Home » Latest Stories » ಯಶಸ್ಸಿನ ಕಥೆಗಳು » ಟೈಲರಿಂಗ್ ಮೂಲಕ ಸ್ವಾವಲಂಬಿ ಬದುಕು: ದಾರಿ ತೋರಿಸಿದ ffreedom app

ಟೈಲರಿಂಗ್ ಮೂಲಕ ಸ್ವಾವಲಂಬಿ ಬದುಕು: ದಾರಿ ತೋರಿಸಿದ ffreedom app

by Punith B
313 views

ರಾಧಿಕಾ ಅವರು ಯಾವಾಗಲೂ ಸಹ ಹೊಸ ವಿಷಯಗಳನ್ನು ಕಲಿಯುವ ಬಗ್ಗೆ ಆಸಕ್ತಿಯನ್ನು ಹೊಂದಿದ್ದರು ಮತ್ತು ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಎಂಬ ಮಹತ್ತರವಾದ ಕನಸನ್ನು ಹೊಂದಿದ್ದರು. ಮದುವೆಯಾದ ನಂತರದಲ್ಲಿ ಅವರು ಮೊದಲಿಗೆ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು ಆದರೆ ಮಗುವಿಗೆ ಜನ್ಮ ನೀಡಿದ ನಂತರದಲ್ಲಿ ಅವರು ತಮ್ಮ ಕೆಲಸವನ್ನು ಬಿಡಬೇಕಾಯಿತು. ಆದಾಗ್ಯೂ, ಸಾಧನೆ ಮಾಡಬೇಕು ಎಂಬ ಕನಸು ಕಂಡಿದ್ದ ರಾಧಿಕಾ ಅವರು ಮನೆಯಿಂದಲೇ ಏನನ್ನಾದರೂ ಆರಂಭಿಸಬೇಕು ಎಂಬುವ ನಿಟ್ಟಿನಲ್ಲಿ ಯೋಚನೆ ಮಾಡಲು ಆರಂಭಿಸಿದರು. 

ಹೊಸ ಬಿಸಿನೆಸ್ ಅವಕಾಶಗಳ ಹುಡುಕಾಟದಲ್ಲಿದ್ದ ರಾಧಿಕಾ ಅವರು ಯೂಟ್ಯೂಬ್‌ ವಿಡಿಯೋಗಳ ಮೊರೆ ಹೋದರು, ಮತ್ತು ಮನೆಯಿಂದಲೇ ಆರಂಭಿಸಬಹುದಾದ ವಿವಿಧ ಬಿಸಿನೆಸ್ ಐಡಿಯಾಗಳ ಬಗ್ಗೆ ಹುಡುಕಾಟ ನಡೆಸಿದರು. ಇದೇ ಸಂದರ್ಭದಲ್ಲಿ ಅವರು ffreedom app ಬಗ್ಗೆ ಯೂಟ್ಯೂಬ್ ಮೂಲಕ ತಿಳಿದುಕೊಂಡರು. ಮತ್ತು ನಂತರದಲ್ಲಿ ಕುತೂಹಲದಿಂದ ಅವರು ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಂಡರು ಮತ್ತು ಅದರ ಚಂದಾದಾರಿಕೆಯನ್ನು ಸಹ ಪಡೆದುಕೊಂಡರು. 

ರಾಧಿಕಾ ಅವರು ಮೊದಲಿನಿಂದಲೂ ಸಹ ಟೈಲರಿಂಗ್‌ನಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು, ಈ ಕಾರಣದಿಂದ ಅವರು ffreedom appನಲ್ಲಿ ಮೊದಲಿಗೆ ಟೈಲರಿಂಗ್ ಕೋರ್ಸ್‌ ಅನ್ನು ವೀಕ್ಷಿಸಲು ಆರಂಭಿಸಿದರು. ಈ ಕೋರ್ಸ್ ಅವರಿಗೆ ಟೈಲರಿಂಗ್‌ ಕುರಿತಾಗಿ ಅಮೂಲ್ಯವಾದ ಮಾಹಿತಿ ಮತ್ತು ಕೌಶಲ್ಯಗಳನ್ನು ಒದಗಿಸಿತು. ಟೈಲರಿಂಗ್ ಮೆಷಿನ್ ಅನ್ನು ಆಪರೇಟ್ ಮಾಡುವುದರಿಂದ ಹಿಡಿದು ಉಡುಪನ್ನು ಹೊಲಿಯುವುದು ಹೇಗೆ ಎಂಬುದರವರೆಗೆ ಎಲ್ಲವನ್ನೂ ಅವರು ಕಲಿತರು. ಇವೆಲ್ಲವನ್ನೂ ಕೇವಲ ಒಂದೇ ತಿಂಗಳಲ್ಲಿ ರಾಧಿಕಾ ಅವರು ffreedom appನ ಮೂಲಕ ಕಲಿತರು ಮತ್ತು ಈ ಮೂಲಕ ಟೈಲರಿಂಗ್ ಕಲೆಯನ್ನು ಅವರು ಕರಗತ ಮಾಡಿಕೊಂಡಿರು. 

ಈಗಾಗಲೇ ಟೈಲರಿಂಗ್ ಮೆಷಿನ್ ಹೊಂದಿದ್ದರಿಂದ ರಾಧಿಕಾಗೆ ಹೊಸದನ್ನು ಖರೀದಿಸಲು ಹಣವನ್ನು ಹೂಡುವ ಅಗತ್ಯವಿರಲಿಲ್ಲ. ಆರಂಭಿಕವಾಗಿ ಅವರು ತನ್ನ ಅತ್ತೆ ಮತ್ತು ತಾಯಿಯ ಬಟ್ಟೆಗಳನ್ನು ಹೊಲಿಯಲು ಪ್ರಾರಂಭಿಸಿದರು.  ಡ್ರೆಸ್ ಗಳು ಮತ್ತು ಬ್ಲೌಸ್‌ಗಳನ್ನು ಹೊಲಿಯುವ ಮೂಲಕ ತಮ್ಮ ಹೊಸ ಕೌಶಲ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ffreedom appನ ಕೋರ್ಸ್ ಅತ್ಯಂತ ಸರಳವಾಗಿರುವುದರಿಂದ ಅವರು ಸುಲಭವಾಗಿ ಟೈಲರಿಂಗ್ ನ ಎಲ್ಲ ಅಂಶಗಳನ್ನು ವಿವರವಾಗಿ ಕಲಿತರು ಮತ್ತು ಅದರಲ್ಲಿ ಪರಿಣತಿಯನ್ನು ಪಡೆದರು. 

ನಂತರದಲ್ಲಿ ರಾಧಿಕಾ ಅವರು ತಮ್ಮ ಟೈಲರಿಂಗ್ ಬಿಸಿನೆಸ್ ಅನ್ನು ಪ್ರಾರಂಭಿಸಿದರು ಮತ್ತು ತಮ್ಮ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಸಹ ಪಡೆಯುವಲ್ಲಿ ಯಶಸ್ವಿಯಾದರು. ಪ್ರಸ್ತುತ ಅವರು ಸದೃಢವಾದ ಗ್ರಾಹಕರ ನೆಲೆಯನ್ನು ನಿರ್ಮಿಸಿಕೊಂಡಿದ್ದಾರೆ ಮತ್ತು ಸಧ್ಯ ಅವರು ತಿಂಗಳಿಗೆ 7-8 ಸಾವಿರದವರೆಗೆ ಆದಾಯವನ್ನು ಗಳಿಸುತ್ತಿದ್ದಾರೆ. ತನ್ನ ಈ ಯಶಸ್ಸಿಗೆ ಕಲಿಕೆಯ ಮೇಲಿನ ಆಸಕ್ತಿ ಮತ್ತು ffreedom appನ ಸಮಗ್ರ ಟೈಲರಿಂಗ್ ಕೋರ್ಸ್ ಕಾರಣವಾಗಿದೆ ಎಂದು ಅವರು ಹೇಳುತ್ತಾರೆ.

ಆದರೆ ರಾಧಿಕಾ ಅವರು ಅಲ್ಲಿಗೇ ತಮ್ಮ ಕಲಿಕೆಯನ್ನು ನಿಲ್ಲಿಸುವುದಿಲ್ಲ. ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ವಿಸ್ತರಿಸಲು ffreedom app ಅನ್ನು ಬಳಸುವುದನ್ನು ಅವರು ಮುಂದುವರೆಸಿದರು. ಈ ನಿಟ್ಟಿನಲ್ಲಿ ಅವರು ಹಸು ಮತ್ತು ಮೇಕೆ ಸಾಕಾಣಿಕೆಯ ಕೋರ್ಸ್‌ಗಳನ್ನು ಸಹ ವೀಕ್ಷಿಸಿದರು ಮತ್ತು ಈಗ ಅವರು 9 ಹಸುಗಳು, 7 ಮೇಕೆಗಳು ಮತ್ತು 30 ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ, ಮತ್ತು ಈ ಎಲ್ಲ ಸಾಕಣೆಯಿಂದ ಅವರು ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ.

ದೃಢಸಂಕಲ್ಪವಿದ್ದರೆ ಏನು ಬೇಕಾದರೂ ಸಾಧ್ಯ ಎಂಬುದಕ್ಕೆ ರಾಧಿಕಾ ಅವರ ಈ ಕಥೆ ಸಾಕ್ಷಿಯಾಗಿದೆ. ಬದುಕಿನ ಹಲವು ಸವಾಲುಗಳ ನಡುವೆ ಸಹ ಅವರು ತಮ್ಮ ಕಲಿಕೆಯನ್ನು ಮುಂದುವರಿಸಿದರು ಮತ್ತು ಮನೆಯಿಂದಲೇ ಸ್ವಾವಲಂಬಿಯಾದ ಬದುಕನ್ನು ಕಟ್ಟಿಕೊಳ್ಳಲು ಯಶಸ್ವಿಯಾದರು. ರಾಧಿಕಾ ಅವರ ಈ ಪಯಣವು ನಮಗೆಲ್ಲರಿಗೂ ಸ್ಪೂರ್ತಿದಾಯಕವಾಗಿದೆ, ಪ್ರಯತ್ನವನ್ನು ಮಾಡಲು ಸಿದ್ಧರಿದ್ದರೆ, ನಾವು ಕೂಡ ನಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದು ಎಂಬುದನ್ನು ಇದು ತೋರಿಸುತ್ತದೆ.

ಜ್ಞಾನ ಮತ್ತು ಅವಕಾಶಗಳಿಗೆ ಎಲ್ಲರಿಗು ಸಹ ಸಮಾನ ಪ್ರವೇಶವನ್ನು ಒದಗಿಸುವುದು ffreedom appನ ಉದ್ದೇಶವಾಗಿದೆ. ಪ್ರತಿಯೊಬ್ಬರೂ ಸಹ ತಮ್ಮ ಕನಸುಗಳನ್ನು ಅನುಸರಿಸಬೇಕು ಮತ್ತು ಅದರಲ್ಲಿ ಯಶಸ್ಸನ್ನು ಸಾಧಿಸಬೇಕು ಮತ್ತು ಈ ಮೂಲಕ ಸ್ವಾವಲಂಬಿಯಾದ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಮಹತ್ತರವಾದ ಆಶಯವನ್ನು ffreedom app ಹೊಂದಿದೆ ಮತ್ತು ಈ ನಿಟ್ಟಿನಲ್ಲಿ ಅದು ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ.   

Related Posts

ನಮ್ಮ ವಿಳಾಸ

ffreedom.com,
Brigade Software Park,
Banashankari 2nd Stage,
Bengaluru, Karnataka - 560070

08069415400

contact@ffreedom.com

ಚಂದಾದಾರರಾಗಿ

ಹೊಸ ಪೋಸ್ಟ್‌ಗಳಿಗಾಗಿ ನನ್ನ ಸುದ್ದಿಪತ್ರಕ್ಕೆ ಚಂದಾದಾರರಾಗಿ. ನವೀಕೃತವಾಗಿರೋಣ!

© 2023 ffreedom.com (Suvision Holdings Private Limited), All Rights Reserved

Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.