃಷಿಯಲ್ಲಿ ಬದುಕು ಕಟ್ಟಿಕೊಂಡವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಿನೋದ್‌ ಎಂಬವರು. 

ಸಮಗ್ರ ಕೃಷಿ ಅಂದ್ರೆ ಇದು ರೈತರ ಜೀವನಮಟ್ಟವನ್ನು ಸುಧಾರಿಸುವ ಆದಾಯ ಹೆಚ್ಚಿಸುವ ಕೃಷಿಯಲ್ಲಿ ಒಂದಾಗಿದೆ. ತೋಟಗಾರಿಕೆ ಆಧಾರಿತ, ಜಾನುವಾರು ಆಧಾರಿತ, ಮರ ಆಧಾರಿತ, ಮೀನುಗಾರಿಕೆ ಆಧಾರಿತ ಕೃಷಿ ಮಾಡುವುದೇ ಸಮಗ್ರ ಕೃಷಿಯಾಗಿದೆ. ಸಮಗ್ರ ಕೃಷಿಯಲ್ಲಿ ಕೈತುಂಬ ಆದಾಯ ಪಡೆದುಕೊಳ್ಳಬಹುದು ಎಂಬುವುದನ್ನು ತೋರಿಸಿಕೊಟ್ಟವರು ವಿನೋದ್‌. 

ಅಂದಹಾಗೆ ಮೂಲತ:  ವಿನೋದ್‌ ಕೃಷಿ ಕುಟುಂಬದಿಂದ ಬಂದಂತವರಲ್ಲ. ವಿನೋದ್‌ ವೃತ್ತಿಯಲ್ಲಿ ಒಬ್ಬ ಸಿವಿಲ್‌ ಇಂಜಿನಿಯರ್.‌ ಎಂ.ಟೆಕ್‌  ಪದವಿಯನ್ನು ಪಡೆದಿದ್ದಾರೆ. ಆದರೆ ಇವರಿಗೆ ಚಿಕ್ಕಂದಿನಿಂದ  ಕೃಷಿಯತ್ತ ಹೆಚ್ಚಿನ ಒಲವು ಇತ್ತು. ಅದಕ್ಕಾಗಿಯೇ ಮೊದಲೇ ಜಮೀನನ್ನು ಕೊಂಡುಕೊಂಡಿದ್ದರು. ಆದರೆ ಆ ಜಮೀನನ್ನು ಹೇಗೆ ಉಪಯೋಗಿಸಬೇಕು ಎಂಬುವುದು ಮಾತ್ರ ಅವರಿಗೆ ತಿಳಿದಿರಲಿಲ್ಲವಂತೆ. ಜಮೀನನ್ನು ಹೇಗೆ ಉಪಯೋಗಿಸಬೇಕು, ಯಾವೆಲ್ಲ ಕೃಷಿಯ ಮಾಡಿದರೆ ಹೇಗೆ ಲಾಭ ಪಡೆಯಬಹುದು ಎಂಬುವುದನ್ನು ತಿಳಿಕೊಟ್ಟಿದ್ದೇ ffreedom appನಲ್ಲಿ ಲಭ್ಯವಿದ್ದ ಕೋರ್ಸ್‌ಗಳು. 

ಗೂಗಲ್‌ ಆ್ಯಪ್‌ನಲ್ಲಿ  ffreedom appನ್ನು ವೀಕ್ಷಿಸಿ ಡೌನ್‌ಮಾಡಿ ಬಳಿಕ ಇದು ತಮಗೆ ತಮ್ಮ ಮಾರ್ಗವನ್ನು ಕಂಡುಕೊಳ್ಳಲು ಸಹಾಯ ಮಾಡಬಹುದು ಎಂಬುವುದನ್ನು ಮನಗಂಡು ಸಬ್‌ಸ್ಕೈಬ್‌ ಆಗುತ್ತಾರೆ. ಕೃಷಿಯ ಬಗ್ಗೆ ಏನೂ ಅರಿಯದ ಇವರಿಗೆ ಕೃಷಿಯಲ್ಲಿ ಯಶಸ್ವಿಯಾಗಿ ಮುನ್ನುಗ್ಗಲು ಮತ್ತು ಯಾವ ದಾರಿಯಲ್ಲಿ ಸಾಗಬೇಕು ಎಂಬುವುನ್ನು ತೋರಿಸಿಕೊಟ್ಟಿದ್ದೇ   ffreedom app ಎನ್ನುತ್ತಾರೆ ವಿನೋದ್‌. ಇವರು ಪ್ರೀಡಂ ಆ್ಯಪ್‌ ಮೂಲಕ ಮೊದಲು ದಾಳಿಂಬೆ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ದಾಳಿಂಬೆ ಕೃಷಿ ಕೋರ್ಸ್‌ನಲ್ಲಿ ಪಡೆಯುತ್ತಾರೆ. ಬಳಿಕ ದಾಳಿಂಬೆ ಕೃಷಿಯನ್ನು ಅನುಷ್ಠಾನಕ್ಕೆ ತರುತ್ತಾರೆ. ಇನ್ನೂ ತಮ್ಮ ಆಸಕ್ತಿಯನ್ನು ಬಿಡದ ಇವರು ffreedom appನಲ್ಲಿ ಇನ್ನಷ್ಟು ಕೋರ್ಸ್‌ಗಳನ್ನು ವೀಕ್ಷಿಸಿ ತಮ್ಮ ಜಮೀನಿನಲ್ಲಿ ಸಮಗ್ರ ಕೃಷಿಯನ್ನು ಅನುಷ್ಠಾನಕ್ಕೆ ತರುತ್ತಾರೆ. 

ffreedom appನ ಕೋರ್ಸ್‌ಗಳನ್ನು ವೀಕ್ಷಿಸುವ ಮೂಲಕ ಇವರು ಇಂದು ಸಮಗ್ರ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ. ಅದಲ್ಲದೆ ತಮ್ಮ ಶ್ರಮದ ಫಲವಾಗಿ ಇಂದು ದಾಳಿಂಬೆ ಕೃಷಿಯಿಂದ 4ರಿಂದ 8 ಲಕ್ಷ, ಅಂಜೂರದಿಂದ 4ರಿಂದ 5 ಲಕ್ಷ, ಪೇರಲದಿಂದ 2ರಿಂದ 3 ಲಕ್ಷ ಆದಾಯ ಪಡೆಯುತ್ತಿದ್ದಾರೆ. ಇದಲ್ಲದೆ ಇವರು ಮೀನು ಸಾಕಾಣಿಕೆಗೆ 10-12 ಲಕ್ಷ ಬಂಡವಾಳ ಹೂಡಿ ಈಗ ಈ ಮೀನು ಸಾಕಾಣಿಕೆಯಿಂದ 20-30 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ವಿನೋದ್‌ ಅವರ ಕೃಷಿಯಲ್ಲಿ ಇನ್ನೊಂದು ವಿಶೇಷತೆ ಎಂದರೆ ಇವರು ತಮ್ಮ ಕೃಷಿಗೆ ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸುವುದಿಲ್ಲ. ಕೇವಲ ಸಾಂಪ್ರದಾಯಕ ಗೊಬ್ಬರಗನ್ನೇ ಬಳಸಿ ಯಾವುದೇ ರಾಸಾಯನಿಕಗಳ ಸಹಾಯವಿಲ್ಲದೆ ಅತ್ಯುತ್ತಮವಾಗಿ ಕೃಷಿಯನ್ನು ನಡೆಸಿ ಒಬ್ಬ ಆದರ್ಶದಾಯಕವಾದ ಕೃಷಿಕ ಎಂದು ಹೇಳುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ . ಅತಿ ಕಡಿಮೆ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸಿಕೊಂಡು ಸಮಗ್ರ ಕೃಷಿಗೆ ಆದ್ಯತೆ ನೀಡಿ ಜೀವನದಲ್ಲಿ ಸಾಧಿಸಿದವರಲ್ಲಿ ಇವರು ಒಬ್ಬರು . ಅವರ ಸಮಗ್ರ  ಕೃಷಿ ಪದ್ಧತಿ ಕೃಷಿಯಲ್ಲಿ ಪ್ರವೃತ್ತಿ ಹೊಂದಿರುವ ಕೃಷಿಕರು ಮತ್ತು ಯುವಜನತೆಗೆ ಇದು ಮಾದರಿಯಾಗಿದೆ.

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.