Home » Latest Stories » ಯಶಸ್ಸಿನ ಕಥೆಗಳು » ಶಿವರೆಡ್ಡಿಯ ಯಶಸ್ವಿ ಶ್ರೀಗಂಧದ ಕೃಷಿ : ಉತ್ತಮ ಭವಿಷ್ಯಕ್ಕೆ ದಾರಿ ತೋರಿದ ffreedom app

ಶಿವರೆಡ್ಡಿಯ ಯಶಸ್ವಿ ಶ್ರೀಗಂಧದ ಕೃಷಿ : ಉತ್ತಮ ಭವಿಷ್ಯಕ್ಕೆ ದಾರಿ ತೋರಿದ ffreedom app

by Punith B
32 views

ಶಿವರೆಡ್ಡಿ ಅವರು ಮೂಲತಃ ಗದಗ ಜಿಲ್ಲೆಯ ನರಗುಂದದ ಯಶಸ್ವಿ ಕೃಷಿಕರು. ಅವರು ಸುಮಾರು 60 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದರೂ ಸಹ ಮೊದಲಿಗೆ ಜಮೀನಿನಲ್ಲಿ ಒಂದೇ ತರಹದ ಬೆಳೆಯನ್ನು ಬೆಳೆಯುವ ಮೂಲಕ ಬಹಳಷ್ಟು ನಷ್ಟವನ್ನು ಅನುಭವಿಸುತ್ತಿದ್ದರು. 

ಆದರೆ ಒಮ್ಮೆ ಯೂಟ್ಯೂಬ್ ವಿಡಿಯೋವನ್ನು ವೀಕ್ಷಿಸುತ್ತಿರುವಾಗ ಅವರು ffreedom appನ ಜಾಹೀರಾತನ್ನು ವೀಕ್ಷಿಸಿದರು ಮತ್ತು ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಆಸಕ್ತಿಯಿಂದ ಅವರು ಗೂಗಲ್ ಪ್ಲೇಸ್ಟೋರ್ ನಿಂದ ffreedom app ಅನ್ನು ಡೌನ್ಲೋಡ್ ಮಾಡಿಕೊಂಡರು ಮತ್ತು ಅದರ ಚಂದಾದಾರಿಕೆಯನ್ನು ಸಹ ಪಡೆದುಕೊಂಡರು. ffreedom appನಲ್ಲಿ ಮೊದಲಿಗೆ ಅವರು ಶ್ರೀಗಂಧ ಕೃಷಿ ಕುರಿತಾದ ಕೋರ್ಸ್ ಅನ್ನು ವೀಕ್ಷಿಸಿದರು ಮತ್ತು ಕೋರ್ಸ್ ನ ಸಾಧಕ ಮಾರ್ಗದರ್ಶಕರಿಂದ ಉಪಯುಕ್ತ ಮಾಹಿತಿಯನ್ನು ಪಡೆದುಕೊಂಡರು. ಇದರಿಂದ ಪ್ರೇರಣೆಗೊಂಡ ಶಿವರೆಡ್ಡಿ ಅವರು ತಮ್ಮ 5 ಎಕರೆ ಜಮೀನಿನಲ್ಲಿ ಎರಡು ಲಕ್ಷ ಬಂಡವಾಳದೊಂದಿಗೆ ಶ್ರೀಗಂಧದ ಕೃಷಿಯನ್ನು ಪ್ರಾರಂಭಿಸಿದ್ದಾರೆ ಮತ್ತು ಅವರು ಅದನ್ನು ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಶ್ರೀಗಂಧದ ಮರಗಳು ಸುಮಾರು 15 ವರ್ಷಕ್ಕೆ ಕಟಾವಿಗೆ ಬರುವುದರಿಂದ ಮುಂದಿನ ದಿನಗಳಲ್ಲಿ ಅವರು ಎಕರೆಗೆ 1 ಕೋಟಿಯಷ್ಟು ಆದಾಯವನ್ನು ಶ್ರೀಗಂಧದ ಮೂಲಕ ಗಳಿಸುವ ನಿರೀಕ್ಷೆಯನ್ನು ಹೊಂದಿದ್ದಾರೆ. ಶ್ರೀಗಂಧದ ಜೊತೆ ಜೊತೆಗೆ ಅವರು ಪೇರಲೆ ಮತ್ತು ನಿಂಬೆಯನ್ನು ಸಹ ಬೆಳೆಯುತ್ತಿದ್ದಾರೆ ಮತ್ತು ಅದರ ಮೂಲಕ ನಿಯಮಿತವಾದ ಆದಾಯವನ್ನು ಗಳಿಸುತ್ತಿದ್ದಾರೆ.

ಬದುಕಿನಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂಬ ಹಸಿವನ್ನು ಹೊಂದಿರುವ ಶಿವರೆಡ್ಡಿ ಅವರು ಈಗಾಗಲೇ ffreedom appನಲ್ಲಿ ಕುರಿ ಸಾಕಣೆ, ಕೋಳಿ ಸಾಕಣೆ, ತೋಟಗಾರಿಕೆ, ಅರಣ್ಯ ಕೃಷಿ ಮತ್ತು ಮೀನು ಸಾಕಣೆ ಕುರಿತ ಹಲವು ಕೋರ್ಸ್ ಗಳನ್ನು ಈಗಾಗಲೇ ವೀಕ್ಷಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಸಹ ಒಂದೊಂದಾಗಿ ಪ್ರಾರಂಭಿಸುವ ನಿಟ್ಟಿನಲ್ಲಿ ಈಗಾಗಲೇ ತಯಾರಿಯನ್ನು ನಡೆಸುತ್ತಿದ್ದಾರೆ. 

ಅಪಾರವಾದ ಜಮೀನನ್ನು ಹೊಂದಿದ್ದರೂ ಯಾವಾಗಲೂ ನಷ್ಟವನ್ನೇ ಅನುಭವಿಸುತ್ತಿದ್ದ ಶಿವರೆಡ್ಡಿ ಅವರ ಕೃಷಿ ಬದುಕು ffreedom app ಬಳಕೆಯ ನಂತರದಲ್ಲಿ ಲಾಭದ ಹಾದಿಯಲ್ಲಿ ಸಾಗುತ್ತಿದೆ. ಸರಿಯಾದ ಜ್ಞಾನದೊಂದಿಗೆ ರೈತರೂ ಸಹ ಕೋಟಿಗಳಲ್ಲಿ ಗಳಿಸಬಹುದು ಎಂಬುದನ್ನು ffreedom app ಅವರಿಗೆ ತೋರಿಸಿಕೊಟ್ಟಿದೆ ಮತ್ತು ಅದಕ್ಕೆ ಅವರು ಮನಪೂರ್ವಕ ಧನ್ಯವಾದಗಳನ್ನು ಸಹ ಅರ್ಪಿಸುತ್ತಾರೆ. 

ಕೃಷಿಯ ಬಗ್ಗೆ ಸರಿಯಾದ ಜ್ಞಾನವಿದ್ದರೆ ಸಣ್ಣ ಭೂಮಿಯಲ್ಲೂ ಸಹ ಬಂಗಾರದ ಬೆಳೆಯನ್ನು ಬೆಳೆಯಬಹುದು ಎಂಬುದನ್ನು ರೈತರಿಗೆ ತಿಳಿಸುವುದು ಮತ್ತು ಅವರನ್ನು ಲಾಭದಾಯಕವಾಗಿಸುವುದು ffreedom appನ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ffreedom app ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ ಎಂಬುದಕ್ಕೆ ಈ ಎಲ್ಲ ಉದಾಹರಣೆಗಳು ಜ್ವಲಂತ ಸಾಕ್ಷಿಯಾಗಿದೆ. 

ffreedom appನ ಸಹಾಯದಿಂದ ಯಶಸ್ಸಿನ ಹಾದಿಯಲ್ಲಿರುವ ಶಿವರೆಡ್ಡಿ ಅವರು ಮುಂದಿನ ದಿನಗಳಲ್ಲಿ 10 ಸಾವಿರದಷ್ಟು ಮಾಹಾಗನಿಯನ್ನು ನೆಡುವ ಯೋಜನೆಯನ್ನು ಸಹ ಹೊಂದಿದ್ದಾರೆ. ಈಗಾಗಲೇ ಅವರು ಸುಮಾರು 1 ಸಾವಿರದಷ್ಟು ಹೆಬ್ಬೇವನ್ನು ಸಹ ಬೆಳೆಸುತ್ತಿದ್ದಾರೆ. ffreedom app ಮೂಲಕ ಅರಣ್ಯ ಕೃಷಿಯ ಬಗ್ಗೆ ಹೆಚ್ಚು ಜ್ಞಾನವನ್ನು ಪಡೆದಿರುವ ಅವರು ಈ ನಿಟ್ಟಿನಲ್ಲಿ ಪ್ರತಿಯೊಬ್ಬ ರೈತರೂ ಸಹ ಕನಿಷ್ಠ ಪಕ್ಷ ತಮ್ಮ ಜಮೀನಿನ ಬದಿಯಲ್ಲಾದರು ಅರಣ್ಯ ಕೃಷಿಯನ್ನು ಮಾಡಬೇಕು ಮತ್ತು ಇದರಜೊತೆಗೆ ತಮ್ಮ ಜಮೀನಿನಲ್ಲಿ ವೈವಿಧ್ಯಮಯವಾದ ಬೆಳೆಗಳನ್ನು ಬೆಳೆಯಬೇಕು ಆಗ ಮಾತ್ರ ಲಾಭದಾಯಕ ಕೃಷಿ ಮಾಡಲು ಸಾಧ್ಯ ಎಂಬ ಸಲಹೆಯನ್ನು ರೈತರಿಗೆ ನೀಡುತ್ತಾರೆ.  

ರೈತರು ನಮ್ಮ ದೇಶದ ಬೆನ್ನುಲುಬು ಆದರೆ ಹೆಚ್ಚಿನ ಪ್ರಮಾಣದ ರೈತರು ಈಗಲೂ ಸಹ ಕೃಷಿಯಲ್ಲಿ ಉತ್ತಮ ಆದಾಯ ಗಳಿಸಲು ಮತ್ತು ಒಳ್ಳೆಯ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ. ಹೀಗಾಗಿ ರೈತರನ್ನು ಲಾಭದಾಯಕವಾಗಿಸಲು ಅಗತ್ಯವಿರುವ ಸರಿಯಾದ ಮಾರ್ಗದರ್ಶನವನ್ನು ನೀಡಿ ಅವರ ಬದುಕನ್ನು ಹಸನಾಗಿಸಬೇಕು ಎಂಬ ಸದುದ್ದೇಶದಿಂದ ffreedom app ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ.       

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.