ಯಾವುದೇ ಬಿಸಿನೆಸ್ ಅನ್ನು ಪ್ರಾರಂಭಿಸುವುದು ಒಂದು ಸವಾಲಿನ ಕೆಲಸ, ವಿಶೇಷವಾಗಿ ಅನುಭವದ ಕೊರತೆ ಮತ್ತು ಜ್ಞಾನದ ಕೊರತೆ ಇರುವವರಿಗೆ ಇದು ಅಪಾಯಕಾರಿ ಕೂಡ ಹೌದು. ಇಂದು 22 ವರ್ಷದ ಯಶಸ್ವಿ ಉದ್ಯಮಿ ಆಗಿರುವ ಪರಶುರಾಮ್ ಅವರು ನಾಲ್ಕು ವರ್ಷಗಳ ಹಿಂದೆ ಮೊದಲ ಬಾರಿಗೆ ಬಟ್ಟೆ ವ್ಯಾಪಾರವನ್ನು ಪ್ರಾರಂಭಿಸಿದಾಗ ಅನುಭವ ಮತ್ತು ಜ್ಞಾನದ ಕೊರತೆಯಿಂದಾಗಿ ಭಾರೀ ನಷ್ಟವನ್ನು ಎದುರಿಸಿದರು. ಆದರೆ ಅವರ ದೃಢತೆ, ಚಾತುರ್ಯ ಮತ್ತು ಧೈರ್ಯದ ಮೂಲಕ ಬಟ್ಟೆ ಅಂಗಡಿ ಬಿಸಿನೆಸ್ ನಲ್ಲಿ ಮತ್ತೆ ಯಶಸ್ಸನ್ನು ಸಾಧಿಸಲು ಸಾಧ್ಯವಾಯಿತು.
ಬಿಸಿನೆಸ್ ಗೆ ದಾರಿದೀಪವಾದ ffreedom App
ಇಂದು ಪರಶುರಾಮ್ ಅವರ ಯಶಸ್ಸಿಗೆ ಪ್ರಮುಖವಾದ ಅಂಶವೆಂದರೆ ಹೊಸ ಸಂಪನ್ಮೂಲಗಳನ್ನು ಕಲಿಯುವ ಬಗ್ಗೆ ಅವರಿಗೆ ಇರುವ ಆಸಕ್ತಿ. ಕೇವಲ ಹೈಸ್ಕೂಲ್ ಶಿಕ್ಷಣವನ್ನು ಹೊಂದಿದ್ದರೂ ಸಹ ಅವರು ಬಿಸಿನೆಸ್ ನ ವಿಚಾರವಾಗಿ ಉಪಯುಕ್ತ ಮಾಹಿತಿಯನ್ನು ತಿಳಿದುಕೊಳ್ಳಲು ಅವರು ಯಾವಾಗಲೂ ಸಹ ಸಿದ್ಧರಿರುತ್ತಿದ್ದರು. ಒಮ್ಮೆ ಸಾಮಾಜಿಕ ಜಾಲತಾಣದ ಮೂಲಕ ffreedom App ನ ಬಗ್ಗೆ ತಿಳಿದುಕೊಂಡರು. ಅಪ್ಲಿಕೇಶನ್ ಅನ್ನು ಡೌನಲೋಡ್ ಮಾಡಿಕೊಳ್ಳುವ ಮೂಲಕ ಬಟ್ಟೆ ಬಿಸಿನೆಸ್ ಗೆ ಸಂಬಂಧಿಸಿದ ವಿವಿಧ ಕೋರ್ಸ್ ಗಳನ್ನು ವೀಕ್ಷಿಸಿದರು. ಈ ಮೂಲಕ ಅವರು ಈ ಬಿಸಿನೆಸ್ ನ ಬಗ್ಗೆ ಆಳವಾದ ಜ್ಞಾನವನ್ನು ಪಡೆಯಲು ಸಾಧ್ಯವಾಯಿತು. ಬಿಸಿನೆಸ್ ನ ಯೋಜನೆಯನ್ನು ಹೇಗೆ ರೂಪಿಸಬೇಕು ಮತ್ತು ಬಿಸಿನೆಸ್ ಅನ್ನು ಸರಿಯಾಗಿ ನಿರ್ವಹಣೆ ಮಾಡುವುದರ ಮೂಲಕ ಅಧಿಕ ಲಾಭವನ್ನು ಹೇಗೆ ಗಳಿಸಬಹುದು ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಂಡರು.
ಉದ್ಯಮಶೀಲತೆಯಲ್ಲಿ ಧೈರ್ಯದ ಪಾತ್ರ
ವ್ಯಾಪಾರ ಜಗತ್ತಿನಲ್ಲಿ ಶಿಕ್ಷಣ ಮತ್ತು ಸಂಪನ್ಮೂಲಗಳು ಮುಖ್ಯವಾಗಿದ್ದರೂ ಸಹ ಇವುಗಳು ಯಶಸ್ಸಿಗೆ ಕಾರಣವಾಗುವ ಏಕೈಕ ಅಂಶಗಳಲ್ಲ. ಪರಶುರಾಮ್ ಅವರಲ್ಲಿದ್ದ ಸವಾಲುಗಳು ಮತ್ತು ಸೋಲುಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ಮತ್ತು ಆತ್ಮವಿಶ್ವಾಸ ಸಹ ಪ್ರಮುಖ ಕಾರಣ ಎಂದು ಸಹ ಹೇಳಬಹುದು. ಇದರ ಜೊತೆಗೆ ಅವರಲ್ಲಿದ್ದ ಗೆದ್ದೇ ಗೆಲ್ಲುತ್ತೇನೆ ಎಂಬ ದೃಢಸಂಕಲ್ಪವೂ ಸಹ ಪ್ರಮುಖ ಕಾರಣವೆಂದು ಹೇಳಬಹುದು.
ಪರಶುರಾಮ್ ಅವರು ಮೊದಲು ಈ ಬಿಸಿನೆಸ್ ಪ್ರಾರಂಭಿಸಿದಾಗ ಎಲ್ಲವನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದಿದ್ದರೂ ಸಹ ತನ್ನ ಸ್ವಂತ ಹಣವನ್ನು ಬಂಡವಾಳವಾಗಿ ಹೂಡಿಕೆ ಮಾಡಲು ಅವರು ಹೆದರಲಿಲ್ಲ. ನಂತರದಲ್ಲಿ ತಾವು ಅಂದುಕೊಂಡ ರೀತಿಯಲ್ಲಿ ಬಿಸಿನೆಸ್ ನಡೆಯದಿದ್ದಾಗ ಮತ್ತು ದೊಡ್ಡ ನಷ್ಟ ಎದುರಾದಾಗ, ಅವರು ಬಿಟ್ಟುಕೊಡಲಿಲ್ಲ. ಬದಲಾಗಿ, ಅವರು ಆ ಅನುಭವವನ್ನು ಕಲಿಕೆಯ ಅವಕಾಶವಾಗಿ ಬಳಸಿಕೊಂಡರು ಮತ್ತು ಯಶಸ್ಸು ಪಡೆಯಲು ಇನ್ನಷ್ಟು ಶ್ರಮಿಸಿದರು.
ಬೆಂಬಲ ಮತ್ತು ಹೂಡಿಕೆಯ ಶಕ್ತಿ
ಬಿಸಿನೆಸ್ ನಲ್ಲಿ ಮತ್ತೆ ಯಶಸ್ಸು ಪಡೆಯಲು ಬಯಸಿದ್ದ ಪರಶುರಾಮ್ ಅವರ ಬಳಿ ಅಗತ್ಯವಿರುವ ಬಂಡವಾಳ ಇರಲಿಲ್ಲ. ಆದರೆ ಇವರ ಕನಸಿಗೆ ಸ್ನೇಹಿತರ ಬೆಂಬಲವನ್ನು ಪಡೆದುಕೊಳ್ಳುವಲ್ಲಿ ಯಶಸ್ವೀ ಆದರು. ಈ ಮೂಲಕ ಮತ್ತೆ ಬಟ್ಟೆ ಅಂಗಡಿ ಬಿಸಿನೆಸ್ ಅನ್ನು ತಳಮಟ್ಟದಿಂದ ಹೊಸದಾಗಿ ಕಟ್ಟಲು ಆರ್ಥಿಕವಾಗಿ ಹೆಚ್ಚು ಸಹಾಯವಾಯಿತು. .
ಮೊದಲಿಗೆ 7 ಲಕ್ಷದ ಆರಂಭಿಕ ಹೂಡಿಕೆಯೊಂದಿಗೆ ತಮ್ಮ ಬಿಸಿನೆಸ್ ಅನ್ನು ಶುರುಮಾಡಿದ ಇವರು ಕೊನೆಗೂ ಸಹ ಯಶಸ್ಸನ್ನು ಪಡೆಯಲು ಸಾಧ್ಯವಾಯಿತು.
ಬಿಸಿನೆಸ್ ವಿಸ್ತರಣೆ ಯೋಜನೆ
ಪರಶುರಾಮ್ ಅವರ ಬಿಸಿನೆಸ್ ಇಂದು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ, ಆದಾಯವವೂ ಸಹ ಗಣನೀಯವಾಗಿ ಹೆಚ್ಚುತ್ತಿದೆ. ಹೀಗಾಗಿ ಭವಿಷ್ಯದ ಬಗ್ಗೆ ದೊಡ್ಡ ದೊಡ್ಡ ಯೋಜನೆಗಳನ್ನು ಇವರು ಹೊಂದಿದ್ದಾರೆ. ತಮ್ಮ ಬಿಸಿನೆಸ್ ಅನ್ನು ವಿಸ್ತರಿಸಲು ಮತ್ತು ತಮ್ಮ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಶಾಲಾ ಸಮವಸ್ತ್ರ ಸೇರಿದಂತೆ ಹೆಚ್ಚಿನ ಉತ್ಪನ್ನಗಳನ್ನು ಮಾರಾಟ ಮಾಡಲು ಉತ್ತಮ ಯೋಜನೆಯನ್ನು ರೂಪಿಸುತ್ತಿದ್ದಾರೆ. ಇದು ಬಿಸಿನೆಸ್ ನೆಡೆಗೆ ಅವರಿಗೆ ಇರುವ ಸಮರ್ಪಣಭಾವವನ್ನು ಬಿಂಬಿಸುವುದು ಮಾತ್ರವಲ್ಲದೆ ತಮ್ಮ ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯನ್ನು ಒದಗಿಸುವ ಅವರ ಬದ್ಧತೆಯನ್ನು ಸಹ ತೋರಿಸುತ್ತದೆ.